Break Up : ನಿಮ್ಮ ಹುಡುಗಿ ಮುನಿಸು ಕಡಿಮೆಯಾಗ್ತಿಲ್ವಾ? ಈಗ್ಲೇ ಎಚ್ಚೆತ್ತುಕೊಳ್ಳಿ

By Suvarna News  |  First Published Jan 3, 2022, 5:31 PM IST

ಪ್ರೀತಿ, ಭೂಮಿಗೆ ಬೀಳುವ ಮಳೆಯಂತೆ. ಮೊದಲು ಬೀಳುವ ಹನಿ ಖುಷಿ ನೀಡುತ್ತದೆ. ಆದ್ರೆ ಕೆಲವೊಮ್ಮೆ ಗುಡುಗು-ಸಿಡಿಲು ಸಮೇತ ಬರುವ ಧಾರಾಕಾರ ಮಳೆ, ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತೆ. ಪ್ರೀತಿ ಕೂಡ ಹಾಗೆಯೇ. ಮೋಡ ಕವಿದಾಗ ಮಳೆಯಾಗುತ್ತೆ ಎಂದು ಅಂದಾಜಿಸುವಂತೆ ಹುಡುಗಿಯಲ್ಲಾಗುವ ಬದಲಾವಣೆ ಮೂಲಕ ಬ್ರೇಕ್ ಅಪ್ ಸೂಚನೆ ಪಡೆಯಬೇಕು. 


ಎಲ್ಲ ಮುಗಿತು. ಬ್ರೇಕ್ ಅಪ್ (Break Up )ಮಾಡಿಕೊಳ್ಳೋಣ. ಲೆಟ್ ಅಸ್ ಬ್ರೇಕ್ ಅಪ್. ಹೀಗೆ ಅನ್ನೋದು ಸುಲಭ. ಆದ್ರೆ ಪ್ರೇಮ (Love )ಸಂಬಂಧ ಮುರಿದು ಬಿದ್ಮೇಲೆ ಅದನ್ನು ಅರಗಿಸಿಕೊಳ್ಳೋದು ಕಷ್ಟ. ಪ್ರೀತಿಯೊಂದು ಚಿಗುರೊಡೆಯಲು ಕಾರಣವೇ ಇರುವುದಿಲ್ಲ. ಪ್ರೀತಿಗೆ ಜಾತಿ,ಮತ,ಊರಯ,ಭಾಷೆಯ ಗಡಿಯಿಲ್ಲ ಎನ್ನುತೇವೆ. ವಯಸ್ಸಿನ ಮಿತಿಯೂ ಈಗಿಲ್ಲ. ಪ್ರೀತಿಯಲ್ಲಿ ಬಿದ್ದ ಪ್ರತಿಯೊಬ್ಬರೂ ಜಗತ್ತು ಮರೆಯುತ್ತಾರೆ. ಆರಂಭದಲ್ಲಿ ಖುಷಿ ನೀಡುವ ಸಂಗತಿ ವರ್ತನೆ, ಹವ್ಯಾಸ ದಿನ ಕಳೆದಂತೆ ಉಸಿರುಗಟ್ಟಿಸಬಹುದು.

ಪ್ರೀತಿ ಎಂಬುದು ಕೇವಲ ಆಕರ್ಷಣೆ (Attraction) ಎಂಬ ಅರಿವಾಗಬಹುದು. ಇಲ್ಲವೆ ಬೇರೆ ಯಾವುದೋ ಕಾರಣಕ್ಕೆ ಪ್ರೇಮಿ ಬೇಡವಾಗಬಹುದು. ಪ್ರೀತಿ ಮುರಿದು ಬಿದ್ದ ನಂತ್ರ ಹುಡುಗಿಯರು ಅನುಭವಿಸುವ ಯಾತನೆಯನ್ನು ಬಹಿರಂಗಪಡಿಸುವುದಿಲ್ಲ. ಆದ್ರೆ ಹುಡುಗ್ರು ಬಾರ್ ಕಡೆ ಮುಖ ಮಾಡಿ ಪ್ರೀತಿಯಲ್ಲಿ ಮೋಸ (Cheating)ವಾಯ್ತು ಎಂದು ಕೂಗಿ ಹೇಳ್ತಾರೆ. ಒಂದಾದ ಎರಡು ಹೃದಯಗಳು ಒಡೆದು ಹೋಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು. ಗೆಳತಿ ನಿಮ್ಮೊಂದಿಗೆ ಬ್ರೇಕಪ್ ಮಾಡಿಕೊಳ್ಳಲು ಬಯಸ್ತಿದ್ದಾಳೆ ಅಥವಾ ನಿಮ್ಮಿದ್ದ ದೂರವಾಗುವ ಸಾಧ್ಯತೆಯಿದೆ ಎಂಬುದನ್ನು ಆಕೆಯ ಕೆಲ ವರ್ತನೆಯಿಂದ ತಿಳಿದುಕೊಳ್ಳಬಹುದು. ಅವು ಯಾವುವು ಎಂಬುದನ್ನು ಇಂದು ಹೇಳ್ತೆವೆ.

