ಕ್ಲೀನರ್​ ನೆಲ ಒರೆಸೋ ಸ್ಟೈಲ್​ಗೆ ಎಂಬಿಬಿಎಸ್​ ವೈದ್ಯೆ ಫಿದಾ-ಅದ್ಧೂರಿ ಮದ್ವೆ: ಕುತೂಹಲದ ಲವ್​ಸ್ಟೋರಿ ಕೇಳಿ...

Published : Apr 08, 2025, 04:49 PM ISTUpdated : Apr 08, 2025, 05:28 PM IST
ಕ್ಲೀನರ್​ ನೆಲ ಒರೆಸೋ ಸ್ಟೈಲ್​ಗೆ ಎಂಬಿಬಿಎಸ್​ ವೈದ್ಯೆ ಫಿದಾ-ಅದ್ಧೂರಿ ಮದ್ವೆ:  ಕುತೂಹಲದ ಲವ್​ಸ್ಟೋರಿ ಕೇಳಿ...

ಸಾರಾಂಶ

ಪಾಕಿಸ್ತಾನದಲ್ಲಿ ಎಂಬಿಬಿಎಸ್ ವೈದ್ಯೆ ಕಿಶ್ವರ್ ಸಾಹಿಬಾ, ಆಸ್ಪತ್ರೆಯ ಕ್ಲೀನರ್ ಶಹಜಾದ್‌ನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಶಹಜಾದ್ ನೆಲ ಒರೆಸುವ ಶೈಲಿಗೆ ಮನಸೋತ ವೈದ್ಯೆ, ಪ್ರೇಮ ನಿವೇದನೆ ಮಾಡಿಕೊಂಡರು. ಈ ವಿಡಿಯೋ ವೈರಲ್ ಆಗಿದ್ದು, ವೈದ್ಯೆಯ ನಿರ್ಧಾರಕ್ಕೆ ಸ್ನೇಹಿತರು ಮೂದಲಿಸಿದ್ದರಿಂದ ಆಸ್ಪತ್ರೆ ಕೆಲಸ ತೊರೆದಿದ್ದಾರೆ. ಸದ್ಯ ದಂಪತಿ ಕ್ಲಿನಿಕ್ ತೆರೆಯಲು ಯೋಜನೆ ಹಾಕಿಕೊಂಡಿದ್ದಾರೆ.

ಮದುವೆ ಎನ್ನುವುದು ಸ್ವರ್ಗದಲ್ಲಿಯೇ ಆಗಿರುತ್ತದೆ, ಇಲ್ಲಿ ಏನಿದ್ದರೂ ನೆಪ ಮಾತ್ರ ಎನ್ನುವುದು ಉಂಟು. ಅದಕ್ಕೆ ಸಾಕ್ಷಿಯಾಗಿ ಅಲ್ಲಲ್ಲಿ ಕೆಲವು ಉದಾಹರಣೆಗಳು ಕಾಣಸಿಗುತ್ತವೆ. ಕೆಲ ದಿನಗಳ ಹಿಂದೆ ಕ್ಯಾಬ್​ ಡ್ರೈವರ್​ ಗೇರ್​ ಬದಲಿಸುವ ಕ್ರಮಕ್ಕೆ ಮೋಡಿಗೆ ಒಳಗಾಗಿ ಯುವತಿಯೊಬ್ಬಳು ಆತನನ್ನೇ ಮದುವೆಯಾದ ಬಗ್ಗೆ ವರದಿಯಾಗಿತ್ತು. ಇದೀಗ ಎಂಬಿಬಿಎಸ್​ ವೈದ್ಯೆಯೊಬ್ಬಳು ತಮ್ಮ ಆಸ್ಪತ್ರೆಯಲ್ಲಿ ಕ್ಲೀನರ್​ ಆಗಿ ಕೆಲಸ ಮಾಡುತ್ತಿದ್ದವ ನೆಲ ಒರೆಸುವ ಸ್ಟೈಲ್​ಗೆ ಫಿದಾ ಆಗಿ ಆತನನ್ನೇ ಮದುವೆಯಾಗಿದ್ದಾಳೆ. ಈ ಕುರಿತು ಆಕೆ ಮಾತನಾಡಿರುವ ವಿಡಿಯೋ ಕೂಡ ವೈರಲ್​ ಆಗಿದೆ. 

