Happiness and Life: ನೀವು ನಿಜವಾಗಲೂ ಖುಷಿಯಾಗಿದ್ದೀರಾ?

By Suvarna News  |  First Published Dec 14, 2021, 6:57 PM IST

ಮನುಷ್ಯ ಯಾವಾಗ ಖುಷಿಯಾಗಿರುತ್ತಾನೆ, ಯಾವಾಗ ಬೇಸರದಲ್ಲಿರುತ್ತಾನೆ ಹೇಳುವುದು ಕಷ್ಟ. ಮುಖದಲ್ಲಿ ನಸುನಗು ತುಂಬಿಕೊಂಡಿರುವವರನ್ನು ನೋಡಿ “ಎಷ್ಟು ಖುಷಿಯಾಗಿರುತ್ತಾರೆ’ ಎಂದುಕೊಳ್ಳುತ್ತೇವೆ. ಅಸಲಿಗೆ ಅವರ ಮನಸ್ಸು ಖುಷಿಯಿಂದ ಕೂಡಿದೆಯೇ ಎಂದು ಗೊತ್ತಿರುವುದಿಲ್ಲ. 


ಕೆಲವರಿರುತ್ತಾರೆ, ಏನೂ ಇಲ್ಲದೆಯೂ ಖುಷಿ(Happy) ಯಾಗಿರುತ್ತಾರೆ, ಕೊನೆಯ ಪಕ್ಷ ಖುಷಿಯಾಗಿರಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರಿಗೆ ಸ್ವರ್ಗವನ್ನೇ ಧರೆಗಿಳಿಸಿ ಅವರೆದುರು ಇಟ್ಟರೂ ಅದರಲ್ಲೇ ಏನಾದರೊಂದು ಕೊಂಕು (Conch) ಹುಡುಕಿ ಖುಷಿಪಡುವುದಿಲ್ಲ. ಇನ್ನು ಕೆಲವರು ತಮಗೆ ಗೊತ್ತಿಲ್ಲದೆಯೇ ದುಃಖ (Unhappiness) ವನ್ನು ನಿರಂತರವಾಗಿ ಆಹ್ವಾನಿಸುತ್ತಿರುತ್ತಾರೆ. ಅಂಥ ಅಭ್ಯಾಸ (Practice) ನಿಮಗೂ ಇದ್ದರೆ ಈಗಲೇ ಬಿಟ್ಟುಬಿಡಿ. ನಮ್ಮನ್ನು ನಾವೇ ಸ್ವತಃ ದುಃಖಿತರನ್ನಾಗಿಸಿಕೊಳ್ಳುವ ಕೆಲವು ಅಭ್ಯಾಸಗಳು ಯಾವುವು ಗೊತ್ತೇ? ಇಲ್ನೋಡಿ.

•    ಹಳೆಯ (Past) ಕಹಿ (Bitter) ಘಟನೆ (Incident) ಯನ್ನು ಪದೇ ಪದೆ ನೆನಪಿಸಿಕೊಳ್ಳುವುದು
ನೀವು ಇತಿಹಾಸದಲ್ಲೇ ಬದುಕುವ ಜನರಾಗಿದ್ದರೆ ಹಳೆಯ ಯಾವುದಾದರೂ ಅಹಿತಕರ (Resentment) ಘಟನೆಯನ್ನು ಪದೇ ಪದೆ ನೆನಪಿಸಿಕೊಂಡು ದುಃಖ ಪಡುತ್ತೀರಿ. ನಮ್ಮ ಹಿಂದಿನ ಅನುಭವ (Experience)ಗಳಿಗೆ ಖಂಡಿತವಾಗಿ ಬದುಕಿನಲ್ಲಿ ಬೆಲೆಯಿದೆ. ಅವುಗಳೇ ನಮ್ಮ ಇಂದಿನ ಬದುಕನ್ನು (Presend Life) ರೂಪಿಸಿರುತ್ತವೆ. ಆದರೂ, ಯಾವತ್ತೋ ನಡೆದುಹೋದ ಕಹಿ ಘಟನೆಗಳು, ವೈಮನಸ್ಯಗಳನ್ನು ನೆನಪಿಸಿಕೊಂಡು ಬೇಸರ ಮಾಡಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಆಗಿಹೋದುದನ್ನು ಸರಿಪಡಿಸಲು ಅಥವಾ ಬದಲಿಸಲು ಎಂದಿಗೂ ಸಾಧ್ಯವಿಲ್ಲ. ಕೆಟ್ಟ ಬಾಲ್ಯ, ಕೆಟ್ಟ ಸಂಬಂಧ, ಹಣಕಾಸು ನಷ್ಟ ಎಂಥದ್ದೇ ಸಮಸ್ಯೆಯಾಗಿರಲಿ. ಕಳೆದುಹೋದುದು ಮುಗಿಯಿತು ಅಷ್ಟೆ. ಅವುಗಳನ್ನು ನೆನಪಿಸಿಕೊಂಡಾಗಲೆಲ್ಲ ನಮ್ಮನ್ನು ಬೇಸರಕ್ಕೆ ದೂಡುತ್ತವೆ. ಅದರಿಂದ ಸದ್ಯದ ಜೀವನವೂ ದುಃಖಮಯವಾಗಿದೆ ಎಂದೆನಿಸುತ್ತದೆ.

