'ಪುರಿಯಲ್ಲಿ ಪ್ರೀತಿ ಮತ್ತು ಜೀವನವಿದೆ..' ಪೋಷಕರ ಸೂಪರ್‌ Love Story ಹಂಚಿಕೊಂಡ Rapper ಬಿಗ್‌ ಡೀಲ್‌!

By Santosh NaikFirst Published Jul 29, 2024, 5:35 PM IST
Highlights

ಪ್ರಖ್ಯಾತ ರಾಪರ್‌ ಬಿಗ್‌ ಡೀಲ್‌ ತಮ್ಮ ತಂದೆ-ತಾಯಿಯ ಲವ್‌ಸ್ಟೋರಿಯನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
 

ಮೀರ್ ರಿಶು ಮೊಹಾಂತಿ ಎಂದೂ ಕರೆಯಲ್ಪಡುವ ರಾಪರ್ ಬಿಗ್ ಡೀಲ್ ಇತ್ತೀಚೆಗೆ ತಮ್ಮ ಪೋಷಕರ ಇಂಟ್ರಸ್ಟಿಂಗ್‌ ಲವ್‌ ಸ್ಟೋರಿಯನ್ನು ಇನ್ಸ್‌ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ತಂದೆ ತಾಯಿಯ ನಡುವೆ ಇರುವ ನಿರಂತರ ಪ್ರೀತಿಯ ಬಗ್ಗೆ ಅವರು ಮಾತನಾಡಿದ್ದಾರೆ. ಬಿಗ್ ಡೀಲ್‌ನ ತಂದೆ ಭಾರತೀಯರಾಗಿದ್ದರೆ, ಅವರು ಜಾಯಿ ಜಪಾನ್‌ ಮೂಲದವರು. ಇವರಿಬ್ಬರ ನಡುವೆ ಇದ್ದ ಪ್ರೀತಿ, ಒಡಿಶಾದಲ್ಲಿ ಪ್ರೀತಿಯ ಹೋಟೆಲ್‌ಅನ್ನು ನಿರ್ಮಿಸಲು ಹೇಗೆ ಕಾರಣವಾಯಿತು ಅನ್ನೋದನ್ನ ಸಮೀರ್‌ ರಿಶು ಮೊಹಾಂತಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮೊಹಾಂತಿ, ಜಪಾನ್‌ ಪ್ರಜೆಯಾಗಿರುವ ತನ್ನ ತಾಯಿ, ಕಾಲೇಜು ದಿನಗಳಲ್ಲಿ ಜಗತ್ತಿನ್ನು ಪ್ರಯಾಣ ಮಾಡುವ ವೇಳೆ ಮೊದಲ ಬಾರಿಗೆ ಪುರಿಗೆ ಭೇಟಿ ನೀಡಿದ್ದರು. ಇಲ್ಲಿನ ನಗರದಿಂದ ಆಕರ್ಷಿತಳಾಗಿದ್ದ ಆಕೆ, ಪದವಿ ಮುಗಿದ ಬಳಿಕ ಪುರಿಯಲ್ಲಿಯೇ ಉಳಿಯಬೇಕು ಎಂದು ನಿರ್ಧಾರ ಮಾಡಿದ್ದರು. ಪುರಿಯಲ್ಲಿ ಉಳಿದುಕೊಂಡೇ ತಮ್ಮ ಪುಸ್ತಕವನ್ನು ಪೂರ್ತಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಗಮನಹರಿಸಿದ್ದರು.

ಆಕೆ ಪುರಿ ನಗರವನ್ನು ತುಂಬಾ ಇಷ್ಟಪಟ್ಟಿದ್ದಳು. ಅದೇ ಕಾರಣಕ್ಕಾಗಿ ಪದವಿ ಮುಗಿದ ಬಳಿಕ ಪುರಿಯಲ್ಲಿಯೇ ಉಳಿಯಬೇಕು ಎಂದು ಅವರು ನಿರ್ಧಾರ ಮಾಡಿದ್ದರು. ಅದರೊಂದಿಗೆ ತಮ್ಮ ಪುಸ್ತಕವನ್ನೂ ಮುಕ್ತಾಯ ಮಾಡಬೇಕು ಎಂದು ತೀರ್ಮಾನಿಸಿದ್ದರು. ಆದರೆ, ಆದಾಯದ ಮೂಲ ಬೇಕು ಅನ್ನೋದು ಎಲ್ಲರ ಪರಿಸ್ಥಿತಿಇಯೂ ಹೌದು. ಅದಕ್ಕಾಗಿ ಈಕೆ ಜಪಾನ್‌ನ ಪ್ರವಾಸಿಗರಿಗಾಗಿ ಹೋಟೆಲ್‌ಅನ್ನು ನಿರ್ಮಾಣ ಮಾಡಲು ಮುಂದಾಗಿದ್ದರು' ಎಂದು ಮೊಹಾಂತಿ ಒಡಿಯಾ ಭಾಷೆಯಲ್ಲಿ ವಿವರಿಸಿದ್ದಾರೆ.

