
ಭಾರತ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಇಲ್ಲಿ ಎಲ್ಲಾ ವಿಚಾರಲ್ಲೂ ವಿಭಿನ್ನತೆಯಿದೆ. ಆಚರಣೆ, ಆಹಾರ, ಉಡುಗೆ-ತೊಡುಗೆ, ಭಾಷೆ ಎಲ್ಲದರಲ್ಲೂ ವಿಭಿನ್ನತೆಯನ್ನು ಕಾಣಬಹುದು. ಮದುವೆ ಸಂಪ್ರದಾಯದಲ್ಲಿಯೂ ಈ ವ್ಯತ್ಯಾಸವನ್ನು ಗುರುತಿಸಬಹುದು. ಭಾರತದಲ್ಲಿ ವಿವಿಧ ಜಾತಿಗಳು ಮತ್ತು ಬುಡಕಟ್ಟುಗಳು ಇರುವುದರಿಂದ ಅವರ ಸಂಪ್ರದಾಯಗಳು ಸಹ ವಿಭಿನ್ನವಾಗಿವೆ. ದೇಶದ ಮೂಲೆ ಮೂಲೆಯಲ್ಲೂ ಹಲವು ವಿಚಿತ್ರ ವಿವಾಹ ಪದ್ಧತಿಗಳಿದ್ದು, ಇಂದಿಗೂ ಅದನ್ನು ಅನುಸರಿಸಲಾಗುತ್ತಿದೆ. ಇಲ್ಲೊಂದು ರಾಜ್ಯದಲ್ಲಿ ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ. ಅರೆ, ಇದೆಂಥಾ ವಿಚಿತ್ರ ಅಂತೀರಾ ಇಲ್ಲಿದೆ ಹೆಚ್ಚಿನ ಮಾಹಿತಿ.
ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆಯಾಗುತ್ತಾರೆ
ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಒಂದು ಕುಟುಂಬದ (Family) ಎಲ್ಲಾ ಸಹೋದರರು ಒಂದೇ ಹುಡುಗಿಯನ್ನು ಮದುವೆ (Marriage)ಯಾಗುತ್ತಾರೆ. ಈ ಪದ್ಧತಿ ಬಹಳ ಹಳೆಯದಾಗಿದ್ದು, ಈ ಪದ್ಧತಿಯನ್ನು ಘೋಟುಲ್ ಆಚರಣೆ ಎಂದು ಕರೆಯಲಾಗುತ್ತದೆ. ಇದು ನಿನ್ನೆ ಮೊನ್ನೆಯ ಪದ್ಧತಿಯಲ್ಲ. ಹಿಮಾಚಲ ಪ್ರದೇಶ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ರೀತಿಯ ಒಂದಷ್ಟು ವಿಚಿತ್ರ ಮದುವೆಯ ಸಂಪ್ರದಾಯಗಳು ಆಚರಣೆಯಲ್ಲಿವೆ. ಅದರಲ್ಲೂ ಭಾರತದ ಹಿಮಾಚಲ ಪ್ರದೇಶದಲ್ಲಿ ನಡೆಯುತ್ತಿರುವಂತಹ ಈ ವಿಚಿತ್ರವಾದ ವಿವಾಹ ಪದ್ಧತಿ ಎಂಥವರಿಗಾದ್ರೂ ಗಾಬರಿ ಮೂಡಿಸುತ್ತೆ.
ಅರೆ..ಇದೆಂಥಾ ವಿಚಿತ್ರ, ಹುಡುಗರ ಸಹವಾಸಾನೇ ಬೇಡಾಂತ ಹಾಸಿಗೆಯನ್ನೇ ವರಿಸಿದ ಮಹಿಳೆ!
ಸಹೋದರರಲ್ಲಿ ದೊಡ್ಡಣ್ಣ ಮದುವೆಯ ಶಾಸ್ತ್ರ ನೋಡಿಕೊಳ್ಳುತ್ತಾನೆ
ಈ ಸಂಪ್ರದಾಯದ ಪ್ರಕಾರ, ಎಲ್ಲಾ ಸಹೋದರರು ಒಂದೇ ಹುಡುಗಿ (Girl)ಯನ್ನು ಮದುವೆಯಾಗುತ್ತಾರೆ. ಜನಪ್ರಿಯ ನಂಬಿಕೆಯ ಪ್ರಕಾರ, ಪಾಂಡವರು ತಮ್ಮ ಪತ್ನಿ ದ್ರೌಪದಿ ಮತ್ತು ತಾಯಿ ಕುಂತಿಯೊಂದಿಗೆ ಮಹಾಭಾರತದ ಅವಧಿಯಲ್ಲಿ ಕಿನ್ನೌರ್ ಜಿಲ್ಲೆಯ ಗುಹೆ (Cave)ಗಳಲ್ಲಿ ವಾಸಿಸುತ್ತಿದ್ದರು. ಅಂದಿನಿಂದ ಇಲ್ಲಿ ಈ ಪದ್ಧತಿ ನಡೆದುಕೊಂಡು ಬಂದಿದೆ ಎನ್ನಲಾಗಿದೆ. ಸಹೋದರರಲ್ಲಿ (Brothers) ದೊಡ್ಡಣ್ಣ ಮದುವೆಯ ಎಲ್ಲಾ ಶಾಸ್ತ್ರಗಳನ್ನು ನೋಡಿಕೊಳ್ಳುತ್ತಾನೆ. ಆ ಒಂದು ಹುಡುಗಿ ಇರುವ ಎಲ್ಲಾ ಸಹೋದರರನ್ನು ಮದುವೆ ಆಗುತ್ತಾಳೆ. ಆದರೆ ಈ ಮದುವೆಯ ನಂತ ಆಕೆ ಯಾರೊಂದಿಗೆ ಸಂಸಾರವನ್ನು ಮಾಡುತ್ತಾಳೆ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿಯಿಲ್ಲ.
