ದೈಹಿಕ ಸಂಪರ್ಕ ಬೆಳೆಸಲೂ ಬೆಸ್ಟ್ ಟೈಮ್ ಅಂತಿರುತ್ತಾ? ಭಾವ ಬೆಸೆಯೋ ಸಮಯವಿದು

By Suvarna News  |  First Published Oct 3, 2022, 5:02 PM IST

ಆಯುರ್ವೇದದಲ್ಲೂ ಶಾರೀರಿಕ ಸಂಬಂಧಕ್ಕೆ ಸಂಬಂಧಿಸಿದ ಅನೇಕ ಸಂಗತಿಯನ್ನು ಹೇಳಲಾಗಿದೆ. ಆದ್ರೆ ಜನರು ಇದ್ರ ಬಗ್ಗೆ ಪ್ರಶ್ನೆಗಳಿದ್ದರೂ ಕೇಳಿ ತಿಳಿದುಕೊಳ್ಳಲು ಮುಜುಗರಪಟ್ಟುಕೊಳ್ತಾರೆ. ಇದ್ರಿಂದ ಸಮಸ್ಯೆ ಎದುರಿಸುತ್ತಾರೆ. ಆಯುರ್ವೇದದಲ್ಲಿ ಸಂಬಂಧ ಬೆಳೆಸುವ ಸಮಯದಿಂದ ಹಿಡಿದು ಅದ್ರಿಂದಾಗು ನಷ್ಟದವರೆಗೆ ಎಲ್ಲವನ್ನೂ ಹೇಳಲಾಗಿದೆ. 
 


ಶಾರೀರಿಕ ಸಂಬಂಧದ ಹೆಸರು ಕೇಳಿದ್ರೂ ಜನರು ಮುಖ ಮುಚ್ಚಿಕೊಳ್ತಾರೆ. ಭಾರತದಲ್ಲಿ ಸೆಕ್ಸ್ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ನಿಷಿದ್ಧ. ಇದೇ ಕಾರಣಕ್ಕೆ ಭಾರತದಲ್ಲಿ ಸೆಕ್ಸ್ ಎಜುಕೇಷನ್ ಗೆ ಒತ್ತು ನೀಡಲಾಗಿಲ್ಲ. ಆದ್ರೆ ಜನರಿಗೆ ಲೈಂಗಿಕ ಶಿಕ್ಷಣ ನೀಡುವುದು ಅನಿವಾರ್ಯವಾಗಿದೆ. ಲೈಂಗಿಕತೆ ಬರೀ ಆನಂದವನ್ನು ಮಾತ್ರ ನೀಡುವುದಿಲ್ಲ. ಅದು ತಲೆ ತಗ್ಗಿಸುವ ವಿಷ್ಯವೂ ಅಲ್ಲ ಎಂಬುದನ್ನು ಜನರು ಅರಿಯಬೇಕು. ಲೈಂಗಿಕ ಸಂಬಂಧ ಹಾಗೂ ಅದ್ರ ಲಾಭ ಸೇರಿದಂತೆ ಅನೇಕ ವಿಷ್ಯಗಳನ್ನು ಜನರು ತಿಳಿಯುವುದು ಅನಿವಾರ್ಯ. ಸಂಬಂಧ ಬೆಳೆಸಲು ಒಂದು ಸಮಯವಿದೆ ಎಂದು ಆಯುರ್ವೇದ ಹೇಳುತ್ತದೆ. ಮನಸ್ಸಿಗೆ ಬಂದಾಗ ಸಂಬಂಧ ಬೆಳೆಸಿದ್ರೆ ಅದ್ರಿಂದ ಅನಾನುಕೂಲ ಜಾಸ್ತಿ.  

ಆಯುರ್ವೇದ (Ayurveda) ವು ದೈಹಿಕ ಸಂಬಂಧವನ್ನು ಸಂತಾನೋತ್ಪತ್ತಿಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ನಮ್ಮ ಜೀವನದ 4 ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ. ಅದರ ಪರಿಣಾಮ ನಮಗೆ ಸಿಗ್ಬೇಕೆಂದ್ರೆ ಕೆಲ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ.