Latest Videos

ಆದರೆ, ವಿದೇಶಿ ಪ್ರಜೆ ಎನ್ನುವ ಸ್ಥಾನಮಾನದ ಕಾರಣಕ್ಕಾಗಿ ಮೊಹಾಂತಿ ಅವರ ತಾಯಿ ತನ್ನ ಹೋಟೆಲ್‌ಗಾಗಿ ಭೂಮಿಯನ್ನು ಖರೀದಿ ಮಾಡಲು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಈ ಸಮಯದಲ್ಲಿ ಮೊಹಾಂತಿ ಅವರ ತಂದೆಯನ್ನು ಮೊದಲ ಬಾರಿಗೆ ಭೇಟಿಯಾಗಿದ್ದರು. ಇಬ್ಬರ ನಡುವೆಪ್ರೀತಿ ಚಿಗುರೊಡೆದ ಬಳಿಕ ಮದುವೆಯಾಗಲು ನಿರ್ಧಾರ ಮಾಡಿದರು. ಆ ಬಳಿಕ ಹೋಟೆಲ್‌ಅನ್ನು ಕಟ್ಟಲು ಮುಂದಾಗಿದ್ದರು. ಈ ಪೋಟೆಲ್‌ಗೆ ಲವ್‌ ಆಂಡ್‌ ಲೈಫ್‌ ಎನ್ನುವ ಹೆಸರಿಟ್ಟಿದ್ದರು. ಈ ಹೋಟೆಲ್‌ ಇಂದಿಗೂ ಪುರಿಯ ಅತ್ಯಂತ ಫೇಮಸ್‌ ಹೋಟೆಲ್‌ ಎನಿಸಿಕೊಂಡಿದೆ. 

"ಅವರು ಒಟ್ಟಿಗೆ ಹೋಟೆಲ್ ನಿರ್ಮಿಸಿ ಅದನ್ನು 'ಲವ್ ಮತ್ತು ಲೈಫ್' ಎಂದು ಕರೆಯುತ್ತಿದ್ದಂತೆ ಅವರು ವ್ಯಾಪಾರ ಪಾಲುದಾರರಾದರು. ಈ ಹೋಟೆಲ್ ಇಂದಿಗೂ ಪುರಿಯಲ್ಲಿ ಫೇಮಸ್‌ ಆಗಿದೆ" ಎಂದು ಮೊಹಾಂತಿ ತಿಳಿಸಿದ್ದಾರೆ. "ಇದು ನನ್ನ ತಾಯಿ ಮತ್ತು ತಂದೆಯ ಪ್ರೇಮಕಥೆಗೆ ಸಾಕ್ಷಿಯಾಗಿದೆ. ಕೆಲವು ಪ್ರೇಮ ಕಥೆಗಳು ಜೀವಿತಾವಧಿಯಲ್ಲಿ ಉಳಿಯುತ್ತವೆ ಎಂಬುದು ನಿಜ" ಎಂದು ಅವರು ತಿಳಿಸಿದ್ದಾರೆ.

ಪೋಸ್ಟ್ ಮಾಡಿದ ನಂತರ ವೀಡಿಯೊ ವ್ಯಾಪಕವಾಗಿ ವೈರಲ್‌ ಆಗಿದೆ. 680,000 ವೀಕ್ಷಣೆಗಳು ಮತ್ತು 72,000 ಲೈಕ್ಸ್‌ ಪಡೆದುಕೊಂಡಿದೆ. ಕಾಮೆಂಟ್‌ಗಳ ವಿಭಾಗದಲ್ಲಿ, ವೀಕ್ಷಕರು ಪ್ರೀತಿಯ ಕಥೆಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಬಾಡೂಟ ಆಯೋಜನೆ! ಸಂಪ್ರದಾಯಕ್ಕೆ ಎಳ್ಳು-ನೀರು ಬಿಟ್ಟ ಕಾವೇರಿ ನಿಗಮ ಅಧಿಕಾರಿಗಳು!

"ಆಗ್ರಾದಲ್ಲಿ ತಾಜ್ ಮಹಲ್ ಇದೆ, ಪುರಿಯಲ್ಲಿ ಪ್ರೀತಿ ಮತ್ತು ಜೀವನವಿದೆ. ತಾಯಿ ತುಂಬಾ ಮಹತ್ವಾಕಾಂಕ್ಷೆಯ ಮತ್ತು ದೃಢನಿರ್ಧಾರದ ವ್ಯಕ್ತಿಯಂತೆ ತೋರುತ್ತಾರೆ. ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇವೆ. ಅಮ್ಮಾ..' ಎಂದು ಕಾಮೆಂಟ್‌ ಮಾಡಿದ್ದಾರೆ. "ಅದೊಂದು ಸುಂದರ ಕಥೆ! ನಿಮ್ಮ ಪೋಷಕರು ಹೇಗೆ ಭೇಟಿಯಾದರು ಎಂಬುದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು." ಎಂದು ಮತ್ತೊಬ್ಬರು ಪೋಸ್ಟ್‌ ಮಾಡಿದ್ದಾರೆ.

ಒಲಿಂಪಿಕ್ಸ್ ಕಂಚು ಗೆಲ್ಲಲು ಮನು ಭಾಕರ್ ಮೇಲೆ ಕೇಂದ್ರ ಸರ್ಕಾರ ಖರ್ಚು ಮಾಡಿದ್ದು ಬರೋಬ್ಬರಿ ₹2 ಕೋಟಿ..!

 

click me!