
ಮದುವೆ ಸಂಭ್ರಮಗಳು ಹಲವು ಬಾರಿ ಕ್ಷುಲ್ಲಕ ಕಾರಣಕ್ಕೆ ರಣಾಂಗಣವಾದ ಉದಾಹರಣೆಗಳಿವೆ. ಹೀಗಾಗಿ ಎರಡು ಕುಟುಂಬಸ್ಥರು ಅತೀವ ಮುತುವರ್ಜಿ ವಹಿಸುತ್ತಾರೆ. ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಮದುವೆ ಮುರಿದು ಬಿದ್ದ ಘಟನೆಗಳು ನಡೆದಿದೆ. ಇದರ ನಡುವೆ ಅದ್ಧೂರಿಯಾಗಿ ಆಯೋಜನೆಗೊಂಡ ಮದುವೆ ನಡುವೆ ವರ, ಮೈಕ್ ಪಡೆದು 8ನೇ ವಚನದ ಜೊತೆ ತಾಳಿ ಕಟ್ಟುತ್ತೇನೆ ಎಂದಿದ್ದಾನೆ. ಅಷ್ಟರಲ್ಲೇ ಇಡೀ ವಾತಾವರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಎಲ್ಲೂ ಇಲ್ಲದ ಈ ಸಂಪ್ರದಾಯ ಏನು? ಎಂದು ಹಿರಿಯರು ಮಾತನಾಡಿಕೊಳ್ಳಲು ಆರಂಭಿಸಿದ್ದರು, ವಧು ಮುಖದಲ್ಲಿ ಆತಂಕದ ಛಾಯೆ ಕಾಣತೊಡಗಿತು. ಆದರೆ ಮೈಕ್ ಹಿಡಿದ ವರ ತನ್ನ ಷರತ್ತು ವಿಧಿಸುತ್ತಿದ್ದಂತೆ ಇಡೀ ಸಭಾಂಗಣ ನಗೆಗಡಲಲ್ಲಿ ತೇಲಾಡಿದೆ.
ಸಪ್ತಪದಿ ತುಳಿಯುವಾಗ 7 ವಚನ ನೀಡಲಾಗುತ್ತದೆ. ಹೀಗಾಗಿ 8ನೇ ವಚನ ಎಂದು ವರ ಮೈಕ್ ಮೂಲಕ ಹೇಳಿದ್ದಾನೆ. ಹೀಗಾಗಿಯೇ ಆತಂಕ ಹೆಚ್ಚಾಗಿತ್ತು. ಎಲ್ಲವೂ ಸರಿಯಾಗಿತ್ತು, ದಿಢೀರ್ ವರನಿಗೆ ಏನಾಯ್ತು ಎಂದು ಯೋಚಿಸುತ್ತಿರುವ ನಡುವೆ ವರ, ಮೈಕ್ ಮೂಲಕ ತನ್ನ 8ನೇ ವಚನ ಹೇಳಿದ್ದಾನೆ. ನನ್ನ 8ನೇ ಷರತ್ತು ಎಂದರೆ ಕೋಣೆಯಲ್ಲಿ ಎಸಿ ಟೆಂಪರೇಚರ್ ಎಷ್ಟಿಡಬೇಕು ಅನ್ನೋದು ನಾನು ನಿರ್ಧರಿಸುತ್ತೇನೆ ಎಂದಿದ್ದಾನೆ. ಈ ಮಾತು ಕೇಳುತ್ತಿದ್ದಂತೆ ಆತಂಕದಲ್ಲಿದ್ದ ವಧುವಿಗೆ ನಗು ತಡೆಯಲು ಸಾಧ್ಯವಾಗಲಿಲ್ಲ. ಇತ್ತ ಕುಟುಂಬಸ್ಥರು ಆಪ್ತರು ನಗೆಗಡಲಲ್ಲಿ ತೇಲಾಡಿದ್ದಾರೆ.
ಈ ವಚನ ಕೊಟ್ಟರೆ ಮದುವೆ ಎಂದಿದ್ದಾನೆ. ಇತ್ತ ವಧು ಸರಿ ಎಂದಿದ್ದಾಳೆ. ಈ ಕುರಿತು ವಿಡಿಯೋ ಇದೀಗ ಭಾರಿ ವೈರಲ್ ಆಗುತ್ತಿದೆ. ಹಲವರು ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ವರನಿಗೆ ಕೊನೆಗೆ ಉಳಿದುಕೊಂಡಿದ್ದು ಎಸಿ ರಿಮೂಟ್ ಮಾತ್ರ. ಇನ್ನೆಲ್ಲಾ ರಿಮೂಟ್ ವಧುವಿನ ಕೈಯಲ್ಲಿದೆ. ಕತೆ ಮುಗೀತು ಎಂದಿದ್ದಾರೆ. ಇನ್ನು ಕೆಲವರು ವರನ ಪಾಡು ನೋಡಿ ಟಿವಿ ರಿಮೂಟ್ ಮಾತೆ ಇಲ್ಲ, ಕೊನೆಗೆ ಎಸಿ ರಿಮೂಟ್‌ಗೆ ಅಳುವ ಪರಿಸ್ಥಿತಿ ಎಂದು ಹಾಸ್ಯ ಮಾಡಿದ್ದಾರೆ. ಇದೇ ವೇಳೆ ಹಲವರು ಕ್ಯೂಟ್ ಹಾಗೂ ಸ್ವೀಟ್ ವಚನ ಉತ್ತಮವಾಗಿದೆ ಎಂದಿದ್ದಾರೆ.
8ನೇ ವಚನದ ಮೂಲಕ ಮದುವೆಯನ್ನು ವರ ಸ್ಮರಣೀಯವಾಗಿಸಿದ್ದಾನೆ. ಗಂಭೀರವಾಗಿದ್ದ ಸಭೆಯಲ್ಲಿ ಎಲ್ಲರೂ ನಕ್ಕಿದ್ದಾರೆ. ಸಂಭ್ರಮ ಮನೆ ಮಾಡಿದೆ.ಹಲವು ಮದುವೆ ಸಮಾರಂಭಗಳು ವಿಶೇಷೆತೆಗಳಿಂದ ಕೂಡಿರುತ್ತದೆ. ಹಲವರು ಈ ರೀತಿ ಹೊಸ ಪ್ರಯತ್ನಗಳನ್ನು ಮಾಡಿ ಗಮನಸೆಳೆಯುತ್ತಾರೆ. ಹೆಚ್ಚಾಗಿ ನವ ಜೋಡಿಗಳು ರೀಲ್ಸ್ ಮೂಲಕ ಗಮನಸೆಳೆಯುತ್ತಿದ್ದರು. ಈ ಬಾರಿ ಕೊಂಚ ಭಿನ್ನವಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.