
ಹನಿಮೂನ್ (Honeymoon )ದಾಂಪತ್ಯದ ಚಿಗುರಿಗೆ ನೀರೆರೆಯುತ್ತದೆ. ಮದುವೆಯ ಕನಸು (Dream) ಕಾಣುವ ಪ್ರತಿಯೊಬ್ಬರೂ ಮದುವೆ(Marriage)ಗೆ ಮೊದಲೇ ಹನಿಮೂನ್ ಸ್ಥಳವನ್ನು ನಿರ್ಧರಿಸುತ್ತಾರೆ. ಹನಿಮೂನ್ ದಂಪತಿ ಮಧ್ಯೆ ಅನ್ಯೂನ್ಯತೆ ಹೆಚ್ಚಿಸುತ್ತದೆ. ಆ ಕ್ಷಣಗಳು ಸದಾ ನೆನಪಿನಲ್ಲಿರಬೇಕು. ಆ ದಿನಗಳು ಮತ್ತೆ ಬರದ ಕಾರಣ ಹನಿಮೂನ್ ಚೆನ್ನಾಗಿ ಆನಂದಿಸಬೇಕು. ಹೊಸ ಜೋಡಿ ನೀವಾಗಿದ್ದರೆ ಅಥವಾ ಇನ್ನೇನು ಮದುವೆಯಾಗಲಿದ್ದು, ಹನಿಮೂನ್ ಗೆ ಪ್ಲಾನ್ ಮಾಡಿದ್ದರೆ, ಹನಿಮೂನ್ ಎಂಜಾಯ್ (Enjoy) ಮಾಡಲು ಬಯಸಿದ್ದರೆ, ಅದನ್ನು ಶಾಶ್ವತವಾಗಿ ನೆನಪಿನಲ್ಲಿಟ್ಟುಕೊಳ್ಳಲು ಬಯಸಿದರೆ ಇದನ್ನು ಓದಿ. ಹನಿಮೂನ್ ಬಗ್ಗೆ ನವ ವಿವಾಹಿತರಿಗೆ ಇಲ್ಲೊಂದಿಷ್ಟು ಐಡಿಯಾಗಳು ಸಿಗಬಹುದು.
ಮದುವೆ, ಜೀವನದ ದೊಡ್ಡ ಬದಲಾವಣೆ. ಅದಕ್ಕೆ ಹೊಂದಿಕೊಳ್ಳಲು ಸಮಯಬೇಕಾಗುತ್ತದೆ. ಹನಿಮೂನ್ ಇಬ್ಬರನ್ನು ಹತ್ತಿರಕ್ಕೆ ತರಲು ನೆರವಾಗುತ್ತದೆ. ದೈಹಿಕ ಹಾಗೂ ಭಾವನಾತ್ಮಕವಾಗಿ ಇಬ್ಬರನ್ನು ಒಂದುಗೂಡಿಸುವ ಕೆಲಸವನ್ನು ಹನಿಮೂನ್ ಮಾಡುತ್ತದೆ. . ಹನಿಮೂನ್ ಎಂದರೆ ಪ್ರಯಾಣ ಮಾಡುವುದು, ಪರಸ್ಪರ ಅರ್ಥ ಮಾಡಿಕೊಳ್ಳುವುದು, ಪರಸ್ಪರ ಪ್ರೀತಿಸುವುದು, ಪ್ರಣಯ ಮತ್ತು ಲೈಂಗಿಕತೆ. ವೈವಾಹಿಕ ಜೀವನದ ಉತ್ತಮ ಆರಂಭಕ್ಕಾಗಿ ಜನರು ಹನಿಮೂನ್‌ಗೆ ಹೋಗುತ್ತಾರೆ. ಹನಿಮೂನ್ ಗೆ ಹೇಗೆ ತಯಾರಾಗಬೇಕು ?
ಸ್ಥಳದ ಆಯ್ಕೆ : ಪರಸ್ಪರ ಮಾತನಾಡಿಕೊಂಡು ಹನಿಮೂನ್ ಗೆ ಸರಿಯಾದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಒಬ್ಬರಿಗೆ ಪರ್ವತ ಪ್ರದೇಶ ಇಷ್ಟವಾದ್ರೆ ಮತ್ತೆ ಕೆಲವರಿಗೆ ಬೀಚ್ ಇಷ್ಟವಾಗಬಹುದು. ಹಾಗಾಗಿ ಯಾವ ಸ್ಥಳ ಎಂಬುದನ್ನು ಮೊದಲು ನಿರ್ಧರಿಸಿ.
ಮಧುಚಂದ್ರಕ್ಕೆ ಮುಹೂರ್ತ ಫಿಕ್ಸ್ ಮಾಡಿ : ಸ್ಥಳವನ್ನು ಆಯ್ಕೆ ಮಾಡಿದ ನಂತರ ಹನಿಮೂನ್‌ಗೆ ಹೋಗುವ ದಿನಾಂಕ ನಿಗದಿಮಾಡಿ. ಮದುವೆಯಾದ ಮರುದಿನವೇ ಹನಿಮೂನ್ ಗೆ ಪ್ಲಾನ್ ಮಾಡಬೇಡಿ. ಹಾಗೆ ಮದುವೆಯಾದ ತುಂಬಾ ದಿನಗಳ ನಂತ್ರವೂ ಪ್ಲಾನ್ ಮಾಡಬೇಡಿ. ಸರಿಯಾಗಿ ಮಾತನಾಡಿ ನಿರ್ಧಾರ ತೆಗೆದುಕೊಳ್ಳಿ. ಮಹಿಳೆಯರು ಮುಟ್ಟಿನ ಆಸುಪಾಸಿನಲ್ಲಿ ಹನಿಮೂನ್ ಗೆ ಮುಹೂರ್ತ ಫಿಕ್ಸ್ ಮಾಡ್ಬೇಡಿ.
