ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎರಡು ಡೆಪಾಸಿಟ್ ಸ್ಕೀಂಗಳನ್ನು ನೀಡುತ್ತಿದ್ದು, ಇವು ಗ್ರಾಹಕರಿಗೆ ಉತ್ತಮ ಆದಾಯವನ್ನು ನೀಡುತ್ತವೆ. ಆ ಎರಡು ಯೋಜನೆಗಳ ಮಾಹಿತಿ ಇಲ್ಲಿದೆ.
ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಕೋಟ್ಯಧಿಪತಿಯಾಗುವ ಅವಕಾಶ ನೀಡುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎರಡು ಡೆಪಾಸಿಟ್ ಸ್ಕೀಂ ನೀಡುತ್ತಿದ್ದು, ಇಲ್ಲಿ ಹಣ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಕೋಟ್ಯಧಿಪತಿ ಆಗಬಹುದಾಗಿದೆ. ಗ್ರಾಹಕರ ಹೂಡಿಕೆಗೆ ಈ ಡೆಪಾಸಿಟ್ ಸ್ಕೀಂನಲ್ಲಿ ಒಳ್ಳೆಯ ರಿಟರ್ನ್ ಸಿಗುತ್ತದೆ. ಈ ಎರಡೂ ಎಫ್‌ಡಿ ಸ್ಕೀಂನಲ್ಲಿ ಹಣ ಹೂಡಿಕೆ ಮಾಡುವ ಅವಧಿ 30ನೇ ಸೆಪ್ಟೆಂಬರ್ 2024ಕ್ಕೆ ಅಂತ್ಯವಾಗುತ್ತಿತ್ತು. ಈ ಎರಡು ಸ್ಕೀಂ ಬಗ್ಗೆ ಗ್ರಾಹಕರು ತೋರಿಸಿದ ಆಸಕ್ತಿ ಕಂಡು ಎಸ್‌ಬಿಐ ಅವಧಿಯನ್ನು ವಿಸ್ತರಿಸಿದೆ. ಹಾಗಾಗಿ ಈ ಎಫ್‌ಡಿ ಸ್ಕೀಂನಲ್ಲಿ ಹಣ ಹೂಡಿಕೆ ಮಾಡುವ ಅವಕಾಶವಿದೆ.
ಈ ಎರಡು ಸ್ಪೀಂನಲ್ಲಿ ಡೆಪಾಸಿಟ್ ಮಾಡುವ ಅವಧಿಯನ್ನ 31ನೇ ಮಾರ್ಚ್ 2025ರವರೆಗೆ ವಿಸ್ತರಿಸಲಾಗಿದೆ. ಗ್ರಾಹಕರ ಮಾರ್ಚ್ 2025ರವರೆಗೆ ಈ ಎರಡು ಯೋಜನೆಯಲ್ಲಿ ಹಣ ಜಮೆ ಮಾಡಬಹುದು. ಹಾಗಾದ್ರೆ ಗ್ರಾಹಕರನ್ನು ಕೋಟ್ಯಧಿಪತಿ ಮಾಡುತ್ತಿರುವ ಎಸ್‌ಬಿಐನ ಆ ಎರಡು ಡೆಪಾಸಿಟ್ ಸ್ಕೀಂ ಬಗ್ಗೆ ನೋಡೋಣ ಬನ್ನಿ.
ಎಸ್‌ಬಿಐ ಅಮೃತ ಕಲಶ ಸ್ಕೀಂ
ದೇಶದ ದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ನೀಡುತ್ತಿರುವ ಸ್ಪೆಷಲ್ ಎಫ್‌ಡಿ ಸ್ಕೀಂ ಆಗಿದೆ. 12ನೇ ಏಪ್ರಿಲ್ 2023ರಂದು ಎಸ್‌ಬಿಐ ಅಮೃತ ಕಲಶ ಸ್ಕೀಂ ಯೋಜನೆ ಆರಂಭಿಸಲಾಗಿತ್ತು. ಈ ಯೋಜನೆಯಡಿ ಗ್ರಾಹಕರಿಗೆ ವಾರ್ಷಿಕ ಶೇ.7.10ರಷ್ಟ ರಿಟರ್ನ್ ಸಿಗುತ್ತದೆ. ಇದೇ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ ಶೇ.7.60 ರಷ್ಟು ರಿಟರ್ನ್ ಲಭ್ಯವಾಗುತ್ತದೆ. 400 ದಿನಗಳ ಸಾಮಾನ್ಯ ಎಫ್‌ಡಿಗಿಂತ ಅಮೃತ ಕಲಶ ಸ್ಕೀಂ ಹೆಚ್ಚು ಲಾಭದಾಯಕ ಮತ್ತು ಗ್ಯಾರಂಟಿ ರಿಟರ್ನ್ ನೀಡುವ ಭರವಸೆ ನೀಡಲಾಗುತ್ತದೆ.