ಅಂದಹಾಗೆ ಇದು  ಪಾಕಿಸ್ತಾನದ ದಂಪತಿ ಸ್ಟೋರಿ.  ಕಿಶ್ವರ್ ಸಾಹಿಬಾ ಎನ್ನುವ ವೈದ್ಯೆ, ತಮ್ಮದೇ  ಆಸ್ಪತ್ರೆಯನ್ನು ಶುಚಿಗೊಳಿಸುವ ಸಿಬ್ಬಂದಿ ಶಹಜಾದ್​ನನ್ನು ಮದುವೆಯಾಗಿದ್ದಾಳೆ.  "ಮೇರಾ ಪಾಕಿಸ್ತಾನ್" ಯೂಟ್ಯೂಬ್ ಚಾನೆಲ್‌ನಲ್ಲಿ, ದಂಪತಿ ತಮ್ಮ ವಿಶಿಷ್ಟ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. ಪಾಕಿಸ್ತಾನದ ಓಕಾರಾ ತಹಸಿಲ್‌ನ ದೀಪಲ್‌ಪುರ ಪಟ್ಟಣದಲ್ಲಿ ವಾಸಿಸುವ ಯೂಟ್ಯೂಬರ್ ಹರೀಶ್ ಭಟ್ಟಿ ಅವರೊಂದಿಗೆ ದಂಪತಿ ಮಾತನಾಡಿದ್ದಾರೆ.  ಕೆಲವು ಸವಾಲುಗಳನ್ನು ಈಗಲೂ ಎದುರಿಸುತ್ತಿರುವುದಾಗಿ ಹೇಳಿಕೊಂಡಿರುವ ದಂಪತಿ ತಮ್ಮ ಲವ್​ಸ್ಟೋರಿಯನ್ನು ತೆರೆದಿಟ್ಟಿದ್ದಾರೆ. ಕೆಲ ವರ್ಷಗಳ ಹಿಂದಿನ ಈ ಘಟನೆಯ ವಿಡಿಯೋ ಇದೀಗ ಮತ್ತೆ ವೈರಲ್​ ಆಗ್ತಿದೆ. ತಾವು ಹೇಗೆ ಪರಸ್ಪರ ಭೇಟಿಯಾದೆವು ಮತ್ತು  ಪ್ರೀತಿಯಲ್ಲಿ ಸಿಲುಕಿದೆವು  ಎಂಬುದನ್ನು ಜೋಡಿ ಬಹಿರಂಗಪಡಿಸಿದೆ. ಶಹಜಾದ್ ಅವರನ್ನು ಮೊದಲ ಬಾರಿಗೆ ಭೇಟಿಯಾದಾಗ, ಅವರು "ಚಾಯ್‌ವಾಲಾ (ಚಹಾ ತಯಾರಕ)" ಅಥವಾ ಕ್ಲೀನರ್ ಆಗಿ ಕಾಣಲಿಲ್ಲ ಎಂದು ಕಿಶ್ವರ್ ಹೇಳಿದರು. ಅವನು ಸ್ವಂತ ವ್ಯವಹಾರ ನಡೆಸುತ್ತಿದ್ದ ಮತ್ತು ತುಂಬಾ ಸರಳವಾಗಿದ್ದ. ಈ ಕಾರಣ ನಾನು ಅವನನ್ನು ಮೆಚ್ಚಿಕೊಂಡೆ. ಅವನು ಆಸ್ಪತ್ರೆಯನ್ನು ಶುಚಿಗೊಳಿಸುವ ಸ್ಟೈಲ್​ಗೆ ನಾನು ಮನಸೋತೆ. ಮದುವೆಯಾದರೆ ಇವನನ್ನೇ ಆಗಬೇಕು ಎಂದುಕೊಂಡೆ. ಇದೇ ಕಾರಣಕ್ಕೆ ನಾನೇ ಹೋಗಿ ಪ್ರಪೋಸ್​ ಮಾಡಿದೆ  ಎಂದು ವೈದ್ಯೆ ಹೇಳಿದ್ದಾಳೆ. ತನ್ನ ಜೀವನದ ಈ ಮಹತ್ವದ ಎಲ್ಲಾ ನಿರ್ಧಾರಗಳನ್ನು ಕೇವಲ ಒಂದು ದಿನದಲ್ಲಿ ತೆಗೆದುಕೊಂಡಿರುವುದಾಗಿ ಆಕೆ ಹೇಳಿದ್ದಾರೆ. 

ಮದುವೆಯಾದ್ರೂ ಸೋನಾಲಿ ಬೇಂದ್ರೆಯನ್ನು ಪ್ರೀತಿಸ್ತಿದ್ದ ರಾಜ್​ ಠಾಕ್ರೆ: 30 ವರ್ಷದ ಬಳಿಕ ಸಿಕ್ಕಾಗ- ಕಣ್​ಸನ್ನೆ ವಿಡಿಯೋ ವೈರಲ್

