ಮದ್ವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಪ್ರಮುಖ ಘಟ್ಟ. ಹೀಗಾಗಿಯೇ ಮದುವೆ ಕಾರ್ಯಕ್ರಮಗಳು, ಡೆಕೊರೇಶನ್, ವೆಡ್ಡಿಂಗ್ ಕಾರ್ಡ್ ಡಿಫರೆಂಟ್ ಆಗಿರಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಮಕ್ಕಳ ಮದುವೆಗೆಂದೇ ಪೋಷಕರು ಇಂತಿಷ್ಟು ದುಡ್ಡನ್ನು ಸಹ ಎತ್ತಿಡುತ್ತಾರೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಮದುವೆಯಾಗುವ ಜೋಡಿ ತಮ್ಮ ಸ್ವಂತ ಹಣವನ್ನೇ ಮದ್ವೆಗೆ ವಿನಿಯೋಗಿಸ್ತಾರಂತೆ.
ಮದುವೆ ಎಂಬುದು ಬದುಕಿನ ಮಹತ್ತರ ಘಟ್ಟ. ನೂರಾರು ಕನಸಿನೊಂದಿಗೆ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಅದಕ್ಕೂ ಮುನ್ನ ಮದುವೆ ಹೀಗೇ ನಡೆಯಬೇಕು, ಅಲಂಕಾರ, ಬಟ್ಟೆ, ಊಟ, ಆಭರಣ, ಫೋಟೋ ಎಲ್ಲದರ ಬಗ್ಗೆಯೂ ವಿಶೇಷ ಕಾಳಜಿಯಿಂದ ಹೊಸತನಕ್ಕೆ ಆದ್ಯತೆ ನೀಡುತ್ತಾ ಆಯ್ಕೆ ಮಾಡುತ್ತಾರೆ. ಅದರಲ್ಲೂ ಭಾರತದಲ್ಲಂತೂ ಮದುವೆಯೆಂದರೆ ಕೇವಲ ಊರಿಗೆ ಮಾತ್ರ ಬಂಧುಬಳಗ, ಊರಿನವರಿಗೆ ದೊಡ್ಡ ಹಬ್ಬ. ಮಕ್ಕಳು ಹುಟ್ಟಿದಾಗಲೇ ತಂದೆ-ತಾಯಿ ಮಕ್ಕಳ ಮದುವೆಗೆ ಹಣ ಕೂಡಿಡಲು ಶುರು ಮಾಡುತ್ತಾರೆ. ಹೆಣ್ಣು ಮಕ್ಕಳಾದರೆ ಚಿನ್ನಾಭರಣ ಮಾಡಿಸಿಡುತ್ತಾರೆ. ಮದುವೆಗಾಗಿ ಜಮೀನು, ಮನೆ ಅಡವಿಡುವ ಪೋಷಕರು ಇದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ಮದುವೆ (Marriage)ಯೆಂಬುದು ಸಂಪೂರ್ಣವಾಗಿ ಪೋಷಕರ ಜವಾಬ್ದಾರಿ ಎಂಬಂತೆ ಪರಿಗಣಿಸಲ್ಪಟ್ಟಿದೆ. ಪೋಷಕರು ಅದಕ್ಕಾಗಿ ತಮ್ಮಿಂದಾಗುವ ರೀತಿಯಲ್ಲೆಲ್ಲಾ ಹಣ ಹೊಂದಿಸುತ್ತಾರೆ. ಲಕ್ಷಾಂತರ ರೂ. ವ್ಯಯಿಸಿ ಅದ್ಧೂರಿ ಮಂಟಪ, ಡೆಕೊರೇಷನ್, ಗಿಫ್ಟ್, ಭೋಜನವನ್ನು ಸಿದ್ಧಪಡಿಸುತ್ತಾರೆ. ಬಹುತೇಕ ಕುಟುಂಬ (Family)ಗಳಲ್ಲಿ ಇಂಥಾ ನಿಯಮವಿದೆ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಪೋಷಕರಲ್ಲ ಮದುವೆಯಾಗುವ ಜೋಡಿಯೇ ತಮ್ಮ ಮದುವೆಯ ಖರ್ಚನ್ನು ವಹಿಸಿಕೊಳ್ಳುತ್ತಾರೆ. ಸಮೀಕ್ಷೆಯೊಂದು ಈ ವಿಚಾರವನ್ನು ಬಹಿರಂಗಪಡಿಸಿದೆ.
ಮದ್ವೆಗೆ ಬಾರದ ಕೊಲೀಗ್ಸ್, ಸಿಟ್ಟಿನಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ಮಹಿಳೆ !
ಸ್ವಂತ ದುಡ್ಡಿನಲ್ಲೇ ಮದ್ವೆಯಾಗ್ತಿದ್ದಾರೆ ಭಾರತೀಯರು
ಸುಮಾರು 40% ಸಹಸ್ರಮಾನದ ದಂಪತಿಗಳು ತಮ್ಮ ಸ್ವಂತ ಹಣವನ್ನು (Money) ಮದುವೆಗೆ ಖರ್ಚು (Expenditure) ಮಾಡುತ್ತಾರೆ ಎಂಬುದನ್ನು ಸಮೀಕ್ಷೆ ಬಹಿರಂಗಪಡಿಸುತ್ತದೆ. ಕೋವಿಡ್ ಏರುಗತಿಯಲ್ಲಿ ಹೆಚ್ಚಾಗುತ್ತಿರುವ ಕಳೆದೆರಡು ವರ್ಷಗಳಲ್ಲಿ ಎಲ್ಲಾ ಮದುವೆಗಳು ತುಂಬಾ ಸಿಂಪಲ್ ಆಗಿ ನಡೆಯುತ್ತಿದ್ದವು. ಮದುವೆ ಬಿಸಿನೆಸ್ ಎಂಬುದು ಸಂಪೂರ್ಣವಾಗಿ ಡಲ್ ಆಗಿತ್ತು. ಡೆಕೊರೇಷನ್, ಕ್ಯಾಟರಿಂಗ್ ಸೇರಿದಂತೆ ಮದುವೆಯ ಹಲವು ಉಸ್ತುವಾರಿ ವಹಿಸಿಕೊಳ್ಳುತ್ತಿದ್ದವು ಕಂಗಲಾಗಿದ್ದರು. ಸದ್ಯ ಕೋವಿಡ್ ಸೋಂಕು ಬದಲಾದರೂ ಇದ್ಯಾವುದೂ ಹೆಚ್ಚು ಬದಲಾವಣೆಯಾಗಿಲ್ಲ. ಮದುವೆಯ ವಿಚಾರದಲ್ಲಿ ಆಗಿರುವ ಮಹತ್ತರ ಬದಲಾವಣೆ (Changes)ಯೆಂದರೆ ಪೋಷಕರ ಬದಲು ಮದುವೆಯಾಗುವ ಜೋಡಿಯೇ ಖರ್ಚು-ವೆಚ್ಚವನ್ನು ವಹಿಸಿಕೊಳ್ಳುತ್ತಿದ್ದಾರಂತೆ.
ವೆಡ್ಡಿಂಗ್‌ವೈರ್ ಇಂಡಿಯಾದ ಸಮೀಕ್ಷೆಯ ಪ್ರಕಾರ, ಸಹಸ್ರಾರು ಜೋಡಿಗಳು ತಮ್ಮ ಮದುವೆಯ ಪಾವತಿಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಮಾತ್ರವಲ್ಲ ಸುಮಾರು 39.8% ರಷ್ಟು ತಮ್ಮ ಮದುವೆಗಳಿಗೆ ತಾವೇ ಖರ್ಚು ಮಾಡುತ್ತಾರೆ. ಅಲ್ಲದೆ, ಹೆಚ್ಚಿನ ದಂಪತಿಗಳು ಈಗ ಎಷ್ಟು ಪ್ರಮಾಣದಲ್ಲಿ ಜನರು ಆಗಮಿಸಿದ್ದಾರೆ ಅನ್ನುವುದಕ್ಕಿಂತ ಗುಣಮಟ್ಟದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿದ್ದಾರೆ. ಹೀಗಾಗಿ ಹೆಚ್ಚು ಜನರು ಸೇರದೇ ಇರಲು ಶಾರ್ಟ್ ಗೆಸ್ಟ್ ಲಿಸ್ಟ್‌ನ್ನು ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದೆಂಥಾ ವಿಚಿತ್ರ, ಮದ್ವೆಗೆ ಬನ್ನಿ, ಹೊಟ್ಟೆ ತುಂಬಾ ತಿನ್ನಿ, ಬಿಲ್ ಪೇ ಮಾಡಿ !
ಟ್ರೆಂಡ್ ಆಗ್ತಿದೆ ಥೀಮ್, ಡೆಸ್ಟಿನೇಶನ್ ವೆಡ್ಡಿಂಗ್
ವೆಡಿಂಗ್‌ವೈರ್ ಇಂಡಿಯಾ, ದಿ ನಾಟ್ ವರ್ಲ್ಡ್‌ವೈಡ್‌ನ ಭಾರತೀಯ ಅಂಗಸಂಸ್ಥೆ, ವಿವಾಹ ತಯಾರಕರು ಮತ್ತು ವೃತ್ತಿಪರರ ಆನ್‌ಲೈನ್ ಮಾರುಕಟ್ಟೆ, ವಿವಿಧ ಮಾಧ್ಯಮ ವರದಿಗಳ ಪ್ರಕಾರ ಅಧ್ಯಯನಕ್ಕಾಗಿ ಭಾರತದಾದ್ಯಂತ 220ಕ್ಕೂ ಹೆಚ್ಚು ಮಾರಾಟಗಾರರನ್ನು ಸಂದರ್ಶಿಸಿದೆ.ಥೀಮ್‌ಡ್ ವೆಡ್ಡಿಂಗ್ ಮತ್ತು ಡೆಸ್ಟಿನೇಶನ್ ವೆಡ್ಡಿಂಗ್ ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿದೆ ಎಂಬ ಮಾಹಿತಿ ದೊರಕಿದೆ. ದಂಪತಿಗಳು ತಮ್ಮ ದೊಡ್ಡ ದಿನಕ್ಕಾಗಿ ಸಮರ್ಥನೀಯ ಆಯ್ಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ವರದಿಯಾಗಿದೆ. ಮಾತ್ರವಲ್ಲ ಭಾರತದಲ್ಲಿ ಸುಮಾರು 40% ಮಂದಿ ತಮ್ಮ ಮದುವೆಯ ಖರ್ಚನ್ನು ತಾವೇ ವಹಿಸಿಕೊಳ್ಳುತ್ತಿದ್ದಾರೆ.
ಅಲ್ಲದೆ, 44% ದಂಪತಿಗಳು ತಮ್ಮ ಮದುವೆಗೆ ಒಂದರಿಂದ ಮೂರು ತಿಂಗಳ ಮೊದಲು ಕಾಯ್ದಿರಿಸುವಿಕೆಯನ್ನು ಪ್ರಾರಂಭಿಸುತ್ತಾರೆ ಮತ್ತು ಸುಮಾರು 15% ದಂಪತಿಗಳು ಈಗ ಮದುವೆಗೆ ಕೇವಲ ಒಂದು ತಿಂಗಳ ಮೊದಲು ತಮ್ಮ ವಿವಾಹದ ಸ್ಥಳಗಳನ್ನು ಕಾಯ್ದಿರಿಸುತ್ತಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಆನ್‌ಲೈನ್ ಪಾವತಿಗಳು (29.9%) ನಂತರ ನಗದು (19.9%) ಹೆಚ್ಚಿನ ಆದ್ಯತೆಯ ಪಾವತಿ ವಿಧಾನಗಳಲ್ಲಿ ಸೇರಿವೆ, ಆದರೆ 75.6% ದಂಪತಿಗಳು ಮದುವೆಯ ದಿನದ ಮೊದಲು ಭಾಗಶಃ ಮುಂಗಡ ಪಾವತಿಯನ್ನು ಆರಿಸಿಕೊಳ್ಳುತ್ತಾರೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಅಲ್ಲಿ ಯುದ್ಧ ಇಲ್ಲಿ ಮದುವೆ; ರಷ್ಯನ್ ವರ, ಉಕ್ರೇನ್ ವಧುವಿಗೆ ಧರ್ಮಶಾಲಾದಲ್ಲಿ ವಿವಾಹ
ಮದುವೆ ಉದ್ಯಮದಲ್ಲಿ ಸುಮಾರು 31% ಮಾರಾಟಗಾರರು ಹೆಚ್ಚಿನ ಉತ್ಪನ್ನ ಮತ್ತು ಕಾರ್ಮಿಕ ವೆಚ್ಚಗಳ ಕಾರಣದಿಂದಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ. 2019ರ ಪೂರ್ವ ಕೋವಿಡ್ ವರ್ಷಕ್ಕೆ ಹೋಲಿಸಿದರೆ 2022ರಲ್ಲಿ 42.5% ರಷ್ಟು ಮದುವೆಯ ಮಾರಾಟಗಾರರ ತಿಂಗಳ ಆದಾಯವು ಹೆಚ್ಚಾಗಿದೆ ಎಂದು ಸಮೀಕ್ಷೆ ವರದಿ ಮಾಡಿದೆ.
ಸಮೀಕ್ಷೆ ನಡೆಸಿದ್ದು ಯಾಕೆ ?
ವೆಡ್ಡಿಂಗ್‌ವೈರ್ ಇಂಡಿಯಾದ ಮಾರ್ಕೆಟಿಂಗ್ ಮುಖ್ಯಸ್ಥ ಅನಮ್ ಜುಬೈರ್ ಮಾತನಾಡಿ, 'ಕೋವಿಡ್ ಸಾಂಕ್ರಾಮಿಕವು ಮದುವೆಯ ಸಂಪೂರ್ಣ ವ್ಯವಸ್ಥೆಯನ್ನು ತೀವ್ರವಾಗಿ ಬದಲಾಯಿಸಿದೆ ಎಂಬುದು ನಿಜ. ಆದ್ದರಿಂದ, ಮದುವೆಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವವರು ಮತ್ತು ದಂಪತಿಗಳ, ಬದಲಾಗುತ್ತಿರುವ ಮನಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಸಮೀಕ್ಷೆಯನ್ನು ನಡೆಸಿರುವುದಾಗಿ ತಿಳಿಸಿದ್ದಾರೆ. 'ವೆಡ್‌ಟೆಕ್' ಪ್ಲಾಟ್‌ಫಾರ್ಮ್‌ಗಳು ಜನಪ್ರಿಯತೆಯನ್ನು ಗಳಿಸುತ್ತಿವೆ ಮತ್ತು ವಿವಾಹದ ಮಾರಾಟಗಾರರಿಗೆ ಪ್ರಮುಖ ಮೂಲವಾಗಿದೆ, ಇದು ವಿವಾಹ ಉದ್ಯಮವನ್ನು ಅಡ್ಡಿಪಡಿಸಿದೆ ಎಂಬುದಕ್ಕೆ ನಿಜವಾದ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.