Kisses in Kamasutra: ಆಹಾ, ಎಂಥೆಂಥಾ ಚುಂಬನ! ಕಾಮಸೂತ್ರ ವರ್ಣಿಸುವ ಬಗೆ ಬಗೆ ಕಿಸ್!

By Suvarna NewsFirst Published Jan 2, 2022, 4:47 PM IST
Highlights

ಕಾಮಸೂತ್ರದಲ್ಲಿ ವಾತ್ಸಾಯನ ಇಪ್ಪತ್ತಕ್ಕೂ ಹೆಚ್ಚಿನ ಬಗೆಯ ಚುಂಬನ ವೈವಿಧ್ಯಗಳನ್ನು ವಿವರಿಸುತ್ತಾನೆ. ಇದನ್ನು ಕಲಿತು ಅಳವಡಿಸಿಕೊಂಡರೆ ನಿಮ್ಮ ಪ್ರಣಯ ಜೀವನ ಇನ್ನಷ್ಟು ಸುಖಕರವಾಗಿರಬಹುದು.

ಚುಂಬನದಲ್ಲಿ (Kiss) ಎಷ್ಟು ವಿಧಗಳು ನಿಮಗೆ ಗೊತ್ತು? ಫ್ಲೈಯಿಂಗ್ ಕಿಸ್ (Flying Kiss), ಫ್ರೆಂಚ್ ಕಿಸ್ (French Kiss), ಡೀಪ್ (deep) ಕಿಸ್... ಹೀಗೆ ನಾಲ್ಕಾರು ವಿಧಗಳು ಗೊತ್ತಿರಬಹುದು. ಕೆಲವು ಪರಿಣತರಿಗೆ ಹೆಚ್ಚೆಂದರೆ ಹತ್ತು ವಿಧಗಳು ಗೊತ್ತಿರಬಹುದು. ಆದರೆ ಕಾಮಸೂತ್ರ (Kamasutra) ವರ್ಣಿಸುವ ಚುಂಬನಗಳ ಮುಂದೆ ಇವೆಲ್ಲಾ ಏನೂ ಅಲ್ಲ. ಕಾಮಸೂತ್ರದಲ್ಲಿ ವಾತ್ಸಾಯನ (Vatsayana) ಇಪ್ಪತ್ತಕ್ಕೂ ಅಧಿಕ ಚುಂಬನದ ವಿಧಗಳನ್ನು ಗುರುತಿಸುತ್ತಾನೆ. ಅದಕ್ಕೂ ಹೆಚ್ಚಿನ ವಿಧಗಳು ಇವೆ ಎಂದು ಬರೆಯುತ್ತಾನೆ. ಒಂದೊಂದು ಪ್ರದೇಶದಲ್ಲೂ ಒಂದೊಂದು ಥರದ ಕಿಸ್ಸಿಂಗ್ ಇದೆಯಂತೆ. ಕೆಲವು ತುಂಬಾ ರೊಮ್ಯಾಂಟಿಕ್, ಇನ್ನು ಕೆಲವು ಸರ್ಕಸ್ ಮಾಡಿದಂತಿಡುತ್ತವೆ. ಇದನ್ನು ತಿಳಿಯುವುದರಲ್ಲಿ, ತಿಳಿದು ಪ್ರಯೋಗಿಸುವುದರಲ್ಲಿ ಮಜಾ ಇದೆ.

ಬನ್ನಿ ಆ ವಿಧಗಳು ಯಾವುವು, ಅವುಗಳನ್ನ ಏನಂತ ಕರೀತಾರೆ ಅಂತ ತಿಳಿಯೋಣ.

ನಿಮಿತ್ತಕ ಚುಂಬನ (ನಾಮಮಾತ್ರ): ಪ್ರೇಮಿಗೆ ಮನಸ್ಸಿಲ್ಲದಿರುವಾಗ ಇನ್ನೊಬ್ಬ ಸಂಗಾತಿಯು ಆಕೆ ಅಥವಾ ಆತನ ತುಟಿಗಳ ಮೇಲೆ ನಿಮಿತ್ತ ಮಾತ್ರವಾಗಿ, ಸುಮ್ಮನೇ ಚುಂಬಿಸುವುದು ನಿಮಿತ್ತಕ ಚುಂಬನ. ಇದು ಪ್ರಣಯಕ್ಕೆ ಆಕೆ ಸಿದ್ಧಳೇ ಇಲ್ಲವೇ ಎಂಬುದನ್ನು ಹೊರಗೆಡಹುವ ಮುತ್ತು.

