ಡಿವೋರ್ಸ್ ಮೊದಲು ಹಾಗೂ ನಂತರ: ವಿಚ್ಛೇದಿತನ ಟ್ಯಾಟೂ ಫೋಟೋ ಭಾರಿ ವೈರಲ್

Published : Dec 30, 2025, 11:35 AM IST
photo of before divorce after divorce viral

ಸಾರಾಂಶ

ಮದುವೆಗೂ ಮುನ್ನ ಪ್ರೇಯಸಿಯ ಫೋಟೋವನ್ನು ತೋಳಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ ಯುವಕ, ವಿಚ್ಛೇದನದ ನಂತರ ಅದೇ ಟ್ಯಾಟೂವನ್ನು ಗೊರಿಲ್ಲಾದ ಚಿತ್ರವಾಗಿ ಪರಿವರ್ತಿಸಿದ್ದಾನೆ. ಈ ಮೊದಲು ಮತ್ತು ನಂತರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೀತಿಯಲ್ಲಿ ಇದ್ದಾಗ ಪ್ರೇಮಿಗಳಿಗೆ ತಾವು ಏನು ಮಾಡುತ್ತೇವೆ ಎಂಬುದರ ಅರಿವು ಇರುವುದಿಲ್ಲ. ಕೆಲವರು ತಮ್ಮ ಪ್ರಿಯಕರನ/ಪ್ರಿಯಕರಳ ಹೆಸರನ್ನು ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಳ್ಳುವುದುಂಟು. ಮತ್ತೆ ಕೆಲವರು ಅವರಿಗಾಗಿ ಏನೂ ಸಾಧ್ಯವೋ ಅದೆಲ್ಲವನ್ನು ಮಾಡುತ್ತಾರೆ. ಪತ್ನಿಯ ಹೆಸರಲ್ಲಿ ಮನೆ ಆಸ್ತಿ ಖರೀದಿಸುತ್ತಾರೆ. ಅವರಿಗಾಗಿ ಕಾರು ಕೊಳ್ಳುತ್ತಾರೆ. ಹಾಗೆಯೇ ಸ್ತ್ರೀಯರು ಕೂಡ ಪ್ರೀತಿಯಲ್ಲಿದ್ದಾಗ ತಮ್ಮಿಂದ ಏನು ಮಾಡಲು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಾರೆ. ಹಾಗೆಯೇ ಇಲ್ಲೋರ್ವ ಯುವಕ ಮದುವೆಗೂ ಮೊದಲು ತನ್ನ ಪ್ರೇಯಸಿಯ ಫೋಟೋವನ್ನು ತನ್ನ ತೋಳಿನ ಮೇಲೆ ಹಾಕಿದ್ದ. ಆದರೆ ಮದುವೆಯ ನಂತರ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದ್ದು, ವಿಚ್ಛೇದನವೂ ಆಗಿದೆ. ಆದರೆ ವಿಚ್ಛೇದನದ ನಂತರ ಆತ ಪತ್ನಿಯ ಟ್ಯಾಟೂವನ್ನು ತಿದ್ದಿ, ಮೊದಲ ಹಾಗೂ ನಂತರದ ಫೋಟೋ ಹಾಕಿದ್ದು, ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದರ ಜೊತೆಗೆ ನೆಟ್ಟಿಗರು ಈ ಫೋಟೋಗೆ ಹಲವು ಹಾಸ್ಯಮಯ ಕಾಮೆಂಟ್ ಮಾಡಿದ್ದಾರೆ.

All is fair in love and war ಎಂಬ ಇಂಗ್ಲೀಷ್ ಉಕ್ತಿಯಂತೆ ಪ್ರೀತಿಯಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ತಪ್ಪು ಸರಿಗಳ ಯೋಚನೆಗಳಿಲ್ಲದೇ ಪ್ರೀತಿ ಪಾತ್ರರು ಮಾಡಿದೆಲ್ಲವೂ ಸರಿ ಎನಿಸುತ್ತದೆ. ಆದರೆ ಸಂಬಂಧ ಹಳಸಿದ ನಂತರ ಎಲ್ಲವೂ ಕಹಿಯಾಗಿ ಕಾಣುತ್ತದೆ. ಸರಿ ಇರುವುದು ಕೂಡ ಕೆಲವೊಮ್ಮೆ ತಪ್ಪಾಗಿ ಬಿಡುತ್ತದೆ. ಹಾಗೆಯೇ ಪ್ರೀತಿಯಲ್ಲಿ ಇದ್ದಾಗ ಗಂಡ ತೋಳಿನ ಮೇಲೆ ಹಾಕಿದ ಪತ್ನಿಯ ಮುಖದ ಟ್ಯಾಟೂ ಆತನಿಗೆ ಕಹಿ ನೆನಪಾಗಿ ಕಾಡಲು ಶುರು ಆಗಿದೆ. ಹೀಗಾಗಿ ಅದಕ್ಕೊಂದು ಮುಕ್ತಿ ಕಾಣಿಸಬೇಕು ಎಂದು ಬಯಸಿದ್ದಾನೆ. ಹಾಗಂತ ಆತ ಟ್ಯಾಟೂವನ್ನೇ ಅಳಿಸಿ ಹಾಕಿಲ್ಲ, ಬದಲಾಗಿ ಪತ್ನಿಯ ಫೋಟೋವನ್ನು ಗೊರಿಲ್ಲಾದ ಫೋಟೋವಾಗಿ ಪರಿವರ್ತಿಸಿದ್ದಾನೆ. ಇದು ನೆಟ್ಟಿಗರು ಬಿದ್ದು ಬಿದ್ದು ನಗುವಂತೆ ಮಾಡಿದೆ.

