ರಾತ್ರಿ 8 ಗಂಟೆಗೆ ಮಾರುಕಟ್ಟೆ ಮುಚ್ಚೋ ದೇಶದಲ್ಲಿ ಮಕ್ಕಳ ಜನನ ಕಡಿಮೆಯಂತೆ!

By Kannadaprabha News  |  First Published Jan 10, 2023, 12:41 PM IST

ಜಗತ್ತಿನಾದ್ಯಂತ ಜನಸಂಖ್ಯೆ ದಿನೇ ದಿನೇ ಹೆಚ್ತಿದೆ. ಈ ಮಧ್ಯೆ ಯಾವ ದೇಶದಲ್ಲಿ ರಾತ್ರಿ 8 ಗಂಟೆಗೆ ಮಾರುಕಟ್ಟೆಮುಚ್ತಾರೋ ಅಲ್ಲೆಲ್ಲಾ ಮಕ್ಕಳ ಜನ ಸಂಖ್ಯೆ ಭಾರೀ ಕಡಿಮೆ ಇದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮುಹಮ್ಮದ್‌ ಹೇಳಿರೋದು ಭಾರೀ ವಿವಾದಕ್ಕೆ ಕಾರಣವಾಗಿದೆ.


ಇಂದಿನ ದಿನಗಳಲ್ಲಿ ವಿಶ್ವದ ಜನಸಂಖ್ಯೆ 8 ಬಿಲಿಯನ್ ತಲುಪಿದೆ. ಮತ್ತು ಜನಸಂಖ್ಯೆಯು ಹೆಚ್ಚುತ್ತಿರುವ ವೇಗವನ್ನು ನೋಡಿದರೆ, ಮುಂಬರುವ ದಿನಗಳಲ್ಲಿ ಅದನ್ನು ಲೆಕ್ಕ ಹಾಕುವುದು ಕಷ್ಟ ಎಂದು ತೋರುತ್ತದೆ. ಜನಸಂಖ್ಯೆ ಹೆಚ್ಚಳವಾಗುವುದರ ಜೊತೆಗೆ ಅಭಿವೃದ್ಧಿ ಸಹ ಕುಂಠಿತವಾಗುತ್ತೆ. ಹೀಗಾಗಿ ಹಲವು ದೇಶಗಳು ಜನಸಂಖ್ಯೆ ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ತವೆ. ಜನಸಂಖ್ಯೆ ಹೆಚ್ಚಳದ ಬಗ್ಗೆ ಇತರ ದೇಶಗಳ ಬಗ್ಗೆ ನಾಯಕರು ಕುಹಕವಾಡುವುದು, ವಿವಾದಾತ್ಮಕ ಹೇಳಿಕೆ ನೀಡುವುದು ಸಹ ಸಾಮಾನ್ಯ. ಈ ಮಧ್ಯೆ ಪಾಕಿಸ್ತಾನದ ಸಚಿವರೊಬ್ಬರು ನೀಡಿರೋ ಹೇಳಿಕೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಪಾಕಿಸ್ತಾನದಲ್ಲಿ ಸಚಿವರೊಬ್ಬರು ಹೊಸ ವಾದ ಮಂಡಿಸಿದ್ದಾರೆ. ಯಾವ ದೇಶದಲ್ಲಿ ರಾತ್ರಿ 8 ಗಂಟೆಗೆ ಮಾರುಕಟ್ಟೆಮುಚ್ತಾರೋ ಅಲ್ಲೆಲ್ಲಾ ಮಕ್ಕಳ ಜನ ಸಂಖ್ಯೆ ಭಾರೀ ಕಡಿಮೆ ಇದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮುಹಮ್ಮದ್‌ ಹೇಳಿದ್ದಾರೆ. 

ದುಡ್ಡು ಉಳಿಸಲು ರಾತ್ರಿ 10 ಗಂಟೆಗೆ ವಿವಾ ಕಾರ್ಯಕ್ರಮ ಮುಗಿಸಬೇಕು ಎಂಬ ಸೂಚನೆ ನೀಡಿದ್ದ ಪಾಕಿಸ್ತಾನದಲ್ಲಿ ಇದೀಗ ಸಚಿವರೊಬ್ಬರು ಹೊಸ ವಾದ ಮಂಡಿಸಿದ್ದಾರೆ. ಯಾವ ದೇಶದಲ್ಲಿ ರಾತ್ರಿ 8 ಗಂಟೆಗೆ ಮಾರುಕಟ್ಟೆಮುಚ್ತಾರೋ ಅಲ್ಲೆಲ್ಲಾ ಮಕ್ಕಳ ಸಂಖ್ಯೆ (Population) ಭಾರೀ ಕಡಿಮೆ ಇದೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಮುಹಮ್ಮದ್‌ ಹೇಳಿದ್ದಾರೆ. ಅವರ ಈ ಹೇಳಿಕೆ ಜಾಲತಾಣದಲ್ಲಿ (Social media) ವೈರಲ್‌ ಆಗಿದ್ದು ಹೊಸ ಸಂಶೋಧನೆ, ರಾತ್ರಿ 8 ಗಂಟೆ ಬಳಿಕ ಮಕ್ಕಳು (Children) ಹುಟ್ಟೋಲ್ಲ ಎಂದು ಜನರು ವ್ಯಂಗ್ಯವಾಡಿದ್ದಾರೆ. 