ಸ್ಫುರಿತಕ ಚುಂಬನ (ಸ್ಫುರಿಸುವ): ಇದರಲ್ಲಿ ಪ್ರಣಯಿನಿಯು ಪ್ರೇಮಿಯ ಕೆಳತುಟಿಗಳನ್ನು ಲಘುವಾಗಿ ಚುಂಬಿಸುತ್ತಾಳೆ. ಮೇಲ್ದುಟಿಗಳನ್ನು ಚುಂಬಿಸುವ ಧೈರ್ಯ ಮಾಡುವುದಿಲ್ಲ.

ಈ ಮೇಲಿನ ಎರಡೂ ಚುಂಬನಗಳೂ ಇದೀಗಷ್ಟೇ ಪ್ರಣಯ ಪ್ರಕರಣವನ್ನು ಆರಂಭಿಸಿರುವ, ಇನ್ನೂ ಸಂಭೋಗವನ್ನು ನಡೆಸಿಲ್ಲದ ಪ್ರೇಮಿಗಳ ನಡುವೆ ನಡೆಯುವಂಥದ್ದು.

Birth Control: ಅನಗತ್ಯ ಗರ್ಭಧಾರಣೆ ತಪ್ಪಿಸಲು ಇಲ್ಲಿವೆ ಉಪಾಯ

ಉತ್ತರ ಚುಂಬಿತಕ (ಮೇಲಿನ ತುಟಿಯನ್ನು ಚುಂಬಿಸುವುದು): ಮಹಿಳೆ ಚುಂಬಿಸುವಾಗ ಪುರುಷನು ಮೇಲಿನ ತುಟಿಯನ್ನು ಲಘುವಾಗಿ ಕಚ್ಚಿ ಹಿಡಿದರೆ, ಅದನ್ನು ಉತ್ತರ ಚುಂಬಿತಕ ಎಂದು ಕರೆಯಲಾಗುತ್ತದೆ. ಇದು ಸಾಕಷ್ಟು ಸ್ವಯಂ ವಿವರಣಾತ್ಮಕವಾಗಿಯೇ ಇದೆ.

ಚಲಿತಕ ಚುಂಬನ (ಎಚ್ಚರಿಸುವ ಮುತ್ತು): ಪ್ರೇಮಿ ತಡರಾತ್ರಿಯಲ್ಲಿ ಹಿಂತಿರುಗಿ ಬಂದು ಹಾಸಿಗೆಯ ಮೇಲೆ ಮಲಗಿರುವ ಮಹಿಳೆಯನ್ನು ಚುಂಬಿಸಿದಾಗ ಅದನ್ನು ಚಲಿತಕ ಚುಂಬನ ಅಥವಾ ಎಚ್ಚರಿಸುವ ಮುತ್ತು ಎಂದು ಕರೆಯಲಾಗುತ್ತದೆ. ಸ್ಲೀಪಿಂಗ್ ಬ್ಯೂಟಿಗೆ ಕೊಡುವ ಮುತ್ತು ಎಂದು ಯೋಚಿಸಿ.

Love : ಪ್ರೀತಿಯಲ್ಲಿ ಬಿದ್ದ ಮಹಿಳೆ ಜಗತ್ತು ಮರೆತು ಮಾಡ್ತಾಳೆ ಈ ತಪ್ಪು

ಛಾಯಾ ಚುಂಬನ (ಪ್ರತಿಫಲನ ಮುತ್ತು): ಕನ್ನಡಿ, ನೀರು ಅಥವಾ ಗೋಡೆಯಲ್ಲಿರುವ ಪ್ರೇಮಿಯ ಪ್ರತಿಬಿಂಬವನ್ನು ಚುಂಬಿಸುವುದು ಛಾಯಾ ಚುಂಬನ. ಇದರಿಂದ ಏನು ಪ್ರಯೋಜನ ಎಂದು ನೀವು ಕೇಳಬಹುದು. ಪ್ರಯೋಗ ಮಾಡಬಹುದು.