ಮಾತು ಕಡಿಮೆ ಮಾಡುವ ಹುಡುಗಿ : ಸಾಮಾನ್ಯವಾಗಿ ಪ್ರೀತಿಸುವ ಜೋಡಿ ರಾತ್ರಿ ಪೂರ್ತಿ ಮಾತನಾಡ್ತಾರೆ. ಭೇಟಿಯಾದಾಗ, ಫೋನ್ ನಲ್ಲಿ ಮಾತ್ರವಲ್ಲ ಸಂದೇಶ ರವಾನೆ ಕೂಡ ನಡೆಯುತ್ತಿರುತ್ತದೆ. ಪ್ರೀತಿಯ ಮೆಸ್ಸೇಜ್ ಪಾಸಾಗುತ್ತಿರುತ್ತದೆ. ಹುಡುಗರಿಗಿಂತ ಹುಡುಗಿಯರು ಕುಂತು, ನಿಂತ ಎಲ್ಲ ವರದಿಯನ್ನು ಹುಡುಗನಿಗೆ ನೀಡ್ತಾರೆ. ಆದ್ರೆ ಇದೆಲ್ಲವೂ ಕಡಿಮೆಯಾಗಿದೆ ಎಂದ್ರೆ ಇದು ಹುಡುಗರಿಗೆ ಮುನ್ಸೂಚನೆ. ಫೋನ್ ನಲ್ಲಿ ಮಾತನಾಡುವುದು ಕಡಿಮೆಯಾಗಿದ್ದರೆ,ಆತುರಾತುರವಾಗಿ ಮಾತು ಮುಗಿಸುತ್ತಿದ್ದರೆ,ಗುಡ್ ನೈಟ್,ಗುಡ್ ಮಾರ್ನಿಂಗ್ ಮೆಸ್ಸೇಜ್ ಮಿಸ್ ಆಗ್ತಿದ್ದರೆ ಇದು ಪ್ರೀತಿಯಿಂದ ದೂರ ಸರಿಯುತ್ತಿರುವ ಸಂಕೇತವಾಗಿರಬಹುದು.

Tap to resize

Latest Videos

undefined

ಅವಳ ಪ್ಲಾನ್ ನಲ್ಲಿ ನೀವಿಲ್ಲ : ಹುಡುಗಿಯರು ಪ್ರೀತಿಯಲ್ಲಿರುವಾಗ ಗೆಳತಿಯರಿಗಿಂತ ಗೆಳೆಯನ ಜೊತೆ ಸಮಯ ಕಳೆಯಲು ಇಷ್ಟಪಡ್ತಾರೆ. ಹೊಟೇಲ್, ಶಾಪಿಂಗ್ ಗೆ ಹೋಗಲು ಬಯಸ್ತಾರೆ. ಆದ್ರೆ ಪ್ರೇಮಿ ಬಿಟ್ಟು ಸ್ನೇಹಿತರ ಜೊತೆ ಶಾಪಿಂಗ್ ಹೋಗಲು ಶುರು ಮಾಡಿದ್ರೆ, ನಿಮ್ಮ ಜೊತೆ ಹೊರಗೆ ಬರುವುದನ್ನು ನಿರಾಕರಿಸಿ ಕಾರಣ ಹೇಳ್ತಿದ್ದರೆ ಈ ಬಗ್ಗೆ ವಿಶ್ಲೇಷಣೆ ಮಾಡುವುದು ಅನಿವಾರ್ಯ.  

