ಅಪ್ಪನ 60 ವರ್ಷದ ಹಳೇ ಪಾಸ್​ಬುಕ್​ನಿಂದ ಮಗನಿಗೆ ಸಿಕ್ಕಿದ್ದು ಕೋಟಿ ಕೋಟಿ ರೂ.!

By Shobha MCFirst Published Feb 21, 2023, 4:53 PM IST
Highlights

50 ವರ್ಷದ ಹಿಂದೆ ಅಪ್ಪ ಬ್ಯಾಂಕ್‌ನಲ್ಲಿ ಕೂಡಿದ್ದ 50 ಪೈಸೆಗೂ ಇಂದು ದೊಡ್ಡ ಬೆಲೆಯಿದೆ. ಬರೀ 50 ಪೈಸೆನಾ ಅಂತಾ ತಾತ್ಸಾರ ಮಾಡೋಕಂತೂ ಹೋಗ್ಲೇಬೇಡಿ. ಯಾಕೆ ಅನ್ನೋದಕ್ಕೆ ಇಲ್ಲಿದೆ ಜೀವಂತ ಉದಾಹರಣೆ.
 

ಅಪ್ಪ ದುಡ್ಡಿದು ಆಸ್ತಿ ಮಾಡಿಲ್ಲ, ಮಕ್ಕಳಿಗೂ ಏನೇನು ಆಸ್ತಿ ಮಾಡಲಿಲ್ಲ. ಅಪ್ಪ ಆಸ್ತಿ ಸಂಪಾದಿಸಿದ್ರೆ ನಾವ್ಯಾಕೆ ಈ ಸ್ಥಿತಿಯಲ್ಲಿರ್ತಿದ್ವಿ  ಅಂತ ಬೆಳೆದ ಮಕ್ಕಳು ಗೋಳಾಡೋದು, ಅಪ್ಪನನ್ನು ಬೈಯೋದು ಸಹಜ. ಅಪ್ಪ ಆಸ್ತಿ ಸಂಪಾದಿಸಿಲ್ಲ ಅನ್ನೋ ಕಾರಣಕ್ಕೆ ಎಷ್ಟೋ ಮಕ್ಕಳು, ವೃದ್ಧಾಪ್ಯದಲ್ಲಿ ತಂದೆ-ತಾಯಿಯನ್ನು ಸಾಕಲಾಗದೇ ಬೀದಿಗಟ್ಟುವುದು, ಮಾನಸಿಕ ಯಾತನೆ ನೀಡುವುದು ಈಗೀಗ ಸಹಜ ಆಗಿಬಿಟ್ಟಿದೆ.  ಆದರೆ, ಇಲ್ಲೊಬ್ಬ ಯುವಕ, ಅಪ್ಪ ಬ್ಯಾಂಕ್​ನಲ್ಲಿ ಕೂಡಿಟ್ಟಿದ್ದ ಚಿಲ್ಲರೆ ಕಾಸಿನಿಂದಲೇ ಕೋಟ್ಯಾಧಿಪತಿ ಆಗಿಬಿಟ್ಟಿದ್ದಾನೆ.  ಈ ಇಂಟರೆಸ್ಟಿಂಗ್ ಘಟನೆ ನಡೆದಿರೋದು  ದಕ್ಷಿಣ ಅಮೆರಿಕಾದ ಚಿಲಿಯಲ್ಲಿ. 

ಅಪ್ಪ ಕೂಡಿಟ್ಟಿದ್ದು ಕೇವಲ 12 ಸಾವಿರ ರೂಪಾಯಿ, ಆದ್ರೆ ಮಗನಿಗೆ ಸಿಕ್ಕಿದ್ದು ಬರೋಬ್ಬರಿ 10 ಕೋಟಿ ರೂ. ಚಿಲಿಯ ಕ್ಸಾಕ್ವೆಲ್ ಹಿನೋಜೋಸಾ ಎಂಬಾತನೇ 10 ಕೋಟಿ ಗಿಟ್ಟಿಸಿದ ಅದೃಷ್ಟವಂತ ಮಗ.

ಹಿನೋಜೋಸಾ ತಂದೆ 1960 ಮತ್ತು 70ರ ದಶಕದಲ್ಲಿ  ತಮ್ಮ ಕನಸಿನ ಮನೆ ಖರೀದಿಸಲು ಹಣ ಕೂಡಿಟ್ಟಿದ್ದರು. ಪ್ರತಿ ತಿಂಗಳೂ ಕ್ರೆಡಿಟ್ ಯೂನಿಯನ್ ಬ್ಯಾಂಕ್‌ನಲ್ಲಿ ಒಂದಿಷ್ಟು ಹಣ ಠೇವಣಿ ಮಾಡುತ್ತಲೇ ಬಂದರು. ತಾವು ಹಣ ಕೂಡಿಡುತ್ತಿರುವ ವಿಷಯವನ್ನು ಮಗ ಹಿನೋಜೋಸಾಗೂ ತಿಳಿಸಿರಲಿಲ್ಲ. ಆದರೆ, ವಯೋಸಹಜ ಕಾಯಿಲೆಯಿಂದ ಹಿನೋಜೋಸಾ ತಂದೆ ಮೃತಪಟ್ಟರು. 

