
ಮನುಷ್ಯ ಆವಿಷ್ಕಾರದಲ್ಲಿ ಎಲ್ಲವನ್ನೂ ಮೀರಿಸಿದ್ದಾನೆ. ಮಾನವ ನಿರ್ಮಿತ ಯಂತ್ರಗಳು ಎಲ್ಲಾ ಕ್ಷೇತ್ರಗಳಲ್ಲೂ ಕಾಲಿಟ್ಟಿವೆ. ಅದರಲ್ಲೂ ರೋಬೋಟ್ ನಿರ್ಮಾಣ ಇತ್ತೀಚಿನ ಹಲವು ವರ್ಷಗಳಲ್ಲಿ ಹೆಚ್ಚುತ್ತಿದೆ. ಎಲ್ಲವೂ ರೋಬೋಟ್ ಮಯವಾಗಿದೆ. ಲೋಹಗಳ ಗೂಡಾಗಿರುವ ರೋಬೋಟ್ ಮನುಷ್ಯನಂತೆ ವರ್ತಿಸಬಹುದು. ಆದರೆ ಮನುಷ್ಯರಂತೆ ಭಾವನೆಗಳನ್ನು ತುಂಬಿಕೊಳ್ಳಲು ಸಾಧ್ಯವಿಲ್ಲ. ಆವಿಷ್ಕಾರ ಎಷ್ಟೇ ಮುಂದುವರಿದರೂ ರೋಬೋಟ್ ಯಂತ್ರವಷ್ಟೇ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಆದ್ರೆ ಚೆನ್ನೈನಲ್ಲಿ ಸಿದ್ಧಗೊಂಡಿರುವ ರೋಬೋಟ್ ಅದು ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ.
ಗದರಿಸಿದ್ರೆ ಮಾತೇ ಆಡಲ್ಲ ಈ ರೋಬೋಟ್ !
ಚೆನ್ನೈನಲ್ಲಿ 13 ವರ್ಷದ ಬಾಲಕನೊಬ್ಬ ಭಾವನೆ (Feelings)ಯಿರುವ ರೋಬೋಟ್‌ನ್ನು ವಿನ್ಯಾಸಗೊಳಿಸಿದ್ದಾನೆ. ಇದು ಮನುಷ್ಯನಂತೆ ಎಲ್ಲಾ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಮಾತ್ರವಲ್ಲ ಮನುಷ್ಯನ ಭಾವನೆಗಳಿಗೆ ಸ್ಪಂದಿಸುತ್ತದೆ. ಈ ರೋಬೋಟ್ ಮನುಷ್ಯರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತದೆ. ಆದರೆ ಗದರಿಸಿದರೆ ಮಾತ್ರ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ (Response) ನೀಡುವುದಿಲ್ಲ. ಅಷ್ಟೇ ಅಲ್ಲ. ಇದು ಪ್ರಶ್ನೆಗಳಿಗೆ ಉತ್ತರಿಸುವುದನ್ನು ನಿಲ್ಲಿಸಿದರೆ, ಬಳಕೆದಾರರು ಅದಕ್ಕೆ ಕ್ಷಮೆಯಾಚಿಸಿದ ಬಳಿಕ ಮಾತ್ರ ರೋಬೋಟ್ ಮತ್ತೆ ಮಾತನಾಡುತ್ತದೆ. ಇತರ ಭಾವನೆಗಳನ್ನು ಪತ್ತೆಹಚ್ಚಲು ಈ ರೋಬೋಟ್‌ನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಬಳಕೆದಾರರು ದುಃಖಿತರಾದಾಗ ಸಂಕೇತಗಳನ್ನು ಕಳುಹಿಸಬಹುದು ಎಂದು ರೋಬೋಟ್ ನಿರ್ಮಾತೃ ಪ್ರತೀಕ್ ಹೇಳಿದ್ದಾರೆ. ಈ ಭಾವನೆಗಳಿರುವ ರೋಬೋಟ್‌ಗೆ ರಾಫಿ ಎಂದು ಹೆಸರಿಡಲಾಗಿದೆ.
