ಕೋಲಾರ (ಸೆ.27): ಕೋಲಾರ ಮೂಲದ ಇಬ್ಬರು ಕಾಮುಕರು ಪರಿಚಯಸ್ಥ ಯುವತಿಗೆ ಊಟ ಕೊಡಿಸುವ ನೆಪವೊಡ್ಡಿ ಹೋಟೆಲ್ಗೆ ಕರೆದೊಯ್ದು ಸಾಮೂಹಿಕ ಆತ್ಯಚಾರ ಎಸಗಿದ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಟಮಕ ಬಳಿ ಇರುವ ವುಡ್ಡೀಸ್ ಹೋಟೆಲ್ನಲ್ಲಿ ಸೆ.25 ರಂದು ಕೃತ್ಯ ಎಸಗಲಾಗಿದೆ. ನೊಂದ ಯುವತಿ ಕಳೆದ ರಾತ್ರಿ ನಗರದ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದ ಹಿನ್ನಲೆ ತಕ್ಷಣ ಪೊಲೀಸರು ಆತ್ಯಾಚಾರ ವೆಸಗಿದ್ದ ಸಾಬೀನ್ , ಇಂತಿಯಾಜ್ ಇವರಿಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ವಿಚಾರಣೆ ನಡೆಸಿದಾಗ ಯುವತಿ ಮೇಲೆ ದೈಹಿಕ ದೌರ್ಜನ್ಯವೆಸಗಿ ಆತ್ಯಾಚಾರವೆಸಗಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಇನ್ನೂ ಘಟನೆ ನಡೆದ ಸ್ಥಳಕ್ಕೆ ಕೋಲಾರ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಸಂತ್ರಸ್ಥೆ ಯುವತಿಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸುರಕ್ಷಿತವಾಗಿರಿಸಲಾಗಿದೆ.
ಗಲ್ಪೇಟೆ ಪೊಲೀಸರು ಆರೋಪಿಗಳ ವಿರುದ್ದ ದೂರು ದಾಖಲಿಸಿಕೊಂಡು ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.