ಸಂಕ್ರಾಂತಕ ಚುಂಬನ (ವರ್ಗಾವಣೆಗೊಂಡ ಮುತ್ತು): ಪ್ರೇಮಿಯ ಚಿತ್ರ ಅಥವಾ ಪ್ರತಿಮೆ ಅಥವಾ ಮೂರ್ತಿಯನ್ನು ಚುಂಬಿಸುವುದು ಸಂಕ್ರಾಂತಕ ಚುಂಬನ. ಸನಿಹದಲ್ಲಿ ಪ್ರೇಮಿ ಇಲ್ಲದಾಗ, ಪ್ರೇಮೋದ್ರೇಕ ಅಥವಾ ಕಾಮೋದ್ರೇಕವನ್ನು ಸ್ವಯಂ ತಣಿಸಿಕೊಳ್ಳಲು ಇದನ್ನು ಬಳಸಬಹುದು.

ನಿಮಿತ್ತಕ ಚುಂಬನ (ಆಹ್ವಾನಿಸುವ ಮುತ್ತು): ಒಬ್ಬ ಮಹಿಳೆ ಪ್ರೇಮಿಯನ್ನು 'ಪ್ರಚೋದಿಸುವ' ಪ್ರಯತ್ನದಲ್ಲಿ, 'ಅವಳು ನಿದ್ರಿಸುತ್ತಿರುವ ಕಾರಣ ಇಷ್ಟವಿಲ್ಲದವಳಂತೆ' ಅವನ ತೊಡೆಯ ಮೇಲೆ ತನ್ನ ಮುಖವನ್ನು ಇರಿಸಿ, ನಂತರ ಅವನನ್ನು ಚುಂಬಿಸಿದಾಗ, ಅದನ್ನು 'ಆಹ್ವಾನ ಮುತ್ತು' ಎಂದು ಕರೆಯಲಾಗುತ್ತದೆ.

ಘಟ್ಟಿತಕ ಚುಂಬನ (ಬಲವಂತದ ಮುತ್ತು): ಪ್ರೇಮಿಗಳು ಪರಸ್ಪರ ತುಟಿಗಳನ್ನು ಕಚ್ಚಿ ಹಿಡಿದುಕೊಳ್ಳುವುದು, ತುಟಿಗಳನ್ನು ಒತ್ತುವುದು, ಕಣ್ಣು ಮುಚ್ಚಿಕೊಂಡು ಗಾಢವಾಗಿ ಮುತ್ತಿನ ಸವಿ ಉಣ್ಣುವುದು ಮಾಡಿದರೆ ಅದಕ್ಕೆ ಘಟ್ಟಿತಕ ಚುಂಬನ ಎಂದು ಹೆಸರು. ಇದು ಸಂಭೋಗಪರಿಣತ ಜೋಡಿಗಳಲ್ಲಿ ಮಾತ್ರ ಸಾಧ್ಯ.

ಸಮಚುಂಬನ: ಪ್ರೇಮಿಗಳು ಎದುರುಬದುರಾಗಿ ನಿಂತು ಮಾಡುವ ಚುಂಬನ.

ಅವಪೀಡಿತಕ ಚುಂಬನ: ಪ್ರೇಮಿಯ ತುಟಿಗಳನ್ನು ಬೆರಳುಗಳಲ್ಲಿ ಗಟ್ಟಿಯಾಗಿ ಹಿಂಡಿ ಹಿಡಿದುಕೊಂಡು ಚುಂಬಿಸಿದರೆ ಅದಕ್ಕೆ ಅವಪೀಡಿತಕ ಚುಂಬನವೆಂದು ಹೆಸರು.

ಇದಲ್ಲದೇ ಒಂದೊಂದು ಚುಂಬನದಲ್ಲೂ ಹತ್ತಾರು ಉಪವಿಧಗಳಿವೆ. ಇದು ತುಟಿಗಳ ಮೇಲೆ ಮಾಡುವ ಚುಂಬನವಾದರೆ, ದೇಹದ ಬೇರೆಬೇರೆ ಕಡೆಗೆ ನೀಡುವ ಮುತ್ತಿಗೂ ಬೇರೆಬೇರೆ ಹೆಸರುಗಳಿವೆ. ಮುಖರತಿಗೂ ಔಪರಿಷ್ಟಕ ಎಂಬ ಹೆಸರಿದ್ದು, ಇದನ್ನೂ ಆಗಿನ ಜನರು ಸಾಕಷ್ಟು ಆಚರಿಸುತ್ತಿದ್ದರು ಎಂದು ಗೊತ್ತಾಗುತ್ತದೆ.

click me!