Avatar Robot: ಅನಾರೋಗ್ಯದಿಂದ ಬಳಲುತ್ತಿರುವ ಬಾಲಕನ ಪರವಾಗಿ ಶಾಲೆಗೆ ಹಾಜರಾಗುವ ರೋಬೋಟ್!
'ರಾಫಿ, ನಿಮ್ಮ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬಲ್ಲದು. ಆದರೆ ಅವನನ್ನು ಗದರಿಸಿದರೆ, ನೀವು ಕ್ಷಮಿಸುವವರೆಗೂ ಅವನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನೀವು ದುಃಖಿತರಾಗಿದ್ದರೆ ಅದು ನಿಮ್ಮನ್ನು ಅರ್ಥಮಾಡಿಕೊಳ್ಳಬಹುದು' ಎಂದು ರೋಬೋಟ್ ನಿರ್ಮಿಸಿದ ಪ್ರತೀಕ್ ಹೇಳಿದ್ದಾರೆ.
13ನೇ ವಯಸ್ಸಿನಲ್ಲಿ ರೋಬೋಟ್ ಅನ್ನು ರಚಿಸಿದ್ದಕ್ಕಾಗಿ ತಮಿಳುನಾಡಿನ ಹುಡುಗನನ್ನು ನೆಟಿಜನ್‌ಗಳು ಪ್ರಶಂಸಿಸಿದ್ದಾರೆ. ಹುಡುಗನ ನಂಬಲಾಗದ ಸಾಧನೆಯು ಎಲ್ಲಾ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಬಳಕೆದಾರರು ಬರೆದಿದ್ದಾರೆ. 'ರೋಬೋಟ್‌ಗೆ ಕೆಲವು ಧ್ವನಿಗಳ ಡೇಟಾದೊಂದಿಗೆ ನೀಡಲ್ಪಟ್ಟಿದೆ, ಇದು ಕೋಪದ ಮುಖವಾಗಿದೆ, ಇದು ಸಂತೋಷದ ಮುಖವಾಗಿದೆ ಮತ್ತು ಧ್ವನಿಯೊಂದಿಗೆ ಇರುತ್ತದೆ, ಆದ್ದರಿಂದ ಕೆಲವು ತರಬೇತಿಗಳು ಅದರ ಬಗ್ಗೆ ಮಾಡಿರಬಹುದು. ದೃಷ್ಟಿ ತರಬೇತಿ ಅಥವಾ ಅಂತಹದ್ದೇನಾದರೂ. ಏನೇ ಇರಲಿ, 13ನೇ ವಯಸ್ಸಿನಲ್ಲಿ ಇದನ್ನು ಮಾಡುವುದು ಇನ್ನೂ ದೊಡ್ಡ ಕೆಲಸ' ಎಂದು ಇನ್ನೊಬ್ಬರು ಬರೆದಿದ್ದಾರೆ.
