ದೆಹಲಿ ಮೆಟ್ರೋದಲ್ಲಿ ಇತ್ತೀಚಿಗೆ ಜನರ ಓಡಾಟಕ್ಕಿಂತ ಕಪಲ್ ರೋಮ್ಯಾನ್ಸ್ ಹೆಚ್ಚಾಗ್ತಿದೆ. ಈ ಹಿಂದೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳೋ ದೃಶ್ಯ ಸೆರೆಯಾಗಿತ್ತು. ಆ ನಂತರ ಎರಡು ಮೂರು ಬಾರಿ ಜೋಡಿ ಲಿಪ್‌ಲಾಕ್ ಮಾಡೋ ವಿಡಿಯೋ ವೈರಲ್ ಆಗಿತ್ತು. ಹಾಗೆಯೇ ಸದ್ಯ, ಯುವ ದಂಪತಿ ಪರಸ್ಪರ ಚುಂಬಿಸುವ ಹೊಸ ವೀಡಿಯೊ ವೈರಲ್ ಆಗಿದೆ.
ನವದೆಹಲಿ: ದೆಹಲಿ ಮೆಟ್ರೋ ಇತ್ತೀಚಿಗೆ ಹಲವು ನೆಗೆಟಿವ್ ವಿಚಾರಗಳಿಂದಲೇ ಸುದ್ದಿಯಾಗುತ್ತಿದೆ. ಅರೆಬರೆ ಬಟ್ಟೆ ತೊಟ್ಟುಕೊಂಡು ಮೆಟ್ರೋ ಏರಿದ್ದ ರಿದಂ ಚನ್ನಾ ಎನ್ನುವ ಹುಡುಗಿಯ ವೇಷಕ್ಕೆ ಟ್ವಿಟರ್‌ನಲ್ಲಿ ಪರ-ವಿರೋಧದ ಕಾಮೆಂಟ್‌ಗಳು ಬಂದಿದ್ದವು. ಅದಕ್ಕೂ ಮುನ್ನ, ಇಬ್ಬರು ಪ್ರಯಾಣಿಕರ ನಡುವೆ ಯಾವುದೇ ಕಾರಣಕ್ಕೆ ನಡೆದ ಜಗಳ ವಿಪರೀತಕ್ಕೆ ಹೋಗಿದ್ದರಿಂದ ಮಹಿಳೆಯೊಬ್ಬಳು ಪೆಪ್ಪರ್ ಸ್ಪ್ರೇ ಹಾಕಿದ್ದ ಘಟನೆ ಕೂಡ ನಡೆದಿತ್ತು. ಹಿಂದೆ ಮೆಟ್ರೋದಲ್ಲಿ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಳ್ಳೋ ದೃಶ್ಯ ಸೆರೆಯಾಗಿತ್ತು. ಆ ನಂತರ ಎರಡು ಮೂರು ಬಾರಿ ಜೋಡಿ ಲಿಪ್‌ಲಾಕ್ ಮಾಡೋ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ. ಸದ್ಯ, ಯುವ ದಂಪತಿ ಪರಸ್ಪರ ಚುಂಬಿಸುವ ಹೊಸ ವೀಡಿಯೊ ವೈರಲ್ ಆಗಿದೆ.
ಜೂನ್ 17ರಂದು ಈ ಫೋಟೋ ಟ್ವೀಟ್ ಮಾಡಲಾಗಿದೆ. ದೆಹಲಿಯ ಹುಡಾ ಸಿಟಿ ಸೆಂಟರ್ ಮಾರ್ಗವಾಗಿ ಈ ಮೆಟ್ರೋ ಚಲಿಸುತ್ತಿತ್ತು ಎಂದು ತಿಳಿದುಬಂದಿದೆ. ವಿಡಿಯೋದಲ್ಲಿ ಲವರ್‌ಗಳು ಕೈಕೈ ಹಿಡಿದುಕೊಂಡು ಮೆಟ್ರೋದ ಸೀಟ್‌ನಲ್ಲಿ ಕುಳಿತಿದ್ದು, ಸುತ್ತಲಿನ ಜನರ ಪರಿವೇ ಇಲ್ಲದೇ, ಲಿಪ್‌ಲಾಕ್ ಮಾಡುತ್ತಾ, ರೊಮಾನ್ಸ್ ಮಾಡುತ್ತಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಚಿತ್ರಗಳನ್ನು ಕ್ಲಿಕ್ಕಿಸಿ ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.
ಭಗವಂತ ಈ ಕಣ್ಣಲ್ಲಿ ಇನ್ನೇನೆಲ್ಲಾ ನೋಡ್ಬೇಕೋ: ಮೆಟ್ರೋದಲ್ಲೇ ಹೇರ್ ಸ್ಟ್ರೈಟ್ ಮಾಡ್ಕೊಂಡ ಹುಡ್ಗಿ
ಮೆಟ್ರೋದಲ್ಲಿ ಕಿಸ್ ಮಾಡಿದ ಜೋಡಿ, ವಿಡಿಯೋ ವೈರಲ್
ಟ್ವಿಟ್ಟರ್ ಬಳಕೆದಾರ ಭಗತ್ ಚಿಂಗ್ಸುಬಮ್ ದಂಪತಿಗಳು (Couple) ಮೆಟ್ರೋದಲ್ಲಿ ಚುಂಬಿಸುತ್ತಿರುವ ಫೋಟೋವನ್ನು ಹಂಚಿಕೊಂಡ ನಂತರ ಇದು ವೈರಲ್ ಆಗ್ತಿದೆ. ಅವರು ತಮ್ಮ ಟ್ವೀಟ್‌ನಲ್ಲಿ ಡಿಎಂಆರ್‌ಸಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ದೆಹಲಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಅಧಿಕಾರಿಗಳು ಈ ಸಂಬಂಧ ದೂರು (Complaint) ಪಡೆದ ನಂತರ ಜೋಡಿಗಾಗಿ ಹುಡುಕುತ್ತಿದ್ದಾರೆ.
