ಮದುವೆಗೆ ಬಂದ ವರನ ಮಾಜಿ ಗೆಳತಿ..! ಮೆನ್ ವಿಲ್ ಬಿ ಮೆನ್ ಎಂದ ನೆಟ್ಟಿಗರು!

Published : Jul 29, 2024, 07:39 PM ISTUpdated : Jul 30, 2024, 09:47 AM IST
ಮದುವೆಗೆ ಬಂದ ವರನ ಮಾಜಿ ಗೆಳತಿ..!  ಮೆನ್ ವಿಲ್ ಬಿ ಮೆನ್ ಎಂದ ನೆಟ್ಟಿಗರು!

ಸಾರಾಂಶ

ಮದುವೆಗೆ ಸಂಬಂಧಿಸಿದ ಸ್ಪೆಷಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮದುವೆಗೆ ವರನ ಮಾಜಿ ಗೆಳತಿ ಎಂಟ್ರಿ ಕೊಟ್ಟಿದ್ದಾಳೆ. ಇದನ್ನು ತಿಳಿದ ವಧು ಮಾಡಿದ್ದೇನು ಗೊತ್ತಾ?

ದುವೆ ಅನ್ನೋದು ಕೇವಲ ಇಬ್ಬರಿಗೆ ಸಂಬಂಧಿಸಿದಲ್ಲ. ಮದುವೆ ಎರಡು ಕುಟುಂಬಗಳ ಮಿಲನವಾಗಿರುತ್ತದೆ. ಅಪರಿಚಿತರಿಬ್ಬರು ಒಂದಾಗಿ ಜೊತೆಯಾಗಿ ಜೀವನ ನಡೆಸುತ್ತವೆ ಎಂದು ಒಪ್ಪಿಕೊಳ್ಳುವುದನ್ನು ಮದುವೆ ಎಂದು ಕರೆದುಕೊಳ್ಳಬಹುದು. ಇಂದು ಕಾಲ ಬದಲಾಗಿದ್ದು, ಮದುವೆಗೂ ಮುಂಚೆಯೇ ಹುಡುಗ-ಹುಡುಗಿ ಹಲವು ಬಾರಿ ಭೇಟಿಯಾಗಿ ಮಾತುಕತೆ ನಡೆಸಿರುತ್ತಾರೆ. ನಗರ ಪ್ರದೇಶಗಳಲ್ಲಿ ಇದನ್ನು ಡೇಟ್ ಅಂತ ಕರೆಯಲಾಗುತ್ತದೆ. ಈ ಸಮಯದಲ್ಲಿ ಇಬ್ಬರು ತಮ್ಮ ಇಷ್ಟ ಹಾಗೂ ಭವಿಷ್ಯದ ಕುರಿತು ದೀರ್ಘವಾಗಿ ಮಾತನಾಡಿಕೊಂಡಿರುತ್ತಾರೆ. ಹಾಗೆಯೇ ಇಂದು ಲವ್-ಬ್ರೇಕಪ್ ಬಹುತೇಕರ ಜೀವನದಲ್ಲಿ ನಡೆದಿರುತ್ತದೆ. ಇಂತಹ ವಿಷಯಗಳನ್ನು ಡೇಟ್ ಸಮಯದಲ್ಲಿ ಇಂದಿನ ಯುವ ಜನತೆ ಮುಕ್ತವಾಗಿ ಮಾತನಾಡುತ್ತಾರೆ. ಇದೇ ವಿಷಯದಿಂದ ಭವಿಷ್ಯದಲ್ಲಿ ಯಾವುದೇ ಸಮಸ್ಯೆಯಾಗದಿರಲಿ ಎಂಬುವುದು ಅವರ ಉದ್ದೇಶವಾಗಿರುತ್ತದೆ.

ಸೋಶಿಯಲ್ ಮೀಡಿಯಾದಲ್ಲೊಂದು ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮದುವೆಗೆ ಬಂದಿರುವ ಮಹಿಳಾ ಅತಿಥಿಯನ್ನು ವರನ ಮಾಜಿ ಗೆಳತಿ ಎಂದು ಹೇಳಲಾಗಿದೆ. ಯುವತಿ ಸ್ಟೇಜ್ ಮೇಲೆ ಬರುತ್ತಿದ್ದಂತೆ ವಧುವಿನ ಮುಖಭಾವ ದಿಢೀರ್ ಅಂತ ಬದಲಾಗುತ್ತಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ಆದ್ರೂ ವಧು ಯಾವುದೇ ಅಸಮಾಧಾನವನ್ನು ಬಹಿರಂಗವಾಗಿ ತೋರಿಸಿಲ್ಲ. ವರನ ಮಾಜಿ ಗೆಳತಿ ಬಂದು ವಧುವಿನ ಕೈ ಕುಲುಕುತ್ತಾಳೆ. ನಂತರ ಅಪ್ಪಿಕೊಂಡು ಶುಭಾಶಯಗಳನ್ನು ತಿಳಿಸುತ್ತಾಳೆ. ನಂತರ ವರನ ಕಿವಿಯಲ್ಲಿ ಏನು ಹೇಳುತ್ತಾಳೆ.  ಇದನ್ನು ಸಹ ವಧು ಓರೆ ಕಣ್ಣಿನಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಾಳೆ. 

ಸುಂದರಿ ಅಂತ ಮದ್ವೆಯಾದ, ವರ್ಷದ ಬಳಿಕ ರಹಸ್ಯ ತಿಳಿದಾಗ ಎಂಟು ಜನರ ವಿರುದ್ಧ ದೂರು ದಾಖಲಿಸಿದ

ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಬಹುಶಃ, ವಧುವಿಗೆ ಆ ಯುವತಿ ತನ್ನ ಗಂಡನ ಮಾಜಿ ಲವ್ವರ್ ಅಂತ ಗೊತ್ತಾಗಿರಬೇಕು ಅಲ್ಲವಾ ಅಂದಿದ್ದಾರೆ. ಮದುವೆಗೆ ಮುನ್ನ ವರ ತನ್ನ ಮಾಜಿ ಗೆಳತಿ ಬಗ್ಗೆ ಹೇಳಿಕೊಂಡಿರಬಹುದು. ಹಾಗಾಗಿಯೇ ವಧುವಿನ ಮುಖಚಹರೆಯೇ ಬದಲಾಗಿದೆ ಎಂದಿದ್ದಾರೆ. 

ವರ ತನ್ನ ಮಾಜಿ ಗೆಳತಿಯನ್ನು ಮದುವೆಗೆ ಕರೆದಿದ್ದರೆ, ಇದು ಆತನ ಜೀವನದ ಅತಿದೊಡ್ಡ ನಿರ್ಧಾರವಾಗುತ್ತದೆ ಎಂದಿದ್ದಾರೆ. ಫಸ್ಟ್ ನೈಟ್ ದಿನ ವಧು ಖಂಡಿತ ಈ ವಿಷಯವನ್ನು ಪ್ರಸ್ತಾಪಿಸಬಹುದು ಎಂದು ಹಲವರು ಊಹೆ ಮಾಡಿಕೊಂಡಿದ್ದಾರೆ. ಆದ್ರೆ ಈ ವಿಡಿಯೋ ಎಲ್ಲಿಯದ್ದು ಎಂಬುದರ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಕೆಲವರು ಆಕೆಯ ಗೆಳತಿ ಅಥವಾ ಸಂಬಂಧಿಯಾಗಿರಲಬಹುದು. ಮದುವೆ ಸ್ಟೇಜ್‌ನಲ್ಲಿ ಗಂಡ ಸುಂದರವಾದ ಹುಡುಗಿ ಜೊತೆ ಅತ್ಮೀಯವಾಗಿ ಮಾತನಾಡುತ್ತಿರೋದನ್ನು ಕಂಡು ವಧುವಿಗೆ ಹೊಟ್ಟೆ ಕಿಚ್ಚು ಉಂಟಾಗಿರಬಹುದು. ಮದುವೆ ದಿನ ಆದರೆ ಏನಾಯ್ತು? ಮೆನ್ ವಿಲ್ ಮೆನ್ ಅಲ್ಲವೇ ಎಂದು ನೆಟ್ಟಿಗರು ನಗೆ ಚಟಾಕಿ ಹಾರಿಸಿದ್ದಾರೆ.

ಸರಸ ಸಲ್ಲಾಪದಲ್ಲಿದ್ದಾಗಲೇ ಸಿಕ್ಕಿ ಬಿದ್ದ ಮಹಿಳೆ; ಮಕ್ಕಳ ಮುಂದೆ ಕಟ್ಟಿ ಹಾಕಿ ಥಳಿಸಿದ್ರು!

ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ....

https://youtube.com/shorts/dTOrmXcjaSM?si=j3gurci0-xhbd7Gl

https://www.youtube.com/shorts/dTOrmXcjaSM

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