ಪ್ರೀತಿಸಿದ ವ್ಯಕ್ತಿ ಪ್ರೀತಿ ಒಪ್ಪಿಕೊಳ್ಬೇಕು, ಈಗಾಗಲೇ ಓಕೆ ಅಂದಿರೋರು ಮತ್ತಷ್ಟು ಹತ್ತಿರವಾಗ್ಬೇಕು, ಪ್ರೇಮಿಗಳ ದಿನವನ್ನು ಸುಂದರವಾಗಿ ಕಳೆಯಬೇಕೆಂದ್ರೆ ನಿಮ್ಮ ರಾಶಿ ನೆನಪಿಟ್ಟುಕೊಂಡು ಅದಕ್ಕೆ ಹೊಂದುವ ಬಣ್ಣದ ಬಟ್ಟೆ ಧರಿಸಿ.
ವ್ಯಾಲೆಂಟೈನ್ ಡೇ ಸಮೀಪಿಸುತ್ತಿದೆ. ಪ್ರತಿ ವರ್ಷವೂ ಫೆಬ್ರವರಿ 14ರಂದು ಎಲ್ಲೆಡೆ ವ್ಯಾಲೆಂಟೈನ್ ಡೇ ಆಚರಿಸುತ್ತಾರೆ. ಈಗಾಗಲೇ ಪ್ರೇಮಿಗಳು ಹೇಗೆ ಪ್ರೀತಿಯನ್ನು ವ್ಯಕ್ತಪಡಿಸುವುದು, ಯಾವ ಗಿಫ್ಟ್ ಕೊಡುವುದು, ಯಾವ ಡ್ರೆಸ್ ಹಾಕಿಕೊಳ್ಳಲಿ ಎನ್ನುವುದರ ಚಿಂತೆಯಲ್ಲಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಿಮ್ಮ ರಾಶಿಗೆ ಅನುಗುಣವಾದ ಬಣ್ಣದ ಬಟ್ಟೆಯನ್ನು ಧರಿಸಿದರೆ ನಿಮ್ಮ ಪ್ರೀತಿ ಖಂಡಿತವಾಗಿಯೂ ನಿಮಗೆ ಸಿಗುತ್ತದೆ. ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಹಾಕಬೇಕು ಎಂಬುದರ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡ್ತೇವೆ.
ವ್ಯಾಲೆಂಟೈನ್ ಡೇ (Valentines Day) ದಿನ ರಾಶಿಗನುಗುಣವಾಗಿ ಬಟ್ಟೆ (Clothes) ಧರಿಸಿ :
undefined
ಮೇಷ (Aries) ರಾಶಿ : ಮೇಷ ರಾಶಿಯ ಗುರು ಮಂಗಳನಾದ್ದರಿಂದ ಈ ರಾಶಿಯವರು ವ್ಯಾಲೆಂಟೈನ್ ಡೇ ದಿನದಂದು ಕೆಂಪು ಬಣ್ಣದ ಬಟ್ಟೆ ಧರಿಸಿಬೇಕು. ಆಗ ಪ್ರೇಮಿಗಳ ನಡುವೆ ಮಧುರವಾದ ಬಾಂಧವ್ಯ ಮೂಡುತ್ತದೆ. ನೀವು ಈಗಾಗಲೇ ಪ್ರೀತಿಯಲ್ಲಿದ್ರೆ ಮದುವೆ ನಿಶ್ಚಯಕ್ಕೆ ಇದು ಮುನ್ನುಡಿ ಬರೆಯುತ್ತದೆ.
