Parenting Tips : ಮಕ್ಕಳ ವರ್ತನೆ ಬದಲಾಗ್ತಿದ್ಯಾ? ಏನಾಗಿರಬಹುದು ಪ್ರಾಬ್ಲಂ?

By Suvarna News  |  First Published Jun 21, 2023, 5:21 PM IST

ಮಕ್ಕಳನ್ನು ಮಕ್ಕಳಾಗಿ ನೋಡುವ ಬದಲು ಸ್ನೇಹಿತರಾಗಿ ನೋಡ್ಬೇಕು. ಅದು ಮಾಡು, ಇದು ಮಾಡು ಎನ್ನುತ್ತ ಭಯ ಹುಟ್ಟಿಸೋದ್ರಿಂದ ಮಕ್ಕಳು ಮತ್ತಷ್ಟು ಒರಟಾಗ್ತಾರೆ. ನಿಮ್ಮ ಮಕ್ಕಳಲ್ಲೂ ಈ ಲಕ್ಷಣ ಕಂಡು ಬಂದ್ರೆ ಬೇಗ ಎಚ್ಚೆತ್ತುಕೊಳ್ಳಿ.
 


ಮಕ್ಕಳ ಮನಸ್ಸು ಹಸಿಮಣ್ಣಿನ ಮುದ್ದೆಯಂತೆ. ಅದನ್ನು ಯಾವ ಆಕಾರಕ್ಕೆ ಬೇಕಾದರೂ ತರಬಹುದು. ಮಕ್ಕಳ ಮನಸ್ಸಿನಲ್ಲಿ ಒಳ್ಳೆಯದನ್ನು ಬಿತ್ತಿದರೆ ಒಳ್ಳೆಯ ಫಲವೇ ಸಿಗುತ್ತದೆ. ಹಾಗೆ ಕೆಟ್ಟದ್ದನ್ನು ತುಂಬಿದರೆ ಪರಿಣಾಮವೂ ಕೆಟ್ಟದಾಗೇ ಇರುತ್ತದೆ. ಮಕ್ಕಳ ಜೊತೆ ನಾವು ಪ್ರೀತಿಯಿಂದ ವರ್ತಿಸಿದಾಗ ಅವು ಕೂಡ ನಮ್ಮೊಂದಿಗೆ ಪ್ರೀತಿಯಿಂದಲೇ ಇರುತ್ತಾರೆ ಹಾಗೂ ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾರೆ.

ಮಕ್ಕಳ ಮನಸ್ಸು ನಿಷ್ಕಲ್ಮಶವಾಗಿರುತ್ತದೆ. ಅವರಲ್ಲಿ ಜಾತಿಮತದ ಭೇದಭಾವವಾಗಲೀ, ಇನ್ನೊಬ್ಬರಿಗೆ ಕೆಟ್ಟದ್ದನ್ನು ಮಾಡುವ ಯೋಚನೆಯಾಗಲೀ ಅಥವಾ ಮೋಸಮಾಡಬೇಕೆನ್ನುವ ಉದ್ದೇಶವಾಗಲೀ ಇರುವುದಿಲ್ಲ. ಹಾಗಾಗಿ ಹೆತ್ತವರು ಕೂಡ ಅಂತಹ ವಿಚಾರವನ್ನು ಅವರ ತಲೆಯೊಳಗೆ ತುಂಬಬಾರದು. ಮಕ್ಕಳು ತಮ್ಮ ಎಲ್ಲ ಆಸೆಗಳನ್ನು ತಂದೆ ತಾಯಿಯರ ಎದುರು ಹಂಚಿಕೊಳ್ಳುವಂತೆ ಮಾಡುವುದು ಪಾಲಕರ ಜವಾಬ್ದಾರಿಯಾಗಿದೆ. ಮಕ್ಕಳು ಪಾಲಕರ ಜೊತೆ ಹೆಚ್ಚು ಮಾತನಾಡುವುದರಿಂದ ಅವರನ್ನು ಅರ್ಥಮಾಡಿಕೊಳ್ಳುವುದು ಕೂಡ ಸುಲಭವಾಗುತ್ತದೆ.

