ದಾಂಪತ್ಯ ಗಟ್ಟಿಯಾಗಲು ಸಮಯ ತೆಗೆದುಕೊಳ್ಳುತ್ತದೆ. ಆದ್ರೆ ಸಂಗಾತಿ ಮಧ್ಯೆ ಬಿರುಕು ಮೂಡಲು ಅರೆ ಕ್ಷಣ ಸಾಕು. ಆತುರದಲ್ಲಿ ತೆಗೆದುಕೊಂಡ ನಿರ್ಧಾರ ಮುಂದೆ ಕಹಿ ಎನ್ನಿಸಬಹುದು. ಹಾಗಾಗಿ ವಿಚ್ಛೇದನಕ್ಕೆ ಮೊದಲು ಸಾವಿರ ಬಾರಿ ಯೋಚನೆ ಮಾಡ್ಬೇಕು.
ಸಂಬಂಧ (Relationship ) ಒಂದು ಗಿಡ (Plant) ದಂತೆ. ಅದಕ್ಕೆ ನೀವು ಎಷ್ಟು ಪ್ರೀತಿ (Love) ಯ ನೀರನ್ನು ಹಾಕ್ತಿರೋ ಅದು ಅಷ್ಟೇ ದೊಡ್ಡದಾಗಿ ಬೆಳೆಯಲು ಶುರುವಾಗುತ್ತದೆ. ಮದುವೆ (Marriage) ಮೊದಲಿದ್ದ ಪ್ರೀತಿ ದಂಪತಿ ಮಧ್ಯೆ ಮದುವೆಯಾದ್ಮೇಲೆ ಇರೋದಿಲ್ಲ. ವರ್ಷಗಳು ಕಳೆದಂತೆ ಅನೇಕರ ದಾಂಪತ್ಯದಲ್ಲಿ ಪ್ರೀತಿ ಮಸುಕಾಗುತ್ತದೆ. ಪ್ರೀತಿ ಜಾಗದಲ್ಲಿ ಜಗಳ ಬರುತ್ತದೆ. ಪರಸ್ಪರ ಕಿತ್ತಾಟ, ಕಿರುಚಾಟ ಸಾಮಾನ್ಯವಾಗುತ್ತದೆ. ಕೊನೆಯಲ್ಲಿ ಸಂಬಂಧ ಹಳಸಿ, ವಿಚ್ಛೇದನ (Divorce) ಕ್ಕೆ ಬಂದು ನಿಲ್ಲುತ್ತದೆ. ಇಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬ ಕಾರಣಕ್ಕೆ ವಿಚ್ಛೇದನ ಪಡೆಯುವ ಜೋಡಿ (Couple), ವಿಚ್ಛೇದನ ಪಡೆಯುವ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಮ್ಮಲ್ಲಿಯೇ ಕೇಳಿಕೊಳ್ಬೇಕು. ಅದಕ್ಕೆ ಉತ್ತರಪಡೆಯುವ ಪ್ರಯತ್ನ ನಡೆಸಬೇಕು. ಈ ಪ್ರಶ್ನೆ (Question) ನಿಮ್ಮ ಬಾಳಲ್ಲಿ ದೊಡ್ಡ ಬದಲಾವಣೆ ತರಬಹುದು.
ವಿಚ್ಛೇದನಕ್ಕಿಂತ ಮೊದಲು ಮಾಡಿ ಈ ಕೆಲಸ (Work) :
ನೀವು ಸಂಗಾತಿಯನ್ನು ಏಕೆ ಮದುವೆಯಾದಿರಿ ? : ಪ್ರೀತಿಸಿ ಮದುವೆಯಾಗಿರಲಿ ಇಲ್ಲ ತಂದೆ – ತಾಯಿ ನೋಡಿದ ವ್ಯಕ್ತಿಯ ಕೈ ಹಿಡಿದಿರಲಿ, ವಿಚ್ಛೇದನಕ್ಕೆ ಮುಂದಾಗುವ ಮೊದಲು ನಿಮ್ಮ ಸಂಗಾತಿಯನ್ನು ನೀವು ಮೊದಲು ಭೇಟಿಯಾದ ಸಮಯದ ಬಗ್ಗೆ ಯೋಚಿಸಿ. ನಿಮ್ಮ ಸಂಗಾತಿಯ ಯಾವ ಗುಣಗಳು ನಿಮ್ಮನ್ನು ಆಕರ್ಷಿಸಿದವು ಎಂದು ಯೋಚಿಸಿ. ಅವರನ್ನು ನಿಮ್ಮ ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಲು ನೀವು ಏಕೆ ನಿರ್ಧರಿಸಿದ್ದಿರಿ? ನೀವು ಅವರ ಜೊತೆ ಎಷ್ಟು ಪ್ರೀತಿ ಹಂಚಿಕೊಂಡಿದ್ದಿರಿ? ಅವರ ಜೊತೆ ಕಳೆದ ಸುಂದರ ಕ್ಷಣಗಳು ಯಾವುವು? ಈ ಎಲ್ಲಾ ಹಳೆಯ ವಿಷಯಗಳನ್ನು ನೀವು ನೆನಪು ಮಾಡಿಕೊಳ್ಳಬೇಕು.ನಂತ್ರ ಈಗಿನ ಪರಿಸ್ಥಿತಿಯನ್ನು ನೋಡಿ. ಅವರ ಆ ಪ್ರೀತಿ, ನೀವು ಮೆಚ್ಚಿದ ಸಂಗತಿ ಹಾಗೆ ಇದೆ ಅಂದಾದ್ರೆ ನೀವು ವಿಚ್ಛೇದನ ತೆಗೆದುಕೊಳ್ಳುವ ಬದಲು ಮತ್ತೊಮ್ಮೆ ಆಲೋಚನೆ ಮಾಡಿ. ಮತ್ತೆ ಒಂದಾಗಲು ಸಾಧ್ಯವೇ ಇಲ್ಲ. ಆರಂಭದಲ್ಲಿದ್ದ ವ್ಯಕ್ತಿ ಇವರಲ್ಲ. ಸಂಪೂರ್ಣ ಬದಲಾಗಿದ್ದಾರೆ ಎಂದಾದ್ರೆ ವಿಚ್ಛೇದನದ ನಿರ್ಧಾರ ಬೆಸ್ಟ್.
