ಕಾಲು ಸ್ವಾಧೀನವಿಲ್ಲದ ತಂದೆಯೊಬ್ಬರು ತನ್ನ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ.
ಕೆಲದಿನಗಳ ಹಿಂದಷ್ಟೇ ಅಪಘಾತದಲ್ಲಿ ಕಾಲು ಕಳೆದುಕೊಂಡ ಶಾಲಾ ಬಾಲಕಿಯೊಬ್ಬಳು ಒಂಟಿ ಕಾಲಿನಲ್ಲಿ ನೆಗೆಯುತ್ತಾ ಒಂದೂ ಕಿಲೋ ಮೀಟರ್ ದೂರ ಇರುವ ಶಾಲೆಗೆ ತೆರಳುತ್ತಿದ್ದ ವಿಡಿಯೋವೊಂದು ವೈರಲ್ ಆಗಿತ್ತು. ಆದೇ ರೀತಿ ಇಲ್ಲೊಬ್ಬರು ಕಾಲು ಸ್ವಾಧೀನವಿಲ್ಲದ ದಿವ್ಯಾಂಗ ವ್ಯಕ್ತಿಯೊಬ್ಬರು ತಮ್ಮಿಬ್ಬರು ಮಕ್ಕಳನ್ನು ತಮ್ಮ ಮೂರು ಚಕ್ರಗಳ ತಳ್ಳುವ ಗಾಡಿಯಲ್ಲಿ ಶಾಲೆಗೆ ಕರೆದೊಯ್ಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಲು ಸ್ವಾಧೀನವಿಲ್ಲದಿದ್ದರೂ ಅಪ್ಪನ ಕರ್ತವ್ಯ ಮರೆಯದ ಆತನ ಜವಾಬ್ದಾರಿತನಕ್ಕೆ ಜನ ಶಹಭಾಷ್ ಅನ್ನುತ್ತಿದ್ದಾರೆ.
ಅಪ್ಪ ಎಂದರೇನೇ ಹಾಗೆ. ಕುಟುಂಬದ ಎಲ್ಲರ ಜವಾಬ್ದಾರಿ ತೆಗೆದುಕೊಳ್ಳುವ, ತನ್ನ ಕುಟುಂಬದ ಪತ್ನಿ ಮಕ್ಕಳ ಎಳ್ಗೆಗಾಗಿ ಹಗಲಿರುಳು ಎನ್ನದೇ ದುಡಿಯುವ. ಮಕ್ಕಳು ಸಾಧನೆ ಮಾಡಿದಾಗ ದೂರದಲ್ಲೇ ನಿಂತು ಖುಷಿ ಪಡುವ, ಮಕ್ಕಳ ಸುಖಕ್ಕಾಗಿ ತನ್ನೆಲ್ಲಾ ಸುಖವನ್ನು ತ್ಯಾಗ ಮಾಡುವ ಪೋಷಕರ ಪ್ರೀತಿಗೆ ಬೆಲೆ ಕಟ್ಟಲಾಗದು ಆದರೆ ಇವೆಲ್ಲವನ್ನೂ ಕೈ ಕಾಲುಗಳೆರಡು ಸರಿ ಇರುವ ಪೋಷಕರು ಮಾಡುವುದು ಸಾಮಾನ್ಯ( ಪೋಷಕರ ಶ್ರಮದ ಬಗ್ಗೆ ಗೌರವವಿದೆ) ಆದರೆ ಕಾಲು ಸ್ವಾಧೀನವಿಲ್ಲದ ವ್ಯಕ್ತಿಯೂ ಮಕ್ಕಳ ಶಿಕ್ಷಣಕ್ಕೆ ತನ್ನಿಂದಾದ ಸಹಾಯ ಮಾಡುತ್ತಿರುವುದು ಮನ ಮಿಡಿಯುವಂತಿದೆ.
