13 ವರ್ಷದ ಸಂಸಾರ ಬಿಟ್ಟು Instagram ಲವರ್ ಜೊತೆ ಜೂಟ್! ಗಂಡ-ಮಕ್ಕಳು ಬೇಡ ಬಟ್ಟೆಗಾಗಿ ವಾಪಸ್ ಬಂದ ಹೆಂಡ್ತಿ!

Published : Apr 09, 2025, 12:59 PM ISTUpdated : Apr 16, 2025, 10:59 AM IST
13 ವರ್ಷದ ಸಂಸಾರ ಬಿಟ್ಟು Instagram ಲವರ್ ಜೊತೆ ಜೂಟ್! ಗಂಡ-ಮಕ್ಕಳು ಬೇಡ ಬಟ್ಟೆಗಾಗಿ ವಾಪಸ್ ಬಂದ ಹೆಂಡ್ತಿ!

ಸಾರಾಂಶ

ನೆಲಮಂಗಲದಲ್ಲಿ 13 ವರ್ಷಗಳ ವೈವಾಹಿಕ ಜೀವನದ ನಂತರ ನೇತ್ರಾವತಿ ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವಕನೊಂದಿಗೆ ಓಡಿಹೋಗಿ ಮದುವೆಯಾಗಿದ್ದಾಳೆ. ಆಕೆಯ ಮೊದಲ ಗಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನ್ಯಾಯಕ್ಕಾಗಿ ಮೊರೆ ಹೋಗಿದ್ದಾನೆ. ನೇತ್ರಾವತಿ ತನ್ನ ಬಟ್ಟೆ ಮತ್ತು ಆಭರಣಗಳನ್ನು ಪಡೆಯಲು ಪೊಲೀಸ್ ಭದ್ರತೆಯೊಂದಿಗೆ ಹಿಂದಿರುಗಿದ್ದಳು. ಈ ಘಟನೆ ಆಘಾತವನ್ನುಂಟು ಮಾಡಿದೆ.

ನೆಲಮಂಗಲ (ಏ.09): ಮದುವೆಯಾಗಿ ಸುಖ ಸಂಸಾರ ಮಾಡಿಕೊಂಡು 13 ವರ್ಷದಲ್ಲಿ ಮಕ್ಕಳಿಗೂ ಜನ್ಮ ನೀಡಿದ ಮಹಿಳೆ ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬ ಯುವಕ ಪರಿಚಿತವಾಗಿದ್ದಾನೆಂದು ಗಂಡ-ಮಕ್ಕಳನ್ನು ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡಿದ್ದಾಳೆ. ಇದೀಗ, ಪೊಲೀಸ್ ಭದ್ರತೆಯಲ್ಲಿ ಮೊದಲ ಗಂಡನ ಮನೆಗೆ ತನ್ನ ಬಟ್ಟೆ ಹಾಗೂ ಆಭರಣಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದಾಳೆ.

ಈ ಘಟನೆ ಬೆಂಗಳೂರಿನ ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ಇಲ್ಲೊಬ್ಬ ಮಹಿಳೆಗೆ ಮದುವೆಯಾಗಿ, ಮಕ್ಕಳಿದ್ದು, ಸುಂದರ ಸಂಸಾರವಿದ್ದರೂ ಎಲ್ಲವನ್ನೂ ತೊರೆದು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಕೇವಲ ಒಂದು ವಾರದಲ್ಲಿ ಪ್ರೀತಿ ಮಾಡಿ, ಮದುವೆಯನ್ನೂ ಮಾಡಿಕೊಂಡಿದ್ದಾಳೆ. ಇದೀಗ ಗಂಡನೂ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೆಂಡತಿಯ 2ನೇ ಮದುವೆಯನ್ನು ನೋಡಿ ಶಾಕ್ ಆಗಿದ್ದು, ಪತಿ ಹಾಗೂ ಆತನ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಹೊದ ಮಹಿಳೆಯ ವಿರುದ್ಧ ದೂರು ನೀಡಿದ್ದರು.

ನೇತ್ರಾವತಿ ಎನ್ನುವ ಮಹಿಳೆ ರಮೇಶ್ ಎನ್ನುವವರನ್ನು ಕಳೆದ 13 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಇಬ್ರೂ ಅದ್ಧೂರಿ ವಿವಾಹ ಮಾಡಿಕೊಂಡು 13 ವರ್ಷಗಳ ಕಾಲ ಸಂಸಾರವನ್ನೂ ಮಾಡಿದ್ದಾರೆ. ಗಂಡ ಹಾಗೂ ಗಂಡನ ಮನೆಯವರೊಂದಿಗೆ ಉತ್ತಮವಾಗಿ ಹೊಂದಿಕೊಂಡು ಜೀವನ ಮಾಡುತ್ತಿದ್ದ ನೇತ್ರಾವತಿಗೆ ಮಕ್ಕಳು ಕೂಡ ಇವೆ. ಗಂಡ-ಮಕ್ಕಳೊಂದಿಗೆ ಸುಖ ಸಂಸಾರ ಮಾಡಿಕೊಂಡಿದ್ದ ನೇತ್ರಾವತಿ ಒಂದು ಮೊಬೈಲ್ ಖರೀದಿ ಮಾಡಿದ್ದಾಳೆ. ಗಂಡ ಡ್ರೈವರ್ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಹೋದರೆ ರಾತ್ರಿಯೇ ಮನೆಗೆ ಬರುತ್ತಿದ್ದನು. ಕೆಲವು ಸಂದರ್ಭದಲ್ಲಿ ಮೂರ್ನಾಲ್ಕು ದಿನ ಅಥವಾ ಒಮದು ವಾರಗಳ ಕಾಲ ಪ್ರಯಾಣಿಕರನ್ನು ಕರೆದುಕೊಂಡು ಟ್ರಿಪ್ ಹೋಗಬೇಕಾಗುತ್ತಿತ್ತು.

ಇದನ್ನೂ ಓದಿ: ಪತ್ನಿ ಪರಮಸುಂದರಿಯಾಗಿದ್ದರೂ, ಪರ ಯುವತಿಯೊಂದಿಗೆ ಗಂಡನ ಸಲ್ಲಾಪ; ಪ್ರಾಣ ಬಿಟ್ಟ ಹೆಂಡತಿ!

ಹೊಸ ಮೊಬೈಲ್‌ನಲ್ಲಿ ಸಮಯ ಕಳೆಯಲೆಂದು ಇನ್‌ಸ್ಟಾಗ್ರಾಮ್ ಖಾತೆಯನ್ನು ಆರಂಭಿಸಿದ ನೇತ್ರಾವತಿ ಆರಂಭದಲ್ಲಿ ತಾನೂ ಕೂಡ ಸಣ್ಣದಾಗಿ ರೀಲ್ಸ್ ಮಾಡಲು ಆರಂಭಿಸಿದ್ದಾಳೆ. ಈಕೆಯನ್ನು ನೋಡಿದ ಕೆಲವರು ಇನ್‌ಸ್ಟಾಗ್ರಾಮ್‌ನಲ್ಲಿ ನೇರವಾಗಿ ಮೆಸೇಜ್ (ಡಿಎಂ) ಮಾಡುವುದಕ್ಕೆ ಮುಂದಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶಕ್ಕೆ ರಿಪ್ಲೈ ಮಾಡುತ್ತಿದ್ದ ನೇತ್ರಾವತಿ, ಸಂತೋಷ್ ಎನ್ನುವವನೊಂದಿಗೆ ತುಂಬಾ ಸಲುಗೆ ಬೆಳೆಸಿಕೊಂಡಿದ್ದಾಳೆ. ಈ ಬಗ್ಗೆ ಮನೆಯವರಿಗೆ ಯಾವುದೇ ಸುಳಿವು ಕೂಡ ಸಿಕ್ಕಿಲ್ಲ.

ಕಳೆದೊಂದು ವಾರದ ಹಿಂದೆ ಗಂಡ, ಮಕ್ಕಳು ಹಾಗೂ ಮನೆಯನ್ನು ಬಿಟ್ಟು ಹೋಗಿದ್ದಾಳೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ತನ್ನ ಹೆಂಡತಿ ಮದುವೆಯಾದ ವಿಡಿಯೋ ನೋಡಿ ಗಂಡ ಶಾಕ್ ಆಗಿದ್ದಾನೆ. ನೇತ್ರಾವತಿಯನ್ನು 2ನೇ ಬಾರಿಗೆ ಮದುವೆಯಾದವನ ಹೆಸರು ಸಂತೋಷ್. ಕಳೆದ ವಾರವೇ ಮದುವೆ ಮಾಡಿಕೊಂಡಿದ್ದು, ಇದೀಗ ಮೊದಲ ಗಂಡ ರಮೇಶ್ ಮನೆಗೆ ತನ್ನ ಬಟ್ಟೆಗಳು ಹಾಗೂ ಆಭರಣಗಳನ್ನು ತೆಗೆದುಕೊಳ್ಳಬೇಕು ಎಂದು ಪೊಲೀಸ್ ಭದ್ರತೆಯಲ್ಲಿ ಬಂದಿದ್ದಾಳೆ. ಇದನ್ನು ನೋಡಿದ ಮೊದಲ ಗಂಡನ ಮನೆಯವರು ತರಾಟೆಗೆ ತೆಗೆದುಕೊಂಡಿದ್ದು, ನೇತ್ರಾವತಿ ವಿರುದ್ಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ರಮೇಶ್ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ಬುರ್ಖಾದೊಳಗೆ ಕೈಹಾಕಿದಷ್ಟೂ ಉದುರಿದ ಲಕ್ಷಾಂತರ ಮೌಲ್ಯದ ಕದ್ದ ವಸ್ತು- ವಿಡಿಯೋ ನೋಡಿದವರು ಸುಸ್ತೋ ಸುಸ್ತು!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಪುರುಷರ ಕೊರತೆ: ಈ ದೇಶದಲ್ಲಿ ಗಂಡನ ಬಾಡಿಗೆಗೆ ಪಡೆಯುತ್ತಾರೆ ಹೆಣ್ಣು ಮಕ್ಕಳು