ಸಂಗಾತಿ ಮಧ್ಯೆ ಹೊಂದಾಣಿಕೆಯಿಲ್ಲದ ಕಾರಣ ಅಕ್ರಮ ಸಂಬಂಧ ಶುರುವಾಗುತ್ತೆ ಎಂದು ಎಲ್ಲರೂ ಭಾವಿಸ್ತಾರೆ. ಆದ್ರೆ ದಾಂಪತ್ಯ ದ್ರೋಹಕ್ಕೆ ಬರಿ ಇದು ಮಾತ್ರ ಕಾರಣವಲ್ಲ. ಕೆಲವೊಂದು ಕಾರಣಗಳು ಹುಬ್ಬೇರಿಸುವಂತೆ ಮಾಡುತ್ತವೆ.
ದಾಂಪತ್ಯದಲ್ಲಿ ಮೋಸ ಮಾಡುವುದು ಇತ್ತೀಚಿಗೆ ಹೆಚ್ಚಾಗಿದೆ ನಿಜ. ಆದ್ರೆ ಇದರ ಹುಟ್ಟು ಈಗಿನದಲ್ಲ. ಸಂಗಾತಿಗೆ ಮೋಸ ಮಾಡುವುದು ಶತಮಾನಗಳಿಂದಲೂ ಇದೆ. ಈ ಎಲ್ಲದರ ಹಿಂದಿರುವ ಕುತೂಹಲಕಾರಿ ಸಂಗತಿಯೆಂದರೆ, ಮೋಸಗಾರರು ತಮ್ಮ ಜೀವಶಾಸ್ತ್ರದ ಆಧಾರದ ಮೇಲೆ ಹಾಗೆ ಮಾಡಲು ಒಲವು ತೋರುತ್ತಾರೆ ಎಂಬುದು. ಇದು ಅನೇಕ ಅಧ್ಯಯನಗಳಿಂದ ಬಹಿರಂಗವಾಗಿದೆ. ಕೆಲವು ಜನರು ವಿಶ್ವಾಸದ್ರೋಹಿಯಾಗಲು ಅನುವಂಶಿಕ ಮತ್ತು ಜೈವಿಕ ಕಾರಣಗಳು ಇರಬಹುದೇ ಎನ್ನುವ ಬಗ್ಗೆ ಸಂಶೋಧನೆ ನಡೆದಿದೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಉಲ್ಲೇಖಿಸಿದ ಅಧ್ಯಯನ (Study) 2020ರ ಪ್ರಕಾರ, ಶೇಕಡಾ 25 ರಷ್ಟು ಸಂಬಂಧ (Relationship) ಗಳಲ್ಲಿ ದಾಂಪತ್ಯ ದ್ರೋಹ ಕಂಡುಬಂದಿದೆಯಂತೆ. ನಾವೆಲ್ಲ ಮೋಸಕ್ಕೆ ಭಾವನಾತ್ಮಕ ಸಂಬಂಧ ಕಾರಣ ಎಂದುಕೊಂಡಿದ್ದೇವೆ. ಆದ್ರೆ ಮೋಸಕ್ಕೆ ವೈಜ್ಞಾನಿಕ (Scientific) ಕಾರಣವಿದೆ. ರಿಲೆಷನ್ಶಿಪ್ ಥೆರಪಿಸ್ಟ್ ಪ್ರಕಾರ, ಸಂಬಂಧದಲ್ಲಿ ಮೋಸ ಮಾಡುವುದಕ್ಕೆ ಹತ್ತು ವಿಶಿಷ್ಟ ಕಾರಣ ಹೇಳಲಾಗಿದೆ.
