ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ (Long Distance Relationship)ನಲ್ಲಿ ಹುಡುಗ-ಹುಡುಗಿಗೆ ವಿರಹವೇದನೆ ತಪ್ಪಿದ್ದಲ್ಲ. ಹೀಗಿದ್ದಾಗ ನಿಮ್ಮ ಹುಡುಗ ಅಥವಾ ಹುಡುಗಿ ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿರಬೇಕಾದರೆ ಎಂಥಹಾ ಗಿಫ್ಟ್ (Gift) ಕೊಡಬಹುದು.
ಉಡುಗೊರೆ (Gift) ಕೊಡುವುದು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ರೀತಿ. ನಮ್ಮವರಿಗೆ ಪ್ರೀತಿ (Love)ಯಿಂದ ಉಡುಗೊರೆಯನ್ನು ಆಯ್ಕೆ ಮಾಡಿ ನೀಡುವುದೆಂದರೆ ಒಂಥರಾ ಖುಷಿ. ಅದರಲ್ಲೂ ಪ್ರೇಮಿಗಳು ಆಗಿಂದಾಗೆ ಗಿಫ್ಟ್‌ಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುತ್ತಾ ತಮ್ಮ ಪ್ರೀತಿಯನ್ನು ತಾಜಾವಾಗಿಡುತ್ತಾರೆ. ಆದರೆ ಲಾಂಗ್ ಡಿಸ್ಟೆನ್ಸ್ ರಿಲೇಶನ್ ಶಿಪ್ ನಲ್ಲಿರುವ ಅದೆಷ್ಟೋ ಪ್ರೇಮಿಗಳಿದ್ದಾರೆ. ಒಬ್ಬರು ಊರಲ್ಲಿ, ಇನ್ನೊಬ್ಬರು ಪಕ್ಕದ ಊರಲ್ಲಿ ಅಥವಾ ವಿದೇಶದಲ್ಲಿ ಉದ್ಯೋಗದಲ್ಲಿ ಇರುತ್ತಾರೆ. ಇಂಥವರಿಗೆ ನೀನಲ್ಲಿ..ನಾನಿಲ್ಲಿ ಅನ್ನೋ ವಿರಹವೇದನೆ. ಹೀಗಿದ್ದೂ ಇಂಥಹಾ ಪ್ರೀತಿಗಳು ಸಹ ಯಶಸ್ವಿಯಾಗುತ್ತವೆ.
ಹಾಗಿದ್ರೆ ದೂರ ದೂರದಲ್ಲಿರುವ ಪ್ರೇಮಿಗಳ ತಮ್ಮ ಸಂಗಾತಿಗೆ ಯಾವ ರೀತಿಯ ಉಡುಗೊರೆಯನ್ನು ನೀಡಬಹುದು. ಯಾವ ರೀತಿಯ ಗಿಫ್ಟ್‌ನ್ನು ನೀಡಿದರೆ ನಿಮ್ಮ ಹುಡುಗ ಅಥವಾ ಹುಡುಗಿ ಯಾವಾಗಲೂ ನಿಮ್ಮನ್ನು ನೆನಪಿಸಿಕೊಳ್ಳುತ್ತಿರಬಹುದು.
undefined
ಬಾಯ್‌ಫ್ರೆಂಡ್ ಏನ್ ಗಿಫ್ಟ್ ಕೊಟ್ರೆ ಖುಷಿಯಾಗುತ್ತೆ ? ಸಾರಾ ಹೇಳಿದ್ದಿಷ್ಟು
ನೆನಪುಗಳನ್ನು ಯಾವಾಗಲೂ ಜೀವಂತವಾಗಿಡಲು ಫೋಟೋ ಫ್ರೇಮ್ (Photo Frame)ಗಳು ಉತ್ತಮ ಮಾರ್ಗವಾಗಿದೆ. ಈ ಫೋಟೋ ಫ್ರೇಮ್‌ಗಳು ಯಾವಾಗಲೂ ಸಂಗಾತಿಯ ನೆನಪನ್ನು ತರಿಸುವುದರ ಜತೆಗೆ ಸಂಬಂಧವನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಬ್ಲೇಸ್‌ಲೆಟ್ ಪ್ರೀತಿಪಾತ್ರರಿಗೆ ಸಾಮಾನ್ಯವಾಗಿ ಎಲ್ಲರೂ ನೀಡುವ ಉಡುಗೊರೆ. ಇದು ಸದಾ ಕಾಲ ಕೈಯಲ್ಲೇ ಇರುವ ಕಾರಣ ಇಬ್ಬರೂ ದೂರ-ದೂರವಿದ್ದರೂ ಜತೆಯಾಗಿ ಇರುವ ಭಾವನೆ ತರಿಸುತ್ತದೆ. ಹಾಗೆಯೇ ಹುಡುಗಿಯರಿಗೆ ಇಷ್ಟವಾಗುವ ನೆಕ್ಲೇಸ್‌ನ್ನು ಸಹ ಗಿಫ್ಟ್ ಆಗಿ ಕೊಡಬಹುದು. ಮಾರುಕಟ್ಟೆಯಲ್ಲಿ ಈಗೀಗ ಹುಡುಗಿಯರಿಗೆ ಗಿಫ್ಟ್ ನೀಡಲೆಂದೇ ಸ್ಟೈಲಿಶ್ ಆಗಿರುವ ವೆರೈಟಿ ಡಿಸೈನ್‌ನ ನೆಕ್ಲೇಸ್‌ಗಳು ಲಭ್ಯವಿದೆ. ಇಂಥಹಾ ನೆಕ್ಲೇಸ್ (Necklace) ಗಿಫ್ಟ್ ಮಾಡುವುದರಿಂದ ಸಂಗಾತಿ ಖುಷಿಪಡುವುದರಲ್ಲಿ ಸಂದೇಹವೇ ಇಲ್ಲ.
