ಮೈಕ್ ಬಿಟ್ಟು ಬ್ಯಾಟ್ ಹಿಡಿದ ಪ್ರಜ್ವಲ್ ರೇವಣ್ಣ! ಕ್ರಿಕೆಟ್ ಆಡುವ ವಿಡಿಯೋ ವೈರಲ್

Dec 3, 2018, 3:46 PM IST

ರಾಜಕೀಯ ಬ್ಯುಸಿ ಬದಿಗಿರಿಸಿ ಜೆಡಿಎಸ್ ಯುವ ನಾಯಕ ಪ್ರಜ್ವಲ್ ರೇವಣ್ಣ ಕ್ರಿಕೆಟ್ ಆಡಿದ್ದಾರೆ.  ಸದಾ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿರುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಪ್ರಜ್ವಲ್, ಹೊಳೆನರಸೀಪುರದ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಸ್ನೇಹಿತರೊಂದಿಗೆ ಆಡಿ ನಲಿದಿದ್ದಾರೆ. ಭಾನುವಾರವಾಗಿದ್ದರಿಂದ ಬಿಡುವಿನಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಮ್ಯಾಚ್ ಆಡಿ ಪ್ರಜ್ವಲ್ ರಿಲ್ಯಾಕ್ಸ್ ಆಗಿದ್ದಾರೆ.  ಪ್ರಜ್ಷಲ್ ಟೀಂಗೆ ಎದುರಾಳಿ ತಂಡದಿಂದ 63 ರನ್ ಟಾರ್ಗೆಟ್ ನೀಡಲಾಗಿದ್ದು,  ಆರು ಓವರ್ ಮ್ಯಾಚ್ ಟೈನಲ್ಲಿ ಅಂತ್ಯಗೊಂಡಿತು. ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಹಾಗು ಬೌಲಿಂಗ್ ನಲ್ಲಿ ಮಿಂಚಿದ ಸಚಿವ ರೇವಣ್ಣ ಪುತ್ರ, 3 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ ಗಮನ ಸೆಳೆದರು.