ಇಂಥ ಚಿತ್ರಗಳು ವೈರಲ್ ಆಗುವುದು ಇದು ಮೊದಲೇನಲ್ಲ. ಅದರಲ್ಲಿಯೂ ದೆಹಲಿ ಮೆಟ್ರೋದಲ್ಲಿ ನಡೆದ ಇಂಥಾ ಚಟುವಟಿಕೆಗಳ ಫೋಟೋ, ವಿಡಿಯೋಗಳು ಈ ಹಿಂದೆಯೂ ಹಲವು ಬಾರಿ ವೈರಲ್ ಆಗಿದೆ. ಆಗೆಲ್ಲಾ ನೆಟ್ಟಿಗರು ಆಕ್ರೋಶಗೊಂಡು ಪ್ರತಿಕ್ರಿಯಿಸಿದ್ದಾರೆ. ಆದರೆ ಈ ಟ್ವೀಟ್ಗೆ ಮಾತ್ರ ಸಾಕಷ್ಟು ಜನ ಕಿಡಿಕಾರಿದ್ದಾರೆ. ಹಲವರು ಪರವಾಗಿ ಮಾತನಾಡಿದರೆ, ಇನ್ನು ಕೆಲವರು ಸಾರ್ವಜನಿಕ ಪ್ರದೇಶದಲ್ಲಿ ಇಂಥಾ ವರ್ತನೆ ತೋರಿರುವ ಜೋಡಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೆಟ್ರೋ ಬಾಗಿಲು ಮುಚ್ಚಲು ಯುವಕರಿಂದ ಅಡ್ಡಿ, ಇಂಥ ವರ್ತನೆ ಸಹಿಸಲ್ಲ ಎಂದ ಡೆಲ್ಲಿ ಮೆಟ್ರೋ!
ಮೆಟ್ರೋ ಅಧಿಕಾರಿಗಳು ವಾರ್ನಿಂಗ್ ಮಾಡಿದರೂ ಜನರಿಂದ ಡೋಂಟ್ ಕೇರ್
ಒಬ್ಬ ಬಳಕೆದಾರರು 'ಅವರು ಮರಣದಂಡನೆ ಕೊಡುವಂಥಾ ಅಪರಾಧ ಮಾಡಿದ್ದಾರೆಯೇ?' ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು, 'ದೆಹಲಿಯಲ್ಲಿ ಹಾಡಹಗಲೇ ಮಹಿಳೆಯರು, ಮಕ್ಕಳ ಮೇಲೆ ಅತ್ಯಾಚಾರ ಕೊಲೆ ಪ್ರಕರಣಗಳು ನಡೆಯುತ್ತವೆ. ಆ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳಬೇಕು. ಅದಲ್ಲದೆ, ಇಂಥ ಸಣ್ಣಪುಟ್ಟ ಸಹಜ ಸಂಗತಿಗಳ ಬಗ್ಗೆ ಅಲ್ಲ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು 'ತಪ್ಪೇನಿಲ್ಲ, ಇದು ಸಹಜ, ನೀವು ಮತ್ತಷ್ಟು ಹೀಗೆ ಓಪನ್ ಆಗಿ ಕಿಸ್ ಮಾಡಿ. ಆಗಾಗ ಮಾಡುತ್ತಲೇ ಇರಿ. ಅವರು ನಿಮ್ಮ ಬಗ್ಗೆ ಇನ್ನಷ್ಟು ಅಸೂಯೆ ಪಡುವಂತಾಗಲಿ' ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು 'ಜೋಡಿಗೆ ಈ ರೀತಿ ರೋಮ್ಯಾನ್ಸ್ ಮಾಡಲು ಮೆಟ್ರೋದಲ್ಲಿ ಮಾತ್ರ ಜಾಗವಿರೋದಾ' ಎಂದು ಕಿಡಿ ಕಾರಿದ್ದಾರೆ. ಮತ್ತೊಬ್ಬರು 'ಮೆಟ್ರೋದಲ್ಲಿ ಜನರು ಪ್ರಯಾಣಿಸಲು ಇರಿಸುಮುರಿಸು ಪಡುವಂತಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು 'ಮೆಟ್ರೋದಲ್ಲಿ ಜನರು ಯಾಕೆ ಹೀಗೆ ಮುಜುಗರ ಪಡುವಂತೆ ವರ್ತಿಸುತ್ತಿದ್ದಾರೆ. ಸ್ವಲ್ಪ ಜವಾಬ್ದಾರಿಯುತವಾಗಿ ವರ್ತಿಸಬಾರದೇ' ಎಂದು ಪ್ರಶ್ನಿಸಿದ್ದಾರೆ. ಅದೇನೆ ಇರ್ಲಿ, ದೆಹಲಿ ಮೆಟ್ರೋದಲ್ಲಿ ಜನರ ವರ್ತನೆ ಸದ್ಯ ಎಲ್ಲರ ಕೆಂಗಣ್ಣಿಗೆ ಗುರಿಯಾಗ್ತಿರೋದಂತೂ ನಿಜ.
Scenes at adjacent to T2C14 towards HUDA City center pic.twitter.com/A2N9LuVQDE
— Bhagat S Chingsubam (@Kokchao)