ಪಾಲಕರು ಮಕ್ಕಳಿಗಿಂತ ಮೊದ್ಲು ಈ ಅಭ್ಯಾಸ ಕಲಿತುಕೊಂಡಿರಬೇಕು

By Suvarna NewsFirst Published Oct 2, 2022, 2:50 PM IST
Highlights

ಪ್ರತಿಯೊಬ್ಬ ಪೋಷಕರು ಸಹ ತಮ್ಮ ಮಕ್ಕಳು ಉತ್ತಮ ವ್ಯಕ್ತಿಯಾಗಬೇಕೆಂದು ಬಯಸುತ್ತಾರೆ. ಆದರೆ ಮಕ್ಕಳು ಎಲ್ಲಾ ರೀತಿಯ ಉತ್ತಮ ಗುಣಗಳನ್ನು ರೂಢಿಸಿಕೊಳ್ಳಲು ಪೋಷಕರು ಸಹ  ಪ್ರತಿದಿನವೂ ಸುಧಾರಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ಪೋಷಕರು ಇಲ್ಲಿ ಅರ್ಥಮಾಡಿಕೊಳ್ಳಬೇಕು. ತಮ್ಮ ದೈನಂದಿನ ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ ಪ್ರತಿಯೊಬ್ಬರೂ ಉತ್ತಮ ಪೋಷಕರಾಗಬಹುದು. ಕುಟುಂಬ ಜೀವನವೂ ಚೆನ್ನಾಗಿರಬಹುದು. ಇದಕ್ಕಾಗಿ ಏನು ಮಾಡಬೇಕು ತಿಳಿಯಿರಿ.

ಮಕ್ಕಳು ಉತ್ತಮ ಪ್ರಜೆಯಾಗಬೇಕೆಂದು ಪ್ರತಿಯೊಬ್ಬ ಪೋಷಕರು ಸಹ ಬಯಸುತ್ತಾರೆ. ಆದರೆ ಮಕ್ಕಳ ಸ್ವಭಾವ ಚೆನ್ನಾಗಿರಬೇಕಾದರೆ ಪೋಷಕರ ವರ್ತನೆಯೂ ಸರಿಯಾಗಿರಬೇಕು. ಯಾವುದೇ ಕೆಲಸದಲ್ಲಿ ನೈಪುಣ್ಯತೆ ಪಡೆದುಕೊಳ್ಳುವಂತೆ, ಪೋಷಕರು ಸಹ ಪ್ರತಿದಿನ ಸುಧಾರಿಸಿಕೊಳ್ಳಬೇಕು. ಪೋಷಕರ ಮಾತು ಮತ್ತು ಅಭ್ಯಾಸಗಳು ಮಗುವಿನ ಮೇಲೆ ಒಳ್ಳೆಯ ಅಥವಾ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ, ಪೋಷಕರು ಅವರ ಪ್ರತಿಯೊಂದು ಅಭ್ಯಾಸ ಮತ್ತು ಚಲನೆಯನ್ನು ಗಮನಿಸಬೇಕು. ನೀವು ಏನು ಮಾಡುತ್ತೀರಿ ಎಂಬುದನ್ನು ನಿಮ್ಮ ಮಗುವೂ ಕಲಿಯುತ್ತದೆ, ಆದ್ದರಿಂದ ನೀವು ಪ್ರತಿದಿನ ಉತ್ತಮವಾಗಬೇಕು ಇದರಿಂದ ನಿಮ್ಮನ್ನು ನೋಡಿದಾಗ ನಿಮ್ಮ ಮಗುವೂ ಉತ್ತಮ ವ್ಯಕ್ತಿಯಾಗುತ್ತದೆ. ಇಲ್ಲಿ ನಾವು ಅಂತಹ ಕೆಲವು ಪೋಷಕರ ಅಭ್ಯಾಸಗಳ ಬಗ್ಗೆ ಹೇಳುತ್ತೇವೆ. ಅದರ ಸಹಾಯದಿಂದ ಪೋಷಕರು ತಮ್ಮನ್ನು ತಾವು ಸುಧಾರಿಸಿಕೊಳ್ಳಬಹುದು ಮತ್ತು ಉತ್ತಮರಾಗಬಹುದು. ನೀವು ಸಹ ಉತ್ತಮ ಪೋಷಕರಾಗಲು ಬಯಸಿದರೆ, ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

ಪ್ರೀತಿಯಿಂದ ಮಾತನಾಡಿ:  ಯಾವಾಗಲೂ ಮಕ್ಕಳೊಂದಿಗೆ ಪ್ರೀತಿ (Love)ಯಿಂದ ಮಾತನಾಡಿ.  ನಿಮ್ಮ ಮಗುವಿನೊಂದಿಗೆ ಸಂವಹನ ನಡೆಸಿದಾಗಲೆಲ್ಲಾ ಪ್ರೀತಿ, ಸಂತೋಷ ಮತ್ತು ಸಕಾರಾತ್ಮಕತೆಯಿಂದ ಹಾಗೆ ಮಾಡಿ. ನಿಮ್ಮ ಸಣ್ಣ ನಗು ಕೂಡ ಅವನಿಗೆ ಸಕಾರಾತ್ಮಕತೆಯನ್ನು ನೀಡುತ್ತದೆ. ಈ ಸಣ್ಣ ಅಭ್ಯಾಸ (Habit)ದಿಂದ, ನಿಮ್ಮಿಬ್ಬರ ಸಂಬಂಧವು ಸುಂದರವಾಗಿರುತ್ತದೆ. ಮಕ್ಕಳು (Children) ಸಹ ಇಂಥಹದ್ದೇ ಉತ್ತಮ ಸ್ವಭಾವವನ್ನು ರೂಢಿಸಿಕೊಳ್ಳುತ್ತಾರೆ. 

Parenting Tips : ಮಕ್ಕಳ ಮುಂದೆ ಈ ಕೆಲಸ ಮಾಡಿ ಅವ್ರ ಭವಿಷ್ಯ ಹಾಳ್ಮಾಡ್ಬೇಡಿ

ಮಕ್ಕಳ ಭಾವನೆ ಅರ್ಥಮಾಡಿಕೊಳ್ಳಿ: ನಿಮ್ಮ ಮಗು ಕೋಪ (Angry)ಗೊಂಡಿದ್ದರೆ ಅಥವಾ ದುಃಖಿತನಾಗಿದ್ದರೆ ಅಥವಾ ಅವನ ಮನಸ್ಸನ್ನು ಹೇಳಲು ಸಾಧ್ಯವಾಗದಿದ್ದರೆ, ನೀವು ಮೊದಲು ಅದಕ್ಕೆ ಕಾರಣವನ್ನು ಕೇಳಬೇಕು. ಅವನು ಏಕೆ ಮೌನವಾಗಿದ್ದಾನೆ ಅಥವಾ ತುಂಬಾ ಕೋಪಗೊಂಡಿದ್ದಾನೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ. ಮಗುವನ್ನು ತನ್ನ ಕೋಣೆಗೆ ಹೋಗಲು ಹೇಳಬೇಡಿ. ಇದರಿಂದ ನೀವು ಅವನ ಭಾವನೆ (Feelings)ಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಗುವಿನ ಮನಸ್ಸಿನ ಮೇಲೆ ಇದು ಕೆಟ್ಟದಾಗಿ ಪರಿಣಾಮ ಬೀರಬಹುದು

