ಪ್ರಪಂಚದಲ್ಲಿ ತುಂಬಾ ವಿರಳವಾಗಿ ಕಾಣ ಸಿಗುವ ಇಂತಹ ಮಹಾನ್ ವ್ಯಕ್ತಿಗಳ ಸ್ಟೋರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅದೇ ರೀತಿ ಹೃದಯದಲ್ಲಿ ಅತೀ ಶ್ರೀಮಂತನಾದ ವ್ಯಕ್ತಿಯೊಬ್ಬರ ಸ್ಟೋರಿಯೊಂದು ಈಗ ವೈರಲ್ ಆಗಿದೆ.
ಪ್ರಪಂಚದಲ್ಲಿ ಹೊಟ್ಟೆ ತುಂಬಾ ಊಟ ಮಾಡುವವರು ಕೆಲವರಾದರೆ, ತಿಂದಿದ್ದು ಹೆಚ್ಚಾಗಿ ಚೆಲ್ಲುವವರು ಅನೇಕರು, ಒಂದು ಹೊತ್ತಿನ ಊಟಕ್ಕಾಗಿ ಪರದಾಡುವವರು ಇನ್ನು ಕೆಲವರು ಇಂತಹವರ ನಡುವೆ ತಮ್ಮ ಹೊಟ್ಟೆಗಿಲ್ಲದಿದ್ದರು ತಮ್ಮ ಜೊತೆಯಲ್ಲಿರುವವರ ಹೊಟ್ಟೆ ತುಂಬಿಸಲು ಕಷ್ಟಪಡುವವರು ಅನೇಕರು. ಪ್ರಪಂಚದಲ್ಲಿ ತುಂಬಾ ವಿರಳವಾಗಿ ಕಾಣ ಸಿಗುವ ಇಂತಹ ಮಹಾನ್ ವ್ಯಕ್ತಿಗಳ ಸ್ಟೋರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತವೆ. ಅದೇ ರೀತಿ ಹೃದಯದಲ್ಲಿ ಅತೀ ಶ್ರೀಮಂತನಾದ ವ್ಯಕ್ತಿಯೊಬ್ಬರ ಸ್ಟೋರಿಯೊಂದು ಈಗ ವೈರಲ್ ಆಗಿದೆ.
ಮನುಷ್ಯನಿಗೆ ತಲೆ ಮೇಲೆ ತನ್ನದೇ ಎನ್ನುವ ಸೂರೊಂದಿದ್ದರೆ ನೆಮ್ಮದಿ ಇರುವುದು ಎಂಬ ಭಾವನೆ ಇದೆ. ಆದರೆ ಇಲ್ಲಿರುವ ಈ ಮಹಾನ್ ವ್ಯಕ್ತಿಗೆ ತಲೆ ಮೇಲೆ ಸೂರಿಲ್ಲ, ಒಂದು ಹೊತ್ತಿನ ಊಟ ನೀಡುವವರಿಲ್ಲ ಆದರೂ ಆತ ತನ್ನ ಜೊತೆ ಇರುವುದರಲ್ಲೇ ತನ್ನ ಮುದ್ದಿನ ಶ್ವಾನವೂ ಮಲಗುವುದಕ್ಕೆ ಜಾಗ ನೀಡಿ ಔದಾರ್ಯತೆ ಮೆರೆದಿದ್ದಾನೆ. ತನ್ನ ಹೊಟ್ಟೆ ತುಂಬಿಲ್ಲದಿದ್ದರೂ ತನ್ನ ನಂಬಿರುವ ಶ್ವಾನದ ಹೊಟ್ಟೆ ತುಂಬಿಸುವುದಕ್ಕಾಗಿ ಕಷ್ಟಪಡುತ್ತಾನೆ. ಸೌಂಡ್ ಆಫ್ ಸ್ಯಾಂಡ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್ಲೋಡ್ ಆಗಿದ್ದು ಈಗ ವೈರಲ್ ಆಗಿದೆ.
undefined
ಮುದ್ದು ಮಾಡಲು ಬಳಿ ಬಂದ ನಾಯಿಮರಿಯನ್ನು ಹೊಡೆದು ಕೊಂದ ಪಾಪಿ!