पिता 🙏🏻 💕 pic.twitter.com/w3buFI6BpR
— Sonal Goel IAS (@sonalgoelias)
ಸೆಕೆಂಡ್‌ಹ್ಯಾಂಡ್ ಸೈಕಲ್ ತಂದ ಅಪ್ಪ: ಮಗಳ ಈ ಖುಷಿಗೆ ಸರಿಸಾಟಿ ಎಲ್ಲಿ: ವಿಡಿಯೋ
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸೊನಾಲ್ ಗೋಯಲ್ ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಕಾಲು ಸ್ವಾಧೀನವಿಲ್ಲದ ತಂದೆಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ತಾವು ಚಲಾಯಿಸಲು ಸಾಧ್ಯವಾಗುವ ಗಾಲಿಕುರ್ಚಿಯಲ್ಲಿಯೇ ಮಗಳನ್ನು ಹಿಂದೆ ಮಗನನ್ನು ಮುಂದೆ ಕೂರಿಸಿಕೊಂಡು ಟ್ರಾಫಿಕ್ ಮಧ್ಯೆಯೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಮಕ್ಕಳಿಬ್ಬರು ಸಮವಸ್ತ್ರದಲ್ಲಿ ಇದ್ದಾರೆ.
a father always fight for his children, he always sacrifice his dreams for his children but only some of children's respect their parents when they became old and some put their parents to old age home's, that moment is much painful for every parent ❣️😢 https://t.co/LU0jbXni3E
— Swaroopsinh Purohit (@SwaroopsinhP)ಈ ವಿಡಿಯೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂದೆಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ತಂದೆ ಯಾವಾಗಲೂ ತನ್ನ ಮಕ್ಕಳಿಗಾಗಿ ಹೋರಾಡುತ್ತಾನೆ, ಅವನು ಯಾವಾಗಲೂ ತನ್ನ ಕನಸುಗಳನ್ನು ತನ್ನ ಮಕ್ಕಳಿಗಾಗಿ ತ್ಯಾಗ ಮಾಡುತ್ತಾನೆ ಆದರೆ ಕೆಲವು ಮಕ್ಕಳು ಮಾತ್ರ ತಮ್ಮ ಹೆತ್ತವರನ್ನು ಗೌರವಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಜವಾಗಿಯೂ ನನ್ನ ಹೃದಯವನ್ನು ಮುಟ್ಟಿದೆ. ಇದು ತಂದೆಯ ಬೆಲೆ ಕಟ್ಟಲಾಗದ ಪ್ರೀತಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕಾಲಿಲ್ಲ, ವ್ಹೀಲ್‌ಚೇರ್ ಇಲ್ಲ, ಆದ್ರೂ ಜಗವನ್ನೇ ಸುತ್ತಿದ!
ಕೈ ಕಾಲು ಚೆನ್ನಾಗಿದ್ರೂ ಅಸಡ್ಡೆಯಿಂದ ಏನನ್ನೂ ಸಾಧನೆ ಮಾಡದವರು ಬಹಳಷ್ಟಿದ್ದಾರೆ. ಆದರೆ ವಿಶೇಷ ಚೇತನರು ತಮ್ಮ ನ್ಯೂನತೆಯನ್ನು ಸವಾಲಾಗಿ ತೆಗೆದುಕೊಂಡು, ಸಾಧಿಸಿ ತೋರಿಸ್ತಾರೆ. ಹಾಗೆಯೇ ಕೆಲ ದಿನಗಳ ಹಿಂದೆ ಬಿಹಾರದ ಜಮ್ಮಯ್ಯಾ ಕೈರಾ ಬ್ಲಾಕ್‌ನ ಫತೇಫುರ್ ಗ್ರಾಮದ ಮಹಾದಲಿತ ಕುಟುಂಬದ 10 ವರ್ಷದ ಹುಡುಗಿ ಸೀಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು ಓದುವ ಮತ್ತು ಬರೆಯುವ ಉತ್ಸಾಹದಿಂದ ಒಂದೇ ಕಾಲಿನಲ್ಲಿ ನೆಗೆಯುತ್ತಾ ಶಾಲೆಗೆ ಹೋಗುತ್ತಿದ್ದಳು. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.