
ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಸಂಬಂಧಗಳು ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿವೆ. ಎಲ್ಲವನ್ನೂ ಪೂಜನೀಯ ಭಾವನೆಯಿಂದಲೇ ನೋಡುವ ಕಾರಣ, ಈ ಸಂಬಂಧಗಳನ್ನು ಆಚರಿಸಲೂ ಕೆಲವು ದಿನಗಳಿವೆ. ತಂದೆ-ತಾಯಿ, ಅಣ್ಣ-ತಂಗಿ, ಅತ್ತೆ-ಸೊಸೆ, ಅಳಿಯ-ಮಗಳು ಹೀಗೆ ಎಲ್ಲಾ ಸಂಬಂಧವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲವೊಬ್ಬರು ಸಂಬಂಧಕ್ಕೆ ಮಹತ್ವ ನೀಡದೆ ಸಂಸ್ಕೃತಿಗೇ ಕಳಂಕ ತರುತ್ತಿದ್ದಾನೆ. ರಾಜಸ್ಥಾನದಲ್ಲೂ ಇಂಥಹದ್ದೇ ಘಟನೆಯೊಂದು ನಡೆದಿದೆ. 27 ವರ್ಷದ ಅಳಿಯ 40 ವರ್ಷದ ಅತ್ತೆಗೆ ಹೃದಯ ಕೊಟ್ಟಿದ್ದಾನೆ. ಅಷ್ಟಕ್ಕೇ ಮುಗಿದಿಲ್ಲ, ಆಕೆಯ ಜೊತೆಗೆ ಓಡಿ ಹೋಗಿದ್ದಾನೆ. ನಂಬೋಕೆ ಕಷ್ಟವೆನಿಸಿದರೂ ಇದು ನಿಜ.
ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಾಲ್ಕು ಮಕ್ಕಳ ವಿವಾಹಿತ ಅತ್ತೆ ತನ್ನ ಅಳಿಯ (son-in-law)ನೊಂದಿಗೆ ಓಡಿಹೋಗಿದ್ದಾಳೆ. ಅತ್ತೆಗೆ ಮೂವರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಕ್ಕಳಿದ್ದು, ಎಲ್ಲಾ ನಾಲ್ಕು ಮಕ್ಕಳೂ ಮದುವೆಯಾಗಿದ್ದಾರೆ. ಹಾಗೆಯೇ ಮಹಿಳೆಯೊಂದಿಗೆ ಓಡಿಹೋದ ಅಳಿಯನಿಗೆ ಮೂವರು ಮಕ್ಕಳಿದ್ದಾರೆ. ಹೀಗಿದ್ದೂ ಅತ್ತೆ (Mother in law) ಯೆಂದರೆ ನನಗೆ ಭಾಳಾ ಪ್ರೀತಿ ಅಂತ ವ್ಯಕ್ತಿ ಮಾವನಿಗೆ ಬಲವಂತವಾಗಿ ಮದ್ಯಪಾನ (Alcohol) ಮಾಡಿಸಿ ಅತ್ತೆಯೊಂದಿಗೆ ಪಲಾಯನಗೈದಿದ್ದಾನೆ. ಆದ್ರೆ ಅಳಿಯನೇ ಅತ್ತೆಯನ್ನು ಅಪಹರಿಸಿದ್ದಾನೆ ಎಂದು ಮಹಿಳೆಯ ಸಂಬಂಧಿಕರು ದೂರು (Complaint) ದಾಖಲಿಸಿದ್ದಾರೆ.
Real Story: ಮಗನನ್ನು ಮುದ್ದು ಮಾಡುವ ಅತ್ತೆ ಬೆಡ್ ರೂಮ್‌ಗೂ ಬರ್ತಾಳೆ ಏನ್ ಮಾಡ್ಲಿ?