 ಅವರು ಇಬ್ಬರೂ ಹೇಗೆ ಭೇಟಿಯಾದರು ಮತ್ತು ಪರಸ್ಪರ ಹೇಗೆ ಮಾತನಾಡಲು ಪ್ರಾರಂಭಿಸಿದರು ಎಂಬುದನ್ನು ಸಹ ಆಕೆ ಬಹಿರಂಗಪಡಿಸಿದ್ದಾಳೆ. ಶಹಜಾದ್​ ಮೊದಲಿಗೆ ಮೂವರು ವೈದ್ಯರ ಕಚೇರಿಗಳಲ್ಲಿ ಕೊಠಡಿಗಳನ್ನು ಸ್ವಚ್ಛಗೊಳಿಸುತ್ತಿದ್ದ, ಅವರಿಗೆ  ಚಹಾ ತಂದು ಕೊಡುತ್ತಿದ್ದ. ಅದು ನನ್ನನ್ನು ಮೋಡಿಗೊಳಿಸಿತು. ಒಂದು ದಿನ ನಾನೇ ಆತನ ಫೋನ್​ ನಂಬರ್​ ಪಡೆದುಕೊಂಡೆ. ಮಾತನಾಡಲು ಪ್ರಾರಂಭಿಸಿದೆ.  ನಂತರ  ಶಹಜಾದ್ ಪೋಸ್ಟ್ ಮಾಡಿದ ಪೋಸ್ಟ್​ಗಳನ್ನು ಲೈಕ್ ಮಾಡಲು ಶುರುಮಾಡಿದೆ. ನಂತರ ಅದೊಂದು ದಿನ ಆತನನ್ನು ನನ್ನ ಕೋಣೆಗೆ ಕರೆದು ಪ್ರೀತಿಯ ನಿವೇದನೆ ಮಾಡಿಕೊಂಡೆ ಎಂದಿದ್ದಾಳೆ ವೈದ್ಯೆ. ಆತನಿಗೆ ಮೊದಲಿಗೆ ಇದನ್ನು ಕೇಳಿ ಶಾಕ್​ ಆಯಿತು.  ನಂಬಲು ಸಾಧ್ಯವಾಗದ ಕಾರಣ ಮೊದಲಿಗೆ ಆಘಾತಕ್ಕೊಳಗಾದ. ಕೊನೆಗೆ ಇರುವ ವಿಷಯವನ್ನು ಹೇಳಿದಾಗ  ಜ್ವರ ಕೂಡ ಬಂತು. ನಾನೇ ಹೋಗಿ ಉಪಚರಿಸಿದೆ. ಅಲ್ಲಿಂದ ಲವ್​ ಸ್ಟೋರಿ ಶುರುವಾಯಿತು ಎಂದಿದ್ದಾಳೆ.
 

 ಮದುವೆಯಾದ ನಂತರ, ಕಿಶ್ವರ್ ತಮ್ಮ ಸ್ನೇಹಿತರ ಮೂದಲಿಕೆಯನ್ನು ಸಹಿಸಿಕೊಳ್ಳಬೇಕಾಗಿ ಬಂದ ಕಾರಣ ಆಸ್ಪತ್ರೆಯಲ್ಲಿ ತಮ್ಮ ಕೆಲಸವನ್ನು ತೊರೆದರು. ಈ ಜೋಡಿ ಈಗ ಹತ್ತಿರದಲ್ಲಿ ಕ್ಲಿನಿಕ್ ತೆರೆಯಲು ಯೋಜಿಸುತ್ತಿದೆ. ಅವರು ತಮ್ಮ ಜೀವನದ ಪ್ರತಿಯೊಂದು ಅಂಶವನ್ನು ಹಂಚಿಕೊಳ್ಳುವ ಯೂಟ್ಯೂಬ್ ಚಾನೆಲ್ ಅನ್ನು ಸಹ ನಡೆಸುತ್ತಿದ್ದಾರೆ. ಇವರ ಪ್ರೇಮ ಕಥೆಗೆ ಭಿನ್ನ ನಿಲುವು ವ್ಯಕ್ತವಾಗಿದೆ. ಈ  ಹೃದಯಸ್ಪರ್ಶಿ ಪ್ರೇಮಕಥೆಯು ಇಂಟರ್ನೆಟ್ ಬಳಕೆದಾರರನ್ನು ಸಂತೋಷಪಡಿಸಿದೆ. ಒಬ್ಬ ಬಳಕೆದಾರರು "ಅದ್ಭುತ, ಸೌಂದರ್ಯವು ನೋಡುಗರ ಕಣ್ಣಿನಲ್ಲಿದೆ" ಎಂದು ಬರೆದಿದ್ದಾರೆ. ಇನ್ನೊಬ್ಬರು, "ಅದ್ಭುತ ಪ್ರೇಮಕಥೆ ಸುಂದರ ದಂಪತಿ ಎಂದೆಲ್ಲಾ ಬಣ್ಣಿಸುತ್ತಿದ್ದಾರೆ.

ಯುಕೆಜಿಯಲ್ಲೇ ಪ್ರಪೋಸ್​ ಮಾಡಿದ್ದ... ಏಣಿ ಹತ್ತಿ ತಾಳಿ ಕಟ್ಟೋ ಹಾಗಿದ್ದ... ನಟಿ ನೇಹಾ ಗೌಡ ಲವ್​ ಸ್ಟೋರಿ ಕೇಳಿ..

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು