ಸೀರೆ ಕೊಡಿಸದ ಗಂಡನ ಪೊಲೀಸ್ ಠಾಣೆಗೆ ಮೆಟ್ಟಿಲೇರಿಸಿದ ಪತ್ನಿ, ಸಂಧಾನ ಮತ್ತಷ್ಟು ರೋಚಕ!

By Chethan Kumar  |  First Published Jul 30, 2024, 3:27 PM IST

ಪತಿ ಸೀರೆ ಕೊಡಿಸಿಲ್ಲ ಎಂದು ರಂಪಾಟ ಶುರುಮಾಡಿದ ಪತ್ನಿ ದೂರು ನೀಡಿದ್ದಾಳೆ. ಇವರ ಜಗಳ ವಿಚ್ಛೇದನ ಹಂತಕ್ಕೆ ತಲುಪಿದೆ. ಕೊನೆಗೆ ಪೊಲೀಸರು, ಕೌನ್ಸಿಲಂಗ್ ಅಧಿಕಾರಿಗಳು ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಧಾನ ಕೂಡ ಅಷ್ಟೇ ರೋಚಕವಾಗಿದೆ.
 


ಆಗ್ರ(ಜು.30) ಪತಿ ಹಾಗೂ ಪತ್ನಿ ನಡುವೆ ಕ್ಷುಲಕ್ಕೆ ಕಾರಣಕ್ಕೆ ಜಗಳವಾಗಿ ವಿಚ್ಚೇದ ಪಡೆದುಕೊಂಡ ಹಲವು ಘಟನೆಗಳಿವೆ. ಕುರ್ಕುರೆ ತಂದಿಲ್ಲ ಎಂದೂ ಡಿವೋರ್ಸ್ ಕೇಳಿದ ಘಟನೆಯೂ ನಡೆದಿದೆ. ಇದೀಗ ಪತಿ ಸೀರೆ ಕೊಡಿಸಿಲ್ಲ ಎಂದು ರಂಪಾಟ ನಡೆಸಿ  ವಿಚ್ಚೇದನ ಕೇಳಿದ ಘಟನೆ ಉತ್ತರ ಪ್ರದೇಶದ ಆಗ್ರದಲ್ಲಿ ನಡೆದಿದೆ. ಕೌನ್ಸಿಲಿಂಗ್ ಅಧಿಕಾರಿಗಳು, ಪೊಲೀಸರ ಸತತ ಸಂಧಾನ ಪ್ರಯತ್ನದಿಂದ ಪತ್ನಿ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

2022ರಲ್ಲಿ ಈ ಜೋಡಿ ಮುದುವೆಯಾಗಿದ್ದರು. ಆದರೆ ಕಳೆದ 6 ತಿಂಗಳಿನಿಂದ ಇವರಿಬ್ಬರ ನಡುವೆ ಹಲವು ಕಾರಣಗಳಿಗೆ ವಾಗ್ವಾದ ನಡೆದಿದೆ. ಕೊನೆಗೆ ಸೀರೆ ವಿಚಾರದಲ್ಲಿ ಆರಂಭಗೊಂಡ ಜಗಳ ತಾರಕಕ್ಕೇರಿದೆ. ಮನೆಯಲ್ಲಿ ರಂಪಾಟ ಶುರುವಾಗಿದೆ. ಮದುವೆಯಾಗಿ ಇಷ್ಟು ವರ್ಷ ಆಯ್ತು ಪ್ರೀತಿಯಿಂದ ಒಂದು ಸೇರಿಕೊಡಿಸಿಲ್ಲ ಎಂದು ಪತಿ ಜಗಳ ತೆಗೆದಿದ್ದಾಳೆ. ಇತ್ತ ಪತಿ ಕೂಡ ವಾಗ್ವಾದ ನಡೆಸಿದ್ದಾರೆ. ಇಷ್ಟು ದಿನ ಕೊಡಿಸಿರುವ ಸೀರೆ ಏನಾಗಿದೆ ಎಂದು ಮರು ಪ್ರಶ್ನಿಸಿದ್ದಾನೆ.ಈ ಸೀರೆ ಜಗಳ ಇಷ್ಟಕ್ಕೆ ನಿಲ್ಲಲಿಲ್ಲ.

Tap to resize

Latest Videos

5 ರೂ ಕುರ್ಕುರೆ ಪ್ಯಾಕೆಟ್ ತರದ ಗಂಡನಿಗೆ ಡಿವೋರ್ಸ್ ಕೊಟ್ಟ ಪತ್ನಿ, ಕೌನ್ಸಿಲಿಂಗ್ ಅಧಿಕಾರಿಗಳು ಸುಸ್ತು!

