ಕೋಟಿ ಬೆಲೆಬಾಳುವ ಕಾರನ್ನು ಬಿಟ್ಟು ಎತ್ತಿನಬಂಡಿಯಲ್ಲಿ ಮದುವೆ ದಿಬ್ಬಣ!

By Vinutha PerlaFirst Published Feb 26, 2023, 10:02 AM IST
Highlights

ಈಗೆಲ್ಲಾ ಮದ್ವೆಗಳು ತುಂಬಾ ಗ್ರ್ಯಾಂಡ್ ಆಗಿ ನಡೆಯುತ್ತವೆ. ಮಂಟಪದ ಡೆಕೊರೇಷನ್‌, ಫುಡ್‌, ಡ್ರೆಸ್‌, ಆಭರಣಗಳು ಎಲ್ಲವೂ ಲಕ್ಸುರಿಯಸ್ ಆಗಿರುತ್ತವೆ. ಹಾಗೆಯೇ ಮದುಮಕ್ಕಳ ಎಂಟ್ರಿ ಕೂಡಾ ಸ್ಪೆಷಲ್ ಆಗಿರಬೇಕೆಂದು ಆರೇಂಜ್‌ಮೆಂಟ್ಸ್ ಮಾಡ್ಕೊಳ್ತಾರೆ. ಆದ್ರೆ ಇಲ್ಲೊಂದೆಡೆ ಮಾತ್ರ ವರ ಲಕ್ಸುರಿಯಸ್ ಕಾರುಗಳನ್ನು ಬಿಟ್ಟು ಎತ್ತಿನಬಂಡಿಯಲ್ಲಿ ಮರವಣಿಗೆಯಲ್ಲಿ ಬಂದಿದ್ದಾನೆ.

ಗುಜರಾತ್‌: ಕಾಲ ಬದಲಾಗಿದೆ. ಹಿಂದೆಲ್ಲಾ ತುಂಬಾ ಸರಳವಾಗಿ ನಡೆಯುತ್ತಿದ್ದ ಕಾರ್ಯಕ್ರಮಗಳು ಈಗ ತುಂಬಾ ಅದ್ಧೂರಿಯಾಗಿ ನಡೆಯುತ್ತಿದೆ. ಮದುವೆ ಮಂಟಪದ ಡೆಕೊರೇಷನ್‌, ಫುಡ್‌, ಡ್ರೆಸ್‌, ಆಭರಣಗಳು ಎಲ್ಲವೂ ಲಕ್ಸುರಿಯಸ್ ಆಗಿರುತ್ತವೆ. ಹಾಗೆಯೇ ಮದುಮಕ್ಕಳ ಎಂಟ್ರಿ ಕೂಡಾ ಸ್ಪೆಷಲ್ ಆಗಿರಬೇಕೆಂದು ಆರೇಂಜ್‌ಮೆಂಟ್ಸ್ ಮಾಡ್ಕೊಳ್ತಾರೆ. ಯಾವುದೇ ವಿವಾಹದ ಅತ್ಯುತ್ತಮ ಕಾರ್ಯಕ್ರಮವೆಂದರೆ ಯಾವಾಗಲೂ ವಧುವಿನ ಸ್ಥಳಕ್ಕೆ ವರನ ಆಗಮನವಾಗಿದೆ. ಅದಕ್ಕಾಗಿ ಕಾಸ್ಟ್ಲೀ ಕಾರ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಸಾಂಗ್‌, ಡ್ಯಾನ್ಸ್‌ ಜೊತೆ ಎಂಟ್ರಿ ಮಾಡಿಸ್ತಾರೆ. ಮದುವೆಯ ದಿಬ್ಬಣ ಸ್ಪೆಷಲ್ ಆಗಿರಬೇಕೆಂದು ಎಲ್ಲಾ ಮದುಮಕ್ಕಳು ಸ್ಪೆಷಲ್ ಆರೇಂಜ್‌ಮೆಂಟ್ಸ್ ಮಾಡಿಕೊಳ್ತಾರೆ. ಆದ್ರೆ ಗುಜರಾತ್‌ನ ಸೂರತ್‌ನಲ್ಲಿ ಮಾತ್ರ ವರ ಎತ್ತಿನಬಂಡಿಯಲ್ಲಿ ಮದುವೆ ದಿಬ್ಬಣದಲ್ಲಿ ಬಂದಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಕುದುರೆ, ಅಲಂಕಾರಿ ವಾಹನಗಳಲ್ಲಿ ಬಹುತೇಕ ಮದುವೆ ಮೆರವಣಿಗೆಗಳು (Wedding procession) ನಡೆಯುವುದು ಸಾಮಾನ್ಯ. ಆದ್ರೆ ಇಲ್ಲೊಂದು ಮದುವೆ ಮೆರವಣಿಗೆಯು ಎತ್ತಿನ ಬಂಡಿಯಲ್ಲಿ (Bullock cart) ನಡೆದಿರುವುದು ವಿಶೇಷ. ನೂರು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಐಷಾರಾಮಿ ಕಾರ್​ಗಳನ್ನು ಬಿಟ್ಟು ವರ ಎತ್ತಿನ ಬಂಡಿಯಲ್ಲಿ ಬಂದಿದ್ದಾನೆ. ಸೂರತ್‌ನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ವರ ಕೋಟಿ ರೂ.ಗೂ ಬೆಲೆಬಾಳುವ 100ಕ್ಕೂ ಹೆಚ್ಚು ಐಷಾರಾಮಿ ಕಾರ್​ಗಳನ್ನು ಬಿಟ್ಟು ಎತ್ತಿನ ಬಂಡಿಯಲ್ಲೇ ಮೆರವಣಿಗೆ ನಡೆಸಿದನು.

