ಇದು ಅಂಜು ಲವ್ಸ್ ನಾಸ್ರುಲ್ಲಾ; ಪ್ರೀತಿಗಾಗಿ ಪಾಕಿಸ್ತಾನಕ್ಕೆ ಹಾರಿದ ಭಾರತದ ಯುವತಿಯ ಕಹಾನಿ!

By Suvarna News  |  First Published Jul 23, 2023, 10:23 PM IST

ಸೀಮಾ ಹೈದರ್ ತನ್ನ ಪ್ರೀತಿಯ ಇನಿಯನಿಗಾಗಿ ಪಾಕಿಸ್ತಾನದಿಂದ ಅಕ್ರಮವಾಗಿ ಭಾರತಕ್ಕೆ ಬಂದ ಕತೆ ನೀವು ಕೇಳಿಬರಹುದು.ಅದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಭಾರತದ ಅಂಜು ಅನ್ನೋ ಯುವತಿ ಫೇಸ್‌ಬುಕ್ ಮೂಲಕ ಪರಿಚಯವಾದ ಪಾಕಿಸ್ತಾನದ ನಾಸ್ರುಲ್ಲಾಗಾಗಿ ಪಾಕಿಸ್ತಾನಕ್ಕೆ ತೆರಳಿದ್ದಾಳೆ.


ನವದೆಹಲಿ(ಜು.23) ಪಬ್‌ಜಿ ಮೂಲಕ ಪರಿಚಯವಾಗಿ ಗಂಡನ ಬಿಟ್ಟು, ತನ್ನ ಮಕ್ಕಳೊಂದಿಗೆ ಪಾಕಿಸ್ತಾನದ ಸೀಮಾ ಹೈದರ್ ಅಕ್ರಮವಾಗಿ ಭಾರತ ಪ್ರವೇಶಿದ  ಘಟನೆ ಭಾರಿ ಸಂಚಲನ ಸೃಷ್ಟಿಸಿದೆ. ಪಬ್‌ಜಿಯಲ್ಲಿ ಚಿಗುರೊಡೆದ ಪ್ರೀತಿಗಾಗಿ ಭಾರತಕ್ಕೆ ಬಂದ ಸೀಮಾ ಹೈದರ್ ಮಾಧ್ಯದಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಇದರ ನಡುವೆ ಇದೇ ರೀತಿಯ ರಿವರ್ಸ್ ಘಟನೆ ನಡೆದಿದೆ. ಫೇಸ್‌ಬುಕ್ ಮೂಲಕ ಪರಿಚಯವಾಗಿ, ಪರಿಚಯ ಪ್ರೀತಿಯಾಗಿ ಇದೀಗ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು ಭಾರಿ ಸಂಚಲನ ಸೃಷ್ಟಿಸಿದ್ದಾಳೆ. ಆದರೆ ಸೀಮಾ ಹೈದರ್ ಹಾಗೂ ಅಂಜು ಲವ್ ಸ್ಟೋರಿಯಲ್ಲಿ ಮಹತ್ವದ ವತ್ಯಾಸವೊಂದಿದೆ. ಅದೇನೆಂದರೆ ಸೀಮಾ ಹೈದರ್ ಅಕ್ರಮವಾಗಿ ಭಾರತ ಪ್ರವೇಶಿಸಿದರೆ, ಅಂಜು, ಎಲ್ಲಾ ದಾಖಲೆ ಪತ್ರ ನೀಡಿ ವೀಸಾ ಪಡೆದು ಪಾಕಿಸ್ತಾನಕ್ಕೆ ತೆರಳಿದ್ದಾಳೆ.

ಪಾಕಿಸ್ತಾನದ ಖೈಬರ್ ಪಕ್ತಾಂಕ್ವಾ ಪ್ರಾಂತ್ಯದ ನಿವಾಸಿಯಾಗಿರುವ ನಾಸ್ರುಲ್ಲಾ ಹಾಗೂ ಭಾರತದ ಅಂಜು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾರೆ. ಕೆಲ ದಿನಗಳ ಪರಿಚಯ ಪ್ರೀತಿಗೆ ತಿರುಗಿದೆ. ಪ್ರೀತಿ ಗಾಢವಾಗಿದೆ. ವರ್ಚುವಲ್ ಮೂಲಕವೇ ರೋಮ್ಯಾನ್ಸ್ ಶುರುವಾಗಿದೆ. ಇವರಿಬ್ಬರ ಸಂಬಂಧ, ಭಾರತ ಹಾಗೂ ಪಾಕಿಸ್ತಾನ ಸಂಬಂಧಕ್ಕಿಂತ ಗಟ್ಟಿಯಾಗಿ ಬೇರೂರಿದೆ. ಹೀಗಾಗಿ ಅಂತರ, ಎರಡು ರಾಷ್ಟ್ರಗಳ ಸಂಬಂಧ ಬಗ್ಗೆ ತಲೆಕೆಡಿಸಿಕೊಳ್ಳದ ಅಂಜು, ತನ್ನ ಇನಿಯನಿಗಾಗಿ ಪಾಕಿಸ್ತಾನಕ್ಕೆ ತೆರಳಲು ನಿರ್ಧರಿಸಿದ್ದಾಳೆ.

