ಮದುವೆ ಮತ್ತು ಹನಿಮೂನ್ ಆಚರಿಸಲು ರಜೆಯ ದಿನಗಳ ಬಗ್ಗೆ ಉದ್ಯೋಗಿ ಮತ್ತು ಬಾಸ್ ನಡುವೆ ವಾಗ್ವಾದ ನಡೆಯೋದು ಸಾಮಾನ್ಯ. ಆದರೆ ಈ ದೇಶದಲ್ಲಿ ದಂಪತಿ ರಜೆಗಾಗಿ ಕಷ್ಟಪಡಬೇಕಾಗಿಲ್ಲ. ಯಾಕಂದ್ರೆ ಇಲ್ಲಿ ಉದ್ಯೋಗಿಗಳಿಗೆ 30 ದಿನ ಸಂಬಳ ಸಹಿತ ರಜೆ ಸಿಗುತ್ತದೆ.
ಚೀನಾದಲ್ಲಿ ಜನಸಂಖ್ಯೆಯು ಕಡಿಮೆಯಾಗುತ್ತಿರುವುದು ಈಗ ರಹಸ್ಯವಾಗಿ ಉಳಿದಿಲ್ಲ. ಹೀಗಾಗಿ ಇದು ಚೀನಾದ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ, ಚೀನಾದಲ್ಲಿ ವಯಸ್ಸಾದವರ ಜನಸಂಖ್ಯೆಯು ಹೆಚ್ಚುತ್ತಿದೆ. ಹೀಗಾಗಿ ಒಟ್ಟು ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ತಿದೆ. ಹಲವಾರು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ಮದುವೆಯಾದವರಿಗೆ ರೋಮ್ಯಾನ್ಸ್ ಮಾಡಲು 30 ದಿನಗಳ ವೇತನ ಸಹಿತ ರಜೆ ನೀಡಲು ನಿರ್ಧರಿಸಿದೆ.
ಮದುವೆ (Marriage) ಅನ್ನೋದು ಎಲ್ಲರ ಜೀವನದಲ್ಲೂ ಬಿಗ್ ಡೇ. ಹೀಗಾಗಿಯೇ ಈ ದಿನವನ್ನು ಖುಷಿಯಿಂದ ಕಳೆಯಬೇಕೆಂದು ಪ್ರತಿಯೊಬ್ಬರೂ ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ಸಾಕಷ್ಟು ರಜೆ (Leave)ಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಮದುವೆ ಅಂತ ಬಂದಾಗ ಸಾಕಷ್ಟು ತಯಾರಿ ಮಾಡಲು ಇರುತ್ತದೆ. ಇದಕ್ಕೆ ರಜೆಯ ಅಗತ್ಯವೂ ಇರುತ್ತದೆ. ಆದ್ರೆ ಉದ್ಯೋಗದಲ್ಲಿರುವ ಬಹುತೇಕರಿಗೆ ಎದುರಾಗುವ ಸಮಸ್ಯೆ ರಜೆಯದ್ದು. ಸಾಕಷ್ಟು ರಜೆ ಸಿಗುವುದಿಲ್ಲ, ಭಾವೀ ಪತಿ-ಪತ್ನಿ, ಸಂಬಂಧಿಕರೊಂದಿಗೆ ಸಮಯ ಕಳೆಯಲು ಆಗುವುದಿಲ್ಲ ಎಂದೇ ಎಲ್ಲರೂ ಒದ್ದಾಡುತ್ತಾರೆ. ಹೀಗಿರುವಾಗ ಚೀನಾ ಹೊಸತೊಂದು ನಿಯಮ (Rules)ವನ್ನು ತಂದಿದ್ದು,ಇದು ಜಸ್ಟ್ ಮ್ಯಾರೀಡ್ ಕಪಲ್ ಹಾಗೂ ಭಾವೀ ವಧು-ವರರ (Bride-groom) ಮುಖದಲ್ಲಿ ನಗುವನ್ನು ಮೂಡಿಸಿದೆ.
ಮದ್ವೆಯಾಗದೆ ಮಕ್ಕಳು ಮಾಡಿಕೊಂಡ್ರೂ ಸರ್ಕಾರಿ ಸೌಲಭ್ಯ ಸಿಗುತ್ತೆ, ಜನಸಂಖ್ಯೆ ಹೆಚ್ಚಿಳಕ್ಕೆ ಚೀನಾ ಕ್ರಮ
ನವವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡಲು ನಿರ್ಧಾರ
ನವವಿವಾಹಿತರಿಗೆ 30 ದಿನಗಳ ವೇತನ ಸಹಿತ ರಜೆ ನೀಡುವುದಾಗಿ ಚೀನಾ ಸರ್ಕಾರ (China government) ಘೋಷಿಸಿದೆ. ಚೀನಾ ಸರ್ಕಾರ ಇಂಥಹದ್ದೊಂದು ನಿರ್ಧಾರ ತೆಗೆದುಕೊಂಡದ್ದು ಯಾಕೆ ಅನ್ನೋ ಪ್ರಶ್ನೆ ಮೂಡಬಹುದು. ಆದರೆ ಸರ್ಕಾರದ ಈ ಘೋಷಣೆಯ ಹಿಂದೆ ಒಂದು ಮುಖ್ಯ ಉದ್ದೇಶವೂ ಇದೆ. ವಾಸ್ತವವಾಗಿ, ಚೀನಾದಲ್ಲಿ ಜನಸಂಖ್ಯೆಯು (Population) ವೇಗವಾಗಿ ಕಡಿಮೆಯಾಗುತ್ತಿದೆ. ಇದನ್ನು ಕಂಡು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಚೀನಾ ದೇಶದಲ್ಲಿ ಕ್ಷೀಣಿಸುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗ್ತಿದೆ. ಹೀಗಾಗಿಯೇ ಮದುವೆಯಾದ ದಂಪತಿಗೆ (Couple) ರೋಮ್ಯಾನ್ಸ್ ಮಾಡಲೆಂದೇ ರಜೆಯನ್ನು ನೀಡಲಾಗುತ್ತಿದೆ. ಭಾರತದಲ್ಲಿ ಇದು ಯಾವಾಗ ಸಂಭವಿಸುತ್ತದೆ ಎಂಬುದು ತಿಳಿದಿಲ್ಲ, ಆದರೆ ಚೀನಾ ಸರ್ಕಾರವು ನವದಂಪತಿಗೆ ಈ ಉಡುಗೊರೆಯನ್ನು ನೀಡಿದೆ.
