
ತಮ್ಮ ದೇಹದ ಮೇಲಾಗುವ ಹಲ್ಲೆ, ಹಿಂಸೆಗಳನ್ನು ಸುಲಭವಾಗಿ ಒಪ್ಪಿಕೊಳ್ಳಲು ಮನುಷ್ಯರಿಗೆ ಸಾಧ್ಯವಾಗುವುದಿಲ್ಲ. “ನನ್ನ ದೇಹ, ನನ್ನ ಇಷ್ಟ’ ಎನ್ನುವುದು ಎಲ್ಲರ ನಿಲುವು. ಇದರಲ್ಲಿ ಚೂರು ವ್ಯತ್ಯಾಸವಾದರೂ ಮಾನಸಿಕವಾಗಿ ಭಾರೀ ಘಾಸಿಯಾಗುತ್ತದೆ. ಮಹಿಳೆಯರು ಮುಖ್ಯವಾಗಿ ಲೈಂಗಿಕ ಕ್ರಿಯೆಗೆ ಸಂಬಂಧಿಸಿ ಸಾಕಷ್ಟು ಬಾರಿ ಒಂದು ರೀತಿಯ ಹಿಂಸೆಗೆ ಒಳಗಾಗುವುದು ಹೆಚ್ಚು. ದೈಹಿಕವಾಗಿ ಆಗುವ ಆಕ್ರಮಣ ಹೆಣ್ಣುಮಕ್ಕಳನ್ನು ಅತಿಯಾಗಿ ಘಾಸಿಗೊಳಿಸುತ್ತದೆ. ಅದು ಸಂಗಾತಿಯಿಂದಲೇ ಆಗಿದ್ದರೂ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಪರಸ್ಪರ ಅನುಮತಿಯ ಮೇಲೆ ಲೈಂಗಿಕ ಕ್ರಿಯೆ ನಡೆಸಿದಾಗಲೂ ಕೆಲವು ಕ್ರಿಯೆಗಳನ್ನು ಮಹಿಳೆ ನಿರಾಕರಿಸಿದರೆ ಅದಕ್ಕೆ ಪುರುಷ ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ ಅದು ಆಕೆಯ ಮೇಲೆ ನಡೆಯುವ ದಾಳಿ ಎನಿಸುತ್ತದೆ. ಮಹಿಳೆ ಮಾತ್ರವಲ್ಲ, ಸಲಿಂಗದಲ್ಲೂ ಇಂತಹ ಆಕ್ರಮಣಗಳು ಹೆಚ್ಚು. ಇಂಥದ್ದೇ ಒಂದು ಪ್ರಕರಣದಲ್ಲಿ ಕೋಲ್ಕತ ಹೈಕೋರ್ಟ್ ಇತ್ತೀಚೆಗೆ ಮಹತ್ವದ ತೀರ್ಮಾನ ನೀಡಿದೆ.
ಪ್ರಕರಣವೊಂದರಲ್ಲಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ (Student) ತನ್ನ ಸೀನಿಯರ್ (Senior) ಒಬ್ಬ ಲೈಂಗಿಕ ಕಿರುಕುಳ ನೀಡಿರುವುದಾಗಿ ಪ್ರಕರಣ ದಾಖಲಿಸಿದ್ದ. ತನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿ ಪ್ರತಿ ದೂರು ನೀಡಿದ್ದ. ವಿದ್ಯಾರ್ಥಿ ದಾಖಲಿಸಿದ್ದ ದೂರು ಮಾತ್ರ ಗಂಭೀರವಾಗಿತ್ತು. ಗುದದ್ವಾರದ (Anal) ಮೂಲಕ ಬಲವಂತದ ಸಂಭೋಗಕ್ಕೆ (Sex) ಪ್ರಯತ್ನಿಸಲಾಗಿದೆ ಎಂದು ವಿದ್ಯಾರ್ಥಿ ದೂರು ನೀಡಿದ್ದ. ಲೈಂಗಿಕವಾಗಿ ಹಿಂಸೆ ನೀಡಿರುವ ಕುರಿತು ಹೇಳಲಾಗಿತ್ತು. ಬಳಿಕ ಆರೋಪಿ ಯಾರಿಗೂ ಘಟನೆಯ ಕುರಿತು ಬಹಿರಂಗಪಡಿಸದಂತೆ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿಸಲಾಗಿತ್ತು. ಘಟನೆಯ ಬಳಿಕ ಸಂತ್ರಸ್ತ ವಿದ್ಯಾರ್ಥಿ ಆರೋಪಿಯ ನಂಬರ್ ಅನ್ನು ಬ್ಲಾಕ್ ಮಾಡಿದ್ದ. ಕೊನೆಗೆ, ಆರೋಪಿ ಇನ್ನೂ ಹಲವರಿಗೆ ಇಂಥದ್ದೇ ಕೃತ್ಯ ಎಸಗಿ ಬೆದರಿಕೆ ಒಡ್ಡಿರುವುದು ಆತನಿಗೆ ತಿಳಿದು ಬಂದಿತ್ತು. ಹೀಗಾಗಿ, ಕೊನೆಗೊಮ್ಮೆ ದೂರು ದಾಖಲಿಸಿದ್ದ.