ದಾಂಪತ್ಯ ಮೋಸಕ್ಕೆ ಈವೆಲ್ಲ ಕಾರಣ :
ರಾಕ್ ಆಂಡ್ ರೋಲ್ ಸಂಗೀತಕ್ಕೆ ಒಲವು : ಇದು ವಿಚಿತ್ರ ಎನ್ನಿಸಿದ್ರೂ ಸತ್ಯ. ಸಂಗಾತಿಗೆ ಮೋಸ ಮಾಡುವ ಜನರು ರಾಕ್ ಆಂಡ್ ರೋಲ್ ಸಂಗೀತವನ್ನು ಇಷ್ಟಪಡ್ತಾರಂತೆ. ರಾಕ್ ಸಂಗೀತ ಇಷ್ಟಪಡುವ ಜನರು ಸ್ವಲ್ಪ ಬಂಡಾಯದ ಪ್ರವೃತ್ತಿಯನ್ನು ಹೊಂದಿರುತ್ತಾರೆ. ಎಲ್ಲಾ ಪ್ರಸಿದ್ಧ ರಾಕ್ ಸ್ಟಾರ್‌ಗಳನ್ನು ಗಮನಿಸಬಹುದು. ಅವರಲ್ಲಿ ಬಹಳಷ್ಟು ಮಂದಿ ತಮ್ಮ ಸಂಗಾತಿಗೆ ಮೋಸ ಮಾಡಿದ್ದಾರೆ.
ಸಂಬಂಧದಲ್ಲಿ ಸಂತೋಷವಿದೆ, ಆದ್ರೆ ಬೇಸರ ಕಾಡ್ತಿದೆ : ಸಂಗಾತಿಗೆ ಮೋಸ ಮಾಡ್ತಿದ್ದಾರೆ ಎಂಬ ವಿಷ್ಯ ಬಂದಾಗ ಪ್ರಸ್ತುತ ಸಂಬಂಧದಲ್ಲಿ ಅತೃಪ್ತರಾಗಿದ್ದಾರೆ ಎಂದು ನಾವು ಭಾವಿಸ್ತೇವೆ. ಸಮಯವಿಲ್ಲ, ಉತ್ತಮ ಸಂವಹನವಿಲ್ಲ ಹೀಗೆ ಅನೇಕ ಕಾರಣಗಳಿಂದ ದಾಂಪತ್ಯ ದ್ರೋಹವಾಗ್ತಿದೆ ಅಂದುಕೊಳ್ತೇವೆ. ಆದ್ರೆ ಈ ಕಾರಣಕ್ಕಲ್ಲ, ಹೆಚ್ಚಿನ ಜನರು ಬೇಸರದಿಂದ ಮೋಸ ಮಾಡ್ತಾರೆ ಎಂಬುದನ್ನು ಕೇಳಿದ್ರೆ ನೀವು ಶಾಕ್ ಆಗ್ತೀರಾ. ಸಂಬಂಧ ಆರಂಭದಲ್ಲಿ ಮಸಾಲೆಯುಕ್ತವಾಗಿರುತ್ತದೆ. ಆದರೆ ಸಂಬಂಧ ಹಳೆಯದಾದಂತೆ ಮೊದಲಿನ ಹಾಟ್ನೆಸ್ ಇರೋದಿಲ್ಲ. ಇದು ಕೆಲವರಿಗೆ ಬೇಸರ ತರಿಸುತ್ತದೆ. ಹಾಗಾಗಿ ಅವರು ಬೇರೆಯವರ ಹುಡುಕಾಟ ಶುರು ಮಾಡ್ತಾರೆ.
