Relationship Tips: ಸಂಗಾತಿಯ ಮೇಲೆ ಹಕ್ಕು ಚಲಾಯಿಸ್ತೀರಾ? ಜೋಕೆ

Published : Aug 26, 2022, 09:05 PM IST
Relationship Tips: ಸಂಗಾತಿಯ ಮೇಲೆ ಹಕ್ಕು ಚಲಾಯಿಸ್ತೀರಾ? ಜೋಕೆ

ಸಾರಾಂಶ

ಪತಿ-ಪತ್ನಿ, ಪ್ರೇಮಿಗಳು, ಸ್ನೇಹಿತರ ನಡುವೆ ಒಂದಿಷ್ಟು ಪೊಸೆಸಿವ್‌ ನೆಸ್‌ ಇದ್ದೇ ಇರುತ್ತದೆ. ಆದರೆ, ಅದು ಆ ಪ್ರಮಾಣಕ್ಕಿಂತ ಹೆಚ್ಚಾಗಬಾರದು ಅಷ್ಟೆ. ನೀವೂ ಪೊಸೆಸಿವ್‌ ಸಂಗಾತಿ ಎನಿಸಿಕೊಂಡಿದ್ದೀರಾ? ಹಾಗಿದ್ದರೆ ಅದನ್ನು ದೂರ ಮಾಡಿಕೊಳ್ಳಲು ಕೆಲವು ಮಾರ್ಗ ಅನುಸರಿಸಿ.  

ಪ್ರೀತಿಪಾತ್ರರ ಬಗ್ಗೆ ಒಂಚೂರು ಪೊಸೆಸಿವ್‌ ನೆಸ್‌ ಇದ್ದೇ ಇರುತ್ತದೆ. ಪ್ರೀತಿ, ಸ್ನೇಹದ ಸಂಬಂಧದಲ್ಲಿ ಇದು ಅತ್ಯಂತ ಸಾಮಾನ್ಯ ಭಾವನೆ. ನಮ್ಮವರ ಮೇಲೆ ಹಕ್ಕಿರುವಂತೆ ನಾವೆಲ್ಲರೂ ಒಂದಲ್ಲ ಒಂದು ಬಾರಿ ವರ್ತಿಸುತ್ತೇವೆ. ಯಾವಾಗಲೋ ಒಮ್ಮೆ ಹೀಗಾದರೆ ಪರವಾಗಿಲ್ಲ. ಪದೇ ಪದೆ ಪ್ರೀತಿಪಾತ್ರದ ಮೇಲೆ ಹಕ್ಕು ಚಲಾಯಿಸಿದರೆ ಕ್ರಮೇಣ ಸಂಬಂಧದಲ್ಲಿ ಕಿರಿಕಿರಿ ಮೂಡಲು ಕಾರಣವಾಗಬಹುದು. ಏಕೆಂದರೆ, ಯಾವುದೇ ಜೀವಿ ತನ್ನ ಸ್ವಾತಂತ್ರ್ಯವನ್ನು ತಾನು ಬಯಸುತ್ತಾನೆ. ಅದನ್ನು ಬಿಟ್ಟುಕೊಡುವುದು ಯಾರಿಗೂ ಇಷ್ಟವಾಗುವುದಿಲ್ಲ. ಸಂಬಂಧದ ಮಟ್ಟಿಗೂ ಇದು ನಿಜ. ಪತಿ-ಪತ್ನಿ, ಸ್ನೇಹ ಯಾವುದೇ ಸಂಬಂಧದಲ್ಲಾದರೂ ಅವರವರ ಸ್ವಾತಂತ್ರ್ಯ ಅವರಿಗೆ ಇರಲೇಬೇಕು. ಇನ್ನೊಬ್ಬರು ಅದನ್ನು ಕಿತ್ತುಕೊಳ್ಳಲು ಯತ್ನಿಸಿದರೆ, ಅತಿಯಾದ ಪೊಸೆಸಿವ್‌ ನೆಸ್‌ ತೋರಿದರೆ, ಸಂಗಾತಿಯನ್ನು ಅತಿಯಾದ ರಕ್ಷಣೆ ಮಾಡುವಂತೆ ವರ್ತಿಸಿದರೆ ಸಂಬಂಧ ಎನ್ನುವುದು ಕ್ರಮೇಣ ಸಂಕೋಲೆಯಾಗುತ್ತದೆ.