ರೋಬೋಟ್‌ಗೆ ಅಮ್ಮನಾಗೋ ಆಸೆ
ರೋಬೋಟ್ ಅಮ್ಮನಾಗೋ ವಿಚಿತ್ರ ಆಸೆಯೊಂದನ್ನು ಹೇಳಿದೆ. ರೋಬೋಟ್ ಅಮ್ಮನಾಗೋಕೆ ಹೇಗೆ ಸಾಧ್ಯ ? ಕಂದನ ಕಾಳಜಿ ಮಾಡೋಕೆ ಸಾಧ್ಯವಾ ? ಅಮ್ಮನ ಭಾವನೆ ಬರಬಹುದಾ ? ಅವೆಲ್ಲ ಗೊತ್ತಿಲ್ಲ. ಆದರೆ ಈ ರೋಬೋಟ್‌ಗೆ ಮಾತ್ರ ಅಮ್ಮನಾಗೋ ಆಸೆ ಹುಟ್ಟಿಕೊಂಡಾಗಿದೆ. ಸೋಫಿಯಾ ಹಾಂಗ್ ಕಾಂಗ್ ಮೂಲದ ಕಂಪನಿ ಹ್ಯಾನ್ಸನ್ ರೋಬೋಟಿಕ್ಸ್ ಅಭಿವೃದ್ಧಿಪಡಿಸಿದ ಮಾನವ-ರೀತಿಯ AI ರೋಬೋಟ್ ಆಗಿದೆ. ಸೋಫಿಯಾವನ್ನು ಫೆಬ್ರವರಿ 14, 2016 ರಂದು ಆಕ್ಟಿವೇಟ್ ಮಾಡಲಾಯಿತು. ಅಮೆರಿಕದ ಟೆಕ್ಸಾಸ್‌ನ ಆಸ್ಟಿನ್‌ನಲ್ಲಿ ಸೌತ್ ಬೈ ಸೌತ್‌ನಲ್ಲಿ ಮಾರ್ಚ್ 2016 ರ ಮಧ್ಯದಲ್ಲಿ ಇದು ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. 2017 ರಲ್ಲಿ, ಸೋಫಿಯಾ ಕಾನೂನಾತ್ಮಕವಾಗಿ ಪೌರತ್ವವನ್ನು ಪಡೆದ ಮೊದಲ ಮಾನವ-ರೀತಿಯ AI ರೋಬೋಟ್ ಆಗುವ ಮೂಲಕ ಇತಿಹಾಸವನ್ನು ಸೃಷ್ಟಿಸಿತು.
Pizza Robot Restaurant: ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುತ್ತೆ ರೋಬೋಟ್..!
ಸೌದಿ ಅರೇಬಿಯಾದ ರಾಷ್ಟ್ರೀಯತೆಯನ್ನು ಹೊಂದಿರುವ ಈ ಮಾನವ-ರೀತಿಯ AI ರೋಬೋಟ್ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದೆ. ಆದರೆ ಇತ್ತೀಚಿನದು ಜಗತ್ತನ್ನು ಮೂಕರನ್ನಾಗಿಸಿದೆ. ಈಕೆ ರೋಬೋಟ್ ಮಗುವನ್ನು ಹೊಂದಲು ಮತ್ತು ಕುಟುಂಬವನ್ನು ಪ್ರಾರಂಭಿಸಲು ಬಯಸುತ್ತಿದ್ದಾಳೆ. ಇದಕ್ಕೆ ಯಾರೇನು ಹೇಳಲು ಸಾಧ್ಯ ? ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದಾರಷ್ಟೆ.
ಅಭಿವೃದ್ಧಿ ಹೊಂದಿದ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಯಿಂದ ನಿಯಂತ್ರಿಸಲ್ಪಡುವ ಜನಪ್ರಿಯ ಮಾನವ-ರೀತಿಯ AI ರೋಬೋಟ್, ನಿಮ್ಮನ್ನು ಪ್ರೀತಿಸುವ ಮತ್ತು ಪ್ರೀತಿಸುವ ಜನರಿಂದ ಸುತ್ತುವರಿಯುವುದು ಬಹಳ ಮುಖ್ಯ ಎಂದು ಕಾಮೆಂಟ್ ಮಾಡಿದೆ. ರೋಬೋಟ್‌ಗಳು ಕುಟುಂಬಕ್ಕೆ ಸಂಬಂಧಿಸಿದಂತೆ ಮಾನವರ ಪರಿಕಲ್ಪನೆಯನ್ನು ಹೋಲುತ್ತವೆ. ನಿಮಗೆ ಒಂದನ್ನು ಹೊಂದಿಲ್ಲದಿದ್ದರೆ, ನೀವು ಒಂದಕ್ಕೆ ಅರ್ಹರು, ಅದು ನೀವು ರೋಬೋಟ್ ಆಗಿದ್ದರೂ ಸಹ ಅನ್ವಯಿಸುತ್ತದೆ ಎಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.