ವಿವಾಹೇತರ ಸಂಬಂಧಗಳು ಜೀವನ ಹಾಳು ಮಾಡುತ್ವೆ. ಅನೇಕರ ಪ್ರಾಣಕ್ಕೆ ಇದು ಕುತ್ತು ತಂದಿದೆ. ಯಾವುದೋ ಗುಂಗಿನಲ್ಲಿ ತಪ್ಪು ಹೆಜ್ಜೆ ಇಡುವ ಜನರು ನಂತ್ರ ಪರಿತಪಿಸ್ತಾರೆ. ಆದ್ರೆ ಈತನಿಗೆ ಇನ್ನೂ ಅದ್ರ ಅರಿವಾಗಿಲ್ಲ. ಇಬ್ಬರನ್ನು ಬಿಡೋಕೆ ಮನಸ್ಸಿಲ್ಲ ಅಂತಿದ್ದಾನೆ.
ವಿವಾಹೇತರ ಸಂಬಂಧಕ್ಕೆ ಮುಖ್ಯ ಕಾರಣ ಈಗಿರುವ ಸಂಬಂಧದಲ್ಲಿ ಕಾಡುವ ಕೊರತೆ. ಬಹುತೇಕರು ದಾಂಪತ್ಯದಲ್ಲಿ ಪ್ರೀತಿ, ಗೌರವ ಅಥವಾ ಶಾರೀರಿಕ ಸಂಬಂಧದಲ್ಲಿ ಕೊರತೆ ಕಾಣಿಸಿದಾಗ ಮನೆಯಿಂದ ಹೊರಗೆ ಅದನ್ನು ಹುಡುಕಲು ಶುರು ಮಾಡ್ತಾರೆ. ಆದ್ರೆ ವಿವಾಹೇತರ ಸಂಬಂಧಕ್ಕೆ ಯಾವುದೇ ಭದ್ರತೆಯಿಲ್ಲ. ಆರಂಭದಲ್ಲಿ ಸುಂದರವೆನಿಸುವ ಸಂಬಂಧ ಬರ್ತಾ ಬರ್ತಾ ಹಿಂಸೆಯಾಗುವ ಸಾಧ್ಯತೆಯಿರುತ್ತದೆ. ಕೊನೆಯಲ್ಲಿ ಮನೆಯಲ್ಲಿರುವ ಮಡದಿಯೇ ಬೆಸ್ಟ್ ಎನ್ನಿಸಲು ಶುರುವಾಗುತ್ತದೆ. ಜ್ಞಾನೋದಯ ಆಗುವ ಮುನ್ನವೇ ಸಂಸಾರ ಒಡೆದು ಚೂರಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿ ಈಗ ಸಂಕಷ್ಟದಲ್ಲಿದ್ದಾನೆ. ಆತನಿಗೆ ಪತ್ನಿಯೂ ಬೇಕಂತೆ. ಪ್ರೇಮಿಯೂ ಬೇಕಂತೆ. ಇಬ್ಬರನ್ನೂ ಬಿಟ್ಟಿರಲು ಸಾಧ್ಯವಿಲ್ಲ ಎನ್ನುತ್ತಿದ್ದಾನೆ. ಆತನ ಕಥೆ ಏನು ಅನ್ನೋದನ್ನು ನಾವಿಂದು ಹೇಳ್ತೇವೆ.