ವಿವಾಹ ವಾರ್ಷಿಕೋತ್ಸವಕ್ಕೆ ವಿಶ್ ಮಾಡಲು ಮರೆತ ಪತಿಗೆ ಹಿಗ್ಗಾ ಮುಗ್ಗಾ ಗೂಸ,ಪತ್ನಿ ವಿರುದ್ಧ ದೂರು!

ಐಷಾರಾಮಿ ಕಾರ್ ಲೈನ್ ಸುಮಾರು 2 ಕಿ.ಮೀ. ಉದ್ದವಿತ್ತು
ಬಿಜೆಪಿ ಮುಖಂಡರೊಬ್ಬರ ಪುತ್ರನ ಮದುವೆ ಮೆರವಣಿಗೆಯು ಈ ರೀತಿ ಡಿಫರೆಂಟ್ ಆಗಿ ನಡೆದಿದೆ. ಕೋಟಿ ಕೋಟಿ ಬೆಲೆ ಬಾಳುವ ಕಾರುಗಳನ್ನು ಬಿಟ್ಟು ಮದುಮಗ ಎತ್ತಿನ ಗಾಡಿಯಲ್ಲಿ ವಿವಾಹದ ಸ್ಥಳಕ್ಕೆ ಹೊರಟಿರುವುದನ್ನು ಎಲ್ಲರೂ ನಿಬ್ಬೆರಗಾಗಿ ನೋಡಿದರು. ಮದುವೆ ಮೆರವಣಿಗೆಯನ್ನು ಎತ್ತಿನ ಬಂಡಿಯಲ್ಲಿ ಕೊಂಡೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ (Social media) ಹರಿದಾಡುತ್ತಿದೆ.