ರೊಚ್ಚಿಗೆದ್ದ ಪತ್ನಿ ನೇರವಾಗಿ ಪತಿ ವಿರುದ್ಧ ಹಲ್ಲೆ, ಮಾನಸಿಕ ಹಿಂಸೆ ದೂರು ದಾಖಲಿಸಿದ್ದಾಳೆ. ಆಗ್ರ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ದ ದೂರು ದಾಖಲಾಗಿದೆ. ಹೀಗಾಗಿ ಪೊಲೀಸರು ಪತಿ ಹಾಗೂ ಪತ್ನಿ ಇಬ್ಬರನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಇಬ್ಬರಲ್ಲೂ ಆರೋಪ ಕುರಿತು ಪ್ರಶ್ನಿಸಿದ್ದಾರೆ. ಪೊಲೀಸರ ಮುಂದೆ ಇಬ್ಬರ ಜಗಳ ಆರಂಭಗೊಂಡಿದೆ. ಆರೋಪ ಪ್ರತ್ಯಾರೋಪ ಜೋರಾಗಿದೆ. ಅಸಲಿ ಕಾರಣ ತಿಳಿದುಕೊಳ್ಳುವ ಪೊಲೀಸರ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. 

ದಿಕ್ಕು ತೋಚದ ಪೊಲೀಸರು ಇಬ್ಬರನ್ನು ಕೌನ್ಸಿಲಿಂಗ್ ಅದಿಕಾರಿಗಳ ಬಳಿಕ ಕರೆದುಕೊಂಡು ಬಂದಿದ್ದಾರೆ. ಬಳಿಕ ಕೌನ್ಸಿಲಿಂಗ್ ನಡೆಸಿದ್ದಾರೆ. ಈ ವೇಳೆ ಸೀರೆ ವಿಚಾರ ಬಯಲಾಗಿದೆ. ಪತಿ ಸೀರೆ ಕೊಡಿಸಿಲ್ಲ ಅನ್ನೋ ಮಾಹಿತಿ ತಿಳಿದ ಕೌನ್ಸಿಲಿಂಗ್ ಅಧಿಕಾರಿಗಳು ಪೊಲೀಸರು ದಂಗಾಗಿದ್ದಾರೆ. ಕೇವಲ ಒಂದು ಸೀರೆಯಿಂದ ಇವರಿಬ್ಬರ ಜಗಳ ಪೊಲೀಸ್ ಠಾಣೆ ಮೆಟ್ಟೇಲೇರಿತ್ತು. ಸಂಧಾನದ ವೇಳೆಯೂ ಪತ್ನಿ ತನ್ನ ಪಟ್ಟು ಬಿಟ್ಟಿಲ್ಲ. ಕೊನೆಗೆ ಗಂಡ ಪ್ರೀತಿಯಿಂದ, ನಗು ಮುಖದಲ್ಲಿ ದುಬಾರಿ ಸೀರೆ ಕೊಡಿಸಲು ಒಪ್ಪಿಕೊಂಡಿದ್ದಾನೆ. ಒಂದಿಷ್ಟು ಸಿಡುಕು ಮುಖ ಮಾಡದೇ ಸೀರೆ ಕೊಡಿಸಬೇಕು ಎಂದು ಹೆಂಡತಿ ಷರತ್ತು ಹಾಕಿದ್ದಾಳೆ. ಈ ಷರತ್ತಿಗೆ ಒಪ್ಪಿಕೊಂಡ ಬಳಿಕ ಇವರ ಸಂಧಾನ ಯಶಸ್ವಿಯಾಗಿದೆ.

ನಡು ರಸ್ತೆಯಲ್ಲಿ ಜೋಡಿಯ ರೊಮ್ಯಾನ್ಸ್, ಸಿನ್ಮಾ ಶೈಲಿಯಲ್ಲಿ ಎಸ್ಕೇಪ್ ಆದರೂ ಪಜೀತಿ ದೃಶ್ಯ ಸೆರೆ!

ಈ ರೀತಿಯ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ವಿಚ್ಚೇದನ ಪಡೆದುಕೊಂಡು ಘಟನೆಗಳು ಇವೆ. ಈ ರೀತಿಯ ಪ್ರಕರಣಗಳು ಸಂಬಂಧಗಳ ಅರ್ಥ ಕಳೆದುಕೊಳ್ಳುತ್ತಿದೆ ಅನ್ನೋ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಿದೆ. 
 

click me!