ಆದರೆ ಹೆಂಡತಿಯೊಂದಿಗೆ ಯಾರು ಕೋಣೆಯಲ್ಲಿ ಮಲಗಬೇಕು ಎಂಬುದನ್ನು ಸಹೋದರರೇ ನಿರ್ಧರಿಸುತ್ತಾರೆ. ಸಹೋದರರಲ್ಲಿ ಯಾರಿಗೆ ಮಗುವಾದರೂ ತಮ್ಮದೇ ಮಗು (Baby)ವಿನಂತೆ ಸಂಭ್ರಮಿಸುತ್ತಾರೆ ಎಂದು ತಿಳಿದುಬಂದಿದೆ.
ಯಪ್ಪಾ..ಫಸ್ಟ್‌ನೈಟ್‌ಗೆ ಬೆಡ್‌ರೂಮ್‌ನಲ್ಲಿ ದಂಪತಿ ಜೊತೆ ವಧು ತಾಯಿಯೂ ಇರ್ಬೇಕಂತೆ !
ಟಿಬೆಟ್‌ನಲ್ಲಿ ಬಹಳ ವರ್ಷಗಳಿಂದ ಜಾರಿಯಲ್ಲಿರುವ ವಿವಾಹ ಪದ್ಧತಿ
ಟಿಬೆಟ್‌ನಲ್ಲಿ ಬಹಳ ವರ್ಷಗಳಿಂದ ಇಂಥಾ ವಿವಾಹ ಪದ್ಧತಿಯೊಂದು ಜಾರಿಯಲ್ಲಿದೆ. ಟಿಬೆಟಿಯನ್ ಕುಟುಂಬದಲ್ಲಿ ಕನಿಷ್ಠ ಒಬ್ಬರಾದಾರು ಸನ್ಯಾಸತ್ವ ಅಂದ್ರೆ ಬೌದ್ಧ ಧರ್ಮದ ಕೊನೆಯ ಹಂತಕ್ಕೆ ಹೋಗುತ್ತಲೇ ಇರುತ್ತಾರೆ. ಇಲ್ಲಿಯ ಮದುವೆಯನ್ನು ಪಾಲಿಯಾಂಡ್ರಿ ವಿವಾಹ ಎಂದು ಹೇಳಲಾಗುತ್ತದೆ. ಸಹೋದರರೆಲ್ಲಾ ಒಂದು ಹುಡುಗಿಯನ್ನು ಮದುವೆಯಾಗುವ ವಿಚಿತ್ರ ಸಂಪ್ರದಾಯ (Weird tradition)ವಿದು. ಇದನ್ನೇ ಹಿಮಾಚಲ ಪ್ರದೇಶದಲ್ಲಿ ಅನುಸರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಆದರೆ ಈಗ ಟಿಬೆಟ್‌ನಲ್ಲಿ ಇಂತಹ ವಿವಾಹ ಬಹಳ ಅಪರೂಪವಾಗಿದೆ. ಈ ವಿಚಿತ್ರವಾದ ಮದುವೆಯು ನಡೆದರೂ ಕೂಡ ಮುಚ್ಚಿಡುತ್ತಾರೆಯೇ ಹೊರತು ಎಲ್ಲರೊಂದಿಹೆ ಹಂಚಿಕೊಳ್ಳುವುದಿಲ್ಲ.ಈ ಸಂಪ್ರದಾಯವು ನಿಜಕ್ಕೂ ನಮಗೆ ವಿಚಿತ್ರ ಅಂತ ಅನಿಸಿದ್ರೂ, ಆ ಪ್ರಾಂತ್ಯದವರಿಗೆ ಇದು ವಿಶಿಷ್ಠ ಸಂಪ್ರದಾಯವಾಗಿದೆ. ಅದೇನೆ ಇರ್ಲಿ, ಕಾಲ ಅದೆಷ್ಟೇ ಬದಲಾದರೂ ಜನರ ಕೆಲವೊಂದು ಅರ್ಥಹೀನ ಆಲೋಚನೆಗಳು (Thinking), ಆಚರಣೆಗಳು ಇವತ್ತಿಗೂ ಬದಲಾಗದೆ ಸಮಾಜದಲ್ಲಿ ಹಾಗೆಯೇ ಉಳಿದು ಕೊಂಡಿರುವುದು ವಿಪರ್ಯಾಸವೇ ಸರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.