ಜನನ ನಿಯಂತ್ರಣ ಮಾತ್ರೆ (Birth Control Pills)ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು (Woman) ಮಾತ್ರವಲ್ಲ ಪುರುಷರು ಸಹ ತೆಗೆದುಕೊಳ್ಳುತ್ತಾರೆ. ಇದರಿಂದ ಲೈಂಗಿಕ ರೋಗ ಹರಡುವ ಸಾಧ್ಯತೆ ಕಡಿಮೆ ಎಂದು ನಂಬಲಾಗುತ್ತದೆ. ಹೀಗಾಗಿ ಕಾಂಡೋಮ್ (Condom) ಬಳಸದೆ ಹಲವು ಜನನ ನಿಯಂತ್ರಣ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದು ಎಷ್ಟರಮಟ್ಟಿಗೆ ಸುರಕ್ಷಿತ ?
ಭೂಮಿ ಮೇಲಿರುವ ಎಲ್ಲಾ ಜೀವಿಗಳಿಗೂ ಲೈಂಗಿಕ ಕ್ರಿಯೆ ಎಂಬುದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಆದರೆ, ಮನುಷ್ಯನ ವಿಷಯದಲ್ಲಿ ನಿಯಮಿತ, ಸುರಕ್ಷಿತ ಲೈಂಗಿಕ ಕ್ರಿಯೆ ಅತೀ ಅಗತ್ಯ. ಅಸುರಕ್ಷಿತ ಲೈಂಗಿಕ ಅಭ್ಯಾಸಗಳು ಸಮಸ್ಯೆಗೆ ಕಾರಣವಾಗಬಹುದು. ಸುರಕ್ಷಿತ ಲೈಂಗಿಕತೆಗಾಗಿ ಹೆಚ್ಚಾಗಿ ಎಲ್ಲರೂ ಕಾಂಡೋಮ್ ಬಳಸುತ್ತಾರೆ. ಇದು ಅನಗತ್ಯ ಗರ್ಭಧಾರಣೆಯನ್ನು ತಡೆಯುವುದಲ್ಲದೆ, ಲೈಂಗಿಕ ಕ್ರಿಯೆಯಿಂದ ಹರಡುವ ಕಾಯಿಲೆಗಳಿಂದ ರಕ್ಷಿಸುತ್ತದೆ. ಆದರೆ, ಕಾಂಡೋಮ್ ಅನ್ನು ಸರಿಯಾಗಿ ಬಳಸಿರುವುದರಿಂದಲೂ ಸಮಸ್ಯೆಯಾಗಬಹುದು. ಕಾಂಡೋಮ್ ಬಳಸದೆ ಹಲವು ಜನನ ನಿಯಂತ್ರಣ ಮಾತ್ರೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದು ಎಷ್ಟರಮಟ್ಟಿಗೆ ಸುರಕ್ಷಿತ ?
ಜನನ ನಿಯಂತ್ರಣ ಮಾತ್ರೆ ಸುರಕ್ಷಿತವೇ ?
ಜನನ ನಿಯಂತ್ರಣ ಮಾತ್ರೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರು ಸಹ ತೆಗೆದುಕೊಳ್ಳುತ್ತಾರೆ. ಇದರಿಂದ ಎಸ್ಟಿಐ (ಲೈಂಗಿಕವಾಗಿ ಹರಡುವ ರೋಗ) ಹರಡುವ ಸಾಧ್ಯತೆ ಕಡಿಮೆ ಎಂದು ನಂಬಲಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಮಾತ್ರೆ ಸಂಪೂರ್ಣವಾಗಿ ಸುರಕ್ಷಿತವಾಗಿರುವ ಉತ್ತಮ ಅವಕಾಶವಾಗಿದೆ. ಹೆಚ್ಚಿನ ಜನರು ಯಾವುದೇ ತೊಂದರೆಗಳಿಲ್ಲದೆ ಇದನ್ನು ತೆಗೆದುಕೊಳ್ಳಬಹುದು. ಈ ಮಾತ್ರೆ ಸುಮಾರು 50 ವರ್ಷಗಳಿಂದಲೂ ಇದೆ. ಮತ್ತು ಲಕ್ಷಾಂತರ ಜನರು ಅದನ್ನು ಸುರಕ್ಷಿತವಾಗಿ ಬಳಸಿದ್ದಾರೆ. ಆದರೆ, ಎಲ್ಲಾ ಔಷಧಿಗಳಂತೆ ಜನನ ನಿಯಂತ್ರಣ ಮಾತ್ರೆಗಳು ಸಹ ಕೆಲವು ಅಪಾಯಗಳು ಮತ್ತು ಅಡ್ಡ ಪರಿಣಾಮಗಳನ್ನು ಹೊಂದಿವೆ. ಇದರಲ್ಲೂ ಕೆಲವೊಂದು ಅಡ್ಡಪರಿಣಾಮಗಳಿಗೆ ಮತ್ತು ಕೆಲವೊಬ್ಬರು ಇದನ್ನು ಬಳಸಲೇಬಾರದು.
