
ಘಾಜಿಪುರ (ಜೂನ್ 21, 2023): ಪ್ರಧಾನಿ ಮೋದಿ ಕಾರಣಕ್ಕೆ ನವ ವಿವಾಹಿತ ವಧು ತನ್ನ ಪತಿಯನ್ನು ತಿರಸ್ಕರಿಸಿ ಆತನ ತಮ್ಮನನ್ನು ಮದುವೆಯಾಗಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವರನೊಬ್ಬನ ಕುಟುಂಬಸ್ಥರು, ರಾಜಕಾರಣಿ ಹಾಗೂ ದೇಶದ ಪ್ರಧಾನಿ ಬಗ್ಗೆ ಕೇಳಿದಾಗ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಹೇಳಲು ವಿಫಲವಾಗಿದ್ದಾನೆ. ಈ ಹಿನ್ನೆಲೆ ಹುಡುಗಿಯ ಕುಟುಂಬಸ್ಥರು ಅವನ ಬದಲು ನೀನೇ ಆಕೆಯನ್ನು ಮದುವೆಯಾಗು ಅಂತ ತಮ್ಮನಿಗೆ ಮದುವೆ ಮಾಡಿಸಿದ್ದಾರೆ ಎಂದು ವರದಿಯಾಗಿದೆ.
ಗಾಜಿಪುರ ಜಿಲ್ಲೆಯ ಸೈದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಆ ವ್ಯಕ್ತಿ ಮದುವೆಯಾದ ಕೂಡಲೇ, ಖಿಚಡಿ ಸಮಾರಂಭದಲ್ಲಿ, ವರನನ್ನು ಅವನ ಅತ್ತೆ ದೇಶದ ಪ್ರಧಾನಿಯ ಹೆಸರನ್ನು ಹೇಳುವಂತೆ ಕೇಳಿಕೊಂಡಳು. ನರೇಂದ್ರ ಮೋದಿಯವರ ಹೆಸರನ್ನು ಹೇಳಲು ಅವನಿಗೆ ಸಾಧ್ಯವಾಗದಿದ್ದಾಗ, ವಧುವಿನ ಸಂಬಂಧಿಕರು ಅವರನ್ನು 'ಅರೆಮನಸ್ಸಿನ' ವ್ಯಕ್ತಿ ಎಂದು ಪರಿಗಣಿಸಿದ್ದಾರೆ. ಅಲ್ಲದೆ, ಹುಡುಗನ ಕಿರಿಯ ಸಹೋದರನನ್ನು ಸ್ಥಳದಲ್ಲೇ ಆಕೆಯನ್ನು ಮದುವೆಯಾಗಲು ಒತ್ತಾಯಿಸಿದ್ದಾರೆ.
ಇದನ್ನು ಓದಿ: ನಕಲಿ ಆಧಾರ್ ಕಾರ್ಡ್ ಬಳಸಿ ವಯಸ್ಸು ನಂಬಿಸಿ ಮದ್ವೆ ಆದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ; ಸತ್ಯ ಬಯಲು!
ಈ ಹಿಂದೆ, ಸೈದ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಸಿರ್‌ಪುರ ಗ್ರಾಮದ ನಿವಾಸಿ ರಾಮ್ ಅವತಾರ್ ಅವರ ಪುತ್ರ ಶಿವಶಂಕರ್ (27) ಅವರ ವಿವಾಹ ಜೂನ್ 11 ರಂದು ಕರಂಡ ಪೊಲೀಸ್ ಠಾಣೆ ವ್ಯಾಪ್ತಿಯ ಬಸಂತ್ ಪಟ್ಟಿ ಗ್ರಾಮದ ಲಖೇದು ರಾಮ್ ಅವರ ಪುತ್ರಿ ರಂಜನಾ ಅವರೊಂದಿಗೆ ನಿಶ್ಚಯವಾಗಿತ್ತು. 6 ತಿಂಗಳ ಹಿಂದೆಯೇ ಮದುವೆ ನಿಶ್ಚಯವಾಗಿತ್ತು. ಅಂದಿನಿಂದ ಹುಡುಗ ಮತ್ತು ಹುಡುಗಿ ಮೊಬೈಲ್ ಮೂಲಕ ಪರಸ್ಪರ ಮಾತನಾಡುತ್ತಿದ್ದರು. ಅದರಂತೆ ಜೂನ್ 11ರಂದು ಮದುವೆ ನಡೆದಿದೆ.
ಇನ್ನು, ಈ ಸಂಬಂಧ ದೂರು ನೀಡಿರುವ ಹುಡುಗನ ತಂದೆ ರಾಮ್ ಅವತಾರ್, ಹುಡುಗಿಯ ಕುಟುಂಬಸ್ಥರು ತನ್ನ ಸೊಸೆಯನ್ನು ಮದುವೆಗೆ ಹಾಜರಾಗಲು ಹೋಗಿದ್ದ ತನ್ನ ಕಿರಿಯ ಮಗ ಅನಂತ್‌ಗೆ ಮದುವೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ತನ್ನ ಸೊಸೆಯ ಸಂಬಂಧಿಕರು ತನ್ನ ಕಿರಿಯ ಮಗನನ್ನು ಮದುವೆಯಾಗಲು ಆಕೆಯನ್ನು ಒತ್ತಾಯಿಸಿದ್ದಾರೆ ಎಂದೂ ಆರೋಪಿಸಿದರು.
ಇದನ್ನೂ ಓದಿ: ಮದ್ವೆ ವರಮಾಲೆಯನ್ನು ಏಸೀಬೇಡಿ, ಮತ್ತೇನು ಮಾಡ್ಬೇಕು ಇಲ್ ಕೇಳಿ!
ತನ್ನ ಸೊಸೆಯ ಕಡೆಯ ಜನರು ಇದ್ದಕ್ಕಿದ್ದಂತೆ ತನ್ನ ಮನೆಗೆ ಬಂದು ಅವಳನ್ನು 'ವಿದಾಯಕ್ಕೆ' ಕಳುಹಿಸುವಂತೆ ಒತ್ತಡ ಹೇರಲು ಪ್ರಾರಂಭಿಸಿದರು ಎಂದೂ ಹುಡುಗನ ತಂದೆ ಹೇಳಿದ್ದಾರೆ. ಆದರೆ, ಹುಡುಗನ ಮನೆಯವ್ರು ಸ್ಥಳಾಂತರವನ್ನು ನಿರಾಕರಿಸಿದಾಗ, ಅವರು ವಧುವನ್ನು ಬಲವಂತವಾಗಿ ಕರೆದೊಯ್ದರು. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: ನನ್ನ ಹುಡ್ಗಿ ಮೊಬೈಲೇ ಬಳಸಲ್ಲ, ಮದ್ವೆ ಆದ್ಮೇಲೆ ಎಲ್ರಿಗೂ ಆಗೋತರ ನಂಗು ಮಗು ಆಗುತ್ತೆ: ಒಳ್ಳೆ ಹುಡುಗ ಪ್ರಥಮ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.