ನಮ್‌ ಹುಡ್ಗೀನಾ ಬಿಡ್ತೀವಾ..ಮನೆಗೆ ನುಗ್ಗಿ ತಾಯಿ ಎದುರೇ ಗರ್ಲ್‌ಫ್ರೆಂಡ್‌ನ್ನು ಕರ್ಕೊಂಡು ಹೋದ ಹುಡ್ಗ!

By Vinutha Perla  |  First Published Feb 26, 2023, 4:33 PM IST

ಅದೇನೋ ಗೊತ್ತಿಲ್ಲಪ್ಪ..ಇಂಡಿಯನ್ಸ್‌ ಅದೆಷ್ಟು ಎಜುಕೇಟ್ ಆದ್ರೂ ಲವ್ ಮ್ಯಾರೇಜ್ ಅಂದಾಗ ಮೂಗು ಮುರಿಯೋದಂತೂ ತಪ್ಪಲ್ಲ. ಮಗ, ಮಗಳಿಗೆ ಲವ್ ಇದೆ ಅಂತ ಗೊತ್ತಾದ್ರೆ ಸಾಕು ಪೇರೆಂಟ್ಸ್ ಮನೆಯಲ್ಲೇ ರಾಮಾಯಣಾನೇ ಮಾಡಿಬಿಡ್ತಾರೆ. ಇದೇ ಕಾರಣಕ್ಕೆ ಎಷ್ಟೋ ಪ್ರೇಮಿಗಳು ದೂರ ಆಗಿದ್ದೂ ಇದೆ. ಹೀಗಿರುವಾಗ ಇಲ್ಲೊಬ್ಬ ಲವರ್‌, ಮನೆಗೆ ಬಂದು ಹುಡುಗಿಯ ತಾಯಿಯೇ ಎದುರೇ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ.


ಪ್ರೀತಿ ಮಾಡೋದು ಅಂದ್ರೆ ಸುಮ್ನೆ ಅಲ್ಲ. ಪ್ರೀತಿ ಮಾಡೋಕೆ ಮನಸ್ಸು ತುಂಬಾ ಪ್ರೀತಿಯಿದ್ರಷ್ಟೇ ಸಾಕಾಗಲ್ಲ. ನಂಬಿಕೆ, ವಿಶ್ವಾಸ, ಧೈರ್ಯ ಎಲ್ಲಾನೂ ಬೇಕು. ಅದರಲ್ಲೂ ಇಂಡಿಯನ್ಸ್‌ ಅದೆಷ್ಟು ಎಜುಕೇಟ್ ಆದ್ರೂ ಲವ್ ಮ್ಯಾರೇಜ್ ಅಂದಾಗ ಮೂಗು ಮುರಿಯೋದಂತೂ ತಪ್ಪಲ್ಲ. ಲವ್ ಮ್ಯಾರೇಜ್ ಅಂದ್ರೆ ಸಾಕು ಜೋಡಿ ಅದೆಷ್ಟು ಚೆನ್ನಾಗಿದ್ರೂ ಜನರು ಕೊಂಕು ಹೇಳೋದಂತೂ ತಪ್ಪಲ್ಲ. ಮಗ, ಮಗಳಿಗೆ ಲವ್ ಇದೆ ಅಂತ ಗೊತ್ತಾದ್ರೆ ಸಾಕು ಪೇರೆಂಟ್ಸ್ ಮನೆಯಲ್ಲೇ ರಾಮಾಯಣಾನೇ ಮಾಡಿಬಿಡ್ತಾರೆ. ಜಾತಿ, ಅಂತಸ್ತು, ಬಣ್ಣ ಎಲ್ಲವನ್ನೂ ತಂದು ಅಡ್ಡಿ ಬಿಡ್ತಾರೆ. ಇನ್ನು ಕೆಲವೊಮ್ಮೆ ಕಾರಣಗಳೇ ಬೇಕಾಗಲ್ಲ. ಮಗ, ಮಗಳೇ ತಮ್ಮ ಜೋಡಿಯನ್ನು ಹುಡುಕಿಕೊಂಡ್ರು ಅನ್ನೋ ಕಾರಣವಷ್ಟೇ ಸಾಕಾಗುತ್ತೆ. ಲವ್ ಮಾಡಿದ ಮಗ, ಮಗಳನ್ನು ಬೈಯೋದು, ಹೊಡೆಯೋದು ಮಾಡ್ತಾರೆ.  ಇದೇ ಕಾರಣಕ್ಕೆ ಎಷ್ಟೋ ಪ್ರೇಮಿಗಳು ದೂರ ಆಗಿದ್ದೂ ಇದೆ. 