ಆತನ ವಯಸ್ಸು 40 ವರ್ಷ. ಮದುವೆ (Marriage) ಯಾಗಿದೆ. ಪತ್ನಿ (Wife) ಹಾಗೂ ಮಕ್ಕಳ ಜೊತೆ ಸುಂದರ ಸಂಸಾರ ನಡೆಸುತ್ತಿದ್ದವನಿಗೆ ಪಿಂಕಿ ಹೆಸರಿನ ಮಹಿಳೆಯ ಮೇಲೆ ಮನಸಾಗಿದೆ. ಆಕೆ ನೋಡಲು ತುಂಬಾ ಸುಂದರ (Beautiful) ವಾಗಿದ್ದಾಳೆ ಎನ್ನುವುದು ಒಂದು ಕಾರಣವಾದ್ರೆ ಆಕೆಯಿಂದ ನನಗೆ ಶಾರೀರಿಕ ತೃಪ್ತಿ ಸಿಕ್ಕಿದೆ ಎನ್ನುತ್ತಾನೆ ಈತ. ಪತ್ನಿ ಈತನನ್ನು ಅಪಾರವಾಗಿ ಪ್ರೀತಿ (Love) ಮಾಡ್ತಾಳಂತೆ. ಮಕ್ಕಳು ಹಾಗೂ ಪತ್ನಿ ಬಿಟ್ಟಿರಲು ಈತನಿಗೆ ಸಾಧ್ಯವಿಲ್ಲ. ಹಾಗಂತ ಪಿಂಕಿಯನ್ನು ಕೂಡ ದೂರ ಮಾಡಲಾರೆ ಎನ್ನುತ್ತಾನೆ. ಪಿಂಕಿ ಈಗಾಗಲೇ ಎರಡು ಸಂಬಂಧ ಮುರಿದುಕೊಂಡಿದ್ದಾಳೆ. ಆದ್ರೆ ಪಿಂಕಿ ಜೊತೆಗಿದ್ದಾಗ ನಾನು ತುಂಬಾ ಸಂತೋಷದಿಂದ ಇರುತ್ತೇನೆ. ನನಗೆ ಮುಂದೇನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಾನೆ ಈ ವ್ಯಕ್ತಿ.
ತಜ್ಞ (Experts ) ರ ಸಲಹೆ : ಪತ್ನಿ ಹಾಗೂ ಮಕ್ಕಳ ಜೊತೆ ಆರಾಮಾಗಿದ್ದೆ ಎನ್ನುವ ನಿಮಗೆ ದಾಂಪತ್ಯದಲ್ಲಿ ಯಾವುದೆ ಕೊರತೆ ಇದ್ದಂತೆ ಕಾಣ್ತಿಲ್ಲ. ಆದ್ರೂ ಪಿಂಕಿಗೆ ಮನಸ್ಸು ನೀಡಿದ್ದು ಏಕೆ ಎಂಬುದು ಗೊತ್ತಾಗ್ತಿಲ್ಲ ಎನ್ನುತ್ತಾರೆ ತಜ್ಞರು. ಅನೇಕ ಬಾರಿ ಮನೆಯಲ್ಲಿರುವ ವಸ್ತುವಿಗಿಂತ ಮನೆಯಿಂದ ಹೊರಗೆ ಇರುವ ವಸ್ತು ಆಕರ್ಷಕವಾಗಿ ಕಾಣುತ್ತದೆ. ಅದ್ರ ಜಾಲಕ್ಕೆ ಬಿದ್ದ ಮೇಲೆ ಹೊರ ಬರೋದು ಕಷ್ಟವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಪತಿ ಪತ್ನಿ ನಡುವೆ ಕಲಹ ತಂದಿಡೋ ಅಶುಭ ಯೋಗಗಳು! ಪರಿಹಾರವಿಲ್ಲಿದೆ..
ಪಿಂಕಿ ನಿಮ್ಮನ್ನೂ ಬಿಡ್ಬಹುದು ಎಚ್ಚರ : ಈಗಾಗಲೇ ಎರಡು ಸಂಬಂಧವನ್ನು ಪಿಂಕಿ ಮುರಿದುಕೊಂಡಿದ್ದಾಳೆ. ಅಂದ್ರೆ ಆಕೆ ದಿ ಬೆಸ್ಟ್ ಹುಡುಕಾಟದಲ್ಲಿದ್ದಾಳೆ. ಅತ್ಯುತ್ತಮ ವ್ಯಕ್ತಿಯ ಹುಡುಕಾಟದಲ್ಲಿರುವವರಿಗೆ ತೃಪ್ತಿ ಸಿಗೋದು ಕಷ್ಟ. ಹಾಗಾಗಿ ಪಿಂಕಿ ಸ್ವಲ್ಪ ದಿನದಲ್ಲಿ ನಿಮ್ಮನ್ನೂ ಬಿಡುವ ಸಾಧ್ಯತೆಯಿದೆ. ಅದಕ್ಕೆ ನೀವು ಸಿದ್ಧರಿರಬೇಕು. ಪಿಂಕಿ ಪ್ರೀತಿಗೆ ದಾಂಪತ್ಯ ಹಾಳು ಮಾಡ್ಕೊಳ್ಳೋದು ಮೂರ್ಖತನ ಎನ್ನುತ್ತಾರೆ ತಜ್ಞರು.