Tap to resize

Latest Videos

ಲೈಲಾ-ಮಜ್ನು ಗೊತ್ತಲ್ವಾ ಹಂಗೆ ನಾವು, ಅಕ್ಷಯ್‌-ಆಲಿಯಾ ಭಾರತದಲ್ಲಿ ಇರ್ತಾರೆ ಅಂದ್ರೆ ನನಗ್ಯಾಕೆ ಸಾಧ್ಯವಿಲ್ಲ!

ಇತ್ತ ನಾಸ್ರುಲ್ಲಾ ಪಾಕಿಸ್ತಾನಕ್ಕೆ ಆಗಮಿಸುವಂತೆ ಮನವಿ ಮಾಡಿದ್ದಾನೆ. ಬದುಕಿದರೆ ನಾಸ್ರುಲ್ಲಾ ಜೊತೆ ಮಾತ್ರ ಬದುಕುವುದಾಗಿ ನಿರ್ಧರಿಸಿದ ಅಂಜು, ನೇರವಾಗಿ ಎಲ್ಲಾ ದಾಖಲೆ ಪತ್ರ  ಸಲ್ಲಿಸಿ ಪಾಕಿಸ್ತಾನಕ್ಕೆ ತೆರಳಲು ವೀಸಾಗೆ ಅರ್ಜಿ ಹಾಕಿದ್ದಾಳೆ. ಜೂನ್ 21ಕ್ಕೆ ಅಂಜು ಪಾಕಿಸ್ತಾನಕ್ಕೆ ತೆರಳಲು ಅರ್ಜಿ ಹಾಕಿದ್ದಾಳೆ. ವೀಸಾ ಕೈಸೇರುತ್ತಿದ್ದಂತೆ ಅಂಜು ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಪೋಷಕರು, ಕುಟಂಬಸ್ಥರು, ಜೊತೆಗೆ ಭಾರತಕ್ಕೆ ಗುಡ್ ಬೈ ಹೇಳಿ ಸುಂದರ ಬದುಕು ಕಟ್ಟಿಕೊಳ್ಳಲು ಪಾಕಿಸ್ತಾನಕ್ಕೆ ತೆರಳಿದ್ದಾಳೆ.

ಎಲ್ಲಾ ದಾಖಲೆಯೊಂದಿಗೆ ಪಾಕಿಸ್ತಾನಕ್ಕೆ ತೆರಳಿದ ಅಂಜುವನ್ನು ಭದ್ರತಾ ಅಧಿಕಾರಿಗಳ ಹಲವು ಸುತ್ತಿನ ವಿಚಾರಣೆ ನಡೆಸಿದ್ದಾರೆ. ಸದ್ಯ ನಾಸ್ರುಲ್ಲಾ ಭೇಟಿಯಾಗಿರುವ ಅಂಜು ಮದುವೆಯಾಗಲು ನಿರ್ಧರಿಸಿದ್ದಾಳೆ. ಆದರೆ ಕೆಲ ಸುತ್ತಿನ ವಿಚಾರಣೆ ಬಾಕಿ ಇರುವುದರಿಂದ ಮದುವೆ ಮುಂದೂಡಲಾಗಿದೆ. 

'ಝೀಂಗೂರ್‌ ಸಾ ಲಡ್ಕಾ..' ಸಚಿನ್‌-ಸೀಮಾ ಲವ್‌ಸ್ಟೋರಿ ರೋಸ್ಟ್‌ ಮಾಡಿದ ನೆರೆಮನೆಯ ಆಂಟಿ!

ಭಾರತಕ್ಕೆ ಬಂದ ಸೀಮಾ ಹೈದರ್ ಕತೆ ಕೊಂಚ ಭಿನ್ನ. ಕಾರಣ ಸೀಮಾ ಹೈದರ್,ಪಾಕಿಸ್ತಾನದಿಂದ ನೇರವಾಗಿ ನೇಪಾಳಕ್ಕೆ ತೆರಳಿದ್ದಾಳೆ. ಬಳಿಕ ಭಾರತದ ಪ್ರೀತಿಯ ಇನಿಯ ಸಚಿನ್ ನೇಪಾಳದಲ್ಲಿ ಒಂದು ವಾರ ತಂಗಿದ್ದಾರೆ. ಇದಾದ ಬಳಿಕ ಸೀಮಾ ಹೈದರ್ ಯಾವುದೇ ದಾಖಲೆ, ವೀಸಾ ಇಲ್ಲದೆ ಭಾರತ ಪ್ರವೇಶಿಸಿದ್ದಾಳೆ. ಸೀಮಾ ಹೈದರ್ ತನ್ನ ಪತಿಯನ್ನು ಬಿಟ್ಟು ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ್ದಾಳೆ. 

click me!