ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್, ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ ಅನ್ನೋ ಭಕ್ತಿಗಾನ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದನ್ನು ಹಾಡಿರುವ ಪುಟಾಣಿಯ ಬಗ್ಗೆ ಮಾಹಿತಿ ಇಲ್ಲಿದೆ.
ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಕಂದಮ್ಮ ಹಾಡ್ತಿರೋ ಸುಂದರ ಹಾಡೊಂದು ಫುಲ್ ವೈರಲ್ ಆಗ್ತಿದೆ. ಓಡಿ ಓಡಿ ಬಂದು ಹಣೆಗೆ ನೀಡಿ ನೀನೆ ಡಿಡಿಕ್ಕ್, ಡಿಡಿಕ್ಕ್ ಡಿಡಿಕ್ಕ್ ಡಿಡಿಕ್ಕ್ ಎಂದು ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ ಅನ್ನೋ ಭಕ್ತಿಗಾನವನ್ನು ಮುದ್ದಾದ ಬಾಲಕಿ ತನ್ಮಯವಾಗಿ ಹಾಡುತ್ತಿರುವುದು ಮೈ ಮರೆತು ಕೇಳುವಂತೆ ಮಾಡುತ್ತದೆ. ಮಗುವಿನ ಹಾವ-ಭಾವ ಮನ ಮುಟ್ಟುತ್ತದೆ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೂ ಗೊತ್ತಾಗಿರಬಹುದು. ಈಕೆಯ ಹೆಸರು ಶಾಲ್ಮಲಿ. ಈ ಹಿಂದೆ 'ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತ' ಅನ್ನೋ ಹಾಡಿನ ಮೂಲಕ ವೈರಲ್ ಆಗಿದ್ದ ಪುಟಾಣಿ.
ಆಕೆಯ ನಗು, ಖುಷಿಯಾಗಿರುವ ಕಣ್ಣುಗಳು, ಒಂದೇ ಕೈಯಿಂದ ಪುಟ್ಟ ಪುಟ್ಟ ಬೆರಳುಗಳಲ್ಲಿ ಪಿಯಾನೋವನ್ನು ಶುದ್ಧವಾಗಿ ನುಡಿಸುತ್ತಿರುವ ಆ ವಿಡಿಯೋ ಹಾಗೂ ಅದರಲ್ಲಿನ ಹಾಡಿನ ಮಾಧುರ್ಯ ಎಲ್ಲರ ಗಮನ ಸೆಳೆದಿತ್ತು. ವಿಡಿಯೋವನ್ನು ನೋಡಿದವರು ಖಂಡಿತವಾಗಿ ಒಂದು ಬಾರಿಯಲ್ಲ, ಹೆಚ್ಚು ಸಲ ನೋಡಿ ನೋಡಿ ಖುಷಿ ಪಟ್ಟಿದ್ದುದೂ ಇದೆ. ಜನಮಾನಸದಲ್ಲಿ ಸಂತಸದ ಅಲೆ ಮೂಡಿಸಿದ್ದ ಬಾಲಕಿಯ ಹಾಡನ್ನು ಪ್ರಧಾನಿ ಮೋದಿ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. 'ಈ ವಿಡಿಯೋ ಪ್ರತಿಯೊಬ್ಬರ ಮುಖದಲ್ಲಿ ನಗುವನ್ನು ಮೂಡಿಸುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಕ್ರಿಯಾಶೀಲತೆ ಈ ಬಾಲಕಿಯಲ್ಲಿದೆ. ಬೆಸ್ಟ್ ವಿಶಸ್ ಟು ಶಾಲ್ಮಲೀʼ ಎಂದು ಬರೆದುಕೊಂಡಿದ್ದರು.