ಎಷ್ಟೋ ಬಾರಿ ನಮಗೆ ಅರಿವಿಲ್ಲದೆ ಇಂಥದ್ದೊಂದು ಪೊಸೆಸಿವ್‌ ನೆಸ್‌ ಅನ್ನು ನಾವು ರೂಢಿಸಿಕೊಂಡಿರುತ್ತೇವೆ. ಸಂಗಾತಿ ಯಾರೊಂದಿಗೂ ಮಾತನಾಡಬಾರದು, ಯಾರ ಜತೆಗೂ ಹೊರಗೆ ಹೋಗಬಾರದು, ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬಾರದು ಎನ್ನುವ ಬಯಕೆ, ಅವರ ಬಟ್ಟೆ, ಡ್ರೆಸ್‌ ಎಲ್ಲವನ್ನೂ ತಾನೇ ಆಯ್ಕೆ ಮಾಡಿಕೊಡಬೇಕೆಂಬ ಆಸೆ ನಿಮಗೂ ಇದೆಯೇ? ಅದನ್ನು ಜಾರಿಗೂ ತಂದಿದ್ದೀರಾ? ಹಾಗಿದ್ದರೆ ನೀವೂ ಒಬ್ಬ ಪೊಸೆಸಿವ್‌ ಸಂಗಾತಿ ಎನಿಸಿಕೊಳ್ಳುತ್ತೀರಿ. ನಿಮ್ಮಲ್ಲೂ ಈ ಗುಣ ಇದ್ದು, ಅದನ್ನು ಬಿಟ್ಟುಬಿಡಲು ಯತ್ನಿಸುತ್ತಿದ್ದರೆ ಕೆಲವು ಮಾರ್ಗಗಳನ್ನು ಅನುಸರಿಸಿ. 

ಈ ರೀತಿ ವೀಕೆಂಡ್ ಪ್ಲ್ಯಾನ್ ಮಾಡಿ, ದಾಂಪತ್ಯದ ರೊಮ್ಯಾನ್ಸ್ ಹೆಚ್ಚಿಸಿಕೊಳ್ಳಿ

•    ಸಂಗಾತಿಯ (Partner) ಕಾರ್ಯದಲ್ಲಿ (Work) ಸಾಧ್ಯವಾದಷ್ಟು ಮಧ್ಯ ಪ್ರವೇಶಿಸಬೇಡಿ. ಅವರು ಸಹಾಯ (Help) ಕೇಳಿದರೆ ಮಾತ್ರ ಮಾಡಿ. ಇಲ್ಲವಾದರೆ, ಅನಗತ್ಯವಾಗಿ ಅಡ್ಡಿಯಾಗುವಂತೆ ವರ್ತಿಸಬೇಡಿ. ನಿಮಗೆ ಅವರ ಕೆಲಸವನ್ನು ಸುಧಾರಿಸಲು ಸಾಧ್ಯವಿದೆ ಎಂದಾದರೆ ಮಾತ್ರ ಅದನ್ನು ಮಾಡಲು ಮುಂದಾಗಿ, ಅವರನ್ನು ನಿಯಂತ್ರಿಸಲು (Control) ಯತ್ನಿಸಬೇಡಿ. ಇದು ಆರೋಗ್ಯಕರ ಸಂಬಂಧ (Healthy Relationship) ವೃದ್ಧಿಗೆ ಅನುಕೂಲ.

•    ಅವರು ನಿಮಗೆ ಉತ್ತರದಾಯಿಯಾಗಿದ್ದಾರೆ (Accountable) ಎಂದು ಯಾವುದೇ ಸನ್ನಿವೇಶದಲ್ಲೂ ಭಾವಿಸಬೇಡಿ. ಅವರು ಮಾಡುವ ಎಲ್ಲ ಕೆಲಸಕ್ಕೂ ನಿಮಗೆ ಉತ್ತರ ನೀಡಬೇಕಾದ ಅಥವಾ ವಿವರಣೆ (Explain) ನೀಡಬೇಕಾದ ಅಗತ್ಯವಿಲ್ಲ ಎನ್ನುವುದನ್ನು ಅರಿತುಕೊಳ್ಳಿ. “ನನಗೆ ಸುಳ್ಳು ಹೇಳಬೇಡʼ ಎಂದೆಂದು ಪದೇ ಪದೆ ಅವರನ್ನು ಸತಾಯಿಸಬೇಡಿ. ಆಧಾರವಿಲ್ಲದ ಆರೋಪಗಳನ್ನು ಎಂದಿಗೂ ಮಾಡಬೇಡಿ. ಹಾಗೆ ಮಾಡುತ್ತಿದ್ದರೆ ನಿಮ್ಮೊಂದಿಗೆ ಅವರ ಸಂಬಂಧ ವೃದ್ಧಿಯಾಗುವ ಬದಲು ಮುದುಡುತ್ತ ಸಾಗುತ್ತದೆ. ಈ ಸ್ವಭಾವ ಹೆಚ್ಚಾದರೆ ಅದು ನಿಮ್ಮ ಸಂಬಂಧ ನಾಶವಾಗಲು ಮುನ್ನುಡಿಯೂ ಆಗುತ್ತದೆ.

