12 ವರ್ಷದ ಮೊದಲೇ ಮತ್ತೊಂದು ಮದ್ವೆಯಾಗಿದ್ದ ಗಂಡ, ಸಂಸಾರ ರಹಸ್ಯದ ಗುಟ್ಟು ರಟ್ಟಾಯ್ತು!

By Suvarna NewsFirst Published Jan 2, 2024, 3:24 PM IST
Highlights

ಮದುವೆ ಇಬ್ಬರ ನಂಬಿಕೆ, ವಿಶ್ವಾಸದ ಮೇಲೆ ನಿಂತಿರುತ್ತದೆ. ಹಾಗಂತ ಕುರುಡು ನಂಬಿಕೆಯಲ್ಲಿರೋದು ತಪ್ಪು. ಇದನ್ನು ಬಂಡವಾಳ ಮಾಡಿಕೊಳ್ಳುವ ಕೆಲವರು ಪತ್ನಿಗೆ ಮೋಸ ಮಾಡ್ತಾರೆ. ಇದಕ್ಕೆ ಈ ವ್ಯಕ್ತಿ ಸಾಕ್ಷ್ಯ. 
 

ಪತ್ನಿಯೊಬ್ಬಳು ಪತಿಯಿಂದ ವಿಚ್ಛೇದನ ಪಡೆದಿದ್ದಲ್ಲದೆ ಅದೇ ಸಂದರ್ಭದಲ್ಲಿ ಆತನ ವಿರುದ್ಧ ದೂರು ನೀಡಿದ್ದಾಳೆ. ಆತನ ಬಳಿ ಎಷ್ಟು ಸಂಪತ್ತಿದೆ ಹಾಗೂ ಆತ ಹಣವನ್ನು ಏನು ಮಾಡ್ತಿದ್ದಾನೆ ಎನ್ನುವ ಕುರಿತು ನನಗೆ ಮಾಹಿತಿ ಬೇಕು ಎಂದು ಮಹಿಳೆ ಕೋರ್ಟ್ ಗೆ ಕೇಳಿದ್ದಳು. ಆಕೆಗೀಗ ಉತ್ತರ ಸಿಕ್ಕಿದೆ. ಪತಿ, ಪತ್ನಿಗೆ ಗೊತ್ತಿಲ್ಲದೆ ಇನ್ನೊಂದು ಸಂಸಾರ ನಡೆಸ್ತಿದ್ದ ಎಂಬ ಸತ್ಯ ಅರಿತ ಮೇಲೆ ವಿಚ್ಛೇದನ ನೀಡಿದ್ದ ಮಹಿಳೆ, ಈಗ ಪತಿ, ಇನ್ನೊಂದು ಪತ್ನಿಗೆ ಮಾಡಿದ್ದ ಆಸ್ತಿಯಲ್ಲಿ ಪಾಲು ಕೇಳುವ ನಿರ್ಧಾರಕ್ಕೆ ಬಂದಿದ್ದಾಳೆ. ಮೊದಲ ಪತ್ನಿಗೆ ಕೋರ್ಟ್, ನಾಲ್ಕು ಫ್ಲಾಟ್ ನೀಡುವಂತೆ ಸೂಚನೆ ನೀಡಿದ್ದಲ್ಲದೆ, ಎರಡನೇ ಪತ್ನಿ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದೆ.

ವಿವಾಹೇತರ ಸಂಬಂಧದಲ್ಲಿ ಜನರು ನಂಬಿದವರಿಗೆ ಮೋಸ (Cheating) ಮಾಡ್ತಾರೆ. ಅವರಿಗೆ ಸ್ವಲ್ಪವೂ ಅನುಮಾನ ಬರದಂತೆ ತಮ್ಮ ಇನ್ನೊಂದು ಸಂಬಂಧ (Relationship) ವನ್ನು ಮುಂದುವರೆಸುತ್ತಾರೆ. ಅದಕ್ಕೆ ಈ ವ್ಯಕ್ತಿ ಕೂಡ ಹೊರತಾಗಿಲ್ಲ. 12 ವರ್ಷದ ಹಿಂದೆಯೇ ಇನ್ನೊಂದು ಸಂಸಾರ ಶುರು ಮಾಡಿದ್ದ ವ್ಯಕ್ತಿ, ಪತ್ನಿಗೆ ನಿರಂತರವಾಗಿ ಸುಳ್ಳು ಹೇಳಿದ್ದಾನೆ. ಇದರ ಅರಿವಿಲ್ಲದೆ ಪತಿಯನ್ನು ಸಂಪೂರ್ಣ ನಂಬಿದ್ದ ಪತ್ನಿಗೆ ಕೊನೆಗೂ ಸತ್ಯ ಗೊತ್ತಾಗಿದೆ. ಘಟನೆ ಚೀನಾ (China) ದ ಝೆಜಿಯಾಂಗ್ ಪ್ರಾಂತ್ಯದಲ್ಲಿ ನಡೆದಿದೆ.  

Latest Videos

ಈ ರಾಶಿಯವರು ಚುಂಬಿಸುವುದರಲ್ಲಿ ನಿಸ್ಸೀಮರು.. ನೀವು ಪಟ್ಟಿಯಲ್ಲಿದ್ದೀರಾ?

