
ರೀಲ್ಸ್ ನೋಡ್ತಾ ನೋಡ್ತಾ 26 ವರ್ಷದ ಮಹಿಳೆಯೊಬ್ಬಳು ಗಂಡ ಹಾಗೂ ಮಕ್ಕಳನ್ನು ತೊರೆದು ರೀಲ್ಸ್ ಮಾಡುವವನ ಜೊತೆ ಓಡಿ ಹೋದಂತಹ ಘಟನೆ ಬಿಹಾರದ ಪಾಟ್ನಾದ ಕಿಶನ್‌ಗಂಜ್‌ನಲ್ಲಿ ನಡೆದಿದೆ. ಎರಡು ತಿಂಗಳ ಕಾಲ ರೀಲ್ಸ್ ಮಾಡುವ ಯುವಕನ ಜೊತೆ ಚಾಟ್ ಮಾಡಿದ ಮಹಿಳೆ ಬಳಿಕ ಅತನಿಗಾಗಿ ಗಂಡ ಮಕ್ಕಳನ್ನು ಬಿಟ್ಟು ಪರಾರಿಯಾಗಿದ್ದಾಳೆ. ಕಳೆದ 4 ದಿನಗಳಿಂದ ರೀಲ್ಸ್ ಮಾಡುವವನ ಜೊತೆ ವಾಸ ಮಾಡ್ತಿರುವ ಮಹಿಳೆ ಆತನನ್ನೇ ಮದುವೆಯಾಗುವುದಕ್ಕೆ ನಿರ್ಧರಿಸಿದ್ದಾಳೆ. ಇತ್ತ ಘಟನೆಗೆ ಸಂಬಂಧಿಸಿದಂತೆ ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ. ಮಮತಾ ಎಂಬ 26 ವರ್ಷದ ಮಹಿಳೆಯೇ ಹೀಗೆ ಗಂಡನ ಬಿಟ್ಟು ರೀಲ್ಸ್ ಮಾಡುವ ಭಂಡನ ಜೊತೆಗೆ ಓಡಿ ಹೋದವಳು.
ಮಮತಾಗೆ ಇಬ್ಬರು ಮಕ್ಕಳಿದ್ದು, ಇತ್ತೀಚೆಗೆ ಆಕೆ ಪಾಟ್ನಾದಲ್ಲಿ ಸಲೂನ್ ಒಂದನ್ನು ನಡೆಸುವುದರ ಜೊತೆ ಜೊತೆಗೆ ರೀಲ್ಸ್ ಮಾಡುವ ಯುವಕ ಸನ್ನಿ ಜೊತೆಗೆ ಸೋಶಿಯಲ್ ಮೀಡಿಯಾದ ಮೂಲಕ ಪರಿಚಯವಾಗಿದೆ. ಈ ಪರಿಚಯ ಪ್ರೀತಿ ಪ್ರೇಮಕ್ಕೆ ತಿರುಗಿದ್ದು, ಆಕೆ ಗಂಡನನ್ನು ಬಿಟ್ಟು ಸನ್ನಿ ಜೊತೆ ಜೀವನ ಮಾಡುವುದಕ್ಕೆ ನಿರ್ಧರಿಸಿದ್ದಾಳೆ. ಇತ್ತ ಸನ್ನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ತನ್ನ ಜೀವನದಲ್ಲಿ ನಡೆದ ಘಟನೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದು, ಆತನಿಗೂ ಮದುವೆಯಾಗಿದೆ. ಆದರೆ ಆತನ ಪತ್ನಿಯೂ ಎರಡು ವರ್ಷಗಳ ಹಿಂದೆ ಬೇರೊಬ್ಬ ಯುವಕನೊಂದಿಗೆ ಓಡಿ ಹೋಗಿದ್ದಾಳೆ. ಇತ್ತ ಒಬ್ಬಂಟಿಯಾದ ಸನ್ನಿ ಹಗಲು ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಉಳಿದ ಸಮಯದಲ್ಲಿ ರೀಲ್ಸ್‌ನಲ್ಲಿ ತನ್ನ ಗೋಳು ಹೇಳಿಕೊಳ್ಳುತ್ತಾ ರೀಲ್ಸ್ ಮಾಡಿಕೊಂಡು ಕಾಲ ಕಳೆಯುತ್ತಿದ್ದ.
ಇದನ್ನೂ ಓದಿ: ಎರಡು ಮಕ್ಕಳ ತಾಯಿಯ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ಈ ನಡುವೆ ಕಳೆದ 4 ತಿಂಗಳ ಹಿಂದೆ ಕಿಶನ್‌ಗಂಜ್‌ನ ಮಮತಾ ಈತನ ಎಲ್ಲಾ ರೀಲ್ಸ್‌ಗಳನ್ನು ಲೈಕ್ ಮಾಡುವುದಕ್ಕೆ ಶುರು ಮಾಡಿದ್ದಾಳೆ. ಜೊತೆಗೆ ಆತನ ಬಳಿ ನಂಬರ್ ನೀಡುವಂತೆ ಕೇಳಿದ್ದಾಳೆ. ಇಬ್ಬರ ನಡುವಿನ ಸಂವಹನದ ವೇಳೆ ಆಕೆ ತನಗೆ ಈ ವಿವಾಹ ಇಷ್ಟವಿಲ್ಲ, ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತಿಲ್ಲ ಎಂದೆಲ್ಲಾ ಆತನ ಬಳಿ ಗಂಡನ ಬಗ್ಗೆ ದೂರಿದ್ದಾಳೆ. ನಂತರದಲ್ಲಿ ಇಬ್ಬರ ಮಧ್ಯೆ ದಿನವೂ ಫೋನ್ ಕರೆಗಳ ವಿನಿಮಯವಾಗಿದೆ ಹಾಗೂ ಸನ್ನಿ ಆಕೆಯ ಬಳಿ ಮದುವೆಯ ಪ್ರಸ್ತಾಪ ಮಾಡಿದ್ದಾನೆ. ಆದರೆ ಮಮತಾ ಆರಂಭದಲ್ಲಿ ಆ ವಿಚಾರವನ್ನು ನಿರ್ಲಕ್ಷಿಸಿದ್ದಾಳೆ. ನಂತರ ತಾನು ಕಿಶನ್‌ಗಂಜ್ ತೊರೆದು ನಗರದಲ್ಲಿ ವಾಸ ಮಾಡಬೇಕು ಎಂದಿದ್ದಾಳೆ ನಂತರ ಆತನನನ್ನು ಮದುವೆಯಾಗುವುದಕ್ಕೂ ಒಪ್ಪಿಗೆ ನೀಡಿದ್ದಾಳೆ.