ವೃಷಭ ರಾಶಿ : ವೃಷಭ ರಾಶಿಯವರು ಪ್ರೇಮಿಗಳ ದಿನದಂದು ಗುಲಾಬಿ ಬಣ್ಣ ಅಥವಾ ಬಿಳಿ ಬಣ್ಣದ ಉಡುಪನ್ನು ಧರಿಸಿದರೆ ಒಳ್ಳೆಯದು. ಇದರಿಂದ ಅವರ ಸಂಬಂಧ ಗಟ್ಟಿಗೊಳ್ಳುತ್ತವೆ. ವೈವಾಹಿಕ ಜೀವನದಲ್ಲಿನ ವಿವಾದಗಳು ಕೂಡ ಈ ಬಣ್ಣಗಳಿಂದ ದೂರವಾಗುತ್ತದೆ.
Valentine's day 2023: ಈ 4 ರಾಶಿಯವರು ಪ್ರೀತಿ ಪಡೆಯಲು ಯಾವ ಮಟ್ಟಕ್ಕಾದರೂ ಹೋಗಬಲ್ಲರು!
ಮಿಥುನ ರಾಶಿ : ಹಸಿರು ಮತ್ತು ಹಳದಿ ಬಣ್ಣವು ಮಿಥುನ ರಾಶಿಯವರಿಗೆ ಬಹಳ ಒಳ್ಳೆಯದು. ಈ ರಾಶಿಯ ಗುರು ಬುಧನಾದ್ದರಿಂದ, ಹಸಿರು ಬಣ್ಣ ನಿಮಗೆ ಶುಭ ತರಲಿದೆ.
ಕರ್ಕ ರಾಶಿ : ಪ್ರೇಮಿಗಳ ದಿನದಂದು ಕರ್ಕ ರಾಶಿಯವರು ಸಿಲ್ವರ್, ಕ್ರೀಮ್, ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆಯನ್ನು ಧರಿಸಬಹುದಾಗಿದೆ. ಈ ರಾಶಿಯು ಚಂದ್ರನಿಂದ ಆಳಲ್ಪಡುವುದರಿಂದ ಸೌಮ್ಯವಾದ ಬಣ್ಣಗಳನ್ನೇ ಧರಿಸುವುದು ಒಳಿತು. ವ್ಯಾಲೆಂಟೈನ್ ಡೇ ದಿನದಂದು ನೀವು ಬ್ರೈಟ್ ಕಲರ್ ಬಟ್ಟೆಗಳಿಂದ ದೂರವಿರಿ.
ಸಿಂಹ ರಾಶಿ : ಸಿಂಹ ರಾಶಿಯವರು ವ್ಯಾಲೆಂಟೈನ್ ಡೇ ದಿನದಂದು ಬಂಗಾರದ ಬಣ್ಣ ಅಥವಾ ಕಿತ್ತಳೆ ಬಣ್ಣದ ಬಟ್ಟೆಯನ್ನು ಧರಿಸಿದರೆ ಅವರ ನಡುವಿನ ಸಂಬಂಧ ಕೊನೆಯವರೆಗೂ ಗಟ್ಟಿಯಾಗಿರುತ್ತದೆ. ಸಿಂಹ ರಾಶಿಯನ್ನು ಸೂರ್ಯ ಆಳುವುದರಿಂದ ಈ ಬಣ್ಣಗಳು ಸೂಕ್ತವಾಗಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರು ಬಿಳಿ, ಹಸಿರು ಮತ್ತು ನೀಲಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಅವರ ಜೀವನದಲ್ಲಿ ಶುಭ ಉಂಟಾಗುತ್ತದೆ. ಪ್ರೇಮಿಗಳು ಮದುವೆಯ ಬಂಧನಕ್ಕೆ ಒಳಗಾಗುತ್ತಾರೆ.
ತುಲಾ ರಾಶಿ : ತುಲಾ ರಾಶಿಯ ಮೇಲೆ ಶುಕ್ರನ ಪ್ರಭಾವವಿರುವುದರಿಂದ ಈ ರಾಶಿಯವರಿಗೆ ಬಿಳಿ ಮತ್ತು ಕಿತ್ತಳೆ ಬಣ್ಣವು ಅತ್ಯಂತ ಶ್ರೇಷ್ಠವಾಗಿದೆ. ಸಂಗಾತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವವರು ತಿಳಿ ನೀಲಿ ಬಣ್ಣದ ಬಟ್ಟೆಯನ್ನು ಕೂಡ ಧರಿಸಬಹುದಾಗಿದೆ.