undefined
Viral Video: ಪ್ರಧಾನಿಯಿಂದಲೂ ಶೇರ್ ಆಯ್ತು ಪುಟ್ಟ ಬಾಲಕಿ ಶಾಲ್ಮಲಿಯ 'ಪಲ್ಲವಗಳ ಪಲ್ಲವಿಯಲಿ'
ಈಗಾಗಲೇ 'ಹತ್ತೂರ ಒಡೆಯ ', ದಾಸಾಮೃತಸಾರ ಎನ್ನುವ ಹಾಡಿನ ಮೂಲಕ ಮತ್ತು ಪ್ರಖ್ಯಾತ ಗಾಯಕ ಮಹೇಶ್ ಕಾಳೆ ಅವರ ರಿಲ್ಸ್ ಗೆ ರಿಮಿಕ್ಸ್ ಮಾಡುವ ಮೂಲಕ ಶಾಲ್ಮಲಿ ಮೆಚ್ಚುಗೆ ಪಡೆದುಕೊಂಡಿದ್ದಳು. ಜೊತೆಗೆ ಕೀಬೋರ್ಡ್ ವಾದನದಿಂದ ಜನರ ಪ್ರೀತಿಗೆ ಪಾತ್ರಳಾಗಿದ್ದ ಈ ಪುಟ್ಟ ಹುಡುಗಿ ಸದ್ಯ ಇನ್ನೊಂದು ಇಂಪಾದ ಭಕ್ತಿಗಾನವನ್ನು ಹಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಡಿ ಡೀ ಆಡ್ಯಾನೆ ರಂಗಾ ಡಿ ಡೀ ಆಡ್ಯಾನೆ ಅನ್ನೋ ಭಕ್ತಿಗಾನ ಎಲ್ಲೆಡೆ ವೈರಲ್ ಆಗ್ತಿದೆ. ಸುಂದರವಾದ ಹಾಡು ಎಲ್ಲರ ಮನಗೆದ್ದಿದೆ. ಜನರು ಮೆಚ್ಚುಗೆಯನ್ನು ಸೂಚಿಸಿ ಕಾಮೆಂಟ್ ಮಾಡಿದ್ದಾರೆ. 'ಎಷ್ಟು ಮುದ್ದಾಗಿ ಹಾಡಿದೀಯ ಕಂದಾ...ನಿನ್ನ ಹೆತ್ತವರು ಪುಣ್ಯವಂತರು.. ನಿನ್ನ ಹಾಡು ಕೇಳಿ ರಂಗನೇ ಓಡಿ ಬರುವನು' ಎಂದು ಒಬ್ಬರು ಕಮೆಂಟಿಸಿದ್ದಾರೆ. ಇನ್ನೊಬ್ಬರು, 'ನೀನು ಹಾಡಿದ್ದಕ್ಕೆ ಈ ಸಾಂಗ್ ಇಷ್ಟು ಚೆನ್ನಾಗಿದೆಯಾ ಅಥವಾ ನಿನ್ನಿಂದಲೇ ಹಾಡು ಚೆನ್ನಾಗೆ ಆಗಿದೆಯಾ ಗೊತ್ತಿಲ್ಲ. ತುಂಬಾ ಚೆನ್ನಾಗಿ ಹಾಡಿದ್ದೀಯ ಪುಟ್ಟ' ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ 'ಅದ್ಭುತ ಪದಗಳೇ ಸಿಗುತ್ತಿಲ್ಲ ನಿನ್ನ ಹೊಗಳೋಕೆ' ಎಂದಿದ್ದಾರೆ. ಮತ್ತೊಬ್ಬರು 'ಮುಗ್ಧತೆ ಮತ್ತು ಭಕ್ತಿ - ಭಾವ, ಲಯದಲ್ಲಿ ಸೇರಿಕೊಂಡಾಗ ಈ ರೀತಿ ಹೊಮ್ಮುತ್ತದೆ . ಆ ರಂಗನ ಕೃಪೆ ಸದಾ ನಿನ್ನ ಮೇಲಿರಲಿ' ಎಂದು ಹಾರೈಸಿದದ್ದಾರೆ. ಒಟ್ನಲ್ಲಿ ಕಾಮೆಂಟ್ಸ್ ಬಾಕ್ಸ್ ಹಾಡಿನ ಕುರಿತಾಗಿರುವ ಜನರ ಪ್ರೀತಿಯಿಂದ ಉಕ್ಕಿ ಹರಿದಿದೆ.