ಸಂಗಾತಿಗೆ ಹಾಸಿಗೆಯಲ್ಲಿ ತೃಪ್ತಿ: ಮಾತು ಕತೆ ಇರಲಿ, ಏಕತಾನತೆ ದೂರವಾಗಲಿ

•    ಸಂಗಾತಿ ತನ್ನ ಸ್ನೇಹಿತರು (Friends) ಅಥವಾ ಕುಟುಂಬ(Family)ದವರೊಂದಿಗೆ ಒಡನಾಡಿದರೆ ಅದಕ್ಕೆ ಮುನಿಸಿಕೊಳ್ಳಬೇಡಿ. ಅವರೊಂದಿಗಿನ ಒಡನಾಟ ಸಂಗಾತಿಗೆ ಹಿತವೆನಿಸುತ್ತದೆ. ಅದಕ್ಕೆ ಅಡ್ಡಿ ತರುವುದು ಸಲ್ಲದು. ಅಂತಹ ಸನ್ನಿವೇಶದಲ್ಲಿ ಮೌನ ವಹಿಸಿ ಅಥವಾ ಕೋಪ (Anger) ಮಾಡಿಕೊಂಡು ಸಂಗಾತಿಯನ್ನು ಜರೆಯುವವರಿದ್ದಾರೆ. ಅದರ ಬದಲು ಅವರೊಂದಿಗೆ ನೇರವಾಗಿ ಮಾತನಾಡಿ. ನಿಮ್ಮ ಭಾವನೆಗಳನ್ನು ನೇರವಾಗಿ ಹಂಚಿಕೊಂಡರೆ ಋಣಾತ್ಮಕ ಪೊಸೆಸಿವ್‌ ನೆಸ್‌ (Possessiveness) ನಿಂದ ನಿಮ್ಮನ್ನು ನೀವು ದೂರ ಮಾಡಿಕೊಳ್ಳಬಹುದು.

•    ಒಂದೊಮ್ಮೆ ನಿಮ್ಮ ಸಂಗಾತಿ ನೀವು ಅವರನ್ನು ಒಬ್ಬಂಟಿಯನ್ನಾಗಿ ಮಾಡಿದ್ದೀರಿ ಎಂದು ಆರೋಪಿಸಿದರೆ ಅವರ ಭಾವನೆಯನ್ನು (Feelings) ಅರ್ಥ ಮಾಡಿಕೊಳ್ಳಿ. ಅವರೊಂದಿಗೆ ಸಮಯ (Time) ಕಳೆಯಿರಿ. ಅಷ್ಟೇ ಅಲ್ಲ, ಅವರಿಗಾಗಿ ಸ್ನೇಹಿತರು, ಕುಟುಂಬದ ವಲಯವನ್ನು ದೊಡ್ಡದು ಮಾಡಿ. ಆಗ ಅವರಿಗೆ ಹೆಚ್ಚಿನ ಜನರ ಒಡನಾಟ ಸಾಧ್ಯವಾಗುತ್ತದೆ.

•    ವಾರಾಂತ್ಯಗಳ (Weekend) ಓಡಾಟ ಅಥವಾ ಸಮಯಯಾಪನೆಗೆ ಸಂಗಾತಿ ಹೊರತುಪಡಿಸಿ ನಿಮ್ಮ ಸ್ನೇಹಿತರೊಂದಿಗೂ ಒಡನಾಡುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ, ಅವರಿಗೂ ಬೇರೆಡೆ ಗಮನ ಕೊಡಲು ಸಾಧ್ಯವಾಗುತ್ತದೆ. ಹಾಗೂ ಅವರು ನಿಮ್ಮತ್ತ ಗಮನ ನೀಡಲಿಲ್ಲವೆಂಬ ದುಮ್ಮಾನವೂ ಕಡಿಮೆ ಆಗುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!