Tap to resize

Latest Videos

•    ವಿಷಾದ (Regret) ವೇ ಬದುಕಲ್ಲ
ಬದುಕಿನಲ್ಲಿ ಸಾಕಷ್ಟು ವಿಷಾದ, ಅಸಮಾಧಾನಗಳಿರುವುದು ಸಹಜ. ಆದರೆ, ಅವುಗಳೇ ಬದುಕಲ್ಲ. ಎಲ್ಲಿಯೂ ಪರಿಪೂರ್ಣತೆ ಎನ್ನುವುದಿಲ್ಲ. ಹೀಗಾಗಿ, ಈ ಭಾವನೆಗಳೇ ನಮ್ಮಲ್ಲಿ ಪ್ರಧಾನವಾಗಿರಬಾರದು. ಎಲ್ಲದರ ಕುರಿತು ಸಿನಿಕವಾಗಿರುವುದು ಇದರ ಒಂದು ಭಾಗ. ಸಿನಿಕತನ ಹೊಂದಿರುವವರು ಜನರನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಇದರಿಂದ ಬೇಸರವೇ ಹೆಚ್ಚು.

ಜೀವನದಲ್ಲಿ ಖುಷಿಯಾಗಿರಲು ವಾಸ್ತು ಟಿಪ್ಸ್

•    ದ್ವೇಷ (Hatredness) ಸಲ್ಲದು
ಯಾರಾದರೂ ನಿಮ್ಮನ್ನು ತಪ್ಪಾಗಿ ಬೈದಿದ್ದರೆ, ಕಾರಣವೇ ಇಲ್ಲದೆ ಮಿಸ್ ಟ್ರೀಟ್ ಮಾಡಿದ್ದರೆ, ಅವಮಾನ ಮಾಡಿದ್ದರೆ ಅಂತಹ ಘಟನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು “ಎಂದಾದರೂ ಒಂದು ದಿನ ಅವರಿಗೆ ತಿರುಗಿ ಕೊಡಬೇಕು, ಒಂದಲ್ಲ ಒಂದು ಬಾರಿ ಅವರನ್ನು ಅವಮಾನಿಸಬೇಕು’ ಎಂದು ಲೆಕ್ಕಾಚಾರ ಹಾಕುತ್ತಿದ್ದರೆ ವೇಸ್ಟಾಗುವುದು ನಿಮ್ಮ ಅಮೂಲ್ಯ ಸಮಯ. ಜತೆಗೆ ಮನಸ್ಸು ಹಾಳು. ಅದನ್ನು ಬಿಟ್ಟು ಬೇರೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದರ ಬದಲು ನಿಮ್ಮನ್ನು ಕೇವಲವಾಗಿ ಕಂಡವರನ್ನೂ, ಹೀಯಾಳಿಸಿದವರನ್ನೂ ಕ್ಷಮಿಸಿಬಿಡಿ. ಮನಸ್ಸು ನಿರಾಳವಾಗುತ್ತದೆ. ನಿಮ್ಮ ಬದುಕು, ಆದ್ಯತೆಗಳ ಕಡೆಗಷ್ಟೇ ಗಮನ ನೀಡಿ. 