ಪದೇ ಪದೇ ಜಗಳ : ಪ್ರೀತಿಯಲ್ಲಿ ಹುಸಿ ಮುನಿಸು ಸಾಮಾನ್ಯ. ಸಂಗಾತಿಗಳ ಮಧ್ಯೆ ಆಗಾಗ ಜಗಳ ನಡೆಯುತ್ತಿರುತ್ತದೆ. ಜಗಳ ನಡೆದು ಕೆಲವೇ ಗಂಟೆಯಲ್ಲಿ ಮತ್ತೆ ಇಬ್ಬರು ಒಂದಾಗ್ತಾರೆ. ಆದ್ರೆ ಯಾವುದೇ ಕಾರಣವಿಲ್ಲದೆ ಪದೇ ಪದೇ ಜಗಳವಾಡ್ತಿದ್ದರೆ ಹುಡುಗಿ ನಿಮ್ಮಿಂದ ದೂರವಾಗ್ತಿದ್ದಾಳೆ ಎಂದುಕೊಳ್ಳಿ. ಆಡಿದ ಗಲಾಟೆಯನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿ ಮತ್ತೆ ಮತ್ತೆ ಅದನ್ನೇ ಕಿತ್ತಾಟದ ವಿಷ್ಯ ಮಾಡಿಕೊಂಡಿದ್ದರೂ ಹುಡುಗ್ರು ಅಲರ್ಟ್ ಆಗಿ.  

ಈ ವರ್ಷ ಮದುವೆಯಾಗೋ ಯೋಚನೆ ಇದೆಯೇ? ಹಾಗಿದ್ರೆ ಇದನ್ನ ನೆನಪಿಡಿ

ನಿಮ್ಮಿದ್ದ ಮಾತ್ರವಲ್ಲ ಸಂಬಂಧಿಕರಿಂದಲೂ ದೂರ : ಪ್ರೀತಿಸುವ ಹುಡುಗಿ,ಹುಡುಗನ ಜೊತೆ ಆಕೆ ಕುಟುಂಬಸ್ಥರ ಹತ್ತಿರವಾಗಲು ಬಯಸುತ್ತಾಳೆ. ಹುಡುಗನ ತಾಯಿ,ಸಹೋದರಿ ಜೊತೆ ಮಾತನಾಡುತ್ತಿರುತ್ತಾಳೆ. ಆದ್ರೆ ಸಂಬಂಧ ಬೇಡ ಎನ್ನುವ ಹಂತಕ್ಕೆ ಹೋದಾಗ ಹುಡುಗನ ತಾಯಿ ಫೋನ್ ರಿಸೀವ್ ಮಾಡುವುದಿಲ್ಲ. ಸಹೋದರಿ ಜೊತೆ ಮಾತು ನಿಲ್ಲಿಸುತ್ತಾಳೆ. 

ದೈಹಿಕ ಅನ್ಯೋನ್ಯತೆ ಕಡಿಮೆ : ದೈಹಿಕ ಅನ್ಯೋನ್ಯತೆ ಮೊದಲಿಗಿಂತ  ಕಡಿಮೆಯಾಗುತ್ತದೆ. ಪ್ರೀತಿ ಮಾಡುವವರೆಲ್ಲ ದೈಹಿಕ ಸಂಬಂಧ ಬೆಳೆಸುವುದಿಲ್ಲ. ಹಾಗೆ ದೈಹಿಕ ಸಂಬಂಧ ಪ್ರೀತಿ ಉಳಿಸಿಕೊಳ್ಳುವ ಮಾರ್ಗವಲ್ಲ. ಈಗಾಗಲೇ ಸಂಗಾತಿ ಜೊತೆ ಕೆಲ ಬಾರಿ ಶಾರೀರಿಕ ಸಂಬಂಧ ಹೊಂದಿದ್ದು,ಈಗ ಹುಡುಗಿ ಇದನ್ನು ನಿರಾಕರಿಸುತ್ತಿದ್ದಾಳೆಂದರೆ ಸಂಬಂಧ ಹಳಸುತ್ತಿದೆ ಎಂದುಕೊಳ್ಳಿ.  

Cheating Wife : ಈ ಎಲ್ಲ ಕಾರಣಕ್ಕೆ ಪತಿಗೆ ಮೋಸ ಮಾಡ್ತಾಳೆ ಪತ್ನಿ

ವರ್ತನೆ : ಹುಡುಗಿಯ ಬದಲಾದ ವರ್ತನೆಯಿಂದ ನೀವು ಆಕೆ ಬದಲಾಗಿದ್ದಾಳೆ ಎಂಬುದನ್ನು ತಿಳಿಯಬಹುದು. ನಿಮ್ಮ ಜೊತೆ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡ್ತಿದ್ದ ಗೆಳತಿ ಬೇರೆ ಕಡೆ ನೋಡುತ್ತ,ನಿರ್ಲಕ್ಷ್ಯಿಸುತ್ತ ಮಾತನಾಡುತ್ತಿದ್ದರೂ ಈ ಬಗ್ಗೆ ಗಮನಹರಿಸಿ.

click me!