ಪುರುಷರು ಯಾಕೆ ಹಿರಿಯ ಮಹಿಳೆಯತ್ತ ಆಕರ್ಷಿತರಾಗ್ತಾರೆ ?

By Suvarna News  |  First Published Jan 18, 2023, 5:21 PM IST

ಹಲವು ಪುರುಷರು ತಮಗಿಂತ ಹಿರಿಯ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಅವರನ್ನೇ ಜೀವನಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸುತ್ತಾರೆ. ಇದಕ್ಕೆ ಕಾರಣಗಳು ಸಾಕಷ್ಟು. ಅಷ್ಟೇ ಕುತೂಹಲಕಾರಿ. ಪುರುಷನೊಬ್ಬ ತನ್ನ ಸಂಗಾತಿಯಲ್ಲಿ ಏನೆಲ್ಲ ಗುಣ ಇರಬೇಕು ಎಂದು ಬಯಸುತ್ತಾನೋ ಅವುಗಳನ್ನು ಹಿರಿಯ ಮಹಿಳೆಯರಲ್ಲಿರುವುದನ್ನು ಕಾಣುತ್ತಾನೆ.
 


ಪುರುಷರು ವಯಸ್ಸಿನಲ್ಲಿ ತಮಗಿಂತ ಹಿರಿಯರಾದ ಮಹಿಳೆಯರನ್ನು ಜೀವನಸಂಗಾತಿಯನ್ನಾಗಿ ಮಾಡಿಕೊಳ್ಳುವುದು ಇತ್ತೀಚೆಗೆ ಅಪರೂಪವೇನಲ್ಲ. ಸ್ವಲ್ಪ ಸಮಯದ ಹಿಂದೆ ಇದು ತೀರ ಅಚ್ಚರಿದಾಯಕ ಸಂಗತಿಗಳಲ್ಲಿ ಒಂದಾಗಿತ್ತು. ಮಹಿಳೆಯರು ಪುರುಷರಿಗಿಂತ ಕೆಲವೇ ದಿನಗಳು ಅಥವಾ ಕೆಲವೇ ದಿನಗಳಷ್ಟು ಹಿರಿಯರಾಗಿದ್ದರೂ ಈ ಜೋಡಿಯನ್ನು ಕೌತುಕವೆಂಬಂತೆ ನೋಡುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ, ಈ ಪದ್ಧತಿ ಇತ್ತೀಚೆಗೆ ಸಾಕಷ್ಟು ಸಾಮಾನ್ಯವೆನಿಸಿದೆ. ಇದೇಕೆ ಹೀಗೆ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ. ಪ್ರಬುದ್ಧತೆಯ ಮಟ್ಟ ಹೆಚ್ಚಿರುವುದು, ಜಾಣತನದ ಸಂವಹನ, ಅವಲಂಬನೆ ಕಡಿಮೆ ಇರುವುದು ಇತ್ಯಾದಿ ಹಲವಾರು ಕಾರಣಗಳಿಂದ ಪುರುಷರು ತಮಗಿಂತ ವಯಸ್ಸಿನಲ್ಲಿ ಹಿರಿಯರಾದ ಮಹಿಳೆಯರ ಕಡೆಗೆ ಆಕರ್ಷಿತರಾಗುತ್ತಾರೆ. ಅಷ್ಟೇ ಅಲ್ಲ, ಬೆಂಬಲ ಹಾಗೂ ಮಾರ್ಗದರ್ಶನಕ್ಕಾಗಿಯೂ ಹಿರಿಯ ಮಹಿಳೆ ಆಕರ್ಷಕ ಎನಿಸಬಹುದು. ಅವರ ಜೀವನಾನುಭವವೂ ಪುರುಷರನ್ನು ಸೆಳೆಯಬಹುದು. ಇಲ್ಲಿ ಹಲವು ಲಾಜಿಕ್ಸ್‌ ಕೆಲಸ ಮಾಡುತ್ತವೆ. ಪ್ರತಿಬಾರಿಯೂ ತಾವೇ ಜವಾಬ್ದಾರಿ ಹೊರುವುದಕ್ಕಿಂತ ಪ್ರಬುದ್ಧ ಸಂಗಾತಿಯೊಂದಿಗೆ ವಿಚಾರ ವಿಮರ್ಶೆ ಮಾಡಿ ಮುಂದುವರಿಯುವುದು ಹಲವು ಪುರುಷರಿಗೆ ಇಷ್ಟ. ಈ ಹಿನ್ನೆಲೆಯಲ್ಲೂ ಹಿರಿಯ ಮಹಿಳೆಯರನ್ನು ಸಂಗಾತಿಯನ್ನಾಗಿ ಮಾಡಿಕೊಳ್ಳಲು ಆಸಕ್ತಿ ಹೊಂದಿರಬಹುದು. ಮಹಿಳೆಯರಲ್ಲಿ ಪುರುಷ ಬಯಸುವ ಹಲವಾರು ಸಾಮಾನ್ಯ ಗುಣಗಳು ಸ್ವಲ್ಪ ಪ್ರಬುದ್ಧ ಮಹಿಳೆಯರಲ್ಲಿ ಮಾತ್ರವೇ ಕಾಣಬಹುದು. ಇದೂ ಆಕರ್ಷಣೆಗೆ ಕಾರಣವಾಗಬಹುದು.