Latest Videos

undefined

ದೈಹಿಕ ಸಂಬಂಧ (Physical Relationship) ಬೆಳೆಸಲು ಸರಿಯಾದ ಸಮಯ  : ಆಯುರ್ವೇದದ ಪ್ರಕಾರ, ಬೆಳಗ್ಗೆ ಮತ್ತು ಹಗಲಿನ ಬದಲು ರಾತ್ರಿಯ ಸಮಯ ಲೈಂಗಿಕತೆಗೆ ಸೂಕ್ತ. ಸಂಭೋಗ ಬೆಳೆಸುವ ಬಯಕೆ ಬೇಸಿಗೆ ಅಥವಾ ಮಳೆಗಾಲಕ್ಕಿಂತ ಚಳಿಗಾಲದಲ್ಲಿ ಹೆಚ್ಚು. ಆಯುರ್ವೇದದ ಪ್ರಕಾರ, ಲೈಂಗಿಕ ಸಂಬಂಧ ಬೆಳೆಸಲು ಸಂಜೆ 6 ರಿಂದ ರಾತ್ರಿ 10 ರವರೆಗೆ ಒಳ್ಳೆಯ ಸಮಯ. ದೇಹವು ಸ್ವಾಭಾವಿಕವಾಗಿ ಕ್ಷೀಣಿಸುವ ಸಮಯ ಇದು. ಪರಾಕಾಷ್ಠೆ (Climax) ಅನುಭವಿಸಿದ ನಂತರ ಅನೇಕರು ನಿದ್ರೆ ಮಾಡ್ತಾರೆ. ಏಕೆಂದರೆ ಪರಾಕಾಷ್ಠೆ ದೇಹದಲ್ಲಿ ಕಫವನ್ನು ಹೆಚ್ಚಿಸುತ್ತದೆ. ಇದು ಆಲಸ್ಯ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ. ಆದ್ರೆ ಎಲ್ಲರಿಗೂ ಬೆಳಗ್ಗೆ ಸಂಬಂಧ ಬೆಳೆಸಲು ಒಪ್ಪಿಗೆ ನೀಡಲಾಗುವುದಿಲ್ಲ. ಯಾಕೆಂದ್ರೆ ಬೆಳಗಿನ ಜಾವ ಸಂಬಂಧ ಬೆಳೆಸಿದ್ರೆ ಕಫ ಉತ್ಪತ್ತಿಯಾಗುತ್ತದೆ. ಇದು ಆಯಾಸ, ಆಲಸ್ಯವನ್ನು ಹೆಚ್ಚು ಮಾಡುವ ಸಾಧ್ಯತೆಯಿದೆ. 

ನಿಮ್ಮ ಕ್ರಶ್‌ ಒಲಿಸ್ಕೊಳೋಕೆ ನಿಮಗೆ ಸಾಧ್ಯ! ಪ್ರಯತ್ನ ಮಾತ್ರ ಪ್ರಾಮಾಣಿಕವಾಗಿರಲಿ

ಅತ್ಯುತ್ತಮ ತಿಂಗಳು ಮತ್ತು ವಯಸ್ಸು: ಆಯುರ್ವೇದದ ಪ್ರಕಾರ, ಲೈಂಗಿಕ ಜೀವನವನ್ನು ನಾಲ್ಕು ಋತುಗಳು ನಿಯಂತ್ರಿಸುತ್ತವೆ. ಮಾನ್ಸೂನ್ ಮತ್ತು ಬೇಸಿಗೆಯಲ್ಲಿ ದೇಹದ ಶಕ್ತಿ ಕಡಿಮೆ ಇರುತ್ತದೆ. ಆದ್ದರಿಂದ ಆ ಸಮಯದಲ್ಲಿ ಹದಿನೈದು ದಿನಕ್ಕೆ ಒಮ್ಮೆ ಸಂಬಂಧವನ್ನು ಬೆಳೆಸುವುದು ಒಳ್ಳೆಯದು. ವಸಂತ ಋತುವಿನಲ್ಲಿ ಸಾಮರ್ಥ್ಯವು ಮಧ್ಯಮವಾಗಿರುತ್ತದೆ.  ಆದ್ದರಿಂದ ಈ ಸಮಯದಲ್ಲಿ 3 ದಿನಗಳಿಗೊಮ್ಮೆ ಸಂಬಂಧ ಬೆಳೆಸುವುದು ಸೂಕ್ತ. ಚಳಿಗಾಲದಲ್ಲಿ ದೇಹದ ಶಕ್ತಿಯು ಉತ್ತುಂಗದಲ್ಲಿರುತ್ತದೆ. ಆದ್ದರಿಂದ ಪ್ರತಿ ದಿನ ಸಂಬಂಧ ಬೆಳೆಸಬಹುದು.  

