ಪ್ರೀತಿಯ ಬಗ್ಗೆ ಸರಿಯಾಗಿ ತಿಳಿದಾಗ ಮಾತ್ರ ಜೀವನ ಹಸನಾಗಲು ಸಾಧ್ಯ. ದಾಂಪತ್ಯ ದೀರ್ಘಕಾಲ ಸಂತೋಷವಾಗಿ ಇರಬೇಕೆಂದ್ರೆ ತೋರಿಕೆ, ನಾಟಕಕ್ಕಿಂತ ಅರ್ಥ ಮಾಡಿಕೊಳ್ಳುವುದು ಮುಖ್ಯ. ಉಸಿರುಗಟ್ಟಿಸುವ ಪ್ರೀತಿಗಿಂತ ಸ್ವಚ್ಛಂದ ದಾಂಪತ್ಯದಲ್ಲಿ ಸುಖ ಹೆಚ್ಚು.
ಈಗಿನ ಧಾರಾವಾಹಿಗಳು ಬರೀ ಅತ್ತೆ – ಸೊಸೆ ಜಗಳ, ಎರಡು ಮದುವೆ ಜೊತೆ ಮತ್ತೊಂದು ಪ್ರೀತಿಗೆ ಸೀಮಿತವಾಗ್ತಿಲ್ಲ. ಜನರ ಬದುಕಿಗೆ ಅಗತ್ಯವಿರುವ ಅನೇಕ ವಿಷ್ಯಗಳನ್ನು ಹೇಳ್ತಿವೆ. ಅದಕ್ಕೆ ಎಲ್ಲರ ಮೆಚ್ಚಿಗೆ ಗಳಿಸಿರುವ ಅಮೃತಧಾರೆ ಧಾರಾವಾಹಿ ಕೂಡ ಸೇರಿದೆ. ಈ ಧಾರಾವಾಹಿಯಲ್ಲಿ ಗಂಡ-ಹೆಂಡತಿ ಬಾಂಡಿಂಗ್, ಒಳ್ಳೇ ರಿಲೇಶನ್‌ಶಿಪ್ ಅಂದ್ರೇನು ಅಂತ ಸದ್ಯಕ್ತಂತೂ ತೋರಿಸುತ್ತಿದೆ.
ಗೌತಮ್ ಹಾಗೂ ಭೂಮಿಕಾ, ಮಹಿಮಾ – ಜೀವನ್ ಜೊತೆ ಡಿನ್ನರ್ (Dinner) ಡೇಟ್ ಗೆ ಹೋಗಿರ್ತಾರೆ. ಮಹಿಮಾ – ಜೀವನ್ ಹತ್ತಿರ ಇರೋದನ್ನು ಗೌತನ್ ಸಹಿಸಲಾರ. ಆದ್ರೆ ಭೂಮಿಕಾ ಆ ಜೋಡಿಯನ್ನು ಮೆಚ್ಚಿಕೊಂಡಿದೆ. ಡಿನ್ನರ್‌ಗೆ ಬಂದ ಗೌತಮ್ ಕ್ರಿಕೆಟ್ ನೋಡೋಕೆ ಹೋದ್ರೆ, ಭೂಮಿಕಾ ಪುಸ್ತಕ ಓದುತ್ತಾ ತನ್ನದೇ ಪ್ರಪಂಚದಲ್ಲಿ ತಲ್ಲೀನಳಾಗಿದ್ದಾಳೆ. ಇವರಿಬ್ಬರನ್ನು ನೋಡಿದ ಮಹಿಮಾ, ಬೇಸರ ವ್ಯಕ್ತಪಡಿಸ್ತಾಳೆ. ಇವರಿಬ್ಬರ ಮಧ್ಯೆ ಪ್ರೀತಿ (Love) ಯೇ ಇಲ್ಲ ಅಂತಾಳೆ. ಆಗ ಪ್ರೀತಿ ಬಗ್ಗೆ ವಿವರಿಸಿದ ಜೀವಾ, ಪ್ರೀತಿಗೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಷ್ಯಗಳನ್ನು ಹೇಳಿದ್ದು, ಪ್ರೇಕ್ಷಕರಿಗೂ ಯೋಚಿಸುವಂತೆ ಮಾಡಿದೆ.
ಸುಮ್ ಸುಮ್ಮನೆ ಮಕ್ಕಳನ್ನು ಕುಟುಕಬೇಡಿ, ತಮ್ಮ ಕೆಲಸ ತಾವೇ ಮಾಡಿಕೊಳ್ಳುವಂತೆ ಮಾಡಿ!