ಮನೆಗೆ ಸಾಲಗಾರರು ಬಂದಾಗ ಗೊತ್ತಾಯ್ತು ಸತ್ಯ : ವಾಂಗ್ ಶಿಯಾ ಎಂಬ ಮಹಿಳೆ ಪತಿ ಚೆನ್  ಮೋಸ ಮಾಡಿದ ವ್ಯಕ್ತಿ. ಆತನ ಮನೆಗೆ ಕೆಲ ಸಾಲಗಾರರು ಬಂದಿದ್ದು. ಮೂವತ್ತು ವರ್ಷಗಳ ಹಿಂದೆ ಚೆನ್ ಶುರು ಮಾಡಿದ್ದ ಕಂಪನಿ ಬಗ್ಗೆ ಅವರು ಮಾತನಾಡಿದ್ದಲ್ಲದೆ ಸಾಲ ತೀರಿಸುವಂತೆ ಕೇಳಿದ್ದಾರೆ. ಇದೇ ಸಂದರ್ಭದಲ್ಲಿ ವಾಂಗ್ ಶಿಯಾಗೆ ಶಾಕ್ ಆಗಿದೆ. ಚೆನ್ ಇನ್ನೊಂದು ಸಂಬಂಧ ಹೊಂದಿದ್ದಾನೆ, ಆಕೆಗೆ ಒಂದು ಮಗುವಿಗೆ ಎಂಬ ಸತ್ಯ ಗೊತ್ತಾಗಿದೆ.

ಚೆನ್, ಇನ್ನೊಂದು ಸಂಬಂಧ ಹೊಂದಿದ್ದಲ್ಲದೆ ಆ ಕುಟುಂಬಕ್ಕೆ ಹಣದ ಸಹಾಯ ಮಾಡ್ತಿದ್ದ. ತನ್ನ ಸಹೋದರ ಮತ್ತು ತಂದೆಗೆ 10 ಮಿಲಿಯನ್ ಯುವಾನ್ ಅನ್ನು ವರ್ಗಾಯಿಸಿದ್ದ. ಈ ಹಣವನ್ನು ಎರಡನೇ ಕುಟುಂಬಕ್ಕೆ ಬಳಸಿಕೊಳ್ತಿದ್ದ. 

ಪತಿಯ ಕಣ್ಣಿಗೆ ಬಟ್ಟೆ ಕಟ್ಟಿ ಡಿಫರೆಂಟಾಗಿ ಗರ್ಭಿಣಿ ವಿಷ್ಯ ತಿಳಿಸಿದ ನಟಿ ಅದಿತಿ: ವಿಡಿಯೋ ನೋಡಿ ಆಹಾ ಎಂದ ಫ್ಯಾನ್ಸ್​

ಪತಿಗೆ ಇನ್ನೊಂದು ಸಂಬಂಧವಿದೆ ಎಂಬುದು ಗೊತ್ತಾದಾಗ ವಾಂಗ್ ಶಿಯಾ ಆಘಾತಕ್ಕೊಳಗಾಗಿದ್ದಳು. ಈ ಸಮಯದಲ್ಲಿ ವಾಂಗ್ ಕಾಲಿಗೆ ಬಿದ್ದಿದ್ದ ಚೆನ್, ತನ್ನನ್ನು ಬಿಟ್ಟು ಹೋಗದಂತೆ ಬೇಡಿಕೊಂಡಿದ್ದ. ಮಗ ಹಾಗೂ ವಾಂಗ್ ಳನ್ನು ಪ್ರೀತಿ ಮಾಡೋದಾಗಿ ಹೇಳಿದ್ದ. ಮಗನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಂದಿಕೊಂಡು ಬದುಕಲು ವಾಂಗ್ ನಿರ್ಧರಿಸಿದ್ದಳು. ಒಂದು ವರ್ಷದ ನಂತ್ರ ವಾಂಗ್ ಮಗ, ವಿಚ್ಛೇದನಕ್ಕೆ ಒಪ್ಪಿಗೆ ನೀಡಿದ್ದ. ನೀವಿಬ್ಬರು ಬೇರೆಯಾದ್ರೆ ನನಗೆ ಸಮಸ್ಯೆ ಇಲ್ಲ ಎಂದಿದ್ದ. ಆ ನಂತ್ರ ವಾಂಗ್, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ವಾಂಗ್, ಹೌಸ್ ವೈಫ್ ಆಗಿದ್ದ ಕಾರಣ ಕೋರ್ಟ್, ವಾಂಗ್ ಗೆ ಚೈನ್ ನಾಲ್ಕು ಮನೆ ನೀಡುವಂತೆ ಸೂಚನೆ ನೀಡಿತ್ತು. 

ವಿಚ್ಛೇದನವಾದ್ರೂ ಪತಿ ಏನು ಬ್ಯುಸಿನೆಸ್ ಮಾಡ್ತಾನೆ ಎಂಬುದು ವಾಂಗ್ ಗೆ ತಿಳಿದಿರಲಿಲ್ಲ. ಈ ಬಗ್ಗೆ ಮಾಹಿತಿ ನೀಡುವಂತೆ ವಾಂಗ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು. ಆ ವೇಳೆ, ಚೈನ್ ಹಣವನ್ನು ಸಹೋದರ ಮತ್ತು ತಂದೆಗೆ ವರ್ಗಾಯಿಸಿದ್ದಾನೆ ಎಂಬುದು ಗೊತ್ತಾಗಿತ್ತು. ಎರಡನೇ ಪತ್ನಿ ಹೆಸರಿನಲ್ಲೂ ಚೈನ್ ಕೆಲ ಆಸ್ತಿ ಮಾಡಿದ್ದು, ಅದ್ರಲ್ಲೂ ಪಾಲುಬೇಕೆಂದು ವಾಂಗ್ ಬೇಡಿಕೆ ಇಟ್ಟಿದ್ದಾಳೆ. ಈ ಬಗ್ಗೆ ಕೋರ್ಟ್ ಯಾವುದೇ ತೀರ್ಪು ನೀಡಿಲ್ಲ. ವಿಚಾರಣೆ ನಡೆಯುತ್ತಿದೆ.  
 

click me!