ಮಧುಚಂದ್ರಕ್ಕೆ ಟಿಕೆಟ್ : ಸ್ಥಳ, ದಿನಾಂಕ ನಿಗದಿಯಾದ ನಂತ್ರ ಮಧುಚಂದ್ರದ ಸ್ಥಳಕ್ಕೆ ಹೋಗಲು ರೈಲು, ಬಸ್, ಹಡಗು ಅಥವಾ ವಿಮಾನದ ಟಿಕೆಟ್ ಬುಕ್ ಮಾಡಿ. ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಕೊಠಡಿಯನ್ನು ಕಾಯ್ದಿರಿಸಿ.
ಸ್ಥಳದ ಬಗ್ಗೆ ಒಂದಿಷ್ಟು ತಿಳಿದಿರಿ : ಹನಿಮೂನ್ ಗೆ ಹೋಗಲು ಪ್ಲಾನ್ ಮಾಡಿರುವ ಸ್ಥಳದ ಬಗ್ಗೆ ಅಲ್ಪಸ್ವಲ್ಪ ತಿಳಿದಿರಬೇಕು. ಹಾಗಾಗಿ ಗೂಗಲ್ ಮೂಲಕ ಅಥವಾ ಈಗಾಗಲೇ ಅಲ್ಲಿಗೆ ಹೋಗಿದ್ದವರಿದ್ದರೆ ತಿಳಿದುಕೊಳ್ಳಿ. ಅಲ್ಲಿನ ಉತ್ತಮವಾದ ಸ್ಥಳಗಳು ಮತ್ತು ನೀವು ನೋಡಲೇ ಬೇಕಾದ ಸ್ಥಳಗಳ ಬಗ್ಗೆ ತಿಳಿದಿರಿ.ಅಲ್ಲಿನ ಸ್ಪೇಷಲ್ ತಿಂಡಿ ಏನು? ಅಲ್ಲಿನ ಹವಾಮಾನ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ. ಯಾಕೆಂದ್ರೆ ಅದಕ್ಕೆ ತಕ್ಕಂತೆ ನೀವು ಡ್ರೆಸ್ ಪ್ಯಾಕ್ ಮಾಡಬಹುದು.
Things to do Before sex: ಮಾಡಬೇಕಾದ 7 ವಿಷಯಗಳಿವು
ಮಧುಚಂದ್ರಕ್ಕಾಗಿ ಶಾಪಿಂಗ್ : ಮದುವೆಯ ಜೊತೆಗೆ ನಿಮ್ಮ ಹನಿಮೂನ್‌ಗಾಗಿ ನೀವು ಶಾಪಿಂಗ್ ಮಾಡಬೇಕು. ಮದುವೆ ಶಾಪಿಂಗ್ ವೇಳೆಯೇ ಮಾಡಿದರೆ ಆಗ ಸಮಯ ಉಳಿಯುತ್ತದೆ. ಹನಿಮೂನ್‌ಗೆ ಹೋಗುವ ಸ್ಥಳದ ಸೀಸನ್‌ಗೆ ಅನುಗುಣವಾಗಿ ಬಟ್ಟೆಗಳನ್ನು ಖರೀದಿಸಿ. ತುಂಬಾ ಚಳಿ ಇರುವ ಸ್ಥಳಕ್ಕೆ ಹೋಗುತ್ತಿದ್ದರೆ, ಬೆಚ್ಚಗಿನ ಬಟ್ಟೆಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ಹಾಗೆ ಹೊಸ ಒಳ ಉಡುಪುಗಳನ್ನು ಖರೀದಿಸುವುದನ್ನು ಮರೆಯಬೇಡಿ.
ಮೊದಲ ಭೇಟಿ, ಪ್ರಣಯ ವಿವಾಹದ ಬಗ್ಗೆ ಮನ ಬಿಚ್ಚಿ ಮಾತಾಡಿದ ಸಲಿಂಗಿ ಜೋಡಿ
ಹನಿಮೂನ್ ಅಂದ್ರೆ ಕೇವಲ ಶಾರೀರಿಕ ಸಂಬಂಧ ಬೆಳೆಸುವುದಲ್ಲ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಇರುವ ಸಮಯ. ಹಾಗಾಗಿ ಇಬ್ಬರೂ ಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ಕೆಲಸಕ್ಕೆ ರಜೆ ಪಡೆದೇ ಹನಿಮೂನ್ ಗೆ ಹೋಗಿ. ಅಲ್ಲಿ ಹೋದ್ಮೇಲೆ ಕೆಲಸ ಮಾಡಬೇಡಿ.ಹನಿಮೂನ್ ದಿನಗಳನ್ನು ಸಂಪೂರ್ಣವಾಗಿ ಎಂಜಾಯ್ ಮಾಡಲು ಮರೆಯಬೇಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.