1 ವರ್ಷ ಸ್ಮಾರ್ಟ್‌ಫೋನ್‌ ಬಿಟ್ಟು 72 ಲಕ್ಷ ಗೆಲ್ಲಿರಿ!

By Web DeskFirst Published Dec 16, 2018, 7:43 AM IST
Highlights

ಒಂದು ವರ್ಷ ಸ್ಮಾರ್ಟ್‌ಫೋನ್‌ ಬಳಸದೇ ಇರುವವರಿಗೆ ಭರ್ಜರಿ ಬಹುಮಾನ ಘೋಷಣೆ

ಬಹುತೇಕ ಜನರಿಗೆ ಮುಂಜಾನೆ ಆರಂಭ ಮತ್ತು ದಿನದ ಮುಕ್ತಾಯ ಎರಡೂ ಸ್ಮಾರ್ಟ್‌ಫೋನ್‌ಗಳ ಮೂಲಕವೇ ಆಗುತ್ತದೆ. ಅಂಥದ್ದರಲ್ಲಿ ಕೋಕಾ ಕೋಲಾದ ಅಂಗಸಂಸ್ಥೆಯಾದ ವಿಟಮಿನ್‌ ವಾಟರ್‌ ಸಂಸ್ಥೆ, ಒಂದು ವರ್ಷ ಸ್ಮಾರ್ಟ್‌ಫೋನ್‌ ಬಳಸದೇ ಇರುವವರಿಗೆ ಭರ್ಜರಿ ಬಹುಮಾನ ಘೋಷಿಸಿದೆ. ಆಸಕ್ತರು, ಈ ಸ್ಪರ್ಧೆ ಕುರಿತು ಅತ್ಯಾಕರ್ಷಕ ಟ್ವೀಟ್‌ ಅಥವಾ ಇನ್ಸ್ಟಾಗ್ರಾಮ್‌ ಪೋಸ್‌ ಮಾಡಬೇಕು.

ಇದರಲ್ಲಿ ಅತ್ಯುತ್ತಮವಾದವರನ್ನು ಸಂಸ್ಥೆ ಸ್ಪರ್ಧೆಗೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದವರಿಗೆ 1990ರ ದಶಕದ ಇಂಟರ್ನೆಟ್‌ ಸೇವೆ ಲಭ್ಯ ಇಲ್ಲದ ಮೊಬೈಲ್‌ ನೀಡಲಾಗುವುದು. ಅದನ್ನು ಇಟ್ಟುಕೊಂಡೇ ಅವರು ಒಂದು ವರ್ಷ ಕಾಲ ಕಳೆಯಬೇಕು.

ಅಂತಿಮವಾಗಿ ಸ್ಪರ್ಧಾಳುಗಳು ಸ್ಮಾಟ್‌ಫೋನ್‌ ಬಳಸಿದ್ದಾರ ಇಲ್ಲವಾ ಎಂಬುದನ್ನು ವಿವಿಧ ಪರೀಕ್ಷೆಗಳ ಮೂಲಕ ಪರೀಕ್ಷಿಸಿ, ವಿಜೇತರಿಗೆ 72 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ಕಂಪನಿ ಹೇಳಿದೆ.

click me!