ಆದ್ಯತೆಗಳು ಬದಲಾಗಿವೆಯೇ? : ಕೆಲವೊಮ್ಮೆ ದಂಪತಿ ನಡುವೆ ಆದ್ಯತೆಗಳು ಕಾಲಾನಂತರದಲ್ಲಿ ಬದಲಾಗುತ್ತವೆ. ವೃತ್ತಿಯು ನಿಮಗೆ ಮುಖ್ಯವಾಗಿದ್ದು, ನಿಮ್ಮ ಸಂಗಾತಿಗೆ ವಿವಾಹಿತ ಸಂಬಂಧ ಮುಖ್ಯವಾಗಿರಬಹುದು. ಆದ್ರೆ ಇಬ್ಬರು ಇದ್ರ ಬಗ್ಗೆ ಸರಿಯಾಗಿ ಮಾತನಾಡದೆ ಇರಬಹುದು. ಅನೇಕ ಬಾರಿ ತಪ್ಪು ತಿಳುವಳಿಕೆ ಇಬ್ಬರ ಮಧ್ಯೆ ಸಮಸ್ಯೆ ತರುತ್ತದೆ. ಪತಿ-ಪತ್ನಿ ಕೆಲವೊಮ್ಮೆ ತಪ್ಪು ತಿಳುವಳಿಕೆಯಿಂದ ವಿಚ್ಛೇದನ ಪಡೆಯುವ ಸ್ಥಿತಿಗೆ ಬರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸರಿಯಾಗಿ ಮಾತನಾಡಿ ಮತ್ತು ವಿಚ್ಛೇದನ ಬಿಟ್ಟು ಬೇರೆ ಯಾವುದಾದ್ರೂ ಮಾರ್ಗವಿದೆಯೇ ಎಂಬುದನ್ನು ಹುಡುಕಾಡಿ.
ನೀವು ಇನ್ನು ಮುಂದೆ ನಿಮ್ಮ ಸಂಗಾತಿಯನ್ನು ಪ್ರೀತಿಸ್ತೀರಾ? : ಪ್ರೀತಿಯು ಸಂಬಂಧದ ಪ್ರಮುಖ ಅಡಿಪಾಯವಾಗಿದೆ. ನಿಮ್ಮ ಪತಿ ಅಥವಾ ಹೆಂಡತಿಯ ಮೇಲೆ ನಿಮಗೆ ಪ್ರೀತಿ ಇಲ್ಲದಿದ್ದರೆ, ಅದರ ಹಿಂದೆಯೂ ಏನಾದರೂ ಕಾರಣವಿರಬೇಕು. ಆ ಕಾರಣವನ್ನು ಕಂಡುಹಿಡಿಯುವ ಮೂಲಕ ನೀವು ಅದರ ಪರಿಹಾರವನ್ನು ಸಹ ಕಂಡುಹಿಡಿಯಬಹುದು.
25 ವರ್ಷವಾದ್ರೂ ಸಿಂಗಲ್ ಆಗಿದ್ರೆ ಈ ಊರಲ್ಲಿ ಕಾದಿದೆ ಮಸಾಲೆ ಸ್ನಾನದ ಶಿಕ್ಷೆ !
ಜೀವನಶೈಲಿ : ಜೀವನಶೈಲಿ ಕೂಡ ದಂಪತಿ ಮಧ್ಯೆ ಬಿರುಕು ಮೂಡಿಸುತ್ತದೆ. ಪರಸ್ಪರ ಸಮಯ ನೀಡಲು ಸಾಧ್ಯವಾಗುವುದಿಲ್ಲ. ಇದನ್ನೇ ತಪ್ಪಾಗಿ ತಿಳಿಯಲಾಗುತ್ತದೆ. ಇಬ್ಬರ ನಡುವೆ ಪ್ರೀತಿ ಮುಗಿದಿದೆ ಎಂದು ಭಾವಿಸುತ್ತಾರೆ. ಈ ಬಗ್ಗೆ ಸರಿಯಾಗಿ ಮಾತನಾಡ್ಬೇಕು. ಇಬ್ಬರು ಕುಳಿತು ಚರ್ಚೆ ನಡೆಸ್ಬೇಕು. ಸಮಯ ಹೊಂದಿಸಿಕೊಂಡು ಇಬ್ಬರೂ ಉತ್ತಮ ಸಮಯವನ್ನು ಕಳೆಯಬೇಕು. ಇದ್ರಿಂದ ನಿಮ್ಮ ಮಧ್ಯೆ ಮತ್ತೆ ಪ್ರೀತಿ ಚಿಗುರಬಹುದು. ವಿಚ್ಛೇದನದ ನಿರ್ಧಾರ ಬದಲಾಗಬಹುದು.