ರನಿರುವ ಎತ್ತಿನ ಬಂಡಿಗೆ ಐಷಾರಾಮಿ ಮತ್ತು ಸ್ಪೋರ್ಟ್ಸ್ ಕಾರ್​ಗಳು ಬೆಂಗಾವಲಾಗಿ ಹೊರಟಂತೆ ಕಾಣಿಸಿದವು. ಈ ಐಷಾರಾಮಿ ಕಾರ್ ಲೈನ್ ಸುಮಾರು 2 ಕಿ.ಮೀ. ಉದ್ದವಿತ್ತು.ಅದರಲ್ಲೂ ಮದುಮಗನು ಎತ್ತಿನ ಗಾಡಿಯಲ್ಲಿ ಕುಳಿತು ಕೋಟ್ಯಂತರ ರೂಪಾಯಿ ಮೌಲ್ಯದ ಕಾರ್​ಗಳೊಂದಿಗೆ ಮೆರವಣಿಗೆ ನಡೆಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನಗರದ ಮೋಟ ವರಚ ಪ್ರದೇಶದಲ್ಲಿ 2 ಕಿ.ಮೀ. ಉದ್ದದ ಕಾರ್​ಗಳ ಸಾಲು ನೋಡಲು ಜನಸಾಗರವೇ ನೆರೆದಿತ್ತು. ನಗರದ ಬಿಜೆಪಿ ಮುಖಂಡ ಭರತ್ ವಘಾಸಿಯಾ ಇಬ್ಬರು ಪುತ್ರರನ್ನು ವಿಶಿಷ್ಟ ರೀತಿಯಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ. ವರಚಾ ಪ್ರದೇಶದ ರಿವರ್ ಪ್ಯಾಲೇಸ್‌ನಿಂದ ಆರಂಭವಾದ ಮೆರವಣಿಗೆಯು ನಗರದ ಉತ್ತರಾಯಣ ಪಕ್ಷದ ಪ್ಲಾಟ್‌ಗೆ ತಲುಪಿತು.

ಎಷ್ಟ್‌ ಫೋಟೋ ತೆಗೀತಿರಪ್ಪಾ..ಫೋಟೋಗೆ ಪೋಸ್ ನೀಡಲು ಹೇಳಿದ್ದಕ್ಕೆ ವರಮಾಲೆ ಎಸೆದು ಹೊರನಡೆದ ವರ!

ಸಂಪ್ರದಾಯವನ್ನು ಪ್ರತಿಬಿಂಬಿಸಲು ಪ್ರಯತ್ನ ಎಂದ ಕುಟುಂಬ
ಸೌರಾಷ್ಟ್ರದ ಸಂಪ್ರದಾಯ: ಬಿಜೆಪಿ ನಾಯಕ ತಮ್ಮ ಪುತ್ರರ ಮದುವೆಯಲ್ಲಿ ಆಧುನಿಕ ಜೀವನಶೈಲಿಯೊಂದಿಗೆ ಸೌರಾಷ್ಟ್ರದ ಸಂಪ್ರದಾಯವನ್ನು ಪ್ರತಿಬಿಂಬಿಸಲು ಪ್ರಯತ್ನಿಸಿದರು. ಸೌರಾಷ್ಟ್ರದಲ್ಲಿ ಮದುವೆ ಮೆರವಣಿಗೆ ನಡೆಯುವಾಗ ವರನು ಎತ್ತಿನ ಬಂಡಿಯಲ್ಲಿ ಮಾತ್ರ ಹೋಗುತ್ತಾನೆ ಎಂದು ಬಿಜೆಪಿ ಮುಖಂಡ ಭರತ್ ವಘಾಸಿಯಾ ಹೇಳಿದ್ದಾರೆ.ಇದು ನಮ್ಮ ಹಳೆಯ ಸಂಪ್ರದಾಯ, ಆದರೆ, ನನ್ನ ಇಬ್ಬರು ಮಕ್ಕಳು ಈ ದುಬಾರಿ ಕಾರ್​ಗಳನ್ನು ಇಷ್ಟಪಡುತ್ತಾರೆ. ಇದಕ್ಕಾಗಿ ಸಂಪ್ರದಾಯ ಪಾಲಿಸುವ ಜೊತೆಗೆ 50 ಲಕ್ಷದಿಂದ 5 ಕೋಟಿಯವರೆಗಿನ ಕಾರ್​ಗಳನ್ನು ಮೆರವಣಿಗೆಯಲ್ಲಿ ಸೇರಿಸಿ ಅವರ ಇಷ್ಟವನ್ನು ಈಡೇರಿಸಿದ್ದೇನೆ ಎಂದರು. ಜನರು ನೆನಪಿಟ್ಟುಕೊಳ್ಳಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

click me!