ವೃಶ್ಚಿಕ ರಾಶಿ : ಈ ರಾಶಿಯವರು ಕೆಂಪು, ಕಂದು, ಕಿತ್ತಳೆ ಮತ್ತು ಬಿಳಿ ಬಣ್ಣದ ಬಟ್ಟೆಯನ್ನು ಧರಿಸಬೇಕು. ವೃಶ್ಚಿಕ ರಾಶಿಯ ಅಧಿಪತಿ ಮಂಗಳನಾದ್ದರಿಂದ ನೀವು ನೀಲಿ ಬಣ್ಣದಿಂದ ದೂರವಿರಬೇಕು.
ಧನು ರಾಶಿ : ಧನು ರಾಶಿಯವರಿಗೆ ವ್ಯಾಲೆಂಟೈನ್ ಡೇ ದಿನ ಕಿತ್ತಳೆ ಬಣ್ಣ, ಗಾಢ ಹಳದಿ ಬಣ್ಣವು ಅತ್ಯಂತ ಶುಭತರಲಿದೆ. ಈ ರಾಶಿಯ ಗುರು ಬೃಹಸ್ಪತಿಯಾದ್ದರಿಂದ ಈ ಬಣ್ಣಗಳು ನಿಮ್ಮ ಜೀವನದಲ್ಲಿ ಪ್ರೀತಿ ಹೆಚ್ಚುವಂತೆ ಮಾಡುತ್ತವೆ. ಈ ದಿನದಂದು ಧನು ರಾಶಿಯವರು ನೀಲಿ ಬಣ್ಣವನ್ನು ಬಳಸಬಾರದು.
ತಮ್ಮ ಮಾಜಿ ಪ್ರೇಮಿಯನ್ನು ಅಷ್ಟೊಂದು ಸುಲಭವಾಗಿ ಮರೆಯೋಲ್ಲ ಈ ರಾಶಿಯವರು!
ಮಕರ ರಾಶಿ : ಈ ರಾಶಿಯನ್ನು ಶನಿ ಆಳುವುದರಿಂದ ಇವರು ಬದನೆಕಾಯಿ ಬಣ್ಣ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಹಾಕಬೇಕು. ಈ ಬಣ್ಣ ಅವರಲ್ಲಿ ಸಾಮರಸ್ಯವನ್ನು ಹೆಚ್ಚಿಸುತ್ತದೆ.
ಕುಂಭ ರಾಶಿ : ಪ್ರೇಮಿಗಳ ದಿನದಂದು ಕುಂಭ ರಾಶಿಯವರು ತಿಳಿ ನೀಲಿ ಮತ್ತು ಬದನೆಕಾಯಿ ಬಣ್ಣವನ್ನು ಆರಿಸಿಕೊಳ್ಳಬೇಕು. ಇದು ನಿಮ್ಮಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ. ಈ ರಾಶಿಯವರಿಗೆ ಹೊಳೆಯುವ ಬಣ್ಣ ಮತ್ತು ಬಿಳಿ ಬಣ್ಣವೂ ಸೂಕ್ತವಾಗಿದೆ.
ಮೀನ ರಾಶಿ : ಮೀನ ರಾಶಿಯವರು ಕಿತ್ತಳೆ ಅಥವಾ ಹಳದಿ ಬಣ್ಣದ ಬಟ್ಟೆಯನ್ನು ಧರಿಸಿದರೆ ಬಹಳ ಒಳ್ಳೆಯದು. ಈ ಬಣ್ಣಗಳು ನಿಮ್ಮ ಜೀವನದಲ್ಲಿ ಪ್ರೀತಿ, ಸಂತೋಷವನ್ನು ಹೆಚ್ಚಿಸುತ್ತವೆ.