ಸಾಮಾನ್ಯವಾಗಿ ಮದುವೆ (Marriage) ಬೇಡ ಎಂದು ದೂರವಿದ್ದವರು ಮದುವೆ ಮಾಡಿಕೊಳ್ಳಲು ನಿರ್ಧರಿಸಿದಾಗ, ಇಲ್ಲವೇ ಮದುವೆ ವಯಸ್ಸು ಮೀರಿದ ಮೇಲೆ ದಾಂಪತ್ಯ ಜೀವನಕ್ಕೆ ಕಾಲಿಡುವ ನಿರ್ಧಾರ ಕೈಗೊಂಡವರು ಯಾವುದೇ ಮುಂದಾಲೋಚನೆ ಇಲ್ಲದೆ ಅಥವಾ ಬೇರೆಯವರ ಮಾತು ಕೇಳಿ ತೀರ್ಮಾನಕ್ಕೆ ಬಂದಿರೋದಿಲ್ಲ. ಸಾಕಷ್ಟು ಆಲೋಚನೆ ಮಾಡಿ ತೀರ್ಮಾನ ಕೈಗೊಂಡಿರುತ್ತಾರೆ. ಹಾಗಾಗಿ ಅವರಿಬ್ಬರ ಮಧ್ಯೆ ಪ್ರೀತಿ ಇಲ್ಲ ಅಂತಾ ಹೇಳಲಾಗೋಲ್ಲ.
ವ್ಯಕ್ತಿ ತನ್ನಿಷ್ಟದ ಜಾಗದಲ್ಲಿ ಖುಷಿಯಾಗಿದ್ದಾನೆ ಅಂದ್ರೆ ಆತನಿಗೆ ಸಂಗಾತಿ ಮೇಲೆ ಪ್ರೀತಿ ಇಲ್ಲ ಎಂದಲ್ಲ. ದಂಪತಿ ದೂರ ದೂರ ಕುಳಿತು ಅವರದೇ ಲೋಕದಲ್ಲಿದ್ದಾಗ ಅವರನ್ನು ದೂರದಿಂದ ನೋಡಿದ ನಾವು, ಅವರಿಬ್ಬರ ಮಧ್ಯೆ ಪ್ರೀತಿ ಇಲ್ಲ ಎಂಬ ತೀರ್ಮಾನಕ್ಕೆ ಬರೋದು ತಪ್ಪು. ಅವರಿಬ್ಬರ ಮಧ್ಯೆ ಬಾಂಡಿಂಗ್ ಚೆನ್ನಾಗಿಯೇ ಇರಬಹುದು. ಅದನ್ನು ಎಲ್ಲರಿಗೂ ತೋರಿಸಿ ಹೇಳ್ಬೇಕಾಗಿಲ್ಲ.ಫಿಸಿಕಲ್ ಸಾಮೀಪ್ಯಕ್ಕಿಂತ, ಮಾನಸಿಕ ಸಾಮೀಪ್ಯ ದಾಂಪತ್ಯದಲ್ಲಿ ಹೆಚ್ಚು ಇಂಪಾರ್ಟೆಂಟ್ ಅನ್ನೋ ಜೀವನ ಮಾತು, ಎಲ್ಲ ದಾಂಪತ್ಯಕ್ಕೂ ಅನ್ವಯಿಸುತ್ತೆ.