ತಿಂಗಳಿನಂತೆ ನಮ್ಮ ಲೈಂಗಿಕ ಜೀವನ ವಯಸ್ಸನ್ನು ಕೂಡ ಅವಲಂಬಿಸಿರುತ್ತದೆ. ದೈಹಿಕ ಸಂಬಂಧಕ್ಕೆ ಉತ್ತಮ ವಯಸ್ಸು 21 ರಿಂದ 60 ವರ್ಷಗಳು. ಈ ವೇಳೆ ನಮ್ಮ ದೇಹವು ಶಕ್ತಿಯುತವಾಗಿರುತ್ತದೆ. ಇದಕ್ಕಿಂತ ಮೊದಲು ಅಥವಾ ನಂತರ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಂಡರೆ ವಿವಿಧ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. 

ಯುವಕರಿಗೇಕೆ ವಯ್ಯಾರದ ಆಂಟಿಯರೇ ಹೆಚ್ಚು ಇಷ್ಟವಾಗ್ತಾರೆ?

ದೈಹಿಕ ಸಂಬಂಧ ಅತಿಯಾದ್ರೆ ಹಾನಿಯೇ? : ನಮ್ಮ ದೇಹ  7 ಟಿಶ್ಯು ಮತ್ತು ಧಾತುಗಳಿಂದ ಮಾಡಲ್ಪಟ್ಟಿದೆ. ಇವು ಒಂದರ ನಂತರ ಒಂದರಂತೆ ರೂಪುಗೊಳ್ಳುತ್ತದೆ. ಶುಕ್ರ ಧಾತು ಅಂತಿಮವಾಗಿ ರೂಪುಗೊಳ್ಳುತ್ತದೆ. ಇದು ರೂಪಗೊಳ್ಳಲು ಸುಮಾರು ಒಂದು ತಿಂಗಳು ಬೇಕು. ಇದ್ರಿಂದ ಓಜಸ್ ಎಂಬ ಹೆಚ್ಚು ಕೇಂದ್ರೀಕೃತ ರೂಪ ಸೃಷ್ಟಿಯಾಗುತ್ತದೆ. ರೋಗನಿರೋಧಕ ಶಕ್ತಿ (Immunity Power), ಜೀರ್ಣಕ್ರಿಯೆ, ದೈಹಿಕ ಶಕ್ತಿ (Physical Energy),  ಚರ್ಮದ ಆರೋಗ್ಯ (Skin Health), ಆಧ್ಯಾತ್ಮಿಕ ಒಲವು (Spiritual Interest), ನಿದ್ರೆ ಮತ್ತು ಮನಸ್ಥಿತಿಯ ಮೇಲೆ ಇದು ಪರಿಣಾಮ ಬೀರುತ್ತದೆ. ಲೈಂಗಿಕ ಕ್ರಿಯೆ ಹೆಚ್ಚಾದ್ರೆ ಅದು ಓಜಸ್ ಗೆ ಹಾನಿಯುಂಟು ಮಾಡುತ್ತದೆ. ಇದ್ರಿಂದ ಅನಾರೋಗ್ಯ ಕಾಡುವ ಸಾಧ್ಯತೆಯಿರುತ್ತದೆ. ಹಾಗೆಯೇ ಖಾಲಿ ಹೊಟ್ಟೆಯಲ್ಲಿ ಮತ್ತು ಹೊಟ್ಟೆ ತುಂಬಿದ ತಕ್ಷಣ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು ಎಂದು ಆಯುರ್ವೇದ ಹೇಳುತ್ತದೆ. 

click me!