ಇದಾದ ನಂತರ ಗಂಡ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ತೊರೆದು ಮಮತಾ ಡಿಸೆಂಬರ್ 3 ರಂದು ಕಿಶನ್‌ಗಂಜ್‌ನಿಂದ ಪಾಟ್ನಾಗೆ ಹೊರಟಿದ್ದಾಳೆ. ಹೀಗೆ ಬರುವವ ವೇಳೆ ಆಕೆ ಮನೆಯಲ್ಲಿ ಹೊರಗೆ ತುಸು ಕೆಲಸವಿದೆ ಎಂದು ಹೇಳಿ ಬಂದಿದ್ದಾಳೆ. ನಂತರ ಡಿಸೆಂಬರ್ 4ರಂದು ಪಾಟ್ನಾಗೆ ಬಂದಿದ್ದಾಳೆ ಎಂದು ಸನ್ನಿ ಹೇಳಿದ್ದಾನೆ. ನಾನು ಪಾಟ್ನಾಗೆ ಹೋಗಿ ಆಕೆಯನ್ನು ನನ್ನ ಮನೆಗೆ ಕರೆದುಕೊಂಡು ಬಂದೆ. ನನ್ನ ಮನೆಯಲ್ಲಿ ಆಕೆ ಕಳೆದ 4 ದಿನಗಳಿಂದ ವಾಸ ಮಾಡ್ತಿದ್ದಾಳೆ. ಇದೇ ಸಮಯದಲ್ಲಿ ನಾವು ದೇಗುಲದಲ್ಲಿ ಮದುವೆಯಾಗಿದ್ದೇವೆ. ಹಾಗೂ ಗಂಡ ಹೆಂಡತಿಯಂತೆ ವಾಸ ಮಾಡುವುದಕ್ಕೆ ಶುರು ಮಾಡಿದ್ದೇವೆ. ಈ ಮಧ್ಯೆ ಆಕೆಯ ಮನೆಯವರಿಂದ ನನಗೆ ಕರೆ ಬರುವುದಕ್ಕೆ ಶುರುವಾಗಿದೆ ಎಂದು ಸನ್ನಿ ಹೇಳಿದ್ದಾನೆ.
ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಕೋಕಾ ಕೋಲಾ ಕಂಪನಿ ಚಾರ್ಟೆಡ್ ಅಕೌಂಟೆಂಟ್ ಹಠಾತ್ ಸಾವು
ಇದಾದ ನಂತರ ಮಮತಾಳ ಗಂಡ ಪತ್ನಿ ನಾಪತ್ತೆಯಾದ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿರುವ ಬಗ್ಗೆ ತಿಳಿದಿದೆ. ಮಮತಾಳ ಮಾವ ಇವರಿಗೆ ನಿರಂತರ ಕರೆ ಮಾಡುತ್ತಿದ್ದು, ಈ ಜೋಡಿ ಅವರಿಗೆ ಸುಳ್ಳು ಸುಳ್ಳು ವಿಳಾಸ ಹೇಳುವ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ. ಈ ಮಧ್ಯೆ ಡಿಸೆಂಬರ್ 8 ರಂದು ಕರೆ ಮಾಡಿದ ಮಮತಾಳ ಮಾವ ಇವರಿಬ್ಬರಿಗೆ ಕೋರ್ಟ್ ಮ್ಯಾರೇಜ್ ಮಾಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿ ಈ ಜೋಡಿ ಗಾಂಧಿ ಮೈದಾನವನ್ನು ತಲುಪಿದಾಗ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದಾರೆ.
ಆದರೆ ಪೊಲೀಸರಿಗೆ ಸಿಕ್ಕಿಬಿದ್ದ ನಂತರ ಮಮತಾ ಮಾತ್ರ ಬೇರೆಯದೇ ವರಸೆ ತೆಗೆದಿದ್ದಾಳೆ. ತನಗೆ ಪಾಟ್ನಾಗೆ ಬಂದ ನಂತರವೇ ಸನ್ನಿಗೆ ಮದುವೆಯಾಗಿರುವುದು ತಿಳಿದಿದೆ. ಸನ್ನಿ ನನ್ನ ಮೇಲೆ ಮಾಟ ಮಂತ್ರ ಮಾಡಿ ಬಳಸಿಕೊಂಡಿದ್ದಾನೆ ಎಂದು ಹೇಳಿದ್ದಾಳೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.