ಈಗಿನ ಕಾಲದಲ್ಲಿ ಒಟ್ಟಿಗೆ ಕುಳಿತು, ಸಾರ್ವಜನಿಕ ಸ್ಥಳದಲ್ಲಿ ಅಪ್ಪಿ, ಮುತ್ತಿಟ್ಟರೆ, ಕೈ ಕೈ ಹಿಡಿದು ಸುತ್ತಾಡಿದ್ರೆ ಅದನ್ನು ಪ್ರೀತಿ ಎಂದುಕೊಳ್ತಾರೆ. ಆದ್ರೆ ಹಿಂದೆ ಹಾಗಿರಲಿಲ್ಲ. ರಾತ್ರಿ ಮಾತ್ರ ಸಂಗಾತಿ ಮುಖ ನೋಡ್ತಿದ್ದ ಪತಿ ಹಾಗೂ ಪತ್ನಿ ಇಬ್ಬರ ಮಧ್ಯೆ ವಿಶೇಷ ಬಾಂಡಿಂಗ್ ಇರ್ತಿತ್ತು. ಇಬ್ಬರು ಒಟ್ಟಿಗೆ ಸುತ್ತಾಡದೆ ಇದ್ರೂ, ಸಾರ್ವಜನಿಕ ಪ್ರದೇಶದಲ್ಲಿ ಮುತ್ತಿಡದೆ ಇದ್ರೂ, ಪರಸ್ಪರರ ಅಗತ್ಯತೆ, ಆಸಕ್ತಿ ಬಗ್ಗೆ ತಿಳುವಳಿಕೆ ಇರ್ತಿತ್ತು. ಇಬ್ಬರ ಮಧ್ಯೆ ಒಳ್ಳೆ ಬಾಂಡಿಂಗ್ ಇರ್ತಿತ್ತು. ಜೀವ ಕೂಡ ಅದನ್ನೇ ಮಹಿಮಾಗೆ ಹೇಳಿದ್ದಾರೆ. ಎಲ್ಲರ ಮುಂದೆ ಪ್ರದರ್ಶನ ಮಾಡೋದು ಮಾತ್ರ ಪ್ರೀತಿಯಲ್ : ಹೌದು, ಪ್ರೀತಿಯನ್ನು ನೀವು ಬೇರೆಯವರಿಗೆ ತೋರಿಸಬೇಕಾಗಿಲ್ಲ. ನಿಮ್ಮಿಬ್ಬರ ಮಧ್ಯೆ ಆಪ್ತತೆ ಇದ್ದರೆ ಸಾಕು. ಇಬ್ಬರ ಆಸಕ್ತಿ ಬೇರೆಯಿದ್ರೂ ಮನಸ್ಸಿ ಆಳದಲ್ಲಿ ಪ್ರೀತಿ ಇರುತ್ತೆ.
ದಾಂಪತ್ಯದಲ್ಲಿ ಹಣಕಾಸಿನ ಯೋಜನೆಗಳು ಹೇಗಿರ್ಬೇಕು , ಸೇವಿಂಗ್ಸ್ ಮಾಡೋದು ಹೇಗೆ?
ಎಲ್ಲವನ್ನೂ ಬಾಯ್ಬಿಟ್ಟು ಹೇಳ್ಬೇಕಾಗಿಲ್ಲ : ಜೀವಾ ಪ್ರಕಾರ, ಒಂದೊಳ್ಳೆ ಸಂಬಂಧದಲ್ಲಿ ಎಲ್ಲವನ್ನೂ ಬಾಯ್ಬಿಟ್ಟು ಹೇಳ್ಬೇಕಾದ ಅಗತ್ಯವಿಲ್ಲ. ಪ್ರೀತಿ ಇದ್ದಲ್ಲಿ ಮಾತಿಗಿಂತ ಮನಸ್ಸೇ ಎಲ್ಲವನ್ನು ಅರಿತಿರುತ್ತೆ. ಇಬ್ಬರು ಒಬ್ಬರನ್ನೊಬ್ಬರು ಇರೋ ಹಾಗೆ ಒಪ್ಪಿಕೊಳ್ಳೋದು ದಾಂಪತ್ಯದಲ್ಲಿ ಬಹಳ ಮುಖ್ಯ.
ಪ್ರೀತಿ ಅನ್ನೋದು ಕಟ್ಟು ಹಾಕೋದಲ್ಲ, ಫ್ರೀ ಆಗಿ ಬಿಡೋದು ಎನ್ನುತ್ತಾರೆ ಜೀವನ್ : ಪ್ರೀತಿಯಲ್ಲಿ ಪರಸ್ಪರರನ್ನು ಬಂಧಿಸಿಡುವ ಅಗತ್ಯವಿಲ್ಲ. ಪ್ರೀತಿಸುವ ವ್ಯಕ್ತಿಯಿಂದ ಏನನ್ನೂ ಬಯಸದೆ ಹರಸಬೇಕು. ಪ್ರೀತಿ ನೆರಳಾಗಿರಬೇಕೆ ವಿನಃ ಉರುಳಾಗಬಾರದು ಎನ್ನುವ ಜೀವನ್, ಪ್ರೀತಿ ಕಟ್ಟಿ ಹಾಕಿದಾಗ ಅದಕ್ಕೆ ಅರ್ಥವಿಲ್ಲ ಎಂದಿದ್ದಾರೆ.