Tap to resize

Latest Videos

Children Health: ಮಕ್ಕಳಿಗೆ ಟೀ, ಕಾಫಿ ಕುಡಿಸೋರು ಇದನ್ನೊಮ್ಮೆ ಓದಿ

ಮಕ್ಕಳ ಮನಸ್ಸು ಯಾವಾಗಲೂ ತೆರೆದ ಪುಸ್ತಕ (Book)ದಂತೆ ಇರಬೇಕು. ಒಂದು ಮಗು ತನಗೆ ಸಂಬಂಧಪಟ್ಟ ಯಾವುದೇ ವಿಷಯವನ್ನು ಮುಚ್ಚುಮರೆಯಿಲ್ಲದೇ ತಂದೆ ತಾಯಿಯರ ಬಳಿ ಹೇಳಬೇಕು. ಮಕ್ಕಳು ಪಾಲಕರ ಬಳಿ ವಿಷಯವನ್ನು ಗುಟ್ಟಾಗಿ ಇಡುವುದರಿಂದ ಸಮಸ್ಯೆಗಳು ಆರಂಭವಾಗುತ್ತದೆ. ಹಾಗೆ ಮುಚ್ಚುಮರೆ ಮಾಡುವ ಮಕ್ಕಳನ್ನು ಬೆಳೆಸುವುದು ಕೂಡ ಕಷ್ಟವೇ. ಹಾಗಾಗಿ ಪಾಲಕರು ಮಕ್ಕಳ ಜೊತೆ ಒಳ್ಳೆಯ ಫ್ರೆಂಡ್ ಆಗಿ ವ್ಯವಹರಿಸಬೇಕು. ಕೆಲವೊಮ್ಮೆ ಪಾಲಕರು ಎಷ್ಟೇ ಆತ್ಮೀಯವಾಗಿದ್ದರೂ ಮಕ್ಕಳು ಕೆಲವು ವಿಷಯಗಳನ್ನು ಗುಟ್ಟುಮಾಡುತ್ತಾರೆ, ಸುಳ್ಳು ಹೇಳುತ್ತಾರೆ. ಇಂತಹ ಸ್ವಭಾವ ಮಕ್ಕಳನ್ನು ತಪ್ಪು ದಾರಿಗೆ ಕರೆದೊಯ್ಯುತ್ತದೆ. ಅಂತಹ ಸಮಯದಲ್ಲಿ ತಂದೆ ತಾಯಂದಿರು ಜಾಗರೂಕರಾಗಿರಬೇಕು. ಮಕ್ಕಳ ವರ್ತನೆಯಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡುಬಂದರೆ ಅವರನ್ನು ತಿದ್ದಲೇಬೇಕು.
 
ಮಗು (Child)ವಿನ ನಡವಳಿಕೆಯಲ್ಲಿ ಬದಲಾವಣೆ :
ನಿಮ್ಮ ಮಗು ಯಾವಾಗಲೂ ಇರುವ ಹಾಗೆ ಇಲ್ಲ. ಅದರ ಸ್ವಭಾವ (Nature) ದಲ್ಲಿ ಏನೋ ಬದಲಾವಣೆ ಕಾಣಿಸುತ್ತಿದೆ, ಯಾವುದೋ ಸುಳ್ಳು ನೆಪ ಹೇಳುತ್ತಿದೆ ಎಂದರೆ ಆ ಮಗು ನಿಮ್ಮಿಂದ ಏನನ್ನೋ ಮುಚ್ಚಿಡುತ್ತಿದೆ ಎಂದರ್ಥ. ಅಂತಹ ಸಮಯದಲ್ಲಿ ಮಕ್ಕಳು ಸಣ್ಣ ಸಣ್ಣ ವಿಷಯಕ್ಕೂ ಕೋಪಮಾಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ಅವರು ಪಾಲಕರನ್ನು ಇಗ್ನೋರ್ ಮಾಡಲು ಆರಂಭಿಸುತ್ತಾರೆ. ನಿದ್ದೆ ಬರುತ್ತಿದೆ ಎಂದೋ ಅಥವಾ ಇನ್ಯಾವುದೋ ಕುಂಟು ನೆಪ ಹೇಳಿ ಪಾಲಕರಿಂದ ನುಣುಚಿಕೊಳ್ಳುತ್ತಾರೆ. ನಿಮ್ಮ ಮಗುವಿನಲ್ಲೂ ಇಂತಹ ಬದಲಾವಣೆ ಕಂಡುಬಂದರೆ ಅದರೊಂದಿಗೆ ಪ್ರೀತಿಯಿಂದ ವ್ಯವಹರಿಸಿ ವಿಷಯ ಏನು ಎನ್ನುವುದನ್ನು ತಿಳಿದುಕೊಳ್ಳಿ. ಆನಂತರ ಅದಕ್ಕೆ ಸೂಕ್ತ ಪರಿಹಾರ ಕೊಡಿ.

