ರಾಜಕೀಯದಿಂದ ಸಿಂಧಿಯಾ ದೂರಾ ದೂರಾ?: ದಿನ ಬೆಳಗಾಗುತ್ತಿದ್ದಂತೆ ಪ್ರೊಫೈಲ್ ಚೇಂಜ್!

By Web DeskFirst Published Nov 25, 2019, 2:40 PM IST
Highlights

ಸಿಂಧಿಯಾ ಈಗ ಕಾಂಗ್ರೆಸ್ ನಾಯಕನಲ್ಲ!| ಟ್ವಿಟರ್ ಸ್ಟೇಟಸ್ ಹೇಳ್ತಿದೆ ಹೊಸ ಕತೆ!| ದಿನ ಬೆಳಗಾಗುತ್ತಿದ್ದಂತೆಯೇ ಪ್ರೊಫೈಲ್ ಚೇಂಜ್, ಎಲ್ಲರೂ ಕನ್ಫ್ಯೂಸ್

ಭೋಪಾಲ್[ನ.25]: ಕಾಂಗ್ರೆಸ್ ನಾಯಕ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತೊಮ್ಮೆ ಸುದ್ದಿಯಲದಲಿದ್ದಾರೆ. Twitterನಲ್ಲಿ ತಮ್ಮ ಸ್ಟೇಟಸ್ ಬದಲಾಯಿಸಿಕೊಂಡಿರುವ ಸಿಂಧಿಯಾ ಸದ್ಯ ತಾವೊಬ್ಬ public servant(ಜನಸೇವಕ] ಹಾಗೂ cricket enthusiast(ಕ್ರಿಕೆಟ್ ಪ್ರೇಮಿ) ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಗುನಾದ ಮಾಜಿ ಸಂಸದ, ಮಾಜಿ ಕೇಂದ್ರ ಸಚಿವ ಎಂದು ಬರೆದುಕೊಂಡಿದ್ದರು. 

ಇನ್ನು ಸಿಂಧಿಯಾ ಟ್ವಿಟರ್ ನಲ್ಲಿ ತಮ್ಮ ಸ್ಟೇಟಸ್ ಬದಲಾಯಿಸುತ್ತಿದ್ದಂತೆಯೇ ಹಲವಾರು ವದಂತಿಗಳು ಹಬ್ಬಲಾರಂಭಿಸಿವೆ. ಮಧ್ಯಪ್ರದೇಶದ ರಾಜಕೀಯದಲ್ಲಿ ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಇದ್ದಕ್ಕಿದ್ದಂತೆಯೇ ತಮ್ಮ ಸ್ಟೇಟಸ್ ಬದಲಾಯಿಸಿಕೊಂಡಿದ್ದೇಕೆ? ಎಂಬ ವಿಚಾರ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಈ ನಡುವೆ ಸಿಂಧಿಯಾ ತಮ್ಮ ಟ್ವಿಟರ್ ಪ್ರೊಫೈಲ್ ಸಿಂಪಲ್ ಆಗಿರಲಿ ಎಂದು ಈ ಬದಲಾವಣೆ ಮಾಡಿರುವುದಾಗಿ ಅವರ ಆಪ್ತ ವಲಯ ತಿಳಿಸಿದೆ.

 

ಈ ಹಿಂದೆ ಅವರು ಅಕೌಂಟ್ ನಲ್ಲಿ ನಮೂದಿಸಿದ್ದ ತಮ್ಮ ಹುದ್ದೆ, ರಾಜಕೀಯ ಜೀವನ ಗೂಗಲ್ ನಲ್ಲಿ ಹುಡುಕಿದರೂ ಸಿಗುತ್ತದೆ. ಸದ್ಯ ಅವರೊಬ್ಬ ಜನ ಸೇವಕ ಹಾಗೂ ಕ್ರಿಕೆಟ್ ಪ್ರೇಮಿ ಎಂಬುವುದಷ್ಟೇ ಮುಖ್ಯವಾಗಿದ್ದು, ಇದನ್ನೇ ಸಿಂಧಿಯಾ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಉಳಿಸಿಕೊಂಡಿದ್ದಾರೆ. ಹೀಗಂತ ಅವರು ಕಾಂಗ್ರೆಸ್ ಬಿಡುತ್ತಾರೆ ಎಂಬ ಅನುಮಾನಿಸುವುದು ತಪ್ಪು ಎಂದು ಅವರ ಆಪ್ತರ ಮಾತಾಗಿದೆ.

ಮಹಾರಾಜ ಎಂಬ ಚಿತ್ರಣದಿಂದ ಹೊರ ಬರುವ ಯತ್ನ?

ಕಳೆದ ಒಂದೂವರೆ ವರ್ಷದಿಂದ ಸಿಂಧಿಯಾ ಯಾವುದಾದರೊಂದು ವಿಚಾರದಿಂದ ಸದ್ದು ಮಾಡುತ್ತಲೇ ಇದ್ದಾರೆ. ಮಧ್ಯಪ್ರದೇಶ ಚುನಾವಣೆ ವೇಳೆ ಅವರನ್ನು ಚುನಾವಣಾ ಪ್ರಚಾರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು. ಇಡೀ ಮಧ್ಯಪ್ರದೇಶದಲ್ಲಿ ಪ್ರವಾಸ ಕೈಗೊಂಡಿದ್ದ ಸಿಂಧಿಯಾ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ನಡೆಸಿದ್ದರು. ಅವರ ಕ್ಲೀನ್ ಇಮೇಜ್, ಆಕ್ರಮಣಕಾರಿ ಮಾತುಗಳು ಹಾಗೂ ಯುವ ನಾಯಕನಾಗಿ ಹೊರಹೊಮ್ಮುತ್ತಿರುವ ಪರಿಯನ್ನು ಜನರು ಬಹಳ ಇಷ್ಟಪಟ್ಟಿದ್ದರು. 