ಇದನ್ನೂ ಓದಿ: ಕಿಬ್ಬೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ 80 ವರ್ಷದ ಮಹಿಳೆಗೆ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ಆಘಾತ

ಅಂದಹಾಗೆ ಈ ರೀತಿ ಟ್ಯಾಟೂ ಹಾಕಿದ ವ್ಯಕ್ತಿ ಅಮೆರಿಕಾದ ಲಾಸ್ ಏಂಜಲೀಸ್ ನಿವಾಸಿ. ಡಿವೋರ್ಸ್‌ ನಂತರ ಸಂಪೂರ್ಣವಾಗಿ ಆಕೆಯ ಫೋಟೋ ಅಳಿಸಿ ಹಾಕುವ ಬದಲು ಆತ ಆ ಫೋಟೋವನ್ನೇ ಗೊರಿಲ್ಲಾದ ಫೋಟೋವಾಗಿ ಪರಿವರ್ತಿಸಿ ದಿನವೂ ಅದನ್ನೂ ನೋಡಿ ಖುಷಿ ಪಡುತ್ತಿದ್ದಾನಂತೆ. ಆತ ತನ್ನ ಸೋಶೀಯಲ್ ಮೀಡಿಯಾದಲ್ಲಿ ಬಿಫೋರ್ ಆಫ್ಟರ್ ಫೋಟೋ ಹಾಕಿದ್ದು, ಫೋಟೋ ನೋಡಿದವರು ಹೊಟ್ಟೆ ಹುಣ್ಣಾಗುವಂತೆ ನಗ್ತಿದ್ದಾರೆ. ಒಬ್ಬರು ಅದ್ಭುತ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದೇ ಕಾರಣಕ್ಕೆ ನೀವು ಭಾವನೆಗಳನ್ನೆಲ್ಲಾ ಟ್ಯಾಟೂ ಹಾಕಬಾರದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಎರಡು ಫೋಟೊಗಳಿಗೆ ಹಚ್ಚಿನ ವ್ಯತ್ಯಾಸವಿಲ್ಲ ಎರಡೂ ನನಗೆ ಒಂದೇ ರೀತಿ ಕಾಣಿಸ್ತಿವೆ ಎಂದು ಅಣಕವಾಡಿದ್ದಾರೆ. ಮತ್ತೊಬ್ಬರ ಹೆಸರು ಫೋಟೋವನ್ನು ನಿಮ್ಮ ದೇಹದ ಮೇಲೆ ಟ್ಯಾಟೂ ಹಾಕುವುದು ದೊಡ್ಡ ಹುಚ್ಚುತನ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಕೋತಿಯ ಟ್ಯಾಟೂವನ್ನು ಗೊರಿಲ್ಲಾದ ಟ್ಯಾಟೂವಿನಿಂದ ಏಕೆ ಮುಚ್ಚಿದ್ದೀರಿ ಎಂದು ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: ಹೆಂಡ್ತಿಗೆ ಹೆರಿಗೆ ನೋವು: ಆಸ್ಪತ್ರೆಗೆ ಕರೆದೊಯ್ಯುವ ಗೊಂದಲದಲ್ಲಿ ಆಕೆಯನ್ನೇ ಬಿಟ್ಟು ಹೋದ ಗಡಿಬಿಡಿ ಗಂಡ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹೊಸ ವರ್ಷದಲ್ಲಿ 4 ರಾಶಿ ಜೀವನ ಸೂಪರ್ ರೋಮ್ಯಾಂಟಿಕ್
ಹೆಂಡ್ತಿಗೆ ಹೆರಿಗೆ ನೋವು: ಆಸ್ಪತ್ರೆಗೆ ಕರೆದೊಯ್ಯುವ ಗೊಂದಲದಲ್ಲಿ ಆಕೆಯನ್ನೇ ಬಿಟ್ಟು ಹೋದ ಗಡಿಬಿಡಿ ಗಂಡ