ದೂರದಲ್ಲಿರುವ ಹುಡುಗನಿಗೆ, ಹುಡುಗಿಗೆ ವಿಶೇಷ ಸಂದರ್ಭಗಳಲ್ಲಿ ಸುವಾಸನೆ ಭರಿತ ಹೂವುಗಳನ್ನು ಕಳಿಸುವುದು ನಾನು ನಿನ್ನ ಜತೆಗಿದ್ದೇನೆ ಎಂಬ ಸಂದೇಶವನ್ನು ರವಾನಿಸುತ್ತದೆ. ಅದೇ ರೀತಿ ಕೈಯಾರೆ ಬರೆದು, ಸಿದ್ಧಪಡಿಸಿ ಕಳುಹಿಸುವ ಪ್ರೇಮಪತ್ರಗಳು ಸಹ ಸಂಬಂಧವನ್ನು ಸದಾಕಾಲ ಸುಂದರವಾಗಿರುವಂತೆ ನೋಡಿಕೊಳ್ಳುತ್ತದೆ. ಇಂಥಹಾ ಪತ್ರಗಳು ಸಂಗಾತಿಯೆಡೆಗಿನ ಭಾವನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ.
ದೂರದಲ್ಲಿರುವ ನಿಮ್ಮ ಹುಡುಗ ಅಥವಾ ಹುಡುಗಿಗೆ ನೀವೇ ಕೈಯಾರೆ ತರಯಾರಿಸಿದ ಊಟವನ್ನು ಕಳುಹಿಸಿಕೊಡಿ. ಅಥವಾ ರೆಸ್ಟೋರೆಂಟ್‌ನಿಂದ ಅವರ ನೆಚ್ಚಿನ ಫುಡ್ ಆರ್ಡರ್ ಮಾಡಿ ಕಳುಹಿಸಿಕೊಡಿ. ಈ ಸರ್ ಪ್ರೈಸ್ ಅವರಿಗೆ ದಿಢೀರ್ ಖುಷಿ ನೀಡುವುದಲ್ಲದೆ, ನಿಮ್ಮ ಮೇಲಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸುವಾಸನೆಭರಿತವಾದ ಕ್ಯಾಂಡಲ್, ಟೇಸ್ಟೀ ಚಾಕೋಲೇಟ್ ಬಾಕ್ಸ್‌ಗಳು ಸಹ ಪ್ರೀತಿಪಾತ್ರರಾಗಿ ಗಿಫ್ಟ್ ಆಗಿ ಕೊಡಬಹುದು. ಇವಿಷ್ಟೇ ಅಲ್ಲದೆ ಕಪಲ್ ಮಗ್ ಪ್ರೀತಿಸಿದವರಿಗೆ ಗಿಫ್ಟ್ ಕೊಡಲು ಅತ್ಯುತ್ತಮ ಆಯ್ಕೆಯಾಗಿದೆ. ಮಗ್‌ನಲ್ಲಿ ಮುಂಜಾನೆ ಎದ್ದಾಗ ಕಾಫಿ ಕುಡಿಯವುದರಿಂದ ದಿನ ಪ್ರೀತಿಯ ನೆನಪಿನಿಂದಲೇ ಆರಂಭವಾಗುತ್ತದೆ.
ವ್ಯಾಲೆಂಟೈನ್ಸ್ ಡೇಯಂದು ಪ್ರೇಮಿಗೆ ಈ ಗಿಪ್ಟ್ ಕೊಡಬೇಡಿ, ಸಂಬಂಧದಲ್ಲಿ ಬಿರುಕು ಬಿಡುತ್ತೆ
ಐ ಲವ್ ಯೂ, ಐ ಮಿಸ್ ಯೂ ಹೀಗೆ ಸಣ್ಣ ಪುಟ್ಟ ಸಂದೇಶಗಳನ್ನು ಬರೆದ ಮೆಸೇಜ್ ಜಾರ್ ಪ್ರೀತಿಸಿದವರಿಗೆ ಗಿಫ್ಟ್ ನೀಡಿದರೆ ಅವರು ಖುಷಿ ಪಡುವುದರಲ್ಲಿ ಅನುಮಾನವೇ ಇಲ್ಲ. ವಾಚ್ ಅನ್ನು ಸಹ ಪ್ರೇಮಿಗಳು ಪರಸ್ಪರ ಗಿಫ್ಟ್ ಮಾಡಿಕೊಳ್ಳಬಹುದಾಗಿದೆ. ಇದರಿಂದ ಪ್ರತಿ ಬಾರಿ ಸಮಯ ನೋಡಿದಾಗಲೂ ಅದೆಷ್ಟು ದೂರವಿದ್ದರೂ ಪ್ರೀತಿ ಪಾತ್ರರು ನಮಗೆ ನೆನಪಾಗುತ್ತಲೇ ಇರುತ್ತಾರೆ. ಹೀಗಾಗಿ ಡಿಸ್ಟೆನ್ಸ್ ರಿಲೇಶಿಪ್‌ನಲ್ಲಿರುವವರು ಗಿಫ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಈ ವಿಚಾರಗಳನ್ನು ಗಮನಿಸುವುದು ಉತ್ತಮ.