ವೀರ್ಯ ದಾನ ಮಾಡಿ..ದುಡ್ಡು ಗಳಿಸಿ, ವಿದ್ಯಾರ್ಥಿಗಳಿಗೆ ಬಂಪರ್ ಆಫರ್ ಕೊಟ್ಟ ಚೀನಾ
ಜನಸಂಖ್ಯೆಯನ್ನು ಹೆಚ್ಚಿಸಲು ಚೀನಾ ಸರ್ಕಾರದ ಕ್ರಮ
ಕಮ್ಯುನಿಸ್ಟ್ ಪಕ್ಷದ ಮುಖವಾಣಿ ಪೀಪಲ್ಸ್ ಡೈಲಿ ಹೆಲ್ತ್ ಪ್ರಕಾರ, ಯುವಕರನ್ನು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಉತ್ತೇಜಿಸುವುದು ಈ ಯೋಜನೆಯ ಹಿಂದಿನ ಉದ್ದೇಶವಾಗಿದೆ. ಈ ಹಿಂದೆ ಚೀನಾದಲ್ಲಿ ಮದುವೆಯಾದವರಿಗೆ ಮೂರು ದಿನಗಳ ರಜೆ ನೀಡಲಾಗುತ್ತಿತ್ತು. ಆದರೆ, ಸರ್ಕಾರದ ಈ ನಿರ್ಧಾರ ಇನ್ನೂ ಇಡೀ ಪ್ರಾಂತ್ಯದಲ್ಲಿ ಜಾರಿಯಾಗಿಲ್ಲ. ಚೀನಾದ ಕೆಲವು ಭಾಗಗಳಲ್ಲಿ 30 ದಿನಗಳ ರಜೆ ನೀಡಲಾಗುತ್ತಿದೆ. ಇದು ಗನ್ಸು ಮತ್ತು ಶಾಂಕ್ಸಿ ಪ್ರಾಂತ್ಯಗಳನ್ನು ಒಳಗೊಂಡಿದೆ. ಅದೇ ಸಮಯದಲ್ಲಿ, ಶಾಂಘೈ 10 ದಿನಗಳ ರಜೆಯನ್ನು ಪಡೆಯುತ್ತಿದೆ. ಅದೇ ಸಮಯದಲ್ಲಿ, ಸಿಚುವಾನ್‌ನಲ್ಲಿ, ನವವಿವಾಹಿತ ದಂಪತಿಗಳು ಇನ್ನೂ ಮೂರು ದಿನಗಳ ರಜೆಯನ್ನು ಪಡೆಯುತ್ತಿದ್ದಾರೆ.
ನೈಋತ್ಯ ವಿಶ್ವವಿದ್ಯಾಲಯದ ಹಣಕಾಸು ಮತ್ತು ಅರ್ಥಶಾಸ್ತ್ರದ ಡೀನ್ ಯಾಂಗ್ ಹೈಯಾಂಗ್, ಮದುವೆಯ ರಜೆಯನ್ನು ವಿಸ್ತರಿಸುವುದು ಫಲವತ್ತತೆಯ ಪ್ರಮಾಣವನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಗವಾಗಿದೆ ಎಂದು ಹೇಳಿದರು. 1980ರಿಂದ 2015ರ ವರೆಗೆ ಒಂದು ಮಗು ಎಂಬ ಕಟ್ಟುನಿಟ್ಟಿನ ನೀತಿಯ ಅನುಷ್ಠಾನದಿಂದಾಗಿ, ಚೀನಾದ ಜನಸಂಖ್ಯೆಯು ಇಳಿಮುಖವಾಗಿದೆ. ಮಾತ್ರವಲ್ಲ, ಜನಸಂಖ್ಯೆ ಕುಸಿತದಿಂದ ಇಲ್ಲಿನ ಸರ್ಕಾರ ಆರ್ಥಿಕವಾಗಿಯೂ ನಷ್ಟ ಎದುರಿಸುತ್ತಿದೆ ಎಂದು ತಿಳಿದುಬಂದಿದೆ.