ಕಾಂಡೋಮ್ ಮಾತ್ರವಲ್ಲ... ಜನನ ನಿಯಂತ್ರಣಕ್ಕೆ ಹೀಗೂ ಮಾಡಬಹುದು
ಯಾರು ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳಬಾರದು ?
ಧೂಮಪಾನ ಮಾಡುವವರು ಜನನ ನಿಯಂತ್ರಣ ಮಾತ್ರೆ (Birth Control Pills)ಗಳನ್ನು ತೆಗೆದುಕೊಳ್ಳಲೇಬಾರದು. ನೀವು 35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಮತ್ತು ಧೂಮಪಾನಿಗಳಾಗಿದ್ದರೆ, ನೀವು ಸಂಯೋಜಿತ ಮಾತ್ರೆ ಅಥವಾ ಹಾರ್ಮೋನ್ ಈಸ್ಟ್ರೊಜೆನ್ ಹೊಂದಿರುವ ಯಾವುದೇ ರೀತಿಯ ಜನನ ನಿಯಂತ್ರಣವನ್ನು ಬಳಸಬಾರದು. ರಕ್ತ ಹೆಪ್ಪುಗಟ್ಟುವಿಕೆ, ಅಸ್ವಸ್ಥತೆ ಅಥವಾ ಉರಿಯೂತ ಇರುವವರು ಸಹ ಜನನ ನಿಯಂತ್ರಣ ಮಾತ್ರೆ ತೆಗೆದುಕೊಳ್ಳಬಾರದು. ಇಂಥವರು ಪ್ರೊಜೆಸ್ಟಿನ್ ಮಾತ್ರೆಗಳನ್ನು (ಪಿಒಪಿಗಳು ಅಥವಾ ಮಿನಿ ಮಾತ್ರೆಗಳು) ಮಾತ್ರ ತೆಗೆದುಕೊಳ್ಳಬಹುದು.
ಸ್ತನ ಕ್ಯಾನ್ಸರ್ (Breast Cancer), ಹೃದಯಾಘಾತ (Heart Attack), ಪಾರ್ಶ್ವವಾಯು, ಹೃದಯ ಸಮಸ್ಯೆಗಳು, ಮೈಗ್ರೇನ್, ಅನಿಯಂತ್ರಿತ ಅಧಿಕ ರಕ್ತದೊತ್ತಡ, ಮಧುಮೇಹ ಅಥವಾ ಯಕೃತ್ತಿನ ಸಮಸ್ಯೆಯಿರುವವರು ಸಹ ಪ್ರೊಜೆಸ್ಟಿನ್ ಮಾತ್ರೆಗಳನ್ನು ಬಳಸುವುದನ್ನು ತಪ್ಪಿಸಿ.
ಹೆಚ್ಚಾದ ಫ್ಲೇವರ್ಡ್ ಕಾಂಡೋಮ್ ಕ್ರೇಜ್... ಬಳಸೋ ಮುನ್ನವಿರಲಿ ತುಸು ಎಚ್ಚರ!
ಜನನ ನಿಯಂತ್ರಣ ಮಾತ್ರೆಗಳ ಅಪಾಯಗಳೇನು ?