ಮಕ್ಕಳಿಗೆ ಆಯ್ಕೆಯ ಅವಕಾಶ ಕೊಡಿ: ಪ್ರತಿಯೊಬ್ಬ ಪೋಷಕರು ತಮ್ಮ ಮಗುವಿಗೆ ಉತ್ತಮ ಮೌಲ್ಯಗಳನ್ನು ನೀಡಲು ಬಯಸುತ್ತಾರೆ. ನಿಮ್ಮ ಮಗುವು ಅಸಮಾಧಾನಗೊಳ್ಳಲು ಅಥವಾ ಇತರರಿಗೆ ತೊಂದರೆ ನೀಡುವುದನ್ನು ನೀವು ಬಯಸುವುದಿಲ್ಲ ಎಂದಾದರೆ ಮಕ್ಕಳಿಗೆ ಆಯ್ಕೆಯ ಅವಕಾಶ (Chance) ಕೊಡಿ. ಆದರೆ ವಿಧಾನವು ಸ್ವಲ್ಪ ಟ್ರಿಕಿ ಆಗಿದೆ. ಮಗುವಿನಲ್ಲಿ ಉತ್ತಮ ಮೌಲ್ಯಗಳನ್ನು ತುಂಬುವ ಒಂದು ಪರಿಣಾಮಕಾರಿ ಮಾರ್ಗವೆಂದರೆ ಮಗುವಿಗೆ ಆಯ್ಕೆಯ ಅವಕಾಶವನ್ನು ಕೊಡುವುದು. ಇದರಿಂದ ಮಗು ಸರಿ, ತಪ್ಪುಗಳನ್ನು ತನ್ನಿಂದ ತಾನೇ ತಿಳಿದುಕೊಳ್ಳುತ್ತದೆ. 

ಪುಟಾಣಿ ಮಕ್ಕಳು ತಾವಾಗಿಯೇ ಆಹಾರ ತಿನ್ನುವಂತೆ ಮಾಡೋದು ಹೇಗೆ?

ಕೋಪಗೊಂಡಾಗ ಏನು ಮಾಡಬೇಕು: ಮಕ್ಕಳು ಕೋಪ ಬಂದಾಗಲ್ಲೆಲ್ಲಾ ಕಿರುಚಾಡುತ್ತಾರೆ. ಅಳುತ್ತಾರೆ. ಈ ಸಂದರ್ಭದಲ್ಲಿ ನೀವು ಸಹ ತಾಳ್ಮೆ ಕಳೆದುಕೊಂಡು ಮಕ್ಕಳನ್ನು ಬೈಯ್ದು ಬಿಡುತ್ತೀರಿ. ಕೋಪದಲ್ಲಿ, ನೀವು ಮಗುವಿನ ಮನಸ್ಸನ್ನು ನೋಯಿಸುವ ಕೆಲವು ಮಾತುಗಳನ್ನು ಸಹ ಹೇಳುತ್ತೀರಿ. ಆದರೆ, ಹಾಗೆ ಮಾಡದಿರಿ. ಕೋಪಗೊಂಡ ಮೊದಲು ಶಾಂತಚಿತ್ತರಾಗಿ. ಪರಿಸ್ಥಿತಿ (Situation)ಯನ್ನು ಅರ್ಥ ಮಾಡಿಕೊಂಡು ನಿಭಾಯಿಸಿ. ಇದರಿಂದ ಮಕ್ಕಳು ಸಹ ಸಿಟ್ಟು ಬಂದಾಗ ಕಿರುಚಾಡುವುದು ಬಿಟ್ಟು ಸಮಾಧಾನವಾಗಿರಲು ಕಲಿಯುತ್ತಾರೆ. 

ನಿರ್ಲಕ್ಷ್ಯ ವಹಿಸಬೇಡಿ: ಯಾವ ಜೊತೆಯೇ ಆಗಿರಲಿ ಮಾತನಾಡುವಾಗ ಸಂಪೂರ್ಣ ಗಮನವಿಟ್ಟಿರಿ. ನಿಮ್ಮ ಆಸಕ್ತಿಯು ದೇಹ ಭಾಷೆ (Body language)ಯಿಂದ ಮಾತ್ರ ತಿಳಿಯುತ್ತದೆ. ಮಗುವು ನಿಮ್ಮೊಂದಿಗೆ ತನ್ನ ದಿನದ ಬಗ್ಗೆ ಒಳ್ಳೆಯದನ್ನು ಹಂಚಿಕೊಳ್ಳಲು ಬಂದಾಗ ಅಥವಾ ಅವನು ನಿಮ್ಮೊಂದಿಗೆ ಮಾತನಾಡಬೇಕಾದರೆ, ಅವನಿಗೆ ಸಂಪೂರ್ಣ ಗಮನ ಕೊಡಿ ಮತ್ತು ಅವನನ್ನು ನಿರ್ಲಕ್ಷಿಸಬೇಡಿ.

click me!