ಸಂಗಾತಿಯಲ್ಲಿ (Partner) ಪುರುಷರಾಗಲೀ (Male) ಮಹಿಳೆಯರಾಗಲೀ (Female) ಕೆಲವು ಸಂಗತಿಗಳನ್ನು ನಿರೀಕ್ಷೆ ಮಾಡುತ್ತಾರೆ. ಎಲ್ಲರೂ ತಮ್ಮ ಸಂಗಾತಿಯಲ್ಲಿ ಆಕರ್ಷಣೆ (Attraction), ಭಾವನಾತ್ಮಕ ಬಾಂಧವ್ಯ, ಗೌರವ (Respect), ಮೆಚ್ಚುಗೆ, ಒಪ್ಪಿಕೊಳ್ಳುವಿಕೆ, ಭದ್ರತೆ (Security), ಪ್ರಬುದ್ಧತೆ, ವಿನೋದ, ಸ್ವಲ್ಪ ಅಂತರ ಹಾಗೂ ಸ್ವಾತಂತ್ರ್ಯವನ್ನು ಬಯಸುವುದು ಸಹಜ. ಈ ಎಲ್ಲ ಗುಣಗಳು ತಮಗಿಂತ ಹಿರಿಯ ಮಹಿಳೆಯರಲ್ಲಿ ದೊರೆಯುತ್ತದೆ ಎನ್ನುವ ನಂಬಿಕೆ ಹಲವು ಪುರುಷರದ್ದು. 

ಸಂಬಂಧದಲ್ಲಿ ಸಂತೋಷವಿದೆ, ಥ್ರಿಲ್ಲವೆಂದು ದಾಂಪತ್ಯ ಮೋಸ ಮಾಡ್ತಾರಾ?

Tap to resize

Latest Videos

ಮಹಿಳೆ ವಯಸ್ಸು ಹೆಚ್ಚಿದ್ದರೆ ಎಷ್ಟೆಲ್ಲ ಅಡ್ವಾಂಟೇಜ್‌
•    ಬುದ್ಧಿವಂತಿಕೆ (Intellectual)

ಸಾಮಾನ್ಯವಾಗಿ ಹೆಣ್ಣುಮಕ್ಕಳು ತಮ್ಮ ವಯೋಮಾನದ ಹುಡುಗರಿಗಿಂತ ಹೆಚ್ಚು ಬುದ್ಧಿವಂತಿಕೆ ಹೊಂದಿರುತ್ತಾರೆ. ಇನ್ನು, ತಮಗಿಂತ ಕಿರಿಯ ಪುರುಷರಿಗಿಂತ ಸಾಕಷ್ಟು ಜಾಣರಾಗಿರುತ್ತಾರೆ. ಈ ಅಂಶವೇ ಹಲವು ಕಿರಿಯ ಪುರುಷರು ಅವರತ್ತ ಆಕರ್ಷಿತರಾಗುವಂತೆ ಮಾಡುತ್ತದೆ. ಪುರುಷರು ಸಂಗಾತಿಯೊಂದಿಗೆ ರಾಜಕೀಯ (Politics), ಜಾಗತಿಕ ಸಮಸ್ಯೆ, ಮಾಧ್ಯಮ (Media), ಧರ್ಮ ಇತ್ಯಾದಿ ವಿಚಾರಗಳನ್ನು ಚರ್ಚಿಸಲು ಬಯಸುತ್ತಾರೆ. ಹಿರಿಯ ಮಹಿಳೆಯರಲ್ಲಿ ಮಾತ್ರ ಈ ಗುಣ ಹೆಚ್ಚಾಗಿ ಕಂಡುಬರುತ್ತದೆ.