ಈ ರಾಶಿಯವರು ಅತ್ಯಂತ ರೊಮ್ಯಾಂಟಿಕ್...

ಕಣ್ಣಲ್ಲಿ ಕಣ್ಣಿಟ್ಟು ಮಾತನಾಡೊಲ್ಲ : ಮನುಷ್ಯ ತಪ್ಪು ಮಾಡಿದಾಗ ಇನ್ನೊಬ್ಬರ ಎದುರಿನಲ್ಲಿ ನಿಂತು ಧೈರ್ಯವಾಗಿ ಮಾತನಾಡಲು ಹಿಂಜರಿಯುತ್ತಾನೆ. ಹಾಗೆಯೇ ಮಕ್ಕಳು ಕೂಡ ತಾವು ತಪ್ಪು ಮಾಡಿದಾಗ ಪಾಲಕರ ಎದುರು ನಿಂತು ಮಾತನಾಡಲು ಹಿಂದೇಟು ಹಾಕುತ್ತಾರೆ. ನಾವು ಮಾಡಿದ ತಪ್ಪಿಗೆ ಪಾಲಕರು ನಮಗೆ ಗದರುತ್ತಾರೆ, ಹೊಡೆಯುತ್ತಾರೆ ಎನ್ನುವ ಹೆದರಿಕೆ ಅವರಿಗೆ ಇರುತ್ತದೆ. ಅಂತಹ ಸಮಯದಲ್ಲಿ ಅವರು ಮನೆಯವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ತಾನು ತಪ್ಪು ಮಾಡಿದ್ದೇನೆ ಎನ್ನುವ ಅಪರಾಧಿ ಮನೋಭಾವ ಇರುವುದರಿಂದ ಅವರಿಗೆ ಹಾಗೆ ಮಾತನಾಡುವ ಧೈರ್ಯ ಇರುವುದಿಲ್ಲ. 

ಹೆಚ್ಚು ಬೆವರುತ್ತಾರೆ : ನಮಗೆ ಹೆಚ್ಚು ಟೆನ್ಶನ್ (Tension) ಆದಾಗ ಶರೀರ ಹೆಚ್ಚು ಬೆವರುತ್ತದೆ. ಮಕ್ಕಳು ತಂದೆ ತಾಯಿಯ ಬಳಿ ಯಾವ ವಿಷಯವನ್ನಾದರೂ ಮುಚ್ಚಿಟ್ಟರೆ ಆಗ ಅವರು ಹೆಚ್ಚು ಬೆವರುತ್ತಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಆದರೆ ಈ ಮಾತು ಎಲ್ಲ ಮಕ್ಕಳಿಗೂ ಅನ್ವಯಿಸುತ್ತದೆ ಎನ್ನುವುದು ಸುಳ್ಳಾಗಿರಲೂಬಹುದು. ಮಕ್ಕಳು ಕೆಟ್ಟ ಕೆಲಸ ಮಾಡಿದಾಗ ಅವರಲ್ಲಿ ತಾನು ಮಾಡಿದ್ದು ತಪ್ಪು ಎನ್ನುವ ಗಿಲ್ಟ್ ಫೀಲಿಂಗ್ಸ್ ಅವರನ್ನು ಬೆವರುವಂತೆ ಮಾಡಬಹುದು. ತನ್ನ ತಪ್ಪು ಎಲ್ಲರ ಎದುರು ಬಹಿರಂಗವಾದರೆ ಪಾಲಕರು ನನ್ನನ್ನು ಕ್ಷಮಿಸುವುದಿಲ್ಲ ಎನ್ನುವ ಭಯದಿಂದಲೇ ಅವರ ಮೈ ಹೆಚ್ಚು ಬೆವರುತ್ತದೆ.
 

click me!