ಸಂಗಾತಿ ದೂರವಿದ್ದರೇನಂತೆ..ಇನ್ಮುಂದೆ ಆನ್‌ಲೈನ್‌ನಲ್ಲೇ ಸ್ಮೂಚ್ ಮಾಡ್ಬೋದು..!

By Suvarna NewsFirst Published Feb 26, 2023, 11:28 AM IST
Highlights

ಪರಸ್ಪರ ದೂರವಿರುವ ಪ್ರೇಮಿಗಳ ವಿರಹ ವಿವರಿಸಲು ಸಾಧ್ಯವಿಲ್ಲ.ಭೇಟಿಯಾಗಲು ಸಾಧ್ಯವಾಗದೆ, ಹತ್ತಿರ ಕುಳಿತು ಮಾತನಾಡಲೂ ಆಗದೆ, ಹಗ್ಗಿಂಗ್, ಕಿಸ್ಸಿಂಗ್ ಏನೂ ಇಲ್ಲದೆ ಒದ್ದಾಡುತ್ತಾರೆ. ಹೀಗೆ ದೂರ ದೂರವಿರುವ ಲಾಂಗ್ ಡಿಸ್ಟೆನ್ಸ್ ಜೋಡಿಗಳಿಗೆಂದೇ ಚೀನಾ ಹೊಸತೊಂದು ಸಾಧನ ಕಂಡು ಹಿಡಿದಿದೆ.

ಉದ್ಯೋಗ, ಅಧ್ಯಯನ ಮತ್ತು ಇನ್ನೇನೋ ಕಾರಣಗಳಿಂದ ಅನೇಕ ಜೋಡಿಗಳು ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ನಲ್ಲಿ (long distance relationship) ಇರುತ್ತಾರೆ. ಲಾಂಗ್ ಡಿಸ್ಟನ್ಸ್ ರಿಲೇಶನ್ ಶಿಪ್ ಬಗ್ಗೆ ಮಾತನಾಡುವುದು ಸುಲಭ, ಆದರೆ ಅಂತಹ ಸಂಬಂಧವನ್ನು ಉಳಿಸಿಕೊಳ್ಳೋದು ಕಷ್ಟ. ಸಂಗಾತಿ ನಡುವೆ ಸಾಕಷ್ಟು ಅಂತರವಿರುವ ಕಾರಣದಿಂದಾಗಿ, ಜಗಳ ಕೂಡ ಆಗೋ ಸಾಧ್ಯತೆ ಹೆಚ್ಚು. ದೂರದ ಸಂಬಂಧದಲ್ಲಿ, ಸಂಗಾತಿಯ ಭೇಟಿ ತುಂಬಾ ಕಡಿಮೆ. ಅಂತಹ ಪರಿಸ್ಥಿತಿಯಲ್ಲಿ, ಸಂಬಂಧ ಗಟ್ಟಿಗೊಳಿಸಲು, ಪ್ರತಿದಿನ ನಿಮ್ಮ ದಿನನಿತ್ಯದ ಆಗುಹೋಗುಗಳನ್ನು ಸಂಗಾತಿ ಜೊತೆ ಹಂಚಿಕೊಳ್ಳುವುದು ಮುಖ್ಯ. ಇಬ್ಬರೂ ದೂರ ದೂರ ಇರುವಾಗ ಪರಸ್ಪರ ಜೊತೆಯಾಗಿ ಸಮಯ ಕಳೆಯಲು ಸಾಧ್ಯವಾಗೋದಿಲ್ಲ. ಹಗ್‌, ಕಿಸ್ಸಿಂಗ್ ಅಂತೂ ದೂರದ ಮಾತು. 