ಮಗ, ಮಗಳಿಗೆ ಲವ್ ಇದೆ ಅಂತ ಗೊತ್ತಾದ ತಕ್ಷಣ ಸ್ಕೂಲ್‌, ಕಾಲೇಜಿನಿಂದ ಬಿಡಿಸೋದು, ಮನೆಯಲ್ಲಿ ಕೂಡಿ ಹಾಕೋದು, ಮೊಬೈಲ್ ತೆಗೆದಿಡೋದು ಇಂಡಿಯನ್ ಸೊಸೈಟಿಯಲ್ಲಿ ನಡೀತಾನೆ ಇರುತ್ತೆ. ಅವಾಗೆಲ್ಲಾ ಪ್ರೇಮಿಗಳು (Lovers) ಮೀಟ್ ಆಗೋಕೆ ಆಗ್ದೆ ಒದ್ದಾಡಬೇಕಾಗುತ್ತೆ. ಕೆಲವರು ಮನೆ ಮಂದಿಯನ್ನು ವಿರೋಧಿಸಿ ಲವರ್ ಜೊತೆ ಓಡಿ ಹೋಗ್ತಾರೆ. ಇನ್ನು ಕೆಲವರು ಸುಮ್ನೆ ಬೇರೆಯವರನ್ನು ಮದ್ವೆಯಾಗಿ ಹೋಗಿಬಿಡ್ತಾರೆ.

Tap to resize

Latest Videos

ಮೋಸ ಮಾಡಲು ಮುಂದಾದ ಪೋಷಕರಿಗೇ ಚಳ್ಳೆಹಣ್ಣು ತಿನ್ನಿಸಿದ ಯುವತಿ: ಪ್ರೇಮಿಯೊಂದಿಗೆ ಮರುಮದುವೆ

ಕೋಣೆಯ ಬಾಗಿಲು ಮುರಿದು ಹುಡುಗಿಯನ್ನು ಕರೆದುಕೊಂಡು ಹೋದ ಬಾಯ್‌ಫ್ರೆಂಡ್
ಪ್ರೀತಿ ಮಾಡೋದು ಅಂದ್ರೆ ಹಾಗೇನೆ. ಅಲ್ಲಿ ಪ್ರೀತಿ ಇದ್ದರಷ್ಟೇ ಸಾಕಾಗಲ್ಲ. ಧೈರ್ಯನೂ ಬೇಕು ಅಂತಾರೆ. ಈ ಹುಡುಗನಿಗಂತೂ ಮನಸ್ಸು ತುಂಬಾ ಪ್ರೀತಿ (Love) ಮಾತ್ರ ಅಲ್ಲ ಧೈರ್ಯನೂ ಇದೆ ಅನ್ನೋದು ಪಕ್ಕಾ ಗೊತ್ತಾಗುತ್ತೆ. ಯಾಕಂದ್ರೆ ಈತ ಗರ್ಲ್‌ಫ್ರೆಂಡ್ ಮನೆಗೆ ಬಂದು ಆಕೆಯ ತಾಯಿಯ (Mother) ಎದುರೇ ಕೋಣೆಯ ಬಾಗಿಲು ತೆಗೆದು ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾನೆ. 