ಕೋಯಿ ಲಡ್ಕಿ ಹೈ... ಹಿಂದಿ ಹಾಡಿಗೆ ತಾತನ ಬಿಂದಾಸ್ ಡಾನ್ಸ್: ನೆಟ್ಟಿಗರೂ ಫಿದಾ
ಇನ್ನೊಂದೆಡೆ ಅಮ್ಮನಿಗೆ ಸಂಗೀತ ಹೇಳಿಕೊಡುತ್ತಿರುವ ಶಾಲ್ಮಲಿ ವಿಡಿಯೋ ಸಹ ವೈರೆಲ್ ಆಗಿದ್ದು ಆಕೆಯ ಸಂಗೀತ ಜ್ಞಾನಕ್ಕೆ ಜನ ಭೇಷ್ ಅಂದಿದ್ದಾರೆ. ವೀಡಿಯೋದಲ್ಲಿ ಪುಟಾಣಿ ಅಮ್ಮನಿಗೇ ಸಂಗೀತ ಹೇಳಿ ಕೊಡುತ್ತಿರುವುದನ್ನು ನೋಡಬಹುದು. ನೀರು ಕುಡಿಯುತ್ತಾ ಇರುವ ಬಾಲಕಿ ಮೊದಲು ಹಾಡುತ್ತಾ, ತಾಯಿ ಅದನ್ನು ಅನುಸರಿಸಿದಾಗ ಹಾಗಲ್ಲ, ಇಲ್ಲಿ ಹಮ್ಮಿಂಗ್ ಕೊಡಬೇಕು ಎಂದು ಸ್ವರ ವ್ಯತ್ಯಾಸವನ್ನು ಹೇಳುತ್ತಾ ಬರುತ್ತಾಳೆ. ಎಲ್ಲಿ ವಾಯ್ಸ್ ಡೌನ್ ಆಗಬೇಕು ಎಂದು ವಿವರಿಸುತ್ತಾಳೆ. ಈಗಾಗಲೇ ಈ ವಿಡಿಯೋ ವನ್ನು ಸಾವಿರಾರು ಜನರು ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಕಾಮೆಂಟ್ ಸಹ ಮಾಡಿದ್ದಾರೆ.
ಆಕೆಯ ಸಂಗೀತ ಜ್ಞಾನಕ್ಕೆ ದೊಡ್ಡ ದೊಡ್ಡ ಸಂಗೀತಗಾರರು ಕೆಮೆಂಟ್ ಮಾಡಿ ಆಕೆಗೆ ಮೆಚ್ಚುಗೆ ನೀಡಿದ್ದಾರೆ. ಅಮ್ಮ ತಪ್ಪು ಮಾಡಿದ್ದನ್ನು ಸರಿಪಡಿಸಿ, ಈ ರೀತಿ ಹಾಡು ಎಂದು ತನ್ನ ಮಧುರ ಕಂಠದಿಂದ ಹಾಡಿ ತೋರಿಸುತ್ತಿರುವ ವಿಡಿಯೋ ಈಗಾಗಲೇ ಜನರ ಮನ ಗೆದ್ದಿದೆ. 'ಮೋಮ್ಮೀಸ್ ಲಿಟಲ್ ಮ್ಯೂಸಿಕ್ ಟೀಚರ್' ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಸೋ ಕ್ಯೂಟ್, ಗಾಡ್ ಬ್ಲೆಸ್, ಪುಟ್ಟ ಶಾರದೆಗೆ ಜನ್ಮ ನೀಡಿರುವ ತಂದೆ ತಾಯಿ ಕೋಟಿ ಕೋಟಿ ನಮನಗಳು ಎಂದೆಲ್ಲಾ ಕಮೆಂಟಿಸಿದ್ದಾರೆ.