ದೂರದಲ್ಲಿರುವ ಸಂಬಂಧ ವನ್ನು ಹೆಚ್ಚು ಸಮಯ ಉಳಿಸಿಕೊಳ್ಳೋದು ಕಷ್ಟ. ಸಂಗಾತಿ (Partner)ಗಳಿಬ್ಬರು ಕೆಲಸದ ಕಾರಣಕ್ಕೋ, ಶಿಕ್ಷಣದ ಕಾರಣಕ್ಕೋ ಒಬ್ಬೊಬ್ಬರು ಒಂದೊಂದು ಊರಿನಲ್ಲಿರಬೇಕಾಗಿ ಬಂದಾಗ ಅಥವಾ ದೇಶ ದೇಶಗಳಷ್ಟು ಅಂತರದಲ್ಲಿರಬೇಕಾಗಿ ಬಂದಾಗ ಅವರಿಬ್ಬರಿಗೂ ಅದೊಂತರಾ ಪರೀಕ್ಷೆಯ ಸಮಯ. ಒಬ್ಬರಿಗೆ ಬೇಕಾದಾಗಲೆಲ್ಲ ಮತ್ತೊಬ್ಬರು ಸಿಗುವುದಿಲ್ಲ. ಅಳುವಾಗ ಹೆಗಲು ಸಿಗೋಲ್ಲ, ಮಲಗಲು ಮಡಿಲು ಸಿಗೋಲ್ಲ. ಕಾಯುವಿಕೆಯೊಂದೇ ತಮ್ಮ ಪಾಲಿಗೆ ಎಂಬಂತಾಗಿರುತ್ತದೆ. ಹೀಗಾಗಿ ಇಂಥಾ ಸಂಬಂಧವನ್ನು ಸುಭದ್ರವಾಗಿಸಲು ಭೇಟಿ, ಹಗ್‌, ಕಿಸ್ ಖಂಡಿತಾ ಬೇಕು. ಭೇಟಿಯಾಗೋಕೇನೂ ವೀಡಿಯೋ ಕಾಲ್ ಮಾಡಿಬಿಡಬಹುದು. ಆದರೆ ಕಿಸ್ಸಿಂಗ್ ಹೇಗೆ ?

Latest Videos

Long Distance Relationship: ಲವರ್‌ಗೆ ಕೊಡುವ ಒಲವಿನ ಉಡುಗೊರೆ ಹೀಗಿರಲಿ

ಡಿಸ್ಟೆನ್ಸ್ ರಿಲೇಶನ್‌ ಶಿಪ್‌ನಲ್ಲಿರುವವರಿಗಾಗಿ ಕಿಸ್ಸಿಂಗ್ ಡಿವೈಸ್
ಹೀಗೆ ಡಿಸ್ಟೆನ್ಸ್ ರಿಲೇಶನ್‌ ಶಿಪ್‌ನಲ್ಲಿದ್ದು ತೊಂದರೆ ಪಡೋರಿಗೆಂದೇ ಚೀನಾದಲ್ಲೊಬ್ಬ ವ್ಯಕ್ತಿ ಕಿಸ್ಸಿಂಗ್ ಡಿವೈಸ್‌ನ್ನು ಕಂಡು ಹಿಡಿದಿದ್ದಾರೆ. ಆವಿಷ್ಕಾರಕ ಜಿಯಾಂಗ್ ಝೊಂಗ್ಲಿ ಅವರು ತಮ್ಮ ಗೆಳತಿ (Girlfriend)ಯೊಂದಿಗೆ ದೂರದ ಸಂಬಂಧದಲ್ಲಿದ್ದರು ಮತ್ತು ಫೋನ್ ಮೂಲಕ ಮಾತ್ರ ಸಂಪರ್ಕದಲ್ಲಿರಲು ಸಾಧ್ಯವಾಗುತ್ತಿತ್ತು. ಹೀಗಾಗಿ ಕಿಸ್ಸಿಂಗ್ ಡಿವೈಸ್ ಕಂಡುಹಿಡಿದಿದ್ದು, ಸಾಧನಕ್ಕೆ ಸ್ಫೂರ್ತಿ ಬಂದದ್ದು ಅಲ್ಲಿಂದಲೇ ಎಂದು ಹೇಳಿದರು.

ಚೀನಾದ ಚಾನ್‌ಝೌನಲ್ಲಿರುವ ವಿಶ್ವವಿದ್ಯಾನಿಲಯವೊಂದು ಸಾಧನವನ್ನು ಕಂಡುಹಿಡಿದಿದ್ದು, ಇದು ಚೀನಾದ ಸಾಮಾಜಿಕ ಮಾಧ್ಯಮ ವಲಯಗಳಲ್ಲಿ (Social media) ಸಂಚಲನ ಮೂಡಿಸಿದೆ. 'ಚುಂಬನ ಸಾಧನ' ದೂರದ ಜೋಡಿಗಳು ನಿಕಟ ಕ್ಷಣಗಳನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತದೆ. 'ಸಿಲಿಕಾನ್ ಲಿಪ್ಸ್' ಜೊತೆಗಿನ ಕಾಂಟ್ರಾಪ್ಶನ್ ಒತ್ತಡದ ಸಂವೇದಕಗಳು ಮತ್ತು ಪ್ರಚೋದಕಗಳನ್ನು ಹೊಂದಿದೆ ಮತ್ತು ನಿಜವಾದ ಕಿಸ್ ಅನ್ನು ಅನುಕರಿಸಬಲ್ಲದು ಎಂದು ಚೀನಾ ನಡೆಸುತ್ತಿರುವ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಸಾಧನವು ಬಳಕೆದಾರರ ತುಟಿಗಳ (lips) ಒತ್ತಡ, ಚಲನೆ ಮತ್ತು ತಾಪಮಾನವನ್ನು ಪುನರಾವರ್ತಿಸುತ್ತದೆ ಎಂದು ವರದಿ ಹೇಳಿದೆ.