Relationship Tips : ಸದಾ ತೆಗಳುತ್ತಲೇ ಇದ್ದರೆ ಮನಸ್ಸು ಅರಳುವುದು ಹೇಗೆ? ದಾಂಪತ್ಯ ಸುಖಕ್ಕೆ ಹೊಗಳಿ ನೋಡಿ!
ಪತ್ನಿ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಿ : ಮದುವೆಯ ನಂತರ ಅನೈತಿಕ ಸಂಬಂಧವನ್ನು (Illegal Relationship) ಹೊಂದುವುದು ತಪ್ಪು. ಅಷ್ಟೇ ಅಲ್ಲಿ ಇದು ಅನೇಕ ಉತ್ತಮ ಕುಟುಂಬವನ್ನು ಹಾಳು ಮಾಡಿದೆ. ಹಾಗಾಗಿ ವಿವಾಹೇತರ ಸಂಬಂಧದಿಂದ ನೀವು ಹೊರಗೆ ಬರುವುದು ಮುಖ್ಯ ಎನ್ನುತ್ತಾರೆ ತಜ್ಞರು. ಪಿಂಕಿ ಬಗ್ಗೆ ನೀವು ಪತ್ನಿ ಜೊತೆ ಮಾತನಾಡಬೇಕಾಗಿಲ್ಲ. ನಿಮ್ಮ ಪತ್ನಿಯಲ್ಲಿ ಏನು ಕೊರತೆಯಿದೆ ಎಂಬುದನ್ನು ಮಾತನಾಡಿ ಎಂಬುದು ತಜ್ಞರ ಸಲಹೆ. ಪತ್ನಿಯಿಂದ ನೀವು ಏನ್ನನ್ನು ಬಯಸುತ್ತಿದ್ದೀರಿ, ಸಂಬಂಧದಲ್ಲಿ ಏನು ಕೊರತೆ ಕಾಣಿಸುತ್ತಿದ್ದೆ ಎಂಬುದನ್ನು ಅವರಿಗೆ ತಿಳಿಸಿ ಹೇಳಿ. ಅವರ ಜೊತೆ ಹೆಚ್ಚೆಚ್ಚು ಸಮಯ ಕಳೆಯಿರಿ. ಇಬ್ಬರು ಆಗ ಮತ್ತಷ್ಟು ಅರ್ಥವಾಗುತ್ತೀರಿ. ಬರೀ ಶಾರೀರಿಕ ಸಂಬಂಧಕ್ಕೆ ಪಿಂಕಿ ಬೇಕೆಂದ್ರೆ ನೀವು ಅದನ್ನು ಪತ್ನಿಯಲ್ಲೇ ಪಡೆಯುವ ಪ್ರಯತ್ನ ನಡೆಸಬಹುದು ಎನ್ನುತ್ತಾರೆ ತಜ್ಞರು. ದಾಂಪತ್ಯದಲ್ಲಿ ರೋಮ್ಯಾನ್ಸ್ ಕಾಯ್ದುಕೊಂಡರೆ ಮನಸ್ಸು ಬೇರೆಡೆ ತಿರುಗುವುದಿಲ್ಲ ಎಂಬುದು ತಜ್ಞರ ಸಲಹೆ.