ಜನನ ನಿಯಂತ್ರಣ ಮಾತ್ರೆಗಳು ತುಂಬಾ ಸುರಕ್ಷಿತವಾಗಿದ್ದರೂ ಸಹ, ಬೇರೆ ಮಾತ್ರೆಗಳನ್ನು ಸೇವಿಸುತ್ತಾ ಇದನ್ನು ಬಳಸುವುದರಿಂದ ಇದು ಆರೋಗ್ಯ (Health) ಸಮಸ್ಯೆಗಳ ಅಪಾಯವನ್ನು ಸ್ವಲ್ಪ ಹೆಚ್ಚಿಸಬಹುದು. ಇದರಲ್ಲಿ ಮುಖ್ಯವಾದುದು ಹೃದಯಾಘಾತ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಯಕೃತ್ತಿನ ಸಮಸ್ಯೆಗಳು ಸೇರಿವೆ. ಬಹಳ ಅಪರೂಪದ ಸಂದರ್ಭಗಳಲ್ಲಿ ಇದು ಸಾವಿಗೂ ಕಾರಣವಾಗಬಹುದು. ಬಹುಪಾಲು, ಪ್ರೊಜೆಸ್ಟಿನ್ ಮಾತ್ರೆಗಳು ಅಪಾಯಗಳನ್ನು ಹೊಂದಿಲ್ಲ.ಹೀಗಾಗಿ ಜನನ ನಿಯಂತ್ರಣದ ಕುರಿತು ನಿಮ್ಮ ವೈದ್ಯರೊಂದಿಗೆ ಮಾತನಾಡುವಾಗ, ನೀವು ತೆಗೆದುಕೊಳ್ಳುತ್ತಿರುವ ಯಾವುದೇ ಔಷಧಿಗಳು ಮತ್ತು ನೀವು ಹೊಂದಿರುವ ಯಾವುದೇ ಆರೋಗ್ಯ ಸಮಸ್ಯೆಗಳ ಬಗ್ಗೆ ಅವರಿಗೆ ತಿಳಿಸಿ.
ಮಕ್ಕಳಿಗೆ ಹಾಲುಣಿಸುವ ಸಮಯದಲ್ಲಿ ಮಾತ್ರೆ ತೆಗೆದುಕೊಳ್ಳುವುದು ಸುರಕ್ಷಿತವೇ ?
ಹಾಲುಣಿಸುವ ಮೊದಲ 3 ವಾರಗಳಲ್ಲಿ ಕಾಂಬಿನೇಶನ್ ಮಾತ್ರೆಗಳು ಎದೆ ಹಾಲಿನ ಪ್ರಮಾಣ ಮತ್ತು ಗುಣಮಟ್ಟವನ್ನು ಕಡಿಮೆ ಮಾಡಬಹುದು. ಮಗುವಿಗೆ ಜನ್ಮ ನೀಡಿದ ನಂತರ ಸಂಯೋಜಿತ ಮಾತ್ರೆಗಳನ್ನು ಬಳಸಲು ಪ್ರಾರಂಭಿಸಲು ಕನಿಷ್ಠ 3 ವಾರಗಳವರೆಗೆ ಕಾಯಿರಿ. ಮಾತ್ರೆ ಬಳಸುವುದು ಸ್ತನ್ಯಪಾನದ ಮೇಲೆ ಪರಿಣಾಮ ಬೀರಬಹುದು ಎಂಬ ಚಿಂತೆಯಿದ್ದರೆ ನಿಮ್ಮ ನರ್ಸ್ ಅಥವಾ ವೈದ್ಯರೊಂದಿಗೆ ಮಾತನಾಡಿ. ನೀವು ಹಾಲುಣಿಸುವ ಸಮಯದಲ್ಲಿ ಪ್ರೊಜೆಸ್ಟಿನ್-ಮಾತ್ರ ಮಾತ್ರೆಗಳು (ಪಿಒಪಿಗಳು ಅಥವಾ ಮಿನಿ ಮಾತ್ರೆಗಳು) ಬಳಸಲು ಉತ್ತಮವಾಗಿದೆ. ಮಿನಿ ಮಾತ್ರೆ ಬಳಸುವುದು ಸ್ತನ್ಯಪಾನದ ಮೇಲೆ, ನೀವು ಎಷ್ಟು ಹಾಲು ಉತ್ಪಾದಿಸುತ್ತೀರಿ ಎಂಬುದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಗುವಿನ ಮೇಲೆ ಸಹ ಯಾವುದೇ ಪರಿಣಾಮ ಬೀರುವುದಿಲ್ಲ.