ಕಿಸ್ಸಿಂಗ್ ಡಿವೈಸ್ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂರೆ ಸೋಷಿಯಲ್ ಮೀಡಿಯಾದಲ್ಲಿ ಜನರು ಇದಕ್ಕೆ ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವು ಬಳಕೆದಾರರು ಇದನ್ನು ತಮಾಷೆ ಎಂದು ಕರೆದರೆ, ಇತರರು ಅದನ್ನು 'ಅಶ್ಲೀಲ' ಎಂದು ಕರೆದರು, ಅಪ್ರಾಪ್ತ ವಯಸ್ಕರು ಅದನ್ನು ಖರೀದಿಸಬಹುದು ಮತ್ತು ಬಳಸಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ದೂರವಿದ್ದರೂ ಹತ್ತಿರವಾಗುವ ಪ್ರೀತಿಯ ರೀತಿ ಇದು!

ಕಿಸ್ಸಿಂಗ್ ಡಿವೈಸ್ ಬಳಸುವುದು ಹೇಗೆ?
ಕಿಸ್ಸಿಂಗ್ ಡಿವೈಸ್‌ನ್ನು ಬಳಸಲು ಮೊದಲಿಗೆ ಬಳಕೆದಾರರು ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು ಸಾಧನವನ್ನು ಫೋನ್‌ನ ಚಾರ್ಜಿಂಗ್ ಪೋರ್ಟ್‌ಗೆ ಪ್ಲಗ್ ಮಾಡಬೇಕಾಗುತ್ತದೆ. ಆ್ಯಪ್‌ನಲ್ಲಿ ಪಾಲುದಾರರೊಂದಿಗೆ ಜೋಡಿಯಾದ ನಂತರ, ಅವರು ವೀಡಿಯೊ ಕರೆಯನ್ನು ಪ್ರಾರಂಭಿಸಬಹುದು ಮತ್ತು ಅವರ ಚುಂಬನವನ್ನು ಪರಸ್ಪರ ರವಾನಿಸಬಹುದು. ಆವಿಷ್ಕಾರಕ ಜಿಯಾಂಗ್ ಝೊಂಗ್ಲಿ ಅವರು ತಮ್ಮ ಗೆಳತಿಯೊಂದಿಗೆ ದೂರದ ಸಂಬಂಧದಲ್ಲಿದ್ದರು ಮತ್ತು ಫೋನ್ ಮೂಲಕ ಮಾತ್ರ ಸಂಪರ್ಕದಲ್ಲಿರಲು ಸಾಧ್ಯವಾಯಿತು ಎಂದು ಹೇಳಿದರು. 

2016 ರಲ್ಲಿ, ಮಲೇಷ್ಯಾದ ಇಮ್ಯಾಜಿನರಿಂಗ್ ಇನ್‌ಸ್ಟಿಟ್ಯೂಟ್ ಟಚ್ ಸೆನ್ಸಿಟಿವ್ ಸಿಲಿಕಾನ್ ಪ್ಯಾಡ್‌ನ ರೂಪದಲ್ಲಿ 'ಕಿಸ್ಸಿಂಜರ್' ಎಂಬ ಹೆಸರಿನ ಇದೇ ರೀತಿಯ ಸಾಧನವನ್ನು ಬಿಡುಗಡೆ ಮಾಡಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ. ಗ್ಲೋಬಲ್ ಟೈಮ್ಸ್ ವರದಿಯ ಪ್ರಕಾರ, ಸಾಧನವು ಬಳಕೆದಾರರಿಗೆ ಅಪರಿಚಿತರೊಂದಿಗೆ ಜೋಡಿಯಾಗಲು ಮತ್ತು ಚುಂಬನಗಳನ್ನು ವಿನಿಮಯ ಮಾಡಿಕೊಳ್ಳಲು ಸಹ ಅನುಮತಿಸುತ್ತದೆ. ಬಳಕೆದಾರರು ತಮ್ಮ ಚುಂಬನಗಳನ್ನು ಇತರರು ಡೌನ್‌ಲೋಡ್ ಮಾಡಲು ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಸಾಧನದ ಬೆಲೆ 288 ಯುವಾನ್ ಎಂದರೆ 3,433 ರೂ. ಎಂದು ತಿಳಿದುಬಂದಿದೆ.

click me!