ಪ್ರಚಾರದ ವೇಳೆ ಭಾರೀ ಬೆಂಬಲ ಪಡೆದ ಸಿಂಧಿಯಾ, ಮಧ್ಯಪ್ರದೇಶದ ಮುಂದಿನ ಸಿಎಂ ಅಭ್ಯರ್ಥಿ ಎಂದೇ ನುಮಾಣಿಸಲಾಯ್ತು. ಆದರೆ ಪಕ್ಷ ಗೆದ್ದು ಸರ್ಕಾರ ರಚಿಸಲು ಅನುವಾದಾಗ ಅಧಿಕಾರ ಸಿಂಧಿಯಾ ಕೈಯಿಂದ ಜಾರಿ, ಕಮಲನಾಥ್ ಪಾಲಾಯ್ತು. ಇದು ಸಿಂಧಿಯಾ ಬೆಂಬಲಿಗರಲ್ಲಿ ತೀವ್ರ ನಿರಾಸೆ ಮೂಡುವಂತೆ ಮಾಡಿತು. 

ಕುಟುಂಬ ರಾಜಕಾರಣದ ಕತೆ ಏನಾಯ್ತು? ಇಲ್ಲಿದೆ 13 ಕುಟುಂಬಗಳ ಕತೆ...!

ಜನಪ್ರಿಯತೆ ಕುಸಿತ

ಇನ್ನು ಮತಗಳನ್ನು ಗಮನಿಸಿದರೆ ಕಳೆದ 10(2009ರಿಂದ 2019ರವರೆಗೆ) ವರ್ಷಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಜನಪ್ರಿಯತೆ ಕಳೆಗುಂದುತ್ತಿರುವುದನ್ನು ಗಮನಿಸಬಹುದು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಲೋಕಸಭಾ ಚುನಾವಣೆಯಲ್ಲಿ ಸಿಂಧಿಯಾಗೆ ಸೋಲಾಯ್ತು. ಸಿಂಧಿಯಾರ ಆಪ್ತ ವಲಯದಲ್ಲಿ ಗುರುತಿಸಿಕೊಳ್ಳುತ್ತಿದ್ದ ಕೆ. ಪಿ ಯಾದವ್ ಪಕ್ಷ ಬದಲಾಯಿಸಿ, ಬಿಜೆಪಿಗೆ ಸೇರ್ಪಡೆಯಾದರು ಹಾಗೂ ಗುನಾ- ಶಿವಪುರಿ ಕ್ಷೇತ್ರದಿಂದ ಸ್ಪರ್ಧಿಸಿ ಸಿಂಧಿಯಾರನ್ನು ಸೋಲಿಸಿದರು.

ರಾಜಕೀಯ ಪಯಣ

* 2002ರ ಲೋಕಸಭಾ ಉಪ ಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿಯ ದೇಶರಾಜ್ ಯಾದವ್ ರನ್ನು 4 ಲಕ್ಷ 25 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು

* 2004ರ ಲೋಕಸಭಾ ಚುನಾವಣೆಯಲ್ಲಿ ಸಿಂಧಿಯಾ, ಬಿಜೆಪಿಯ ಹರಿವಲ್ಲಭ ಶುಕ್ಲಾರನ್ನು 86 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

* 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನರೋತ್ತಮ್ ಮಿಶ್ರಾರನ್ನು 2 ಲಕ್ಷದ 50 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು

 * 2014ರ ಲೋಕಸಭಾ ಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮತ್ತೊಮ್ಮೆ ಗೆದ್ದರು. ಆದರೆ ಗೆಲುವು ತಂದುಕೊಟ್ಟ ಮತಗಳ ಅಂತರ ಬಹಳ ಕಡಿಮೆ. ಅವರು ಬಿಜೆಪಿಯ ಜಯ್ಬಾನ್ ಸಿಂಗ್ ರನ್ನು ಕೇವಲ 1 ಲಕ್ಷ 20 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

ಹೇಳಿಕೆಗಳ ಮೇಲೆ ಸವಾಲು

ಸಿಂಧಿಯಾರ ಹೇಳಿಕೆಗಳಿಂದ ಅವರು ಬಿಜೆಪಿ ಸೇರುತ್ತಾರೆಂಬ ಮಾತುಗಳು ಜೋರಾದವು. ಹೀಗಿರುವಾಗಲೇ ಅವರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ದೀರ್ಘ ಕಾಲ ಯಾವುದೇ ಹುದ್ದೆ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ಅವರ ಬೆಂಬಲಿಗರು ಅವರನ್ನು ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಒತ್ತಾಯಿಸಿದ್ದರು. ಭೋಪಾಲ್ ನ ಕಾಂಗ್ರೆಸ್ ಕಚೇರಿ ಎದುರು ಅವರನ್ನು ಪಕ್ಷದ ಅಧ್ಯಕ್ಷ ಮಾಡಬೇಕೆಂದು ಪೋಸ್ಟರ್ ಗಳನ್ನೂ ಹಾಕಲಾಗಿತ್ತು. ಬಳಿಕ ಅವುಗಳನ್ನು ತೆರವುಗೊಳಿಸಲಾಗಿತ್ತು. ಹೀಗಿದ್ದರೂ ಸಿಂಧಿಯಾರ ಬೆಂಬಲಿಗರು ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡುವಂತೆ ಇಂದಿಗೂ ಒತ್ತಾಯಿಸುತ್ತಿದ್ದಾರೆ.

click me!