•    ಅಯ್ಯೋ, ಯಾರಾದ್ರೂ ಏನಾದ್ರೂ ಅಂದ್ ಬಿಟ್ರೆ?!
ಯಾವುದಾದರೂ ವಿಚಾರಕ್ಕೆ ಯಾರಾದ್ರೂ ಏನಾದ್ರೂ ಅಂದ್ ಬಿಟ್ರೆ ಏನಾಗುತ್ತೆ? ಏನೂ ಆಗೋದಿಲ್ಲ ಅಲ್ಲವೇ? ಆದರೂ “ಏನಾದ್ರೂ ಅಂದ್ ಬಿಟ್ಟರೆ’ ಎನ್ನುವ ಭಾವನೆ ನಿಮಗೇಕೆ? ಬಿಟ್ಟುಬಿಡಿ. ಜನರೇನು ಹೇಳುತ್ತಾರೆ ಎನ್ನುವುದರ ಆಧಾರದ ಮೇಲೆ ನಿಮ್ಮ ಓಡಾಟ, ಬಟ್ಟೆ, ಆಹಾರ, ವಿಹಾರಗಳನ್ನು ಬದಲಿಸಿಕೊಳ್ಳಬೇಕಿಲ್ಲ. ಬದುಕು ನಿಮ್ಮದು, ನಿಮ್ಮ ಹಣದಲ್ಲೇ ನೀವು ಬದುಕುವುದು. ಸಮಾಜದಲ್ಲಿ ನೀತಿ-ನಿಯಮಗಳಿಗೆ ಎಷ್ಟು ಪ್ರಾಮುಖ್ಯತೆ ಕೊಡುತ್ತೀರೋ ಅಷ್ಟೇ ಪ್ರಾಮುಖ್ಯತೆಯನ್ನು ನಿಮ್ಮ ಭಾವನೆ ಹಾಗೂ ಮನಸ್ಸಿಗೂ ನೀಡಬೇಕು. ವ್ಯಕ್ತಿಗತವಾಗಿ ಅಥವಾ ಸಮಾಜಕ್ಕೆ ಹಾನಿಯುಂಟುಮಾಡುವ ಯಾವುದೇ ಕೆಲಸಕಾರ್ಯದಲ್ಲಿ ಭಾಗಿಯಾಗಿಲ್ಲದಿರುವಾಗ ಯಾರ ಮಾತಿನ ಭಯವೇಕೆ? ಇನ್ನೊಬ್ಬರ ಮಾತಿನ ಕಡೆಗೆ ಗಮನ ನೀಡುತ್ತ ಸಾಗಿದರೆ ಬದುಕಿಡೀ ಬೇಸರವೇ ತುಂಬಿಕೊಳ್ಳುತ್ತದೆ.

•    ನಿಮ್ಮದೇ ಹಠ (Agressiveness) ನಡೆಯಬೇಕೇ? 
ನಿಮ್ಮ ಇತಿಹಾಸದಂತೆಯೇ ವರ್ತಮಾನದ ಬದುಕೂ ಸಹ. ಇಲ್ಲಿ ಯಾವುದೂ ನಿಯಂತ್ರಣದಲ್ಲಿ ಇರುವುದಿಲ್ಲ. ನಿಮ್ಮದೇ ಮಾತು ನಡೆಯಬೇಕೆನ್ನುವ ಹಠ ಮನೆಯಲ್ಲಿಯೂ ಒಳ್ಳೆಯದಲ್ಲ. ಕಾಲಕಾಲಕ್ಕೆ ಪರಿವರ್ತನೆಯಾಗುವುದು ಉತ್ತಮ ಮನಸ್ಥಿತಿಗೆ ಅಗತ್ಯ.

ಖುಷಿಯಾಗಿರುವ ಮಕ್ಕಳು

•    ಸದಾಕಾಲ ಕೆಟ್ಟದ್ದನ್ನೇ (Bad) ಯೋಚಿಸುತ್ತೀರಾ?
ಸದಾಕಾಲ ಆತಂಕದಲ್ಲಿರುವುದು, ನಿಮ್ಮ ನಿರ್ಧಾರದ ಬಗ್ಗೆ ನಿಮಗೇ ನಂಬಿಕೆ ಇಲ್ಲದಿರುವುದು, ಯಾವತ್ತೂ ಕೆಟ್ಟದ್ದನ್ನೇ ಯೋಚಿಸುವುದು ಮಿದುಳಿಗೆ ಹಾನಿಯುಂಟುಮಾಡುತ್ತದೆ. ಇದರಿಂದ ಖುಷಿ ಹೊರಟುಹೋಗುತ್ತದೆ. 

click me!