ಅಪ್ಪ ಸತ್ತ ಎಷ್ಟೋ ವರ್ಷಗಳ ಬಳಿಕ ಹಿನೋಜೋಸಾ ಒಂದು ದಿನ ತನ್ನ ತಂದೆ ಬಳಸುತ್ತಿದ್ದ ಪೆಟ್ಟಿಗೆಯೊಂದನ್ನು ಓಪನ್ ಮಾಡಿದಾಗ, ಪಾಸ್​ಬುಕ್​​ವೊಂದು ಕಂಡಿತು.  ಕುತೂಹಲದಿಂದ ಪಾಸ್​ಬುಕ್ ಪರಿಶೀಲಿಸಿದ ಹಿನೋಜೋಸಾಗೆ ಅದರಲ್ಲಿ 12 ಸಾವಿರ 684 ರೂ. ಠೇವಣಿ ಇರೋದು ಪತ್ತೆಯಾಯ್ತು. ಪಾಸ್ ಬುಕ್ ಮೇಲಿದ್ದ ಸ್ಟೇಟ್ ಗ್ಯಾರಂಟಿ ಎಂಬ ಪದ ಹಿನೋಜೋಸಾ ಗಮನಸೆಳೆಯಿತು. 

ಚರ್ಚ್ ಪಾದ್ರಿಗಳಿಂದ 5,000 ಹೆಣ್ಮಕ್ಕಳ ಮೇಲೆ ರೇಪ್​, ಪೋರ್ಚುಗಲ್‌ನಲ್ಲಿ ಮಾನವ ಕುಲವೇ ತಲೆತಗ್ಗಿಸು ಘಟನೆ!

60 ವರ್ಷಗಳ ಹಿಂದಿನ ಆ ಹಣ ಈಗ ಹಣದುಬ್ಬರದ ಸಮಯದಲ್ಲಿ ಎಷ್ಟೊಂದು ಪಟ್ಟು ಹೆಚ್ಚಾಗಿರಬೇಕು? ಎಂದು ಯೋಚಿಸಿದ. ಆದ್ರೆ, ಕ್ರೆಡಿಟ್ ಯೂನಿಯನ್ ಮುಚ್ಚಿ ಹೋಗಿದ್ದರಿಂದ, ಹಿನೋಜೋಸಾಗೆ ದಿಕ್ಕು ತೋಚಲಿಲ್ಲ. ಹೇಗಾದರೂ ಸರಿಯೇ ಅಪ್ಪ ಕೂಡಿಟ್ಟ ದುಡ್ಡು ಪಡೆಯಲೇಬೇಕೆಂಬ ಹಠಕ್ಕೆ ಬಿದ್ದ ಹಿನೋಜೋಸಾ, ಬ್ಯಾಂಕ್​ ಅಧಿಕಾರಿಗಳ ಸಲಹೆಯಂತೆ ಕೋರ್ಟ್ ಮೊರೆ ಹೋದ. ತಂದೆಯ ಪಾಸ್​ಬುಕ್​ ಹಾಜರುಪಡಿಸುವಂತೆ ಕೋರ್ಟ್ ಆದೇಶಿಸಿತು. ಅಲ್ಲದೇ, ಈಗಿನ ಹಣದ ಮೌಲ್ಯವನ್ನು ಖಚಿತಪಡಿಸುವಂತೆ ಚಿಲಿ ಸರ್ಕಾರಕ್ಕೆ ಸೂಚಿಸಿತು.

ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!

ವಾದ- ಪ್ರತಿವಾದದ ಬಳಿಕ, ತಂದೆ ಕೂಡಿಟ್ಟ ಹಣ ಮಗ ಹಿನೋಜೋಸಾಗೆ ಸೇರಬೇಕೆಂದು ಆದೇಶಿಸಿತು. ಈಗಿನ ಹಣದ ಮೌಲ್ಯದಂತೆ ಭಾರತೀಯ ರೂಪಾಯಿಗಳಲ್ಲಿ 9.33 ಕೋಟಿ ರೂ. ನೀಡುವಂತೆ ತೀರ್ಪು ನೀಡಿತು. ಕೆಳ ಹಂತದ ಕೋರ್ಟ್ ಆದೇಶ ಪ್ರಶ್ನಿಸಿ, ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಯಿತು. ವರ್ಷಗಟ್ಟಲೆ ನಡೆದ ವಿಚಾರಣೆ ನಡೆಯಿತು. ಕೊನೆಗೆ ಸುಪ್ರೀಂಕೋರ್ಟ್ ಸಹ ಹಿನೋಜೋಸಾ ಪರವಾಗಿಯೇ ತೀರ್ಪು ನೀಡಿತು. ಚಿಲಿ ಸರ್ಕಾರ ಮರು ಮಾತಾಡದೇ ಹಿನೋಜೋಸಾ 10 ಕೋಟಿ ರೂ. ನೀಡಿತು.  ಅಪ್ಪ ಕೂಡಿಟ್ಟಿದ್ದ ಸಣ್ಣ ಗಂಟು ಹಿನೋಜೋಸಾನನ್ನು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿಸಿತು, ಆತನ ಬದುಕನ್ನೇ ಬದಲಿಸಿತು. 

Moral of the story 
1. ಅಪ್ಪ, ಅಮ್ಮನ ಹಳೆಯ ಗಂಟು, ಪೆಟ್ಟಿಗೆ, ಪೇಪರ್​ಗಳನ್ನು ಉದಾಸೀನದಿಂದ ಎಸೆಯಬಾರದು. 
2. ಅಪ್ಪ ಆಸ್ತಿ ಮಾಡಿಲ್ಲ ಎಂದು ಬೈದುಕೊಂಡು ಬದುಕಬಾರದು.

click me!