Tap to resize

Latest Videos

ಪುರುಷರು ಅಸಡ್ಡೆ, ಮಹಿಳೆಯರು ಅವಿದ್ಯಾವಂತರು; ಹೀಗಾಗಿ ಜನಸಂಖ್ಯೆ ನಿಯಂತ್ರಣಕ್ಕೆ ಬರಲ್ಲ: ನಿತೀಶ್‌ ಕುಮಾರ್

ವಿದ್ಯುತ್‌ ಸಮಸ್ಯೆ: ಪಾಕ್‌ನಲ್ಲಿ ರಾತ್ರಿ 8ಕ್ಕೆ ಅಂಗಡಿ ಬಂದ್‌
ಇಂಧನ ಉಳಿಸುವ ಸಲುವಾಗಿ ಇತ್ತೀಚೆಗೆ ಪಾಕ್‌ ಸರ್ಕಾರ, ಮಾರುಕಟ್ಟೆಯನ್ನು ರಾತ್ರಿ 8ಕ್ಕೆ ಮುಚ್ಚಬೇಕು. 10 ಗಂಟೆ ಬಳಿಕ ವಿವಾಹ (Wedding) ಕಾರ್ಯಕ್ರಮ ಆಯೋಜಿಸಬಾರದು ಎಂದು ಸೂಚನೆ ಹೊರಡಿಸಿತ್ತು. ಈಗಾಗಲೇ ಆರ್ಥಿಕ ದುಸ್ಥಿತಿಗೆ ತಲುಪಿರುವ ಪಾಕಿಸ್ತಾನ ಈಗ ವಿದ್ಯುತ್‌ ಸಮಸ್ಯೆಗೂ ಸಿಲುಕಿಕೊಂಡಿದೆ. ಹಾಗಾಗಿ ಮಾರುಕಟ್ಟೆ, ಅಂಗಡಿಗಳನ್ನು ರಾತ್ರಿ (Night) 8 ಗಂಟೆಗೆ ಮುಚ್ಚಲು ಹಾಗೂ ಮದುವೆ ಮಂಟಪಗಳಿಗೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ನೀಡುವ ಯೋಜನೆಯನ್ನು ಸಿದ್ಧಪಡಿಸಿತ್ತು.

ಸ್ತುತ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಹಾಗೂ ಕಳೆದ ಜೂನ್‌ನಲ್ಲಿ ಪಾಕಿಸ್ತಾನದಲ್ಲಿ ಉಂಟಾದ ಭಾರಿ ಪ್ರವಾಹ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಿದೆ. ವಿದ್ಯುತ್‌ ಉತ್ಪಾದನೆಗೆ ಹೊಡೆತ ಬಿದ್ದಿದೆ. ಸರ್ಕಾರವು ಈಗಾಗಲೇ ವಿದ್ಯುತ್‌ ಸಂರಕ್ಷಣಾ ಯೋಜನೆಯನ್ನು ಜಾರಿ ಮಾಡಿದ್ದು, ಇದನ್ನು ದೇಶಾದ್ಯಂತ ಜಾರಿ ಮಾಡಲು ಪ್ರಾಂತ್ಯಗಳೊಂದಿಗೆ ಈಗಾಗಲೇ ಸಭೆ ನಡೆಸುತ್ತಿದೆ.

'ಇನ್ನು ಕೇವಲ ಹತ್ತೇ ವರ್ಷದಲ್ಲಿ ಬೆಂಗ್ಳೂರಿನ ಜನಸಂಖ್ಯೆ 2.50 ಕೋಟಿಗೆ ತಲುಪಲಿದೆ'

ಈ ಯೋಜನೆಯ ಪ್ರಕಾರ ಮದುವೆ ಮಂಟಪಗಳಿಗೆ ನೀಡಲಾಗಿರುವ ಅನುಮತಿಯನ್ನು ರಾತ್ರಿ 10 ಗಂಟೆಗೆ ನಿರ್ಬಂಧಿಸಲು ಸೂಚಿಸಲಾಗಿದೆ. ಜೊತೆಗೆ ರೆಸ್ಟೋರೆಂಟ್‌ಗಳು (restaurants),  ಹೋಟೆಲ್‌ಗಳು (hotels) ಮತ್ತು ಮಾರುಕಟ್ಟೆಗಳನ್ನು (markets) ರಾತ್ರಿ 8 ಗಂಟೆಗೆ ಮುಚ್ಚಲು ತೀರ್ಮಾನಿಸಲಾಗಿದೆ. ಒಂದು ವೇಳೆ ಸರ್ಕಾರದ ಶೇ.20ರಷ್ಟು ಉದ್ಯೋಗಿಗಳು ವರ್ಕ್ ಫ್ರಂ ಹೋಮ್‌ (work from home) ಮಾಡಿದರೆ 5600 ಕೋಟಿ ರು. ಉಳಿಸಬಹುದು. ಈ ಬಗ್ಗೆ ಗುರುವಾರ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಇವೆಲ್ಲದರ ಮಧ್ಯೆ ಸಚಿವರು ನೀಡಿಯೋ ವಿವಾದಾತ್ಮಕ ಹೇಳಿಕೆ ಮಾತ್ರ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.

click me!