ಸಿರೋಹಿ ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಅತ್ತೆ ಮತ್ತು ಅಳಿಯನ ನಡುವೆ ಈ ಹಿಂದೆಯೇ ಪ್ರೀತಿ (Love) ಮೂಡಿತ್ತು. ಇಬ್ಬರೂ ಸರಿಯಾದ ಸಮಯಕ್ಕೆ ಕಾಯುತ್ತಿದ್ದರು. ಓಡಿ ಹೋಗುವ ಮುನ್ನ ಅಳಿಯ, ಮಾವನಿಗೆ ಕಂಠಪೂರ್ತಿ ಕುಡಿಸಿರುವುದು ಕೂಡ ಬೆಳಕಿಗೆ ಬಂದಿದೆ. ಮಾವ ಕುಡಿದು ಬಂದ ನಂತರ ಅತ್ತೆ ಮತ್ತು ಅಳಿಯ ಮನೆಯಿಂದ ಓಡಿ ಹೋಗಿದ್ದಾರೆ.
ಮಗಳ ಗಂಡನ ವಿರುದ್ಧ ದೂರು ನೀಡಿದ ವ್ಯಕ್ತಿ
ಘಟನೆಯ ನಂತರ ನೇಕಾರಂ ಪೌವಾ ಜೋಗಿ ಅಣದಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವರದಿಯಲ್ಲಿ ಅವರು, ಮಾಮಾವಲಿ ನಿವಾಸಿ ನಾರಾಯಣ್ ಮತ್ತು ನನ್ನ ಮಗಳು (Daughter) ರೂಪ ಜೋಗಿ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ನಂತರ ಮಗಳು ಮತ್ತು ಅಳಿಯ ನಾರಾಯಣ್ ಬರುತ್ತಿದ್ದರು. ನಾರಾಯಣ್ ಅವರು 30 ಡಿಸೆಂಬರ್ 2022ರಂದು ಸಿಯಾಕಾರಕ್ಕೆ ಬಂದಿದ್ದರು. ಅದೇ ಸಮಯದಲ್ಲಿ, ನಾನು ಮತ್ತು ಅಳಿಯ ನಾರಾಯಣ್ ಇಬ್ಬರೂ ಮದ್ಯದ ಪಾರ್ಟಿ ಮಾಡಿದೆವು, ಅದೇ ಮದ್ಯದ ಪಾರ್ಟಿಯ ಲಾಭವನ್ನು ಪಡೆದುಕೊಂಡು, ಅಳಿಯ ಹೆಂಡತೆಯ ಜೊತೆ ಪರಾರಿ (Elope)ಯಾಗಿದ್ದಾನೆ ಎಂದು ತಿಳಿಸಿದ್ದಾರೆ.
Bond with Mother-in-law: ಅತ್ತೆ ಜೊತೆ ಹೀಗಿದ್ರೆ ಜಗಳ ಆಡೋ ಮಾತೇ ಇಲ್ಲ..!
ಮಹಿಳೆಯ ಪತಿಗೆ ಡಿಸೆಂಬರ್ 30ರಂದು ಸಂಜೆ 4 ಗಂಟೆಗೆ ಎಚ್ಚರವಾದಾಗ, ನಾರಾಯಣ್ ಮತ್ತು ಅವರ ಪತ್ನಿ ಮನೆಯಿಂದ ಕಾಣೆಯಾಗಿದ್ದರು. ರಮೇಶ ನೀಡಿದ ದೂರಿನ ಮೇರೆಗೆ ಅನದಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ (Investigation) ಕೈಗೊಂಡಿದ್ದಾರೆ. ಅದೇನೆ ಇರ್ಲಿ, ಅತ್ತೆ-ಸೊಸೆಯೊಂದಿಗೆ ಓಡಿ ಹೋಗುತ್ತಿರುವ ಘಟನೆ ನಡೆದಿರೋದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆ ಸಹ ಹಲವಾರು ಬಾರಿ ಇಂಥಾ ಘಟನೆಗಳು ನಡೆದಿವೆ. ತಾಯಿಯಂತೆ ನೋಡಬೇಕಾದ ಅತ್ತೆಯ ಜೊತೆಯೇ ಅತ್ತೆ ಅಳಿಯ ಸಂಬಂಧ ಇಟ್ಕೊಂಡಿರೋ ಪ್ರಕರಣಗಳು ಹಲವು ಬಾರಿ ಬೆಳಕಿಗೆ ಬಂದಿವೆ. ಇದು ಸಂಸ್ಕೃತಿಯ ಅಧಃಪತನವೇ ಸರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.