ತಮ್ಮಿಂದಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮನನೊಂದ ಕುಟುಂಬಗಳು ಈ ರೀತಿ ಪ್ರತಿಮೆಗಳನ್ನು ಮಾಡಿ ಅದಕ್ಕೆ ಮದುವೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರೀತಿಸಿ ಮದುವೆಯಾಗುವವರ ಸಂಖ್ಯೆ ಕಡಿಮೆಯೇ ಸರಿ. ಅದರಲ್ಲೂ, ಮನೆಯವರನ್ನು ಒಪ್ಪಿಸಿ ವಿವಾಹವಾದವರ ಸಂಖ್ಯೆ ಇನ್ನೂ ಅಪರೂಪ. ಈ ಹಿನ್ನೆಲೆ ಅನೇಕ ಪ್ರೇಮಿಗಳು ತಮ್ಮ ಪ್ರೀತಿ ಫಲಿಸದ ಕಾರಣ, ಮನೆಯವರು ಒಪ್ಪದ ಕಾರಣ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುತ್ತಾರೆ. ಈಗ ಗುಜರಾತ್‌ನಲ್ಲಿ ವಿಚಿತ್ರ ಪ್ರೇಮ ಕಥೆಯೊಂದು ಬೆಳಕಿಗೆ ಬಂದಿದೆ. ಅದೂ, ಆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ ಬಳಿಕ. ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡ 6 ತಿಂಗಳ ಬಳಿಕ ಕುಟುಂಬ ಸದಸ್ಯರು ಅವರ ಪ್ರತಿಮೆಗೆ ಮದುವೆ ಮಾಡಿಸಿದ್ದಾರೆ.
ಕುಟುಂಬ ಸದಸ್ಯರು ತಮ್ಮ ಮದುವೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ಗಣೇಶ್ ಹಾಗೂ ಆತನ ಪ್ರೇಮಿ ರಂಜನಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಗುಜರಾತ್‌ನ ತಾಪಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರಿಬ್ಬರ ಮೃತದೇಹ ಪತ್ತೆಯಾಗಿತ್ತು. ಈ ಘಟನೆಯ ನಂತರ, ತಮ್ಮಿಂದಲೇ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮನನೊಂದ ಕುಟುಂಬಗಳು ಈ ರೀತಿ ಪ್ರತಿಮೆಗಳನ್ನು ಮಾಡಿ ಅದಕ್ಕೆ ಮದುವೆ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನು ಓದಿ: 'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!
ಈ ಪ್ರೇಮಿಗಳು ಬದುಕಿದ್ದಾಗ ಒಟ್ಟಿಗೆ ಇರಲು ಸಾದ್ಯವಾಗಲಿಲ್ಲ ಎಂದು ಅವರ ಕುಟುಂಬಗಳು ಭಾವಿಸಿವೆ. ಇದರ ಪಶ್ಚಾತಾಪದಿಂದ ಅವರು ಗಣೇಶ್ ಹಾಗೂ ರಂಜನಾ ಅವರ ಪ್ರತಿಮೆಗಳನ್ನು ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ, ವಿಧಿವಿಧಾನಗಳನ್ನು ಅನುಸರಿಸಿ ಈ ಪ್ರತಿಮೆಗಳಿಗೆ ಮದುವೆಯನ್ನೂ ಮಾಡಿದ್ದಾರೆ.
ಪ್ರಾಣ ಕಲೆದುಕೊಂಡ ಹುಡುಗ ನಮ್ಮ ದೂರದ ಮನೆತನದವನಾಗಿದ್ದು, ಆ ಕಾರಣದಿಂದ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡಿರಲಿಲ್ಲ, ಹಾಗೂ ಅದಕ್ಕಿನ್ನೂ ಸಿದ್ಧರಾಗಿರಲಿಲ್ಲ ಎಂದು ಬಾಲಕಿಯ ಅಜ್ಜ ಭೀಮಸಿಂಗ್ ಪದ್ವಿ ತಿಳಿಸಿದ್ದಾರೆ. ಆದರೆ ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರು ಎಂಬುದನ್ನು ಅರಿತೆವು. ಆದ್ದರಿಂದ ಎರಡೂ ಕುಟುಂಬಗಳು ಈ ಆಲೋಚನೆ ಮೂಲಕ ಪ್ರತಿಮೆಗಳಿಗೆ ಮದುವೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಗಣೇಶ್ ಹಾಗೂ ರಂಜನಾ ಆಸೆಯನ್ನು ಈಡೇರಿಸಲು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೀಗೆ ಮಾಡಿರುವುದಾಗಿಯೂ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Love Story: ತಂದೆ ಶವದ ಮುಂದೆ ಅಳ್ತಿದ್ದವಳಿಗೆ ಪ್ರಪೋಸ್ ಮಾಡಿದ ಹುಡುಗ
ರಾಜ್ಯದಲ್ಲೂ ಹಲವು ಪ್ರೇಮಿಗಳ ಆತ್ಮಹತ್ಯೆ
ಪ್ರೇಮಿಗಳ ಆತ್ಮಹತ್ಯೆ ಸುದ್ದಿ ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಪ್ರೇಮಿಗಳು ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪಿಯುಸಿ ಓದುತ್ತಿರುವ 17ರ ಹರೆಯದ ಸುಮಾ ಮತ್ತು ಪಿಯುಸಿ ಮುಗಿಸಿ ಐಟಿಐ ಓದುತ್ತಿದ್ದ ಪ್ರಕಾಶ್ (20) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ಎಂದು ತಿಳಿದುಬಂದಿತ್ತು.
ಕಳೆದ ಹಲವು ದಿನಗಳಿಂದ ಪ್ರೇಮಿಗಳು ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಹುಡುಗಿ ಮನೆಯಲ್ಲಿ ವಿರೋಧ ಇತ್ತು. ಈ ಹಿನ್ನಲೆಯಲ್ಲಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಹುಡುಗಿ ಮನೆಯಲ್ಲಿಯೇ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿ: ಇದಪ್ಪ ಲವ್ ಅಂದರೆ..! ಗರ್ಲ್‌ಫ್ರೆಂಡ್ ಕೊನೆಯಾಸೆ ಈಡೇರಿಸಲು ಆಕೆಯ ಮೃತದೇಹಕ್ಕೆ ತಾಳಿ ಕಟ್ಟಿದ ಪ್ರೇಮಿ..!
ಹಾಗೆ, ಕಳೆದ ಡಿಸೆಂಬರ್ ತಿಂಗಳಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಇಬ್ಬರು ಪ್ರೇಮಿಗಳು ಪ್ರಾಣಬಿಟ್ಟ ಘಟನೆ ರಾಯಚೂರು ಸಮೀಪದ ಕೃಷ್ಣ ರೈಲ್ವೆ ನಿಲ್ದಾಣದ ಬಳಿ ನಡೆದಿತ್ತು. ಇಬ್ಬರು ನವಜೋಡಿಗಳು ರೈಲ್ವೆ ಹಳಿಯ ಮೇಲೆ ಮಲಗಿಕೊಂಡು ಪ್ರಾಣಬಿಟ್ಟಿದ್ದಾರೆ. ಕೃಷ್ಣ ರೈಲು ನಿಲ್ದಾಣದ ಹತ್ತಿರದ ರೈಲ್ವೆ ಟ್ರ್ಯಾಕ್ ನಲ್ಲಿ ಜೋಡಿಗಳ ಶವ ಪತ್ತೆಯಾಗಿತ್ತು.