•    ಜೀವನಾನುಭವ (Life Experience) ಹೆಚ್ಚು
ಹಿರಿಯ ಮಹಿಳೆಯರು (Woman) ಕಿರಿಯ ಪುರುಷರಿಗಿಂತ (Man) ಹೆಚ್ಚು ಜೀವನಾನುಭವ ಹೊಂದಿರುತ್ತಾರೆ. ಹೀಗಾಗಿ, ಹೆಚ್ಚು ಕೇಂದ್ರೀಕೃತ (Focused) ವಿಚಾರಧಾರೆ ಹೊಂದಿರುತ್ತಾರೆ. ತಮಗೇನು ಬೇಕು ಎನ್ನುವುದು ಅವರಿಗೆ ಸ್ಪಷ್ಟವಾಗಿ ತಿಳಿದಿರುತ್ತದೆ. ಚಿಕ್ಕ ವಯಸ್ಸಿನ ಮಹಿಳೆಯರಿಗಿಂತ ಇವರು ಯೋಜನಾಬದ್ಧರಾಗಿರುತ್ತಾರೆ. ಅನಗತ್ಯ ಕಿರಿಕಿರಿ ಮಾಡಿಕೊಳ್ಳಲು ಬಯಸುವುದಿಲ್ಲ. ಧನಾತ್ಮಕ (Positive) ಮನಸ್ಥಿತಿ ಹೊಂದಿರುವುದು ಹೆಚ್ಚು. ಈ ಎಲ್ಲ ಅಂಶಗಳು ಪುರುಷರನ್ನು ಸೆಳೆಯುತ್ತವೆ. ಯಾವುದೇ ಸನ್ನಿವೇಶವನ್ನು ವಸ್ತುನಿಷ್ಠವಾಗಿ ನೋಡುವುದು ಪುರುಷರಿಗೆ ಇಷ್ಟ. ಮಹಿಳೆಯರಲ್ಲಿ ಈ ಗುಣ ಸ್ವಲ್ಪ ಪ್ರಬುದ್ಧರಾದಾಗ ಕಂಡುಬರುತ್ತದೆ.

Relationship Tips : ಸದಾ ತೆಗಳುತ್ತಲೇ ಇದ್ದರೆ ಮನಸ್ಸು ಅರಳುವುದು ಹೇಗೆ? ದಾಂಪತ್ಯ ಸುಖಕ್ಕೆ ಹೊಗಳಿ ನೋಡಿ!

•    ಭಾವನಾತ್ಮಕ ಪ್ರಬುದ್ಧತೆ (Emotional Maturity)
ಹಿರಿಯ ಮಹಿಳೆಯರಲ್ಲಿ ಭಾವನಾತ್ಮಕ ಪ್ರಬುದ್ಧತೆ ಚೆನ್ನಾಗಿರುತ್ತದೆ. ಚಿಕ್ಕ ಹುಡುಗಿಯರಂತೆ ಇವರಲ್ಲಿ ಗೊಂದಲವಿರುವುದಿಲ್ಲ. ತಮ್ಮ ಮನೆ, ಕುಟುಂಬ, ಸಂಗಾತಿಯ ಬಗ್ಗೆ ಸ್ಪಷ್ಟತೆ ಇರುತ್ತದೆ. ಹೀಗಾಗಿ, ಹೆಚ್ಚು ಆತ್ಮವಿಶ್ವಾಸ (Confident) ಹೊಂದಿರುತ್ತಾರೆ. ಸಂಗಾತಿ ತಮ್ಮ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ಕಿರಿಯ ಮಹಿಳೆಯರು ಬಯಸಿದರೆ ಇವರಲ್ಲಿ ಅಂತಹ ಗೊಂದಲ (Confusion) ಇರುವುದಿಲ್ಲ. ಗಜಿಬಿಜಿಯಿಲ್ಲದ, ಗಡಿಬಿಡಿಯಿಲ್ಲದ ಭಾವನೆ, ಜೀವನವನ್ನು ಆಸ್ವಾದಿಸುವ ಗುಣ ಹೆಚ್ಚಿರುತ್ತದೆ. ಭಾವನೆಗಳ (Emotions) ಮೇಲೆ ನಿಯಂತ್ರಣ ಹೊಂದಿರುವುದರಿಂದ ಕೂಲಾಗಿರಬಲ್ಲರು. ಇವೆಲ್ಲ ಪುರುಷರಿಗೆ ಇಷ್ಟವಾಗುವ ಗುಣಗಳೇ ಆಗಿವೆ.   

•    ಆರ್ಥಿಕ ಸ್ವಾವಲಂಬನೆ (Financial Independence), ಭಾವನಾತ್ಮಕ ಬೆಂಬಲ
ಹಿರಿಯ ಮಹಿಳೆಯರು ಸಾಮಾನ್ಯವಾಗಿ ಆರ್ಥಿಕವಾಗಿ ಸ್ವಾವಲಂಬಿಯಾಗಿರುತ್ತಾರೆ. ಇದು ಸಹ ಪುರುಷರಿಗೆ ನೆಮ್ಮದಿ ನೀಡುವ ಅಂಶವಾಗಿದೆ. ಅಲ್ಲದೆ, ಪ್ರಬುದ್ಧತೆ ಇದ್ದಾಗ ಪರಸ್ಪರ ದೃಢವಾದ ಭಾವನಾತ್ಮಕ ಬೆಂಬಲ (Support), ಗೌರವ (Respect) ದೊರೆಯುತ್ತದೆ. 

click me!