ಇಡೀ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇಂತಹ ಪ್ರಕರಣದಲ್ಲಿ ವೈದ್ಯಕೀಯ ದಾಖಲೆಗಳು ಹೆಚ್ಚು ಪ್ರಮುಖವಾಗುತ್ತವೆ ಎಂದು ಅಭಿಪ್ರಾಯಪಟ್ಟಿದೆ. ಜತೆಗೆ, ಪ್ರಕರಣವೊಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನೂ (Rule) ಉಲ್ಲೇಖಿಸಿದೆ. ಕೆಲವೊಮ್ಮೆ ರಾಜಕೀಯ ದ್ವೇಷಕ್ಕಾಗಿ ಇಂತಹ ಪ್ರಕರಣಗಳು ದಾಖಲಾಗಬಹುದು, ಆದರೆ, ಕ್ರಿಮಿನಲ್ ಪ್ರೊಸೀಡಿಂಗ್ಸ್ ಅನ್ನು ಕೈಬಿಡಲಾಗದು ಎನ್ನುವ ತೀರ್ಪನ್ನು ಉಲ್ಲೇಖಿಸಿದೆ.
ಇಂಥ ಸೆಕ್ಸ್ ಭಿನ್ನಾಭಿಪ್ರಾಯಗಳು ದಾಂಪತ್ಯದಲ್ಲಿ ಕಾಮನ್, ಸರಿ ಮಾಡಿ ಕೊಳ್ಳೋದು ನಿಮ್ಮ ಕೈಲ್ಲಿದೆ
ಕೋಲ್ಕತಾ ಹೈಕೋರ್ಟ್ ಪ್ರಕಾರ, ಗುದದ್ವಾರದಲ್ಲಿ ಬಲವಂತದ ಲೈಂಗಿಕ ಕ್ರಿಯೆ ನಡೆಸಲು ಯತ್ನಿಸುವುದು ಚಿಕ್ಕ ಅಪರಾಧ ಎನಿಸಿದರೂ ಅಪರಾಧವೇ ಆಗಿದೆ. ಪ್ರಸ್ತುತ ಪ್ರಕರಣದಲ್ಲಿ ವೈದ್ಯಕೀಯ (Medical) ದಾಖಲೆಗಳಲ್ಲಿ ಗಾಯವಾಗಿರುವುದ ಯಾವುದೇ ಸಾಕ್ಷ್ಯಗಳು ಇಲ್ಲದಿದ್ದರೂ, ಗುದದ್ವಾರದ ಮೂಲಕ ಲೈಂಗಿಕ ಕ್ರಿಯೆ ನಡೆದಿಲ್ಲವಾದರೂ ಈ ಪ್ರಯತ್ನ ಮಾತ್ರ ಅಪರಾಧವೇ (Offensive) ಆಗಿದೆ ಎಂದು ತೀರ್ಪು ನೀಡಿದೆ.
6.3 ಇಂಚಿನ ಮರದ ದೊಣ್ಣೆ, 2000 ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತಾ ಸೆಕ್ಸ್ ಟಾಯ್?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.