ವೀಡಿಯೋದಲ್ಲಿ ಕಾಣಿಸುವಂತೆ ಸಾಧುವೊಬ್ಬರು ರಸ್ತೆ ಬದಿ ಸಣ್ಣದೊಂದು ಚಾದರವನ್ನು ಹಾಸಿ ಪಕ್ಕದಲ್ಲೇ ತನ್ನ ಪುಟ್ಟ ಬ್ಯಾಗನ್ನು ಇರಿಸಿಕೊಂಡು ಕುಳಿತಿದ್ದಾರೆ. ಇವರು ಕುಳಿತ ಚಾದರದಲ್ಲೇ ಸಣ್ಣದೊಂದು ನಾಯಿಮರಿ ಮಲಗಿಕೊಂಡಿದೆ. ಇವರನ್ನು ಗಮನಿಸಿದ ವ್ಯಕ್ತಿಯೊಬ್ಬರು, ನಿಮ್ಮ ಹೊಟ್ಟೆ ತುಂಬಿಸುವುದಕ್ಕೆ ಯಾರೂ ಇಲ್ಲ. ಆದರೂ ನೀವು ಈ ನಾಯಿಮರಿಯ ಕಾಳಜಿ ಬಗ್ಗೆ ಗಮನಹರಿಸುತ್ತಿದ್ದೀರಲ್ಲ ಎಂದು ಕೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಈ ಸಾಧು, ಹೌದು ಮಾಡಬೇಕು. ಒಂದು ವೇಳೆ ನಮ್ಮ ಮಕ್ಕಳೇ ಆಗಿದ್ದರೆ ನಾವಿದರ ಕಾಳಜಿ ಮಾಡುತ್ತಿರಲಿಲ್ಲವೇ ಎಂದು ಪ್ರಶ್ನೆ ಕೇಳಿದವರನ್ನೇ ಮರು ಪ್ರಶ್ನಿಸಿದ್ದಾರೆ ಈ ಸಾಧ್ವಿ.
ಸೌಂಡ್ ಆಫ್ ಸ್ಯಾಂಡ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಅಪ್ಲೋಡ್ ಆಗಿದ್ದು, ವೀಡಿಯೋ ಪೋಸ್ಟ್ ಮಾಡಿದ ವ್ಯಕ್ತಿ ಹೀಗೆ ಬರೆದುಕೊಂಡಿದ್ದಾರೆ. "ನಂಬಲು ಅಸಾಧ್ಯವೆನಿಸುವ ಕರುಣೆಯೇ ತುಂಬಿರುವ ಈ ಸಾಧುವನ್ನು ನಾನು ಮುಂಬೈನ ಪರ್ಪಲ್ ಹೇಜ್ ಸ್ಟುಡಿಯೋದ ಹೊರಭಾಗದಲ್ಲಿ ನೋಡಿದೆ. ಇವರು ಕೊನೆಯದಾಗಿ ಯಾವಾಗ ಊಟ ಮಾಡಿದ್ದಾರೆ ಎಂಬುದು ಗೊತ್ತಿಲ್ಲ, ಆದರೆ ಇವರು ತನಗಿಂತ ತನ್ನ ಜೊತೆ ಇರುವ ಶ್ವಾನದ ಹೊಟ್ಟೆ ತುಂಬಿಸಲು ಮೊದಲ ಆದ್ಯತೆ ನೀಡಿದ್ದಾರೆ. ಪುಟ್ಟ ನಾಯಿಮರಿಗೆ ಹಾಲು ಹಾಗೂ ಆಹಾರದ ವ್ಯವಸ್ಥೆ ಮಾಡಲು ಯಶಸ್ವಿಯಾದರು. ಇಂತಹವರು ಕರುಣೆ, ದಯೆ ತೋರಿಸಲು ಹೆಚ್ಚಿನ ಶ್ರಮ ಬೇಡ ಎಂಬುದನ್ನು ತೋರಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಮದ್ವೆಯಾದ ಅಪ್ಪನಿಗೇ ಬೇಡವಾದ ಹೆತ್ತ ಮಗ, ಒಂದೂ ಕ್ಷಣವೂ ಬಿಡುತ್ತಿಲ್ಲ ನಿರ್ಗತಿಕ ಶ್ವಾನ!
ಈ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದು, ಅನೇಕರು ಈ ಕರುಣಾಮಯಿಗೆ ಸಹಾಯ ಮಾಡುವುದಕ್ಕಾಗಿ ಆತನಿರುವ ಸ್ಥಳದ ವಿವರ ತಿಳಿಸುವಂತೆ ಮನವಿ ಮಾಡಿದ್ದಾರೆ. ಮತ್ತೆ ಕೆಲವರು ಈ ಸಾಧುವಿನ ಕತೆಯನ್ನು ಹಂಚಿಕೊಂಡ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ. ಶ್ವಾನಗಳು ನಾವು ಪ್ರೀತಿಯ ನೂರುಪಟ್ಟು ಹೆಚ್ಚು ಪ್ರೀತಿ ತೋರುತ್ತವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕರುಣೆಯಲ್ಲಿ ಸುಖವಿದೆ ಎಂಬುದನ್ನು ಸಾರಿ ಹೇಳಿದ್ದಾರೆ ಈ ಸಾಧು.