ಹೌದು, ಅಚ್ಚರಿ ಎನಿಸಿದರೂ ಇದು ನಿಜ. ಇತ್ತೀಚೆಗೆ, ಹುಡುಗನೊಬ್ಬ ತನ್ನ ಗೆಳತಿಯ ಮನೆಗೆ ನುಗ್ಗಿ ಹುಡುಗಿಯ ತಾಯಿಯ ಸಮ್ಮುಖದಲ್ಲಿ ಅವಳೊಂದಿಗೆ ಓಡಿಹೋಗುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ವೀಡಿಯೊದ ಮೊದಲ ವಿಭಾಗದಲ್ಲಿ, ಒಬ್ಬ ಹುಡುಗ ಕಲ್ಲಿನಿಂದ ಬಾಗಿಲನ್ನು ಬಡಿಯುತ್ತಿರುವುದನ್ನು ನೋಡಬಹುದು. ನಂತರ ಬಾಗಿಲು ಒಡೆದುಹೋಗುತ್ತದೆ. ಬ್ಯಾಗ್ ಹಾಕಿದ ಹುಡುಗಿಯೊಬ್ಬಳು ರೂಮಿನಿಂದ ಓಡಿ ಬರುತ್ತಾಳೆ. ನಂತ ಹುಡುಗ-ಹುಡುಗಿ ಇಬ್ಬರೂ ಓಡಿ ಹೋಗುತ್ತಾರೆ (Elope). ಹುಡುಗಿ ತಾಯಿ ಇಬ್ಬರಿಗೂ ಬೈಯುತ್ತಾ ಅವರನ್ನು ಬೆನ್ನಟ್ಟುವುದನ್ನು ನೋಡಬಹುದು.

Arranged Marriage ಆಗ್ತಿದ್ದೀರಾ? ಹಾಗಿದ್ರೆ ಇದನ್ನ ನೀವು ಓದ್ಲೇಬೇಕು…

ಓಡಿಹೋಗಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಇದುವರೆಗೆ ಸುಮಾರು 7 ಲಕ್ಷ ವೀವ್ಸ್ ಮತ್ತು 30000 ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ನೆಟ್ಟಿಗರು ಈ ವೀಡಿಯೋಗೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರಿಗೆ ಪೋಷಕರನ್ನು ಯಾಮಾರಿಸಿ ಹೀಗೆ ಹೋಗುವುದು ಸರಿಯಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ವಿನಾಕಾರಣ ಪ್ರೀತಿಗೆ ವಿರೋಧಿಸುವ ಪೋಷಕರಿಗೆ ಹೀಗೆಯೇ ಮಾಡಬೇಕು ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ನಾನು ಕೂಡಾ ನನ್ನ ಹುಡುಗಿಯನ್ನು ಮನೆಯಿಂದ ಹೀಗೆಯೇ ಕರೆದುಕೊಂಡು ಹೋಗುತ್ತೇನೆ' ಎಂದು ಖುಷಿಯಿಂದ ಹೇಳಿದ್ದಾರೆ.

ಅದೇನೆ ಇರ್ಲಿ, ಹುಡುಗ-ಹುಡುಗಿ ಮಾಡಿರೋದು ತಪ್ಪೋ, ಸರೀನಾ ಅವರವರ ವಿವೇಚನೆಗೆ ಬಿಟ್ಟಿದ್ದು. ನೀವು ಕೂಡಾ ಈ ವೀಡಿಯೋ ನೋಡಿ ನಿಮ್ಮ ಗರ್ಲ್‌ಫ್ರೆಂಡ್‌ನ್ನು ಮನೆಯಿಂದ ಕರೆದುಕೊಂಡು ಓಡಿ ಹೋಗೋ ಪ್ಲಾನ್ ಮಾಡಿದ್ರೆ ರಿಸ್ಕ್ ಎಲ್ಲಾ ನಿಮ್ದೆ, ನಮ್ದಲ್ಲ ನೆನಪಿರ್ಲಿ.

click me!