ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ಅವರ ಎರಡನೇ ಮದುವೆಯ ಬಗ್ಗೆ ಚರ್ಚೆಗಳು ಹೆಚ್ಚಾಗಿದ್ದು, ಅಭಿಮಾನಿಗಳು ಮುಸ್ಲಿಂ ಹುಡುಗನನ್ನು ಮದುವೆಯಾಗಬೇಡಿ ಎಂದು ವಿಚಿತ್ರ ಸಲಹೆ ನೀಡಿದ್ದಾರೆ.
ಭಾರತದ ಪ್ರಖ್ಯಾತ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಇತ್ತೀಚಿನ ವರ್ಷಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣಕ್ಕಾಗಿ ಸಾಕಷ್ಟು ಸುದ್ದಿಯಲ್ಲಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲೀಕ್‌ರಿಂದ ವಿಚ್ಛೇದನ ಪಡೆದುಕೊಂಡ ಬಳಿಕ, ಸಾನಿಯಾ ಮಿರ್ಜಾ ಅವರ ಜೀವನ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ವಿಚ್ಛೇದನ ಪಡೆದುಕೊಂಡ ಬಳಿಕ ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನದಲ್ಲಿ ಖುಷಿಯಾಗಿಯೇ ಇದ್ದಾರೆ. ಮಗನೊಂದಿಗೆ ದುಬೈನಲ್ಲಿ ಜೀವನ ಕಳೆಯುತ್ತಿರುವ ಸಾನಿಯಾ ಮತ್ತೊಂದು ಮದುವೆ ಆಗ್ತಾರೆ ಅನ್ನೋ ರೀತಿಯ ಸುದ್ದಿಗಳು ಬರುತ್ತಲೇ ಇವೆ. ಅದರಲ್ಲೂ ಕ್ರಿಕೆಟಿಗ ಮೊಹಮದ್ ಶಮಿ ಅವರೊಂದಿಗೆ ಇನ್ನೇನು ವಿವಾಹವಾಗೇಬಿಟ್ಟರು ಎನ್ನುವಷ್ಟರ ಮಟ್ಟಿಗೆ ಸುದ್ದಿಯಾಗಿತ್ತು.
ಇನ್ನೊಂದೆಡೆ ಶೋಯೆಬ್ ಮಲೀಕ್ ಪಾಕಿಸ್ತಾನಿ ಮೂಲದ ನಟಿ ಸನಾ ಜಾವೇದ್ ಅವರೊಂದಿಗೆ ಮೂರನೇ ವಿವಾಹವಾಗಿ ಮತ್ತೊಮ್ಮೆ ಸಾಂಸಾರಿಕ ಜೀವನದ ಖುಷಿ ಕಾಣುತ್ತಿದ್ದಾರೆ. ಹನಿಮೂನ್, ಟ್ರಾವೆಲ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮಲೀಕ್ ಅವರೊಂದಿಗೆ ತಮ್ಮ ಜೀವನ ಸಖತ್ ಆಗಿದೆ ಅನ್ನೋ ಸೂಚನೆ ಕೊಟ್ಟಿದ್ದಾರೆ.
ಇದರ ನಡುವೆ ಹೆಚ್ಚಿನವರು ಸಾನಿಯಾ ಮಿರ್ಜಾ ಕೂಡ 2ನೇ ಮದುವೆಯಾಗಬೇಕು ಎಂದು ಬಯಸಿದ್ದಾರೆ. ಸಾನಿಯಾ ಮಿರ್ಜಾ ಮತ್ತೊಂದು ಮದುವೆ ಆಗುವ ಬಗ್ಗೆ ಯೋಚನೆ ಮಾಡಬೇಕು. ಇನ್ನೂ ಅವರಿಗೆ ವಯಸ್ಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ವಿಚ್ಛೇದನದ ಬಳಿಕ ಹೈದಾರಾಬಾದ್ ಹಾಗೂ ದುಬೈ ಅಂದುಕೊಂಡು ಸಾನಿಯಾ ಮಿರ್ಜಾ ಓಡಾಟ ಮಾಡ್ತಿದ್ದಾರೆ. ಸಿಂಗಲ್ ಮದರ್ ಆಗಿ ಮಗನನ್ನು ಬೆಳೆಸುವ ಪಣ ತೊಟ್ಟಿದ್ದಾರೆ.
ಇದರ ನಡುವೆ 2ನೇ ಮದುವೆಯ ವಿಚಾರವಾಗಿ ಸಾನಿಯಾಗೆ ಅಭಿಮಾನಿಗಳು ಕೊಂಚ ಡಿಫರೆಂಟ್ ಆದ ಸಲಹೆಯನ್ನು ನೀಡಿದ್ದಾರೆ. ಸಾನಿಯಾ ಮಿರ್ಜಾ ಪೋಸ್ಟ್‌ವೊಂದಕ್ಕೆ ಕಾಮೆಂಟ್ ಮಾಡಿರುವ ಅಭಿಮಾನಿಯೊಬ್ಬ, ನೀವು ಹೊಸ ಜೀವನನ್ನು ಆರಂಭ ಮಾಡಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನಿ ಗಾಯಕ ಉಮೈರ್ ಜಸ್ವಾಲ್ ಜೊತೆ ಸಾನಿಯಾ ಮಿರ್ಜಾ 2ನೇ ಮದುವೆ?
ಸಾನಿಯಾ ಮಿರ್ಜಾ ನೀವು ಹೊಸ ಜೀವನವನ್ನು ಆರಂಭ ಮಾಡಬೇಕು ಎನ್ನುವುದು ನಮ್ಮ ಬಯಕೆ. ಆದರೆ, ಯಾವುದೇ ಕಾರಣಕ್ಕೂ ಮುಸ್ಲಿಂ ಹುಡುಗನನ್ನು ಮದುವೆ ಆಗಬೇಡಿ ಎಂದು ಸಲಹೆ ನೀಡಿದ್ದಾರೆ. ಅಭಿಮಾನಿಯೊಬ್ಬನ ಈ ಸಲಹೆ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಇನ್ನು ಮೊಹಮದ್ ಶಮಿ ಜೊತೆಗಿನ ವಿವಾಹದ ಬಗ್ಗೆ ಸಾನಿಯಾ ಮಿರ್ಜಾ ತಂದೆ ಪ್ರತಿಕ್ರಿಯೆ ನೀಡಿ, ಈ ಸುದ್ದಿಗಳು ಆಧಾರರಹಿತ ಎಂದು ಹೇಳಿದ್ದಾರೆ.