ಮುಳ್ಳನ್ನು ಮುಳ್ಳಿನಿಂದ ತೆಗೆಯುವ ಪ್ರಯತ್ನ : ಅಕ್ರಮ ಸಂಬಂಧ ಈಗಿರುವ ಸಂಬಂಧ ಹಾಳಾಗುತ್ತದೆ ಎಂದು ನಾವು ಭಾವಿಸ್ತೇವೆ. ಆದ್ರೆ ಕೆಲವರು ಹಳೆ ಸಂಬಂಧ ಸುಧಾರಿಸಲು ಅಕ್ರಮ ಸಂಬಂಧ ನೆರವಾಗುತ್ತದೆ ಎಂದು ಭಾವಿಸುವವರಿದ್ದಾರೆ. ಇದು ವಿಚಿತ್ರವೆನ್ನಿಸಿದ್ರೂ ಸತ್ಯ. ವಿಜ್ಞಾನಿಗಳ ಪ್ರಕಾರ, ಜನರು ದಾಂಪತ್ಯ ದ್ರೋಹ ಮಾಡಲು ಇದೂ ಒಂದು ಕಾರಣವಾಗಿದೆ.
ಮೊದಲೇ ತಿಳಿದವರೊಂದಿಗೆ ಸಂಬಂಧ : ಅನೇಕ ಅಕ್ರಮ ಸಂಬಂಧಗಳು ಮೊದಲು ತಿಳಿದವರ ಜೊತೆ ನಡೆಯುತ್ತವೆ. ಅನೇಕ ಮೋಸಗಾರರು, ಈಗಾಗಲೇ ತಿಳಿದಿರುವ ಸ್ನೇಹಿತರು ಅಥವಾ ಸಂಬಂಧಿಕರು ಜೊತೆಯೇ ಸಂಬಂಧ ಬೆಳೆಸುತ್ತಾರೆ. ದಾಂಪತ್ಯ ಜೀವನ ಸರಿಯಾಗಿಲ್ಲ ಎನ್ನುವ ಸಂದರ್ಭದಲ್ಲಿ ಅವರು ಸ್ನೇಹಿತರು ಅಥವಾ ಸಂಬಂಧಿಕರಿಗೆ ಆಪ್ತರಾಗ್ತಾರೆ. ಸ್ನೇಹ ಹಾಗೂ ಪ್ರೀತಿ ಅಂತರವನ್ನು ಮರೆತು ಒಂದಾಗ್ತಾರೆ. ಅಪ್ಪಿಗೆಯಿಂದ ಶುರುವಾಗುವುದು ಸಂಭೋಗದವರೆಗೆ ಬಂದು ನಿಲ್ಲುತ್ತದೆ.
ಕಾಂಡೋಮ್ ಹೇಗೇಗೋ ಇದ್ರೆ ಸಂಭೋಗ ಖುಷಿ ಕೊಡಲ್ಲ, ಖರೀದಿಸೋ ಮುನ್ನ ಈ ವಿಚಾರ ತಿಳ್ಕೊಳ್ಳಿ
ಮಹಿಳೆಯರ ಹಾರ್ಮೋನ್ ಬದಲಾವಣೆ ಕೂಡ ಒಂದು ಕಾರಣ : ಮುಟ್ಟಿನ ಸಮಯದಲ್ಲಿ ಮಹಿಳೆಯ ಹಾರ್ಮೋನುಗಳು ಸಂಪೂರ್ಣವಾಗಿ ಬದಲಾಗುತ್ತವೆ. ಇದಲ್ಲದೆ ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆ ಮೋಸ ಮಾಡುವ ಸಾಧ್ಯತೆ ಹೆಚ್ಚಿರುತ್ತದ. ಅಂಡೋತ್ಪತ್ತಿ ಕ್ರಮದಿಂದ ಉಂಟಾಗುವ ಭಾವನಾತ್ಮಕ ಅಸ್ಥಿರತೆಯು ಮಹಿಳೆಯ ಮೂಡ್ ಸ್ವಿಂಗ್‌ಗೆ ಕಾರಣವಾಗುತ್ತದೆ. ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳಲು ಆಕೆ ಶುರು ಮಾಡ್ತಾಳೆ. ಈ ಸಮಯದಲ್ಲಿ ದಾಂಪತ್ಯ ದ್ರೋಹದ ಬಗ್ಗೆ ಆಲೋಚನೆ ಮಾಡ್ತಾಳೆ.
ಪ್ರಸ್ತುತ ಸಂಬಂಧ ಸುಧಾರಿಸಲು : ಅಡುಗೆ ಚೆನ್ನಾಗಿ ತಿಳಿದಿದ್ರೂ ಇನ್ನಷ್ಟು ಪಕ್ವವಾಗಲು ತರಬೇತಿ ಪಡೆಯುವುದು ಅಥವಾ ವಿಡಿಯೋ ವೀಕ್ಷಣೆ ಮಾಡಿದಂತೆ ಸೆಕ್ಸ್ ನಲ್ಲಿ ಪರ್ಫೆಕ್ಟ್ ಇದ್ರೂ ಅದನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ಅಕ್ರಮ ಸಂಬಂಧ ಬೆಳೆಸುವವರಿದ್ದಾರೆ. ಮೂರನೇ ವ್ಯಕ್ತಿಯಿಂದ ಕೆಲವು ತರಬೇತಿಯನ್ನು ಪಡೆದರೆ ಅದು ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಸುಧಾರಿಸಬಹುದು ಎಂದು ಅನೇಕ ಜನರು ನಂಬುತ್ತಾರೆ.
ಮಹಿಳೆ ಭಾವನಾತ್ಮಕ ಕಾರಣ ಮತ್ತು ಪುರುಷ ದೈಹಿಕ ಕಾರಣಕ್ಕೆ ಮಾಡ್ತಾರೆ ಮೋಸ : ಮಹಿಳೆಯರು ತಮ್ಮ ಭಾವನೆಗಳಿಂದ ಮೋಸ ಮಾಡುತ್ತಾರೆ. ಪುರುಷರು ದೈಹಿಕ ಅಗತ್ಯಗಳಿಂದ ಮೋಸ ಮಾಡುತ್ತಾರೆ. ಇನ್ಸ್ಟಿಟ್ಯೂಟ್ ಫಾರ್ ಫ್ಯಾಮಿಲಿ ಸ್ಟಡೀಸ್ ಸಂಶೋಧನೆಯ ಪ್ರಕಾರ ಪುರುಷರು ಮಹಿಳೆಯರಿಗಿಂತ ಶೇಕಡಾ ಏಳರಷ್ಟು ಹೆಚ್ಚು ಮೋಸ ಮಾಡ್ತಾರಂತೆ.
Dating Apps: ವಿವಾಹೇತರ ಡೇಟಿಂಗ್ ಆ್ಯಪ್ ಗ್ಲೀಡೆನ್‌ಗೆ ಭಾರತದಲ್ಲಿ 2 ಮಿಲಿಯನ್ ಬಳಕೆದಾರರು!
ಪ್ರಬುದ್ಧತೆ ಕೊರತೆ : ಮಹಿಳೆಯರನ್ನು ಪುರುಷರು ಪ್ರಬುದ್ಧತೆ ಹೊಂದಿರುವುದಿಲ್ಲ. ದಾಂಪತ್ಯ ಸಮಸ್ಯೆ ಬಗೆಹರಿಸಲು ಬರದೆ ಹೋದಾಗ ಅವರು ಬೇರೆ ಕಡೆ ತಿರುಗುತ್ತಾರೆ. ಹಾಗಂತ ಅವರಿಗೆ ಪತ್ನಿಯನ್ನು ಬಿಡಲು ಮನಸ್ಸಿರೋದಿಲ್ಲ. ಸದ್ಯ ಇರುವ ಸಮಸ್ಯೆ ಹೇಗೆ ಬಗೆಹರಿಸೋದು ಎಂಬುದು ಕೂಡ ತಿಳಿದಿರೋದಿಲ್ಲ. ಅಕ್ರಮ ಸಂಬಂಧ ಬೆಳೆಸಿದ ಮೇಲೆ ತಪ್ಪಿನ ಅರಿವಾಗುತ್ತದೆ.