ಅಮೃತ ಕಲಶ ಎಫ್‌ಡಿ ಸ್ಕೀಂನಲ್ಲಿ ಗ್ರಾಹಕರು ಮಾಸಿಕ, ತ್ರೈಮಾಸಿಕ ಮತ್ತು ಆರು ತಿಂಗಳಿಗೊಮ್ಮೆ ಬಡ್ಡಿ ಮೊತ್ತವನ್ನು ಡ್ರಾ ಮಾಡಿಕೊಳ್ಳುವ ಅವಕಾಶವನ್ನು ನೀಡಲಾಗಿದೆ. 400 ದಿನ ಮೊದಲು ಅಂದ್ರೆ ಅವಧಿಗೂ ಮುನ್ನವೇ ಅಮೃತ್ ಕಲಶ FD ಯಿಂದ ಹಣವನ್ನು ಅಕಾಲಿಕವಾಗಿ ಹಿಂತೆಗೆದುಕೊಳ್ಳುವಾಗ, ಬ್ಯಾಂಕ್ ಅನ್ವಯವಾಗುವ ದರಕ್ಕಿಂತ 0.50% ರಿಂದ 1% ರಷ್ಟು ಕಡಿಮೆ ಬಡ್ಡಿ ದಂಡವಾಗಿ ಕಡಿತಗೊಳಿಸಲಾಗುತ್ತದೆ.
ಎಸ್‌ಬಿಐ ಸೂಪರ್ ಹಿಟ್ ಸ್ಕೀಮ್: ಒಮ್ಮೆ ಡೆಪಾಸಿಟ್ ಮಾಡಿದ್ರೆ, ಪ್ರತಿ ತಿಂಗಳು ಸಿಗುತ್ತೆ ಕೈ ತುಂಬಾ ಹಣ
ಎಸ್‌ಬಿಐ ಅಮೃತ ವೃಷ್ಟಿ ಯೋಜನೆ
ಅಮೃತ್ ಕಲಶ ಯೋಜನೆಯಂತೆ ಎಸ್‌ಬಿಐ ತನ್ನ ಗ್ರಾಹಕರಿಗೆ ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯನ್ನು ಜುಲೈ 15, 2024ರಿಂದ ಜಾರಿಗೆ ತಂದಿದೆ. ಅಮೃತ್ ವೃಷ್ಟಿ ಯೋಜನೆಯಡಿ ಗ್ರಾಹಕರು 444 ದಿನಗಳವರೆಗೆ ಹಣ ಹೂಡಿಕೆ ಮಾಡಬಹುದು. ಈ ಯೋಜನೆಯಡಿ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ.7.25 ಆದಾಯ ಪಡೆಯುತ್ತಾರೆ. ಹಿರಿಯ ನಾಗರಿಕರಿಗೆ ವಾರ್ಷಿಕ ಶೇ.0.5ರಷ್ಟು ಹೆಚ್ಚು ರಿಟರ್ನ್ ಸಿಗುತ್ತದೆ. ಹಿರಿಯ ನಾಗರಿಕರು 444 ದಿನಗಳ ಠೇವಣಿಗಳ ಮೇಲೆ ಗರಿಷ್ಠ ಶೇ.7.75 ಆದಾಯವನ್ನು ಪಡೆಯುತ್ತಾರೆ. ಈ ಯೋಜನೆಯಲ್ಲಿ ಗರಿಷ್ಠ 3 ಕೋಟಿ ರೂಪಾಯಿವರೆಗೂ ಹೂಡಿಕೆ ಮಾಡಬಹುದು.
ಹೂಡಿಕೆ ಮಾಡುವುದು ಹೇಗೆ?
ಎಸ್‌ಬಿಐನ ಎರಡೂ ಉಳಿತಾಯ ಯೋಜನೆಗಳು ಹೂಡಿಕೆ ಮಾಡೋದು ತುಂಬಾ ಸುಲಭ. ಮೊಬೈಲ್‌ನಲ್ಲಿ SBI ಯ ಇಂಟರ್ನೆಟ್ ಬ್ಯಾಂಕಿಂಗ್ ಅಥವಾ YONO ಮೊಬೈಲ್ ಅಪ್ಲಿಕೇಶನ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಈ ಆಪ್ ಮೂಲಕ SBI ಅಮೃತ್ ಕಲಶ ಮತ್ತು ಅಮೃತ ವೃಷ್ಟಿ ಸ್ಕೀಂ ಖರೀದಿಸಬಹುದು. ಆನ್‌ಲೈನ್‌ನಲ್ಲಿ ಗೊಂದಲ ಉಂಟಾಗುತ್ತಿದ್ದರೆ ಸಮೀಪದ ಎಸ್‌ಬಿಐ ಶಾಖೆಗೆ ಭೇಟಿ ನೀಡಿ ಅಮೃತ್ ಕಲಶ ಮತ್ತು ಅಮೃತ್ ವೃಷ್ಟಿ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ತುಂಬಾ ಓದಿದ್ದೇನೆ ಅಂತ ಹಮ್ಮು ಗಿಮ್ಮು ಬೇಡ; ನಿಮ್ಮೂರಿನಲ್ಲಿಯೇ ಈ 3 ಬ್ಯುಸಿನೆಸ್ ಆರಂಭಿಸಿ, ಕೈ ತುಂಬಾ ಹಣ ಎಣಿಸಿ