ಆನ್‌ಲೈನ್ ಡೇಟಿಂಗ್: ಆಂಧ್ರ ಯುವಕನ ಅರಸಿ ಬಂದ ಅಮೆರಿಕನ್ ಮಹಿಳೆ

Published : Apr 09, 2025, 04:44 PM ISTUpdated : Apr 09, 2025, 05:09 PM IST
ಆನ್‌ಲೈನ್ ಡೇಟಿಂಗ್: ಆಂಧ್ರ ಯುವಕನ ಅರಸಿ ಬಂದ ಅಮೆರಿಕನ್ ಮಹಿಳೆ

ಸಾರಾಂಶ

ಆನ್‌ಲೈನ್‌ನಲ್ಲಿ ಪರಿಚಯವಾದ ಆಂಧ್ರದ ಯುವಕನಿಗಾಗಿ ಆತನಿಗಿಂತ 9 ವರ್ಷ ದೊಡ್ಡವಳಾದ ಅಮೆರಿಕನ್ ಮಹಿಳೆ ಆಂಧ್ರಪ್ರದೇಶಕ್ಕೆ ಬಂದಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಪ್ರೀತಿಸುತ್ತಿದ್ದ ಚಂದನ್‌ಗಾಗಿ ಜಾಕ್ಲಿನ್ ಫೊರೆರೊ ಎಂಬ ಯುವತಿ ದೇಶವನ್ನೇ ತೊರೆದು ಬಂದಿದ್ದಾಳೆ.

ವಿಶಾಖಪಟ್ಟಣಂ: ಇದು ಇಂಟರ್‌ನೆಟ್‌ ಸೋಶಿಯಲ್ ಮೀಡಿಯಾಗಳೇ ಜೀವನ ಆಗಿರುವಂತಹ ಯುಗ, ಆನ್‌ಲೈನ್‌ನಲ್ಲೇ ಪ್ರೀತಿ ಆನ್‌ಲೈನ್‌ನಲ್ಲೇ ಮದುವೆಯಾಗಿ ಅಲ್ಲೇ ಸಂಸಾರ ಮಾಡುವಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಕೆಲದಿನಗಳ ಹಿಂದಷ್ಟೇ ಭಾರತದ ಯುವಕನನ್ನು ಅರಸಿ ಪಾಕಿಸ್ತಾನ ಮೂಲದ ಮೂರು ಮಕ್ಕಳ ತಾಯಿ ಸೀಮಾ ಹೈದರ್ ಭಾರತಕ್ಕೆ ಆಗಮಿಸಿ ಮದುವೆಯಾಗಿ ಮಗುವನ್ನು ಕೂಡ ಹೆತ್ತಿದ್ದು ಗೊತ್ತೆ ಇದೆ. ಈಗ ಅದೇ ರೀತಿಯ ಮತ್ತೊಂದು ಲವ್ ಸ್ಟೋರಿ ಈಗ ಆಂಧ್ರ ಪ್ರದೇಶದಲ್ಲಿ ನಡೆದಿದೆ.

 ಆನ್‌ಲೈನ್‌ನಲ್ಲಿ ಆಂಧ್ರ ಮೂಲದ ಯುವಕನ ಪ್ರೇಮಕ್ಕೆ ಮರುಳಾದ ಅಮೆರಿಕನ್ ಯುವತಿಯೊಬ್ಬಳು ಆತನಿಗಾಗಿದ ದೇಶ ಬಿಟ್ಟು ಬಂದಂತಹ ಅಚ್ಚರಿಯ ಘಟನೆ ಅಂಧ್ರಪ್ರದೇಶದಿಂದ ವರದಿಯಾಗಿದೆ. ತಾನು ಆನ್‌ಲೈನ್‌ನಲ್ಲಿಯೇ 8 ತಿಂಗಳಿನಿಂದ ಪ್ರೀತಿಸಿದ್ದ ಚಂದನ್‌ ಎಂಬ ಯುವಕನಿಗಾಗಿ ಅಮೆರಿಕಾದ ಜಾಕ್ಲಿನ್ ಫೊರೆರೊ ಎಂಬ ಯುವತಿ ಭಾರತದ ಆಂಧ್ರಪ್ರದೇಶದಲ್ಲಿರುವ ಪುಟ್ಟ ಹಳ್ಳಿಯೊಂದಕ್ಕೆ ಆಗಮಿಸಿದ್ದಾರೆ. ಇವರಿಬ್ಬರೂ ಇನ್ಸ್ಟಾಗ್ರಾಮ್‌ನಲ್ಲಿ ಪರಸ್ಪರ ಭೇಟಿಯಾಗಿದ್ದು, ನಂತರ ಆನ್‌ಲೈನ್‌ನಲ್ಲೇ ಕಳೆದೆಂಟು ತಿಂಗಳಿಂದ ಸಂಪರ್ಕದಲ್ಲಿದ್ದರು. ಈಗ ಜಾಕ್ಲಿನ್ ಫೊರೆರೊ ತನ್ನ ಗೆಳೆಯನಿಗಾಗಿ ದೇಶ ಬಿಟ್ಟು ಬಂದಿದ್ದು, ಇದೇ ಮೊದಲ ಬಾರಿಗೆ ಅವರು ನೈಜವಾಗಿ ಭೇಟಿಯಾಗಿದ್ದಾರೆ. 

ಇನಿಯನ ಅರಸಿ ಪಾಕ್‌ನಿಂದ ಭಾರತಕ್ಕೆ ಬಂದ ಸೀಮಾ ಹೈದರ್‌ಗೆ ಹೆಣ್ಣು ಮಗು

14 ತಿಂಗಳು ಜೊತೆಯಾಗಿ ಹಾಗೂ ದೊಡ್ಡ ಹೊಸ ಅಧ್ಯಾಯಕ್ಕೆ ಸಿದ್ಧ ಎಂದು ಜಾಕ್ಲಿನ್ ಪೊರೆರೋ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲಿ ಅವರು ತಮ್ಮ ಈ ಹೊಸ ಲವ್‌ ಸ್ಟೋರಿ ಹಾಗೂ ಸಂಬಂಧದ ಪಯಣದ ಬಗ್ಗೆ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಕಾಮೆಂಟ್‌ನಲ್ಲಿ ಈಕೆ ತಾನು ಚಂದನ್‌ಗಿಂತ 9 ವರ್ಷ ದೊಡ್ಡವಳು ಎಂದು ಹೇಳಿಕೊಂಡಿದ್ದಾಳೆ. ಇನ್‌ಸ್ಟಾಗ್ರಾಮ್ ಮೆಸೇಜ್‌ಗಳ ಮೂಲಕ ಅವರ ಬಾಂಧವ್ಯ ಹೇಗೆ ಪ್ರಾರಂಭವಾಯಿತು ಮತ್ತು ದಿನನಿತ್ಯದ ವೀಡಿಯೊ ಕರೆಗಳಾಗಿ ಹೇಗೆ ಬದಲಾಯಿತು ಎಂಬುದನ್ನು ಈ ವೀಡಿಯೊ ಎತ್ತಿ ತೋರಿಸುತ್ತದೆ. ಅಲ್ಲದೇ ನಿಜ ಜೀವನದಲ್ಲಿ ಅವರ ಮೊದಲ ಭಾವನಾತ್ಮಕ ಭೇಟಿಯನ್ನು ಈ ವೀಡಿಯೋದಲ್ಲಿ ತೋರಿಸಲಾಗಿದೆ. 

ಕರೆಂಟ್ ಕಂಬ ಏರಿದ ಮೇಕೆ :ವೀಡಿಯೋ ರಿಯಲ್ಲಾ ಫೇಕಾ ನೀವೇ ಹೇಳಿ

ವೀಡಿಯೋ ನೋಡಿದ ಅನೇಕರು ಈ ಜೋಡಿಯ ಪ್ರೇಮ ಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಒಬ್ಬರು ನಿಮ್ಮ ಪ್ರೇಮ ಕತೆಗೂ ನಮ್ಮ ಲವ್‌ ಸ್ಟೋರಿಗೆ ಹೋಲಿಕೆ ನಾವು ಇಲ್ಲಿ ಇನ್ಸ್ಟಾಗ್ರಾಮ್ನಲ್ಲಿ ಭೇಟಿಯಾದೆವು. ಏಳು ತಿಂಗಳ ನಂತರ, ನಾನು ಅವರನ್ನು ಮದುವೆಯಾಗಲು ಭಾರತಕ್ಕೆ ಹಾರುತ್ತಿದ್ದೆ. ಅದು ಮೂರುವರೆ ವರ್ಷಗಳ ಹಿಂದೆ, ಮತ್ತು ಅವರು ಕಳೆದ ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ಬಂದರು. ಇದು ಒಂದು ಹುಚ್ಚು ಪ್ರಯಾಣ ಆದರೆ ಅದು ತುಂಬಾ ಯೋಗ್ಯವಾಗಿದೆ. ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇದು ತುಂಬಾ ಮುದ್ದಾಗಿದೆ. ನೀವು ನಿಮ್ಮ ಆತ್ಮಸಂಗಾತಿಯನ್ನು ಭೇಟಿಯಾಗಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.  ಅಮೆರಿಕಾದ ಜಾಕ್ಲಿನ್ ಫೊರೆರೋ ಹಾಗೂ ಆಂಧ್ರಪ್ರದೇಶದ ಈ ಚಂದನ್‌ ತಮ್ಮ ಅಂತರ್-ಸಾಂಸ್ಕೃತಿಕ ಪ್ರಣಯವನ್ನು ವಿವರಿಸುವ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಾರೆ. ಒಟ್ಟಿನಲ್ಲಿ ಇವರು ಪ್ರೀತಿಗೆ ಯಾವುದೇ